<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿದ ಹಿಂದಿನ ರಹಸ್ಯ ಏನು? ಸತೀಶ್ ಜಾರಕಿಹೊಳಿ ಲೆಕ್ಕಾಚಾರ ತಪ್ಪಿದ್ದೇಗೆ? ಇಲ್ಲಿದೆ ಮಾಹಿತಿ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿದ ಹಿಂದಿನ ರಹಸ್ಯ ಏನು? ಸತೀಶ್ ಜಾರಕಿಹೊಳಿ ಲೆಕ್ಕಾಚಾರ ತಪ್ಪಿದ್ದೇಗೆ? ಇಲ್ಲಿದೆ ಮಾಹಿತಿ
Summary: In the wake of Satish Jarkiholi losing the KPCC president's post, there are old political discussions going on in the state Congress camp. There is increased curiosity in the political circle about how Jarkiholi's calculation went wrong and what reasons worked behind the high command's decision. This development is shedding new light on the equations within the Congress.

Belagavi news:

ಬೆಂಗಳೂರು ಜೂನ್ 4; ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ರಾಜೀನಾಮೆ ನೀಡಿದ ಬೆನ್ನೆಲ್ಲೇ ಪಕ್ಷದ ನೂತನ ಸಾರಥಿಯಾಗಿ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ಎಐಸಿಸಿ ಘೋಷಿಸಿದೆ.

ಹರಿಪ್ರಸಾದ್ ಅವರ ಹೆಸರು ಆರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ ಗೆ ಅಚ್ಚರಿಯ ಪ್ರವೇಶವಾಗಿತ್ತು. ಅಷ್ಟರವರೆಗೆ ಸತೀಶ್ ಜಾರಕಿಹೊಳಿ ಹೆಸರು ಮುಂಚೂಣಿಯಲ್ಲಿದ್ದು, ಅವರಿಗೆ ಪಟ್ಟ ಬಹುತೇಕ ಖಚಿತವಾಗಿದೆ ಎಂಬ ಚರ್ಚೆಯು ರಾಜಕೀಯ ವಲಯದಲ್ಲಿ ನಡೆದಿತ್ತು.

ಆದರೆ ಕೊನೆಯ ಕ್ಷಣದಲ್ಲಿ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿತ್ತು, ಓಬಿಸಿ ಸಮುದಾಯದ ನಾಯಕನಿಗೆ ಮಹತ್ವದ ಹುದ್ದೆ ಲಭಿಸಿರುವುದು ರಾಜ್ಯ ಕಾಂಗ್ರೆಸ್ ಒಳ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Sponsored

ಹೈಕಮಾಂಡ್ ನ ಈ ನಿರ್ಧಾರದಿಂದ ಪಕ್ಷದ ಮುಂದಿನ ಸಮೀಕರಣಗಳು ಮತ್ತು ನಾಯಕತ್ವ ಸಮತೋಲನದ ಕುರಿತು ಕುತುಹಲ ಹೆಚ್ಚಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಕೆಪಿಸಿಸಿಯ ನೂತನ ಅಧ್ಯಕ್ಷನ್ನಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಅವರನ್ನು ಎಐಸಿಸಿ ನೇಮಕ ಮಾಡಿದೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ಸತೀಶ್ ಜಾರಕಿಹೊಳಿ ಅವರಿಗೆ ಕೊನೆ ಕ್ಷಣದಲ್ಲಿ ಹಿನ್ನಡೆ ಯಾಗಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅವರ ಹೆಸರು ಬಹುತೇಕ ಅಂತಿಮವಾಗಲಿದೆ ಎಂಬ ನಿರೀಕ್ಷೆಯಿದ್ದರು, ಹೈಕಮಾಂಡ್ ಕೊನೆಯ ಹಂತದಲ್ಲಿ ಬೇರೆ ಲೆಕ್ಕಾಚಾರಕ್ಕೆ ಮೊರೆಹೋದಿದೆ ಎನ್ನಲಾಗುತ್ತಿದೆ.

ಹೈಕಮಾಂಡ್ ನ ಈ ನಿರ್ಧಾರದ ಹಿಂದೆ ಪಕ್ಷದ ಒಳಸಮತೋಲನ, ಸಮುದಾಯ ಸಮೀಕರಣ ಹಾಗೂ ಮುಂದಿನ ಚಟುವಟಿಕೆಗಳ ತಂತ್ರಗಾರಿಕೆ ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ.

Sponsored

ಈ ಬೆಳವಣಿಗೆಯೊಂದಿಗೆ ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವದ ಸಮೀಕರಣಗಳು ಹೊಸ ತಿರುವು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ಚಟುವಟಿಕೆಗಳು ನಡೆಯುವ ಸಾಧ್ಯತೆ ಇದೆ.

ಸತೀಶ್ ಲೆಕ್ಕಾಚಾರ ತಪ್ಪಿದ್ದೇಗೆ ?

• ಕೆಪಿಸಿಸಿ ಹಾಗೂ ಮಿನಿಸ್ಟರ್ ಎರಡು ಹುದ್ದೆ ನೀಡಲು ಹೈಕಮಾಂಡ್ ನಿರಾಕರಣೆ

Sponsored

• ಸಿಎಂ ಸ್ಥಾನಕ್ಕೆ ಯಾವುದೇ ಸಂದರ್ಭದಲ್ಲಿ ಸತೀಶ್ ಕಾಂಪಿಟೇಟರ್ ಎಂಬ ಆತಂಕ

• ಡಿಕೆ ಶಿವಕುಮಾರ್ ಗೆ ಸಮನಾಗಿ ಪವರ್ ಸೆಂಟರ್ ಆಗುತ್ತಾರೆ ಎಂಬ ಭೀತಿ

• ಶಾಸಕರ ಬೆಂಬಲ ಸತೀಶ್ ಗೆ ಇದೆ ಎಂಬುದು ದೊಡ್ಡ ಥ್ರೆಟ್

• ಸಿದ್ದರಾಮಯ್ಯರಿಂದಲೂ ಸತೀಶ್ ಗೆ ಕೆಪಿಸಿಸಿ ಹೊಣೆ ನೀಡಲು ವಿರೋಧ

Sponsored

• ತಮ್ಮ ಬೆನ್ನಿಗೆ ನಿಂತಿಲ್ಲ ಎಂಬಂತೆ ಭಾವಿಸಿರುವ ಸಿದ್ದರಾಮಯ್ಯ

• ಸತೀಶ್ ಅಹಿಂದ ಉತ್ತರಾಧಿಕಾರಿಯಾದರೆ ತಮ್ಮ ಅಸ್ತಿತ್ವ ಅಲುಗಾಡುತ್ತದೆ ಎಂದು ಯೋಚಿಸಿದ ಹಲವರು

• ಸಂಘಟನೆಯಲ್ಲಿ ಸತೀಶ್ ಕೆಪ್ಯಾಸಿಟಿಯೇ ದೌರ್ಬಲ್ಯವಾಗಿದ್ದು

• 2028 ಕ್ಕೆ ಸತೀಶ್ ಸಿಎಂ ಸ್ಥಾನ ಕ್ಲೇಮ್ ಮಾಡ್ತಾರೆ ಎಂಬ ಭಯ

Sponsored

• ಶಾಸಕರ ಬೆಂಬಲದ ವಿಚಾರ ಬಂದರೆ ಮತ್ತೆ ಸತೀಶ್ vs ಡಿಕೆಶಿ ಫೈಟ್ ನಡೆಯಬಹುದು

• ಶಾಸಕರನ್ನು ಸತೀಶ್ ತಮ್ಮ ವೈಯಕ್ತಿಕ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಆತಂಕ

• ಜನರನ್ನು ಹಿಡಿದು ಕೂರಿಸಬಲ್ಲ ಪ್ರಭಾವಿ ಮಾತುಗಾರ ಅಲ್ಲ ಎಂಬ ಅಂಶ

• ಇದೆಲ್ಲಕ್ಕೂ ಪುಷ್ಟಿ ನೀಡುವಂತೆ ಒಬ್ಬನಿಗೆ ಒಂದೇ ಹುದ್ದೆ ಎಂಬ ಹೈಕಮಾಂಡ್ ನಿರ್ಧಾರ

Sponsored

ಸಚಿವ ಸ್ಥಾನವನ್ನೇ ಸತೀಶ್ ಆಯ್ದುಕೊಂಡಿದ್ದೇಕೆ?

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಿಂತ ಸಚಿವ ಸ್ಥಾನವೇ ಸೂಕ್ತ ಎಂಬ ನಿರ್ಧಾರಕ್ಕೆ ಸತೀಶ್ ಜಾರಕಿಹೊಳಿ ಬಂದಿದ್ದರು ಎಂಬ ರಾಜಕೀಯ ವಲಯದ ಚರ್ಚೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ಸಚಿವ ಸ್ಥಾನ ಇಲ್ಲದಿದ್ದರೆ ಸರ್ಕಾರದ ಮೇಲೆ ನೇರ ಹಿಡಿತ ಕೈತಪ್ಪುವ ಸಾಧ್ಯತೆ ಇರುವುದರಿಂದ ಜೊತೆಗೆ ಬೆಳಗಾವಿ ರಾಜಕಾರಣದಲ್ಲಿ ತಮ್ಮ ಪ್ರಭಾವವೂ ಕುಂಠಿತವಾಗಬಹುದು ಎಂಬ ಆತಂಕ ಅವರಿಗಿತ್ತು ಎಂದು ಹೇಳಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆತರೂ ಅದು ಮುಖ್ಯವಾಗಿ ಪಕ್ಷ ಸಂಘಟನೆಗೆ ಸೀಮಿತವಾಗುವ ಪಾತ್ರವಾಗಿದ್ದು, ಆಡಳಿತಾತ್ಮಕ ಅಧಿಕಾರ ಸಿಗುವುದಿಲ್ಲ.

Sponsored

ಅದಲ್ಲದೆ, ಸಚಿವ ಸ್ಥಾನ ಇಲ್ಲದಿದ್ದರೆ ಸಂಘಟನೆಗೆ ಅಗತ್ಯವಾದ ಸಂಪನ್ಮೂಲ ಮತ್ತು ದನ ಸಹಾಯದ ಅವಕಾಶವೂ ಸಿಮೀತವಾಗುತ್ತದೆ ಎಂಬ ಅಂಶವು ಪರಿಗಣತೆಯಲ್ಲಿತ್ತು ಎಂದು ಮೂಲಗಳು ತಿಳಿಸುತ್ತಿವೆ. ಈ ಎಲ್ಲಾ ಕಾರಣಗಳಿಂದ ಸಚಿವ ಸ್ಥಾನವೇ ಹೆಚ್ಚು ಪರಿಣಾಮಕಾರಿ ಎಂದು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಈ ಹಂತದಲ್ಲಿ ಹಿಂದೆ ಸರದಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

Also Read:

ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲೆ ಹಾಸನ ಜನರಿಗಿದೆ ಬೆಟ್ಟದಷ್ಟು ಭರವಸೆ!

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online