Belagavi News:
ಭಕ್ತರು ಸಾಮಾನ್ಯವಾಗಿ ದೇವಾಲಯದ ಹುಣ್ಣಿಗೆ ಹಣ ಹಾಕುವಾಗ ಆರೋಗ್ಯ, ಶಾಂತಿ, ಸುಖ-ಸಮೃದ್ಧಿ ಸೇರಿದಂತೆ ಒಳ್ಳೆಯ ಕೋರಿಕೆಗಳನ್ನು ಸಲ್ಲಿಸುತ್ತಾರೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪಂಪನೂರು ಸುಬೃಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಹುಂಡಿ ಎಣಿಕೆಯ ವೇಳೆ ಕಂಡು ಬಂದ 2೦ ರೂ. ನೋಟಿನಲ್ಲಿನ ವಿಚಿತ್ರ ಬರಹ ಇದೀಗ ಎಲ್ಲರ ಗಮನ ಸೆಳೆದಿದೆ.
ಕುಂಡಿ ಹಣ ಎಣಿಸುವ ಸಂದರ್ಭದಲ್ಲಿ 20ರೂ. ನೋಟಿನ ಮೇಲೆ "ಅತ್ತೆ ಬೇಗ ಸಾಯಬೇಕು" ಎಂಬ ರೀತಿಯ ಕೋರಿಕೆ ಬರೆದಿರುವುದು ಕಂಡುಬಂದಿದ್ದು, ಸಿಬ್ಬಂದಿ ಕ್ಷಣ ಕಾಲ ಅಚ್ಚರಿಗೊಳಗಾದರು. ಈ ಘಟನೆ ದೇವಾಲಯದ ಸಿಬ್ಬಂದಿ ಹಾಗೂ ಭಕ್ತರ ನಡುವೆ ಚರ್ಚೆಗೆ ಕಾರಣವಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಇದನ್ನು ತಮಾಷೆಯಾಗಿ ನೋಡುತ್ತಿದ್ದರೆ, ಇನ್ನು ಕೆಲವರು ಕುಟುಂಬ ಸಂಬಂಧಗಳಲ್ಲಿನ ಒತ್ತಡ ಹಾಗೂ ಗಂಭೀರ ಕೌಟುಂಬಿಕ ಕಲಹಗಳ ಪ್ರತಿಬಿಂಬ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ತಜ್ಞರ ಪ್ರಕಾರ, ಇಂತಹ ಘಟನೆಗಳು ಸಮಾಜದಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ ಮತ್ತು ಸಂಬಂಧಗಳ ಬಿರುಕನ್ನು ಸೂಚಿಸುತ್ತಿದ್ದು, ಕುಟುಂಬ ಸಂಬಂಧಗಳ ಬಗ್ಗೆ ಗಂಭೀರ ಚಿಂತನೆ ಅಗತ್ಯವಿದೆ ಎಂಬ ಸಂದೇಶವನ್ನು ನೀಡುತ್ತಿವೆ.
ಅನಂತಪುರ ದೇವಸ್ಥಾನದ ಹುಂಡಿಯಲ್ಲಿ 20 ರೂ.ನೋಟಿನ ವಿಚಿತ್ರ ಕೋರಿಕೆ ವೈರಲ್ - "ಅತ್ತೆ ಬೇಗ ಸಾಯಬೇಕು" ಬರಹಕ್ಕೆ ಆನ್ಲೈನ್ ನಲ್ಲಿ ತೀವ್ರ ಪ್ರತಿಕ್ರಿಯೆ :
ಭಕ್ತರು ದೇವಾಲಯದ ಹುಂಡಿಗೆ ಹಣ ಹಾಕುವಾಗ ಸಾಮಾನ್ಯವಾಗಿ ಆರೋಗ್ಯ, ಸುಖ ಶಾಂತಿ, ಉದ್ಯೋಗ ಹಾಗೂ ಕುಟುಂಬ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪಂಪನೂರು ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ಹುಂಡಿ ಎಣಿಕೆಯ ವೇಳೆ ಕಂಡು ಬಂದ 20 ರೂ. ನೋಟಿನಲ್ಲಿನ ವಿಚಿತ್ರ ಕೋರಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಗುಂಡಿ ಹಣ ಎಣಿಸುವ ವೇಳೆ ಸಿಬ್ಬಂದಿಗೆ ಸಿಕ್ಕ 20 ರೂ. ನೋಟಿನ ಮೇಲೆ ತೆಲುಗಿನಲ್ಲಿ "ದೇವರೇ ನನ್ನ ಅತ್ತೆ ಬೇಗ ಸಾಯಬೇಕು" ಎಂಬ ರೀತಿಯ ಬರಹ ಕಂಡು ಬಂದಿದ್ದು, ಇದನ್ನು ಖಂಡಿ ಕ್ಷಣ ಕಾಲ ಆಘಾತ ಗೊಂಡಿದ್ದಾರೆ. ಸಾಮಾನ್ಯವಾಗಿ ಕಾಗದಿದ ಮೇಲೆ ತಮ್ಮ ಕಷ್ಟಗಳನ್ನು ಬರೆದು ದೇವರಿಗೆ ಅರ್ಪಿಸುವ ಸಂಪ್ರದಾಯವನ್ನು ಕಾಣುವ ಸಿಬ್ಬಂದಿಗೆ, ನೋಟಿನ ಮೇಲೆ ಯಾರೋ ಒಬ್ಬರ ಸಾವನ್ನು ಬಯಸಿ ಪ್ರಾರ್ಥನೆ ಬರೆದಿರುವುದು ತೀವ್ರ ಆಶ್ಚರ್ಯವನ್ನು ಮೂಡಿಸಿದೆ.
ಈ ವಿಚಿತ್ರ ಪ್ರಾರ್ಥನೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರೀಸುತಿದ್ದಾರೆ. ಕೆಲವರು ಇದನ್ನು ಹಾಸ್ಯಾತ್ಮಕವಾಗಿ ತೆಗೆದುಕೊಂಡರೆ, ಇನ್ನು ಕೆಲವರು ಕುಟುಂಬ ಸಂಬಂಧಗಳಲ್ಲಿನ ಗಂಭೀರ ಕಲಹ ಮತ್ತು ಮಾನಸಿಕ ಒತ್ತಡದ ಪ್ರತಿಬಿಂಬ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಘಟನೆಯ ಕುರಿತು ದೇವಾಲಯದ ಸಿಬ್ಬಂದಿ ಕೂಡ ಅಚ್ಚರಿ ವ್ಯಕ್ತಪಡಿಸಿದ್ದು, ಇಂತಹ ನೋಟುಗಳು ಅಪರೂಪವಾಗಿವೆ ಎಂದು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹುಂಡಿಯಲ್ಲಿ ಸಿಗುವ ವಿಭಿನ್ನ ಬರಹಗಳು ಮತ್ತು ಕೋರಿಕೆಗಳು ಸಾಮಾಜಿಕ ಚರ್ಚೆಗೆ ಕಾರಣವಾಗುತ್ತಿದ್ದು, ಈ ಘಟನೆ ಮತ್ತೊಮ್ಮೆ ಕುಟುಂಬ ಸಂಬಂಧಗಳು ಮತ್ತು ಮಾನಸಿಕ ಒತ್ತಡದ ಕುರಿತು ಚಿಂತನೆಗೆ ದಾರಿ ಮಾಡಿಕೊಟ್ಟಿದೆ.
ಈ ಘಟನೆ ಆನ್ಲೈನ್ ನಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಭಕ್ತರ ಭಾವನೆಗಳು ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
ಅನಂತಪುರ ದೇವಾಲಯದ ಹುಂಡಿ ಪ್ರಕರಣ ವೈರಲ್ - 20 ರೂ ನೋಟಿನ ಕೋರಿಕೆ ಬಗ್ಗೆ ನೆಟ್ಟಿಗರ ತಮಾಷೆ ಪ್ರತಿಕ್ರಿಯೆ:
ಅನಂತಪುರ ದೇವಾಲಯದ ಹುಂಡಿಯಲ್ಲಿ ಸಿಕ್ಕ 20 ರೂ. ನೋಟಿನ ವಿಚಿತ್ರ ಕೋರಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ನೋಟಿನ ಮೇಲೆ "ಅತ್ತೆ ಬೇಗ ಸಾಯಬೇಕು" ಎಂಬ ಬರಹ ಕಂಡುಬಂದಿದ್ದು , ಘಟನೆ ನೆಟ್ಟಿದರ ಗಮನ ಸೆಳೆದಿದೆ.
ಈ ಘಟನೆ ಕುರಿತು ಆನ್ಲೈನ್ ನಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡು,"ಕೇವಲ 20 ರೂಪಾಯಿಗೆ ದೇವರಿಗೇ ನೇರ ದೂರು ನೀಡಲಾಗಿದೆ" ಎಂದು ಆಸೆ ಮಾಡಿದ್ದಾರೆ. ಇನ್ನು ಕೆಲವರು "20 ರೂಪಾಯಿಗೆ ಅತ್ತೆಯನ್ನೇ ಕೊಲ್ಲಲು ಹೊರಟಿದ್ದಾರೆ" ಎಂಬ ರೀತಿಯಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಸುತ್ತಿದ್ದಾರೆ.
"ದೇವರು ಕೂಡ ಇಂತಹ ವಿಚಿತ್ರ ಕೋರಿಕೆಯನ್ನು ಊಹಿಸಿರಲಿಲ್ಲ " ಎಂಬ ಕಾಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಘಟನೆಗೆ ಹಾಸ್ಯಮಯ ಚರ್ಚೆಗಳಿಗೆ ಕಾರಣವಾಗಿದೆ.
ಈ ಪ್ರಕರಣ ಒಂದು ಕಡೆ ನೆಟ್ಟಿಗರನ್ನು ನಗಿಸುವಂತಿದ್ದರೂ, ಇನ್ನೊಂದು ಕಡೆ ಕುಟುಂಬ ಸಂಬಂಧಗಳಿನ ಒತ್ತಡ ಮತ್ತು ಭಾವನಾತ್ಮಕ ಸಮಸ್ಯೆಗಳ ಬಗ್ಗೆ ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ದೇವಾಲಯದ ಹುಂಡಿಯಲ್ಲಿ ಸಿಕ್ಕ 20 ರೂಪಾಯಿ ನೋಟ್ ವೈರಲ್ - ನಗುವಿನ ಹಿಂದೆ ಅಡಗಿದ ಮಾನಸಿಕ ಒತ್ತಡದ ಕಥೆ! :
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪಂಪನೂರು ಸುಬ್ರಮಣ್ಯೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಪತ್ತೆಯಾದ ರೂ. 20 ನೋಟು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ನೋಟಿನ ಮೇಲೆ ತೆಲುಗಿನಲ್ಲಿ "ದೇವರೇ, ನನ್ನ ಅತ್ತೆ ಬೇಗ ಸಾಯಬೇಕು" ಎಂದು ಬರೆಯಲಾಗಿದ್ದು, ಇದು ನಟಿಗರ ನಡುವೆ ಕುತೂಹಲ, ಹಾಸ್ಯ ಮತ್ತು ಗಂಭೀರ ಚರ್ಚೆಗಳಿಗೆ ಕಾರಣವಾಗಿದೆ.
ಹುಂಡಿ ಎಣಿಕೆ ವೇಳೆ ಸಿಬ್ಬಂದಿಗೆ ಈ ನೋಟು ಸಿಕ್ಕಿದ್ದು, ಸಾಮಾನ್ಯವಾಗಿ ಆರೋಗ್ಯ, ಉದ್ಯೋಗ, ಆರ್ಥಿಕ ಅಭಿವೃದ್ಧಿ ಅಥವಾ ಕುಟುಂಬದ ಕ್ಷೇಮಕ್ಕಾಗಿ ಭಕ್ತರು ದೇವರಿಗೆ ಪ್ರಾರ್ಥನೆ ಸಲ್ಲಿಸುವ ಸಂದರ್ಭಗಳಲ್ಲಿ ಇಂತಹ ವಿಚಿತ್ರ ಕೋರಿಕೆ ಕಂಡು ಬಂದಿರುವುದು ಅಚ್ಚರಿ ಮೂಡಿಸಿದೆ. ಕಾಗದದ ಚೀಟಿಗಳಲ್ಲಿ ಸಮಸ್ಯೆಗಳನ್ನು ಬರೆದು ದೇವರಿಗೆ ಅರ್ಪಿಸುವುದು ಸಾಮಾನ್ಯವಾದರೂ, ನೇರವಾಗಿ ಕರೆನ್ಸಿ ನೋಟಿನ ಮೇಲೆ ಇಂತಹ ಸಂದೇಶ ಬರೆದಿರುವುದು ಸಿಬ್ಬಂದಿಯನ್ನು ದಂಗುಬಡಿಸಿದೆ.
ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಹಲವರು ಹಾಸ್ಯಮಯವಾಗಿ ಪ್ರತಿಕ್ರಿಯೆಸಿದ್ದಾರೆ. "ಆಕೆ ಕೇವಲ 20 ರೂಪಾಯಿ ಸುಫಾರಿ ನೀಡಿ ದೇವರಿಗೆ ನೆರದೂರು ದಾಖಲಿಸಿದ್ದಾಳೆ", "20 ರೂಪಾಯಿಗೆ ಅತ್ತೆಯನ್ನೇ ಕೊಲ್ಲಲು ಹೊರಟಿದ್ದಾಳೆ", "ದೇವರು ಕೂಡ ಇಂತಹ ವಿನಂತಿಯನ್ನು ಊಹಿಸಿರಲಾರ" ಎಂಬ ಕಾಮೆಂಟ್ ಗಳು ವ್ಯಾಪಕವಾಗಿ ಹರಿದಾಡುತ್ತಿವೆ.
ಆದರೆ ಮತ್ತೊಂದೆಡೆ, ಕೆಲವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. "ಇದು ಕೇವಲ ನಗುವಿನ ವಿಷಯವಲ್ಲ. ಆ ಮಹಿಳೆ ಮನೆಯೊಳಗೆ ಎಂತಹ ಮಾನಸಿಕ ಒತ್ತಡ, ನೋವು ಅಥವಾ ಕೌಟುಂಬಿಕ ಕಲಹ ಎದುರಿಸುತ್ತಿರಬಹುದು ಎಂಬುದಕ್ಕೆ ಈ ನೋಟು ಸಾಕ್ಷಿ ಆಗಿರಬಹುದು" ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಟುಂಬ ಸಂಬಂಧಗಳಲ್ಲಿ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳು, ಮಾನಸಿಕ ಒತ್ತಡ ಮತ್ತು ಭಾವನಾತ್ಮಕ ಸಂಕಷ್ಟಗಳು ಸಮಾಜದಲ್ಲಿ ಹೊಸ ಸವಾಲಾಗಿ ಪರಿಣಮಿಸುತ್ತಿವೆ. ಈ ಘಟನೆ ಒಂದು ಕಡೆ ಹಾಸ್ಯಕ್ಕೆ ಕಾರಣವಾದರೂ, ಮತ್ತೊಂದು ಕಡೆ ಕುಟುಂಬಗಳೊಳಗಿನ ಬಿಕ್ಕಟ್ಟುಗಳು ಯಾವ ಮಟ್ಟಿಗೆ ತಲುಪಿವೆ ಎಂಬುದನ್ನು ತೋರಿಸುವ ಕನ್ನಡಿಯನ್ನು ಸಾಮಾಜಿಕ ವಲಯದಲ್ಲಿ ಚರ್ಚೆ ಯಾಗುತ್ತಿದೆ.
ಪದ್ಯ ಈ ರೂ. 20 ನೋಟಿನ ಫೋಟೋ ಇಂಟರ್ನೆಟ್ ನಲ್ಲಿ ಲಕ್ಷಾಂತರ ಮಂದಿಯ ಗಮನ ಸೆಳೆದಿದ್ದು, ನಗುವಿನ ಜೊತೆಗೆ ಸಮಾಜದ ವಾಸ್ತವ ಸಮಸ್ಯೆಗಳ ಕುರಿತು ಚಿಂತನೆಗೂ ಕಾರಣವಾಗಿದೆ.
Also Read:
'ಭಯೋತ್ಪಾದನೆ ಹರಡಿದರೆ ನೀರಿಲ್ಲ' ವಿಶ್ವಸಂಸ್ಥೆಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್