belagavi news :
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿ ಒಂದು ವರ್ಷ ಪೂರ್ಣಗೊಂಡಿದೆ. ಆಧುನಿಕ ಕ್ರಿಕೆಟ್ ನ ' ರನ್ ಮಷೀನ್'ಎಂದೆ ಗುರುತಿಸಿಕೊಂಡಿರುವ ಕೊಹ್ಲಿ, ತಮ್ಮ ಅಕ್ರಮಣಕಾರಿ ಆಟ ಶೈಲಿಯಿಂದ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ದಿಕ್ಕು ನೀಡಿದರು. ಬ್ಯಾಟಿಂಗ್ ನಲ್ಲಿ ಸ್ಥಿರತೆ, ಶ್ರೇಷ್ಠತೆ ಹಾಗೂ ಒತ್ತಡದ ಕ್ಷಣಗಳಲ್ಲಿ ಅದ್ಭುತ ಪ್ರದರ್ಶನದಿಂದ ಅವರು ವಿಶ್ವ ಕ್ರಿಕೆಟ್ ನಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದರು. ಟೆಸ್ಟ್ ನಾಯಕನಾಗಿ ವಿರಾಟ್ ಕೊಹ್ಲಿ ಭಾರತ ತಂಡವನ್ನು ಹಲವು ಐತಿಹಾಸಿಕ ಗೆಲುವುಗಳಿಗೆ ಮುನ್ನಡೆಸಿದ್ದು, ವಿದೇಶಿ ನೆಲದಲ್ಲಿಯೂ ಜಯಗಳನ್ನು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅವರ ನಾಯಕತ್ವದಲ್ಲಿ ಭಾರತ ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ಎತ್ತರವನ್ನು ತಲುಪಿತು. ಅವರ ನಿವೃತ್ತಿಯ ನಂತರದಲ್ಲಿ ಟೆಸ್ಟ್ ತಂಡದಲ್ಲಿ ಉಂಟಾದ ಶೂನ್ಯತೆ ಇನ್ನೂ ಅಭಿಮಾನಿಗಳ ಮನಸ್ಸಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಕೊಹ್ಲಿ ಅನುಭವ ಮತ್ತು ಹೋರಾಟದ ಮನೋಭಾವವನ್ನು ಮಿಸ್ ಮಾಡಿಕೊಳ್ಳುತ್ತಿರುವ ಕ್ರಿಕೆಟ್ ಪ್ರಿಯರು ಇನ್ನು ಅವರ ಮರಳುವ ನಿರೀಕ್ಷೆಯಲ್ಲಿ ಇದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಅವರ ಕಂಬ್ಯಾಕ್ ಸಾಧ್ಯತೆಗಳು ಪ್ರಸ್ತಾವಕ್ಕೆ ದೂರವಾದ ಮಾತುಗಳಾಗಿ ಕಾಣುತ್ತಿವೆ.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿ ಇಂದಿಗೆ ಸರಿಯಾಗಿ ಒಂದು ವರ್ಷ ಪೂರ್ಣಗೊಂಡಿದೆ. ಆಧುನಿಕ ಕ್ರಿಕೆಟ್ ನ 'ರನ್ ಮಷೀನ್ 'ಎಂದೆ ಖ್ಯಾತ ರಾಗಿರುವ ಕೊಹ್ಲಿ, ತಮ್ಮ ಅಕ್ರಮಣಕಾರಿ ಆಟ ಶೈಲಿಯಿಂದ ಭಾರತ ಟೆಸ್ಟ್ ತಂಡಕ್ಕೆ ಹೊಸ ಆತ್ಮವಿಶ್ವಾಸ ಮತ್ತು ಹೋರಾಟದ ಮನೋಭಾವವನ್ನು ತಂದುಕೊಟ್ಟವರು. ಈ ದಿನವನ್ನು ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರೀಡಾ ವಲಯದವರು ಸ್ಮರಣಿಯ ಕ್ಷಣವಾಗಿ ನೆನಪಿಸಿಕೊಳ್ಳುತ್ತಿದ್ದಾರೆ.
ವಿರಾಟ್ ಕೊಹ್ಲಿ ಕೇವಲ ಶ್ರೇಷ್ಠ ಬ್ಯಾಟರ ಮಾತ್ರವಲ್ಲ, ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅವರು ಒಟ್ಟು 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 9230 ರನ್ಗಳನ್ನು ದಾಖಲಿಸಿದ್ದಾರೆ. ಅವರ ಬ್ಯಾಟಿಂಗ್ ಸರಣಿ 49.15 ಆಗಿದ್ದು, ಇದರಲ್ಲಿ 30 ಶತಕಗಳು ಹಾಗೂ 31 ಅರ್ಧ ಶತಕಗಳು ಸೇರಿವೆ. ದಕ್ಷಿಣ ಆಫ್ರಿಕಾ ವಿರುದ್ಧ ಬಾರಿಸಿದ 254 ರನ್ ಗಳು ಅವರ ಟೆಸ್ಟ್ ಕೆರಿಯರ್ ನ ಗರಿಷ್ಠ ಸ್ಕೋರ್ ಆಗಿದೆ. ನಾಯಕನಾಗಿ ಕೊಹ್ಲಿ ಭಾರತ ತಂಡವನ್ನು 68 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದು, ಅದರಲ್ಲಿ 40 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.
ಇದು ಭಾರತೀಯ ಟೆಸ್ಟ್ ಇತಿಹಾಸದಲ್ಲಿ ಒಬ್ಬ ನಾಯಕನ ಅತ್ಯುತ್ತಮ ಸಾಧನೆಗಳಲ್ಲಿ ಒಂದಾಗಿದೆ. ಅವರ ನಾಯಕತ್ವದಲ್ಲಿ ಭಾರತ ತಂಡ ವಿದೇಶಿ ನೆಲೆಯಲ್ಲಿಯೂ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿತು. ವಿಶೇಷವಾಗಿ ಆಸ್ಟ್ರೇಲಿಯಾ ನೆಲದಲ್ಲಿ 2018-19ರಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ಭಾರತೀಯ ನಾಯಕ ಎಂಬ ಐತಿಹಾಸಿಕ ಹೆಗ್ಗಳಿಕೆ ಕೂಡ ಕೊಹ್ಲಿಯದೆ ಆಗಿದೆ. ಕೊಹ್ಲಿ ಟೆಸ್ಟ್ ನಿವೃತ್ತಿಯ ನಂತರ ಭಾರತ ತಂಡದಲ್ಲಿ ಅವರ ಅಣುಪಸ್ಥಿತಿ ಸ್ಪಷ್ಟವಾಗಿ ಕಾಣುತ್ತಿದ್ದು, ಅವರ ಕೊಡುಗೆಗಳನ್ನು ಕ್ರಿಕೆಟ್ ಲೋಕ ಇನ್ನು ಸ್ಮರಿಸುತ್ತಿದೆ.
ಭಾರತಪರ ಅತಿ ಹೆಚ್ಚು ಟೆಸ್ಟ್ ದ್ವಿ ಶತಕಗಳನ್ನು ಬಾರಿಸಿದ ದಾಖಲೆ ಕೊಹ್ಲಿ ಹೆಸರಿಲಿದೆ. ಸುಮಾರು 42 ತಿಂಗಳುಗಳ ಕಾಲ ಐಸಿಸಿ ಟೆಸ್ಟ್ ಶ್ರೇಯಾಂಕ ದಲ್ಲಿ ಭಾರತ ತಂಡವನ್ನು ನಂಬರ್ ಒನ್ ಸ್ಥಾನದಲ್ಲಿರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಫಿಟ್ನೆಸ್ ಮತ್ತು ಅಕ್ರಮಣಕಾರಿ ಆಟ ಶೈಲಿಗೆ ಹೊಸ ವ್ಯಾಖ್ಯಾನ ನೀಡಿದ ವಿರಾಟ್ ಕೊಹ್ಲಿ, ಕ್ರಿಕೆಟ್ ಲೋಕದ ವಿಶಿಷ್ಟ ಗುರುತುಗಳನ್ನು ಬಿಟ್ಟಿದ್ದಾರೆ. ಆಧುನಿಕ ಕ್ರಿಕೆಟ್ ನ' ರನ್ ಮಷೀನ್ 'ಎಂದೆ ಗುರುತಿಸಲ್ಪಡುವ ಕೊಹ್ಲಿ, ಐಪಿಎಲ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಸಕ್ರಿಯರಾಗಿದ್ದು, ಅಭಿಮಾನಿಗಳು ಇನ್ನೂ ಅವರ ಟೆಸ್ಟ್ ಅಂಗಳದ ಶೈಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. T-20 ಮತ್ತು ODI ಫಾರ್ಮ್ಯಾಟ್ ಗಳತ್ತ ಹೆಚ್ಚು ಒಲವು ತೋರಿಸುವವರಿಗೆ ಸಹ ಟೆಸ್ಟ್ ಕ್ರಿಕೆಟ್ ಬಗ್ಗೆ ಆಸಕ್ತಿ ನೀಡುವಂತೆ ಮಾಡಿದ ಶ್ರೇಯಸ್ಸು ಕೊಹ್ಲಿಗೆ ಸಲ್ಲುತ್ತದೆ.
ಅವರ ಅನುಪಸ್ಥಿತಿ ಟೆಸ್ಟ್ ಕ್ರಿಕೆಟ್ ಪ್ರಿಯರಲ್ಲಿ ಇಂದಿಗೂ ಒಂದು ರೀತಿಯ ಶೂನ್ಯತೆಯನ್ನು ಮೂಡಿಸಿರುವುದು ನಿಜ. ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿಯ ಹೋರಾಟದ ಮನೋಭಾವ, ನಾಯಕತ್ವ ಹಾಗೂ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯವು ಭಾರತ ತಂಡಕ್ಕೆ ದೊಡ್ಡ ಬಲವಾಗಿತ್ತು. ಇತ್ತೀಚಿಗೆ ಟೀಮ್ ಇಂಡಿಯಾ ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತೆ ಟೆಸ್ಟ್ ಕ್ರಿಕೆಟ್ ಎಂಬ ರೀತಿಯ ಸುದ್ದಿಗಳು ಹರಿದಾಡಿದ್ದವು. ಅವರು ಮತ್ತೆ ನಾಯಕತ್ವಕ್ಕೆ ಆಸಕ್ತಿ ತೋರಿಸಿದ್ದಾರೆ ಎಂಬ ವದಂತಿಗಳು ಕೇಳಿ ಬಂದವು. ಟೆಸ್ಟ್ ಪಾರ್ಮ್ಯಾಟ್ ಅನ್ನು ಅತ್ಯಂತ ಪ್ರೀತಿಸುವ ಆಟಗಾರರಲ್ಲಿ ಒಬ್ಬರಾಗಿರುವ ಕೊಹ್ಲಿಯ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಇನ್ನೂ ಜೀವಂತವಾಗಿದೆ. ಆದರೆ ಪ್ರಸ್ತುತ ಪರಿಸ್ಥಿತಿ ಯನ್ನು ನೋಡಿದರೆ, ವಿರಾಟ್ ಕೊಹ್ಲಿಯ ಟೆಸ್ಟ್ ಕಮ್ ಬ್ಯಾಕ್ ವಾಸ್ತವಕ್ಕೆ ದೂರವಾದ ಮಾತು ಎಂದು ವಿಶ್ಲೇಷಿಸಲಾಗುತ್ತಿದೆ.
Also Read: