<?= $pageTitle ?>
Logo
ಮುಖಪುಟ ಓದುವುದು ಕೇಳು
Sports

ವೈಭವ್ ಸೂರ್ಯವಂಶಿಯ ಸಿಡಿಲಬ್ಬರ : 200 + ಸ್ಟ್ರೈಕ್ ರೇಟ್ ನಲ್ಲಿ ರನ್ ಮಳೆ

ವೈಭವ್ ಸೂರ್ಯವಂಶಿಯ ಸಿಡಿಲಬ್ಬರ : 200 + ಸ್ಟ್ರೈಕ್ ರೇಟ್ ನಲ್ಲಿ ರನ್ ಮಳೆ
Summary: Vaibhav Suryavanshi, who displayed a brilliant batting performance at a strike rate of 200, has caught the attention of cricket fans. His explosive innings have given strength to the team in the match and are being considered as a new dawn of young talent.

Belagavi news:

ಶ್ರೀಲಂಕಾದಲ್ಲಿ ನಡೆಯುತ್ತಿರುವ ಎ ತಂಡಗಳ ನಡುವಣ ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಎ ಮತ್ತು ಅಫ್ಘಾನಿಸ್ತಾನ್ ಎ ತಂಡಗಳು ಮುಖಾಮುಖಿಯಾಗಿವೆ. ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ಎ ತಂಡದ ನಾಯಕ ಇಮ್ರಾನ್ ಮೀರ್ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ ಎ ತಂಡಕ್ಕೆ ಆರಂಭಿಕ ಜೋಡಿಯಾಗಿ ವೈಭವ್ ಸೂರ್ಯವಂಶಿ ಮತ್ತು ಪ್ರಭ್ ಸಿಮ್ರಾನ್ ಸಿಂಗ್ ಕಣಕ್ಕಿಳಿದರು. ಆರಂಭದಿಂದಲೇ ಅಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಫೈಬರ್ ಸೂರ್ಯವಂಶಿ ತನ್ನ ಸ್ಫೋಟಕ ಆಟದ ಮೂಲಕ ಗಮನ ಸೆಳೆದರು.

ಅಫ್ಘಾನಿಸ್ತಾನ್ ಎ ಬೌಲರ್ ಗಳ ವಿರುದ್ಧ ನಿರ್ಮಿತಿಯಾಗಿ ಬ್ಯಾಟ್ ಬೀಸಿದ ಅವರು ತಂಡಕ್ಕೆ ವೇಗದ ಆರಂಭ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಂದೆಡೆ ಪ್ರಭ್ ಸಿಮ್ರಾನ್ ಸಿಂಗ್ ಸಹ ಸ್ಥಿರ ಆಟದ ಮೂಲಕ ಇನ್ನಿಂಗ್ಸ್ ಗೆ ಬೆಂಬಲ ನೀಡಿದರು.

ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ಭಾರತ ಎ ತಂಡದ ಅನ್ನದ ಇನ್ನಿಂಗ್ಸ್ ಹೇಗೆ ಮುಂದುವರಿಯತ್ತದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.

ವೈಭವ್ ಸೂರ್ಯವಂಶಿಯ ಸ್ಪೋಟಕ ಆರಂಭಕ್ಕೆ ಬ್ರೇಕ್ - 7 ಓವರ್ ಗಳಲ್ಲಿ ಭಾರತ ಎಗೆ ವೇಗದ ರನ್ ಮಳೆ:

ಶ್ರೀಲಂಕಾದ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಎ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಪೋಟಕ ಆರಂಭ ನೀಡಿ ಗಮನ ಸೆಳೆದಿದ್ದಾರೆ. ಆರಂಭದಿಂದಲೇ ಅಕ್ರಮಣ ಖಾರಿ ಆಟಕ್ಕೆ ಒಟ್ಟು ನೀಡಿದ ಅವರು ಬ್ಯಾಕ್ ಟು ಬ್ಯಾಕ್ ಪೋರ್ ಗಳನ್ನು ಬಾರಿಸಿ ಬೌಲರ್ ಗಳ ಮೇಲೆ ಒತ್ತಡ ಹೇರಿದರು.

ವೈಭವ್ ಸೂರ್ಯವಂಶಿಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡ ಮೊದಲ 7 ಓವರ್ ಗಳಲ್ಲಿ 74 ರನ್ ಗಳನ್ನು ವೇಗವಾಗಿ ಕಲೆಹಾಕಿತು. ಅವರ ನಿರ್ಭೀತ ಆಟ ತಂಡಕ್ಕೆ ವೇದದ ಆರಂಭವನ್ನು ನೀಡಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಹುಟ್ಟಿಸಿತು.

ಆದರೆ ಎಂಟನೇ ಓವರ್ ನ ಮೊದಲ ಎಸೆತದಲ್ಲೇ ವೈಭವ್ ಅವರ ಸ್ಪೋಟಕ ಇನ್ನಿಂಗ್ಸ್ ಅಂತ್ಯವಾಯಿತು.ಅಪ್ಪರ್ ಕಟ್ ಶಾಟ್ ಆಡಲು ಪ್ರಯತ್ನಿಸಿದವರು ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ಫೆವಿಲಿಯನ್ ಸೇರಿದರು. ಅವರ ನಿರ್ಗಮನ ತಂಡಕ್ಕೆ ಸ್ವಲ್ಪ ಹೊಡೆತ ನೀಡಿದರು, ವೇಗದ ಆರಂಭ ಭಾರತ ಎಗೆ ಬಲ ನೀಡಿದೆ.

ಯುವ ಆಟಗಾರನ ಈ ಅಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ಭವಿಷ್ಯದ ದೊಡ್ಡ ನಿರೀಕ್ಷೆಗಳನ್ನು ಹುಟ್ಟಿಸಿದೆ.

ವೈಭವ್ ಸೂರ್ಯವಂಶಿಯ ಪೋತಕ 44 ರನ್ - 200 ಸ್ಟ್ರೈಕ್ ರೇಟ್ ನಲ್ಲಿ ಅಬ್ಬರ:

ಶ್ರೀಲಂಕಾದ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಭಾರತ ಎ ವಿರುದ್ಧ ಅಫ್ಘಾನಿಸ್ತಾನ್ ಎ ಪಂದ್ಯದಲ್ಲಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕೇವಲ 22 ಎಸೆತಗಳನ್ನು ಎದುರಿಸಿದ ಅವರು 200ರ ಸ್ಟ್ರೈಕ್ ರೇಟ್ ನಲ್ಲಿ 44 ರನ್ ಗಳನ್ನು ಕಲೆಹಾಕಿ ತಂಡಕ್ಕೆ ವೇದದ ಆರಂಭ ನೀಡಿದರು.

ತಮ್ಮ ಇನ್ನಿಂಗ್ಸ್ ವೇಳೆ ವೈಭವ್ ಸೂರ್ಯವಂಶಿ ಒಟ್ಟು 9 ಭರ್ಜರಿ ಪೋರಗಳನ್ನು ಬಾರಿಸಿ ಬೌಲರ್ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಆದರೆ ಅರ್ಧಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಕೇವಲ ಆರು ರನ್ ಗಳಿಂದ ತಮ್ಮ ಚೊಚ್ಚಲ ಅರ್ಧಶತಕವನ್ನು ಭಾರತ ಎ ಪರ ತಪ್ಪಿಸಿಕೊಂಡರು.

ವೈಭವ್ ಔಟಾದ ಬಳಿಕ ಕ್ರೀಸ್ ಗೆ ಬಂದ ಪ್ರಿಯಾಂಕ್ ಆರ್ಯ ಕೇವಲ ಎಂಟು ರನ್ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಪ್ರಭ್ ಸಿಮ್ರಾನ್

ಸಿಂಗ್ ಮತ್ತು ರುತುರಾಜ್ ಗಾಯಕ್ವಾಡ್ ಜೋಡಿ ಇನ್ನಿಂಗ್ಸ್ ಮುಂದುವರಿಸಿದ್ದು, 12 ಓವರ್ ಗಳ ಮುಕ್ತಾಯದ ವೇಳೆಗೆ ಭಾರತ ಎ ತಂಡ 2 ವಿಕೆಟ್ ನಷ್ಟಕ್ಕೆ 104 ರನ್ ಗಳನ್ನು ಕಲೆ ಹಾಕಿದೆ.

ಯುವ ಆಟಗಾರರ ಅಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಎ ತಂಡ ಉತ್ತಮ ವೇಗದಲ್ಲಿ ಸ್ಕೋರ್ ಹೆಚ್ಚಿಸುತ್ತಿದ್ದು, ಪಂದ್ಯ ಇನ್ನಷ್ಟು ರೋಚಕ ಹಂತಕ್ಕೆ ತಲುಪಿದೆ.

ಭಾರತ ಎ VS ಅಫ್ಘಾನಿಸ್ತಾನ್ ಎ : ತಿಕೋಣ ಸರಣಿಯ ಮಹತ್ವದ ಪಂದ್ಯಕ್ಕೆ ಉಭಯ ತಂಡಗಳ ಪ್ಲೇಯಿಂಗ್ 11 ಪ್ರಕಟ:

ಶ್ರೀಲಂಕಾದಲ್ಲಿ ನಡೆಯುತ್ತಿರುವ ಎ ತಂಡಗಳ ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಎ ಮತ್ತು ಆಫ್ಘಾನಿಸ್ತಾನ್ ಎ ತಂಡಗಳು ಮುಖಾಮುಖಿಯಾಗಿವೆ. ದಂಬುಲ್ಲಾದ ರಂಗಿರಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕೆ ಉಭಯ ತಂಡಗಳು ತಮ್ಮ ಬಲಿಷ್ಠ ಪ್ಲೇಯಿಂಗ್ 11ನ್ನು ಪ್ರಕಟಿಸಿವೆ.

ಭಾರತ ಎ ತಂಡವನ್ನು ತಿಲಕ್ ವರ್ಮಾ ಮುನ್ನಡೆಸುತ್ತಿದ್ದು, ಯುವ ಪ್ರತಿಭೆಗಳಾದ ವೈಭವ್ ಸೂರ್ಯವಂಶಿ, ಪ್ರಭ್ ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ ಹಾಗೂ ರುತುರಾಜ್ ಗಾಯಕ್ವಾಡ್ ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದ್ದಾರೆ. ಮತ್ತೊಂದೆಡೆ ಅಫ್ಘಾನಿಸ್ತಾನ್ ಎ ತಂಡವನ್ನು ಇಮ್ರಾನ್ ಮೀರ್ ನಾಯಕತ್ವ ವಹಿಸಿಕೊಂಡಿದ್ದು, ಯುವ ಆಟಗಾರರೊಂದಿಗೆ ಭಾರತಕ್ಕೆ ಸವಾಲೊಡ್ಡಲು ಸಜ್ಜಾಗಿದೆ.

ಭಾರತ ಎ ಪ್ಲೇಯಿಂಗ್ 11:

ವೈಭವ್ ಸೂರ್ಯವಂಶಿ, ಪ್ರಭ್ ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ (ನಾಯಕ), ಆಯುಷ್ ಬದೋನಿ, ಸೂರ್ಯಾಂಶ ಶೆಡ್ಗೆ, ಅರ್ಷದ್ ಖಾನ್ , ವಿಪ್ರಾಜ್ ನಿಗಮ, ಅನ್ಕೂಲ್ ರಾಯ್ , ಅನ್ಶುಲ್ ಕಂಬೋಜ್.

ಅಫ್ಘಾನಿಸ್ತಾನ್ ಎ ಪ್ಲೇಯಿಂಗ್ 11:

ಇಮ್ರಾನ್ ಮೀರ್ (ನಾಯಕ), ಹಸನ್ ಐಸಾಕಿಲ್, ಖಾಲಿದ್ ತನಿವಾಲ್, ಇಜಾಝ್ ಅಹ್ಮದ್, ಬಹೀರ್ ಶಾ, ಇಶಾಕ್ ರಹೀಮ್ (ವಿಕೆಟ್ ಕೀಪರ್), ಖಿಲೀಲ್ ಗುರ್ಬಾಝ , ಝಹೀರ್ ಖಾನ್, ಅಬ್ದುಲ್ಲ ಅಹ್ಮದ್ ಝೂಹಿ, ಮೊಮ್ಮದ್ ಇಬ್ರಾಹಿಂ, ಫರ್ಮಾನುಲ್ಲಾ ಸಫಿ.

ಈ ಪಂದ್ಯದಲ್ಲಿ ಭಾರತ ಎ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಈಗಾಗಲೇ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದು, ಮುಂದಿನ ಹಂತದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳ ಪ್ರದರ್ಶನದತ್ತ ಎಲ್ಲರ ಚಿತ್ತ ನೆಟ್ಟಿದೆ.

Also Read:

11ನೇ ನೀತಿ ಆಯೋಗ ಸಭೆಗೆ ಚಾಲನೆ : ಮೋದಿ ಅಧ್ಯಕ್ಷತೆ, ರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online