<?= $pageTitle ?>
Logo
ಮುಖಪುಟ ಓದುವುದು ಕೇಳು
Sports

WPL ೨೦೨೬ : ಫೈನಲ್ ಗೆ ಕಾಲಿಟ್ಟ ಡಿಲ್ಲಿ ಕ್ಯಾಪಿಟಲ್ಸ್

WPL ೨೦೨೬ : ಫೈನಲ್ ಗೆ ಕಾಲಿಟ್ಟ ಡಿಲ್ಲಿ ಕ್ಯಾಪಿಟಲ್ಸ್
Summary: ಮಹಿಳಾ ಪ್ರೀಮಿಯರ್ ಲೀಗ್ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿದ ಡೆಲ್ಲಿ ಕ್ಯಾಪ್ಟನ್ ಭರ್ಜರಿ ಪ್ರದರ್ಶನದೊಂದಿಗೆ ಫೈನಲ್ ಗೆ ಅರ್ಹತೆ ಪಡೆದಿದೆ. ಫೈನಲ್ ನಲ್ಲಿ ಆರ್ಸಿಬಿ ವಿರುದ್ಧ ಆಡಲು ಡೆಲ್ಲಿ ಸಜ್ಜಾಗಿದೆ.
BELAGAVI NEWS :
ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೆಂಟ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಿತು. ಆ ಪಂದ್ಯದಲ್ಲಿ ಗುಜರಾತ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ ಏಳು ವಿಕೆಟ್ಗಳಿಂದ ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿತು. ಈ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಜಿಮಿಮಾ ರೋಡ್ರಿಗಸ್ ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡರು. ಗುಜರಾತ್ ಪಡೆಯು ಮೊದಲು ಬ್ಯಾಟಿಂಗ್ ಮಾಡಿ ಏಳು ವಿಕೆಟ್ ನಷ್ಟಕ್ಕೆ ಗಳಿಸಿಕೊಂಡಿತು.

ಡೆಲ್ಲಿ ತಂಡ ಅವರ ಗುರಿಯನ್ನು ಬೆನ್ನಟ್ಟಿ ಏಳು ವಿಕೆಟ್ಗಳು ಬಾಕಿ ಇರುವಾಗಲೇ 15.4ವರ್ಗದಲ್ಲಿ ತಮ್ಮ ಜಯವನ್ನು ಸಾಧಿಸಿದರು. ಆದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ಗೆ ಹೋಯಿತು. ಡೆಲ್ಲಿಯು 168 ರನ್ಗಳನ್ನು ಬೆನ್ನಟ್ಟಿ ಉತ್ತಮ ಆರಂಭವನ್ನು ನಡೆಸಿತು . ಲಿಜೆಲ್ಲೆ ಲೀ 24 ಎಸೆತಗಳಲ್ಲಿ 41 ರನ್ ಗಳಿಸಿ ಔಟಾದರು ಮತ್ತು ನಂತರ ಶಿಫಾಲಿ ರೂಪದಲ್ಲಿ ಎರಡನೇ ವಿಕೆಟ್ ಆಯ್ತು, ಅವರು 21 ಎಸೆತಗಳಲ್ಲಿ 31 ರನ್ ಗಳ ಇನ್ನಿಂಗ್ಸ್ ಆಡಿದರು. ಲಿಜೆಲ್ಲೆ ಲೀ ಮತ್ತು ಶಿಫಾಲಿ ವರ್ಮ ಅವರ ಜೊತೆಯಾಟದಲ್ಲಿ ತಂಡಕ್ಕೆ 86 ಗಳು ದೊರೆತವು.

ಇದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಉತ್ತಮ ಆರಂಭವು ಸಿಕ್ಕಿತು. ಮೊದಲ ವಿಕೆಟ್ ಲಿಜೆಲ್ಲೆ ಲೀ ಅವರಾಯಿತು. ಎರಡು ವಿಕೆಟ್ಗಳ ನಂತರ ನಾಯಕಿ ಜಿಮಿಮಾ ರೋಡ್ರಿ ಗಸ್ 23 ಎಸೆತಗಳಲ್ಲಿ 41 ರನ್ ಗಳ ಗಳಿಸಿ ಇನಿಂಗ್ಸ್ ಆಡಿದರು. ಲಾರಾ ವೋಲ್ವಾಡ್ 32 ರನ್ಗಳಿಸಿ ಕೊನೆವರೆಗೂ ಉಳಿದರು. ಜಾರ್ಜಿಯ ವೇರ್ ಹ್ಯಾಮ್ ಗುಜರಾತ್ ಪರ ಎರಡು ವಿಕೆಟ್ ಪಡೆದರು.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ . ಆರಂಭದಲ್ಲಿ ಕಳಪೆ ಪ್ರದರ್ಶನವನ್ನು ತಂಡ ನೀಡಿತು. 9 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಅನ್ನು ಕಳೆದುಕೊಂಡಿತ್ತು. ಸೂಫಿ ಡಿವೈನ್ 6 ರನ್ ಗಳಿಸಿ ಔಟ್ ಆಗಿ ಹೋದರು. ಆರನೇ ಓವರ್ನಲ್ಲಿ ತಂಡ ಎರಡನೇ ವಿಕೆಟ್ ಕಳೆದುಕೊಂಡಿತು 36 ರನ್ ಗಳಿಸಿದಾಗ ಈ ವಿಕೆಟ್ ಸಿಕ್ಕಿತು. ನಂತರ ಗುಜರಾತ್ ತಂಡವು ನಿಯಮಿತ ಅಂತರದಲ್ಲಿ ವಿಕೆಟ್ಗಳನ್ನು ಉರುಳಿದವು. ಅದರಿಂದ ಡೆಲ್ಲಿ ಕ್ಯಾಪಿಟಲ್ ಗೆ ಸಹಾಯವಾಯಿತು. ಆರಂಭಿಕರಾಗಿ ಬ್ಯಾಟಿಂಗ್ ಗೆ ಬಂದಿದ್ದ ಬೆತ್ ಮೂನಿ ಕ್ರೀಸ್ ಕಳೆದುಕೊಂಡರು.

ಅವರು 51 ಎಸೆತಗಳಲ್ಲಿ 62 ರನ್ ಗಳ ಇನ್ನಿಂಗ್ಸ್ ಆಡಿದರು. ಅವರು ಆರಂಭದಿಂದ ಕೊನೆಯವರೆಗೂ ಕ್ರೀಸ್ ನಲ್ಲಿ ಉಳಿದರು. ಅನುಷ್ಕಾ ಶರ್ಮಾ 16 ರನ್ ಮತ್ತು ಕಾಶ್ವಿ ಗೌತಮ್ 18 ರನ್ ಗಳು ಮತ್ತು ಜಾರ್ಜಿಯ ವೇರ್ ಹ್ಯಾಮ್ 25 ಎಸೆತಗಳಲ್ಲಿ 36 ರನ್ ಗಳನ್ನು ಗಳಿಸಿ. ತಂಡದ ಸ್ಕೋರನ್ನು 160ರ ಗಡಿ ತಲುಪಿಸಿದರು.

ಎರಡನೇ ಇನ್ನಿಂಗ್ಸ್ ಆಡಿದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ಗಳು ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಆದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೈನಲ್ ಗೆ ತಲುಪಿತು. ಸತತವಾಗಿ ನಾಲ್ಕು ಸೀಸನ್ ನಲ್ಲಿ ಫೈನಲ್ ಗೆ ತಲುಪಿದ ಹೆಗ್ಗಳಿಕೆ ಡೆಲ್ಲಿ ಕ್ಯಾಪಿಟಲ್ಸ್ ಗೆ ಸಿಕ್ಕಿತು. ಫೈನಲ್ ಗೆ ಆರ್ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ ಪಂದ್ಯವನ್ನು ಆಡಲು ಸಿದ್ಧವಾಗಿದೆ. ನಾಳೆ ನಡೆಯಲಿರುವ ಫೈನಲ್ ನಲ್ಲಿ ಯಾರು ವಿನ್ನರ್ ಎಂಬುವುದು ನಿರ್ಧಾರವಾಗುತ್ತದೆ.


ಇನ್ನಷ್ಟು ಓದಿರಿ:
ಸರ್ಕಾರದ ಹೊಸ ಘೋಷಣೆ :ಶಾಲಾ ಮಕ್ಕಳಿಗೆ ಗುಡ್ ನ್ಯೂಸ್!

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online