<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ವಿದೇಶಿ ದೇಣಿಗೆ ಪಡೆಯುವವರಿಗೆ ಎಚ್ಚರಿಕೆ : ಕೇಂದ್ರ ಸರ್ಕಾರದ ಹೊಸ ರೂಲ್ಸ್ ಜಾರಿ

ವಿದೇಶಿ ದೇಣಿಗೆ ಪಡೆಯುವವರಿಗೆ ಎಚ್ಚರಿಕೆ : ಕೇಂದ್ರ ಸರ್ಕಾರದ ಹೊಸ ರೂಲ್ಸ್ ಜಾರಿ
Summary: The central government has implemented significant amendments to the Foreign Donations Control Act with the aim of preventing misuse of foreign donations, illegal financial transfers and lack of transparency. According to the new rules, organizations receiving foreign funds will have to comply with strict conditions, and strict action will be taken if they violate them.

BELAGAVI NEWS :

ಎನ್.ಜಿ.ಒ ವಿದೇಶಿ ಇದ್ದೇನೆಗೆ ನಿಯಮ ಮತ್ತಷ್ಟು ಕಠಿಣ: ಎಫ್.ಸಿ.ಆರ್.ಎ ತಿದ್ದುಪಡಿ

ಭಾರತದಲ್ಲಿ ಕಾರ್ಯನಿರ್ವಹಿಸುವ ಸ್ವಯಂಸೇವಾ ಸಂಸ್ಥೆಗಳಿಗೆ ವಿದೇಶಿ ದೇಣಿಗೆ ಸ್ವೀಕರಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ನಿಯಮಗಳಿಗೆ ಮಹತ್ವದ ತಿದ್ದುಪಡಿ ತರಲಾಗಿದ್ದು, ವಿದೇಶಿ ಹಣದ ಬಳಕೆ ಮತ್ತು ಮೇಲ್ವಿಚಾರಣೆಗೆ ಹೆಚ್ಚಿನ ನಿಯಂತ್ರಣ ವಿಧಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಗೆಜೆಟ್ ಅಧಿಸೂಚನೆ ಪ್ರಕಾರ, ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ಮುಂದುವರೆದಿದ್ದರೂ, ವಿದೇಶಿ ದೇಣಿಗೆಯ ಮೂಲಕ ಮತಾಂತರ ಚಟುವಟಿಕೆ ನಡೆಸುವುದನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ.

ಹೊಸ ನಿಯಮಗಳ ಅಡಿ ಎನ್.ಜಿ.ಒಗಳು ವಿದೇಶಿ ಕೊಡುಗೆಗಳ ಬಳಕೆಯಲ್ಲಿ ಹೆಚ್ಚು ಪಾರದರ್ಶಕತೆ ಕಾಯ್ದುಕೊಳ್ಳಬೇಕಾಗಿದ್ದು, ನಿಯಮ ಉಲ್ಲಂಘನೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವ ಅವಕಾಶವನ್ನು ಸರ್ಕಾರ ಹೊಂದಿದೆ. ವಿದೇಶಿ ಹಣದ ದುರುಪಯೋಗ ತಡೆಯುವುದು ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಈ ಬದಲಾವಣೆ ತರಲಾಗಿದೆ ಎಂದು ತಿಳಿಸಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರವು ಎನ್.ಜಿ.ಒಗಳಿಗೆ ವಿದೇಶಿ ದೇಣಿಗೆ ಸ್ವೀಕರಿಸುವ ನಿಯಮಗಳಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ಹೊಸ ನಿಯಮಗಳ ಪ್ರಕಾರ, ಭಾರತೀಯ ಮೂಲದವರನ್ನು ಹೊರತುಪಡಿಸಿ ಇತರ ವಿದೇಶಿ ಪ್ರಜೆಗಳು ಎನ್‌ಜಿಓ ಗಳ ಮುಖ್ಯಸ್ಥರಾಗಿದ್ದಾರೆ, ಅಂತಹ ಸಂಸ್ಥೆಗಳಿಗೆ ವಿದೇಶಿ ದೇಣಿಗೆ ಪಡೆಯಲು ಅನುಮತಿ ನೀಡುವುದಿಲ್ಲ. ಆದರೆ ವಿಶೇಷ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ಅನುಮತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಇದೆ ವೇಳೆ ಧಾರ್ಮಿಕ ಚಟುವಟಿಕೆಗಳಿಗೆ ಸಂಬಂಧಿಸಿದ ನಿಯಮಗಳಲ್ಲೂ ಸ್ಪಷ್ಟತೆ ನೀಡಲಾಗಿದೆ. ಧಾರ್ಮಿಕ ಶಿಕ್ಷಣ, ಧಾರ್ಮಿಕ ಸಂಪ್ರದಾಯಗಳ ದಾಖಲಿಕರಣ, ಸ್ಥಳೀಯ ನಂಬಿಕೆಗಳ ಸಂರಕ್ಷಣೆ ಸೇರಿದಂತೆ ಕೆಲವು ಚಟುವಟಿಕೆಗಳಿಗೆ ಅವಕಾಶ ಮುಂದುವರೆದಿದೆ. ಆದರೆ ಈ ಚಟುವಟಿಕೆಗಳ ಹಣಕಾಸಿನಲ್ಲಿ ಯಾವುದೇ ರೀತಿಯ ಮತಾಂತರ ಪ್ರಕ್ರಿಯೆ ನಡೆಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ವಿದೇಶಿ ದೇಣಿಗೆಗಳ ಬಳಕೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಹಾಗೂ ನಿಯಮಗಳ ದುರುಪಯೋಗ ತಡೆಯುವುದು ಹೊಸ ತಿದ್ದುಪಡಿಗಳ ಪ್ರಮುಖ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ವಿದೇಶಿ ದೇಣಿಗೆ ಪಡೆಯುವ ಎನ್.ಜಿ.ಒ ಗಳಿಗೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಸಂಸ್ಥೆಗಳು ತಮ್ಮ ಉದ್ದೇಶ, ಕಾರ್ಯ ವ್ಯಾಪ್ತಿ ಹಾಗೂ ಹಣದ ಬಳಕೆಯ ವಿವರಗಳನ್ನು ಸ್ಪಷ್ಟವಾಗಿ ನೀಡಬೇಕು.

ಯಾವ ಉದ್ದೇಶಕ್ಕಾಗಿ ವಿದೇಶಿ ದೇಣಿಗೆಯನ್ನು ಬಳಸಲಾಗುತ್ತದೆ, ಯಾವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ ಎಂಬ ಮಾಹಿತಿಯನ್ನು ಅರ್ಜಿಯಲ್ಲೇ ನಮೂದಿಸುವುದು ಕಡ್ಡಾಯವಾಗಿದೆ. 2026 ಕ್ಕೂ ಮೊದಲು ನೊಂದಾಯಿಸಿಕೊಂಡಿರುವ ಎಲ್ಲಾ ಎನ್.ಜಿ.ಒಗಳಿಗೆ ತಮ್ಮ ನಿರ್ದಿಷ್ಟ ಉದ್ದೇಶ ಮತ್ತು ಕಾರ್ಯ ನಿರ್ವಹಣೆಯ ಪ್ರದೇಶಗಳ ವಿವರಗಳನ್ನು ಸಲ್ಲಿಸಲು ಒಂದು ವರ್ಷದ ಕಾಲಾವಕಾಶ ನೀಡಲಾಗಿದೆ.

ಇದೇ ವೇಳೆ ನಿಷ್ಕ್ರಿಯ ಸಂಸ್ಥೆಗಳು ಎಫ್.ಸಿ.ಆರ್.ಎ ನೋಂದಣಿ ಮುಂದುವರೆಸುವುದನ್ನು ತಡೆಯಲು ಹೊಸ ನಿಯಮ ರೂಪಿಸಲಾಗಿದೆ. ಎನ್‌ಜಿಓಗಳು ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಕನಿಷ್ಠ 10 ಲಕ್ಷ ರೂಪಾಯಿ ವಿದೇಶಿ ದೇನಿಗೆ ಪಡೆದು, ಅದನ್ನು ತಮ್ಮ ಚಟುವಟಿಕೆಗಳಿಗೆ ಬಳಸಿರಬೇಕು. ನೀ ಮಾಡದಂಡವನ್ನು ಪೂರೈಸದ ಸಂಸ್ಥೆಗಳ ನೋಂದಣಿ ನವೀಕರಣಕ್ಕೆ ನಿರ್ಬಂಧ ವಿಧಿಸಲಾಗುತ್ತದೆ.

ಇದಲ್ಲದೆ, ಕಾರ್ಯ ವ್ಯಾಪ್ತಿ ವಿಸ್ತರನಿಗೆ ಅರ್ಜಿ ಸಲ್ಲಿಸುವ ಎನ್.ಜಿ.ಒಗಳು ಹೆಚ್ಚುವರಿ 300 ಶುಲ್ಕ ಪಾವತಿಸಬೇಕಾಗುತ್ತದೆ. ವಿದೇಶಿ ದೇಣಿಗೆಗಳ ಬಳಕೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಎನ್.ಜಿ.ಒಗಳಿಗೆ ಮತ್ತಷ್ಟು ನಿಯಮ ಕಠಿಣ: ದೇಣಿಗೆ ಬಳಕೆ, ಸೋಶಿಯಲ್ ಮೀಡಿಯಾ ವಿವರ ಕಡ್ಡಾಯ

ವಿದೇಶಿ ದೇಣಿಗೆ ಸ್ವೀಕರಿಸುವ ಎನ್.ಜಿ.ಒಗಳಿಗೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಹಣದ ಬಳಕೆ ಮತ್ತು ಸಂಸ್ಥೆಗಳ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ಇರಿಸಲು ಕ್ರಮ ಕೈಗೊಂಡಿದೆ.

ಹೊಸ ನಿಯಮದ ಪ್ರಕಾರ, ಪೂರ್ವ ಅನುಮತಿ ಮೂಲಕ ವಿದೇಶಿ ದೇನಿಗೆ ಪಡೆಯುವ ಸ್ವಯಂ ಸೇವೆ ಸಂಘಗಳು ಮೊದಲ ಕಾಂತಿನಲ್ಲಿ ಪಡೆದ ಹಣದ ಶೇ. 75 ರಷ್ಟು ಮೊತ್ತವನ್ನು ಕಡ್ಡಾಯವಾಗಿ ಬಳಸಿದ ಬಳಿಕವೇ ಉಳಿದ ಕಂತಿನ ಹಣವನ್ನು ಪಡೆಯಲು ಅವಕಾಶ ನೀಡಲಾಗುತ್ತದೆ. ದೇಣಿಗೆ ಹಣ ಸರಿಯಾದ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂಬುದನ್ನು ಪರಿಶೀಲಿಸಲು ಸರ್ಕಾರದಿಂದ ಪರಿಶೀಲನಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಇನ್ನು ಮುಂದೆ ಎನ್.ಜಿ.ಒಗಳು ನೊಂದಣಿ ಅಥವಾ ನವೀಕರಣದ ಮೇಲೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಲಿದೆ. ಮಧ್ಯವರ್ತಿಗಳ ಮೂಲಕ ವಿದೇಶಿ ಹಣ ಬಂದರೆ, ಅದರ ಮೂಲ ದೇಣಿಗೆಯ ವಿವರಗಳನ್ನು ಸ್ಪಷ್ಟವಾಗಿ ಬಹಿರಂಗಪಡಿಸಬೇಕು.

ಅಲ್ಲದೆ, ಎನ್.ಜಿ.ಒ ಗಳು ಯಾವುದೇ ಸುದ್ದಿ ಅಥವಾ ಪ್ರಚಲಿತ ವಿದ್ಯಮಾನಗಳ ಕುರಿತು ಸುದ್ದಿ ಪ್ರಸಾರ ಅಥವಾ ಪ್ರಕಟಣೆ ಮಾಡುವಂತಿಲ್ಲ ಎಂದು ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ. ಸಂಸ್ಥೆಗಳು ಪ್ರಕಟಿಸಿರುವ ಪುಸ್ತಕಗಳು, ಲೇಖನಗಳು ಹಾಗೂ ಇತರ ಪ್ರಕಟಣೆಗಳ ವಿವರಗಳನ್ನು ನೀಡಬೇಕು.

ಸಂಸ್ಥೆಗಳ ವಾರ್ಷಿಕ ಆದಾಯ, ಚಟುವಟಿಕೆಗಳ ವಿವರ ಹಾಗೂ ವಿದೇಶಿ ದೇವಿಯ ಬಳಕೆಯ ಕುರಿತು ಸಂಗ್ರಹ ವರದಿ ಸಲ್ಲಿಸುವುದು ಕಡ್ಡಾಯವಾಗಿದ್ದು, ಎನ್.ಜಿ.ಒಗಳ ಕಾರ್ಯವೈಕರಿಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಈ ನಿಯಮಗಳನ್ನು ರೂಪಿಸಲಾಗಿದೆ.

Also Read:

ಬಸ್ ಪ್ರಯಾಣದಲ್ಲಿ ಬೆಚ್ಚಿ ಬೆಳಿಸಿದ ಘಟನೆ : ಮಹಿಳಾಗೆ ಕಿರುಕುಳ ನೀಡಿದ ಕಿರಾತಕನಿಗೆ ಧರ್ಮದೇಟು

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online