belagavi news :
ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ರಜತ್ ಪಟಿದಾರ್ ಅವರಿಗೆ ಭಾರತ ಟಿ 20 ತಂಡದಲ್ಲಿ ಸ್ಥಾನ ಸಿಗದಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಾಗಿ ಪ್ರಕಟವಾದ ತಂಡದಲ್ಲಿ ರಜತ್ ಪಾಟಿದಾರ್ ಹೆಸರು ಕಾಣಿಸದಿದ್ದಕ್ಕೆ ಭಾರತದ ಮಾಜಿ ಸ್ಪಿನ್ನರ್, ಹರ್ಭಜನ್ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ನಲ್ಲಿ ಹರ್ಭಜನ್, "ರಜತ್ ಪಾಟಿದಾರ್ ಇನ್ನೇನು ಮಾಡಬೇಕು? ಅವರು ಪ್ರಸ್ತುತ ಭಾರತದ ಅತ್ಯುತ್ತಮ ಮಾಧ್ಯಮ ಕ್ರಮ ಅಂಕದ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು. ಉತ್ತಮ ತಂತ್ರ ಹಾಗೂ ಸ್ಥಿರ ಪ್ರದರ್ಶನ ನೀಡಿದ್ದರು ಅವಕಾಶ ಸಿಗದಿರುವುದು ಆಶ್ಚರ್ಯಕರ" ಎಂದು ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನಾಗಿ ಹಾಗೂ ತಿಲಕ್ ವರ್ಮ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ.ಜೊತೆಗೆ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಮೊದಲ ಬಾರಿಗೆ ಭಾರತ ಸೀನಿಯರ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ರಜತ್ ಪಾಟಿದಾರ್ ಅವರ ನಿರ್ಲಕ್ಷ್ಯಈಗ ಕ್ರಿಕೆಟ್ ಅಭಿಮಾನಿಗಳ ನಡುವೆ ಬಾರಿ ಚರ್ಚೆಗೆ ಗ್ರಾಸವಾಗಿದೆ. ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರನಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗದಿರುವುದು ನ್ಯಾಯವೇ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.ಹರ್ಭಜನ್ ಸಿಂಗ್ ಅವರ ಈ ಹೇಳಿಕೆ ಆಯ್ಕೆ ಪ್ರಕ್ರಿಯೆಯ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ.
"ಭಾರತೀಯ ತಂಡದಲ್ಲಿ ರಜತ್ ಪಾಟಿದಾರ್ ಇಲ್ಲದಿರುವುದು ಬೇಸರದ ಸಂಗತಿ. ಅವರು ಇನ್ನು ಏನು ಮಾಡಬೇಕಿದೆ? ಐಪಿಎಲ್ ನಲ್ಲಿ 501 ರನ್ ಗಳಿಸಿದ್ದಾರೆ, ಸ್ಟ್ರೈಕ್ ರೇಟ್ 200 ಆಗಿದೆ. ಆದರೂ ತಂಡಕ್ಕೆ ಸೇರಿಸಿಕೊಳ್ಳದಿರುವುದು ಅನ್ಯಾಯ, ರಜತ್ ಭಾರತದ ಅತ್ಯುತ್ತಮ ಮಾಧ್ಯಮ ಕ್ರಮಾಂಕದ ಬ್ಯಾಟರ್ ಮತ್ತು ಸ್ಟ್ರೈಕರ್" ಎಂದು ಹರ್ಭಜನ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಐಪಿಎಲ್ 2018ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಪಾಟಿದಾರ್ ಅದ್ಭುತ ಯಶಸ್ಸು ಸಾಧಿಸಿದ್ದಾರೆ. ನಾಯಕತ್ವದ ಜೊತೆಗೆ ಬ್ಯಾಟರ್ ಆಗಿಯೂ ಮಿಂಚಿದ ರಜತ್, ಕೇವಲ 15 ಪಂದ್ಯಗಳಲ್ಲಿ 501ರನ್ ಗಳಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. 45.71 ರ ಸರಾಸರಿ ಮತ್ತು192.69ರ ಸ್ಟ್ರೈಕ್ ರೇಟ್ ನೊಂದಿಗೆ ಐದು ಅರ್ಧ ಶತಕಗಳನ್ನು ಸಿಡಿಸಿರುವ ಅವರು, ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಅಜಯ 93 ರನ್ ಬಾರಿಸಿ ಗಮನ ಸೆಳೆದಿದ್ದರು.
ಭಾರತ ತಂಡಕ್ಕೆ ಪ್ರಕಟವಾದ ಆಟಗಾರರ ಪಟ್ಟಿಯಲ್ಲಿ ಐಪಿಎಲ್ ನ 9 ಫ್ರಾಂಚೈಸಿಗಳ ಆಟಗಾರರಿಗೆ ಅವಕಾಶ ದೊರೆಯುತ್ತಿದ್ದರು, ಚಾಂಪಿಯನ್ ಆರ್ಸಿಬಿ ಯಿಂದ ಒಬ್ಬ ಆಟಗಾರನಿಗೂ ಸ್ಥಾನ ಸಿಕ್ಕಿಲ್ಲ. ಶ್ರೇಯಸ್ ಅಯ್ಯರ್, ಆರ್ಷದೀಪ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮ ಹಾಗೂ ಇಶಾನ್ ಕಿಶನ್ ಸೇರಿದಂತೆ ಹಲವು ಆಟಗಾರರಿಗೆ ಅವಕಾಶ ಸಿಕ್ಕಿದ್ದು, ಆರ್ಸಿಬಿ ಆಟಗಾರರ ಸಂಪೂರ್ಣ ನಿರ್ಲಕ್ಷ್ಯ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ರಜತ್ ಪಾಟಿದಾರ್ ಅವರಂತಹ ಪ್ರತಿಭಾವಂತ ಆಟಗಾರರಿಗೆ ಅವಕಾಶ ಸಿಗದಿರುವುದು ನ್ಯಾಯವೇ? ಬಿಸಿಸಿಐ ಆಯ್ಕೆ ಸಮಿತಿಯ ಈ ನಿರ್ಧಾರ ಇದೀಗ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಆರ್ಸಿಬಿ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರಕಟವಾದ ಭಾರತ ತಂಡದಲ್ಲಿ ಹಲವು ಐಪಿಎಲ್ ಪ್ರಾಂಚೈಸಿಗಳ ಆಟಗಾರರಿಗೆ ಅವಕಾಶ ದೊರೆತಿದೆ.ತಿಲಕ್ ವರ್ಮ ಮತ್ತು ಜಸ್ಪ್ರೀತ್ ಬುಮ್ರಾ, ವೈಭವ್ ಸೂರ್ಯವಂಶಿ ಹಾಗೂ ರವಿ ಬಿಷ್ಣೊಯಿ, ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ, ಸಂಜು ಸಾಮ್ಸನ್ ಹಾಗೂ ಶಿವಂ ದುಬೆ, ಜೊತೆಗೆ ಅಕ್ಷರ ಪಟೇಲ್ ಸೇರಿದಂತೆ ಹಲವು ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಐಪಿಎಲ್ ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ರಜತ್ ಪಾಟಿದಾರ್ ಸೇರಿದಂತೆ ಯಾವುದೇ ಆರ್ಸಿಬಿ ಸ್ಥಾನ ಪಡೆದಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.ಈ ನಿರ್ಧಾರದ ವಿರುದ್ಧ ಮಾಜಿ ಕ್ರಿಕೆಟ್ ಗರು ಹಾಗೂ ಅಭಿಮಾನಿಗಳು ಪ್ರಶ್ನೆ ಎತ್ತುತ್ತಿದ್ದು,ಬಿಸಿಸಿಐ ಆಯ್ಕೆ ಸಮಿತಿಯ ತೀರ್ಮಾನಕ್ಕೆ ಟೀಕೆಗಳು ವ್ಯಕ್ತವಾಗುತ್ತಿವೆ.
Also Read:
ಡಿಸಿಎಂ ಪರಮೇಶ್ವರ್ ಸಿದ್ದಗಂಗಾ ಮಠಕ್ಕೆ ಭೇಟಿ: ಶಿವಕುಮಾರ ಸ್ವಾಮೀಜಿ ಸ್ಮಾರಕಕ್ಕೆ ಗೌರವ ನಮನ