<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಯಶ್ ಅಭಿನಯದ Toxic ಚಿತ್ರದ 'ಮನಮೋಹಕ ' ಹಾಡು ಬಿಡುಗಡೆ : ತಾರಾ ಸುತಾರಿಯ ಸೌಂದರ್ಯಕ್ಕೆ ಫಿದಾ ಅಭಿಮಾನಿಗಳು

ಯಶ್ ಅಭಿನಯದ Toxic ಚಿತ್ರದ 'ಮನಮೋಹಕ ' ಹಾಡು ಬಿಡುಗಡೆ : ತಾರಾ ಸುತಾರಿಯ ಸೌಂದರ್ಯಕ್ಕೆ ಫಿದಾ ಅಭಿಮಾನಿಗಳು
Summary: Yash starrer Toxic's 'Manamohaka' song has been released, and fans are in awe of Tara Sutari's charming look and glamorous avatar.

Belagavi News :

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ Toxic ಚಿತ್ರದ ಎರಡನೇ ಹಾಡು 'ಮನಮೋಹಕ' ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಮಧುರ ಪ್ರಣಯಗೀತೆಯಾಗಿ ಮೂಡಿ ಬಂದಿರುವ ಈ ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಯಶ್ ಮತ್ತು ತಾರಾ ಸುತಾರಿಯ ಅವರ ರೊಮ್ಯಾಂಟಿಕ್ ಕೆಮಿಸ್ಟ್ರಿ ಹಾಡಿನ ಮೂಲಕ ಆಕರ್ಷಣೆಯಾಗಿದ್ದು, ಇಬ್ಬರ ಸ್ಕ್ರೀನ್ ಪ್ರೆಸೆನ್ಸ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

'ಮನಮೋಹಕ ' ಹಾಡಿನಲ್ಲಿ ಯಶ್ - ತಾರಾ ಸುತಾರಿಯಾ ಮೋಡಿ :

ಟಾಕ್ಸಿಕ್ ಚಿತ್ರದ ಎರಡನೇ ಗೀತೆಯಾಗಿರುವ ಮನಮೋಹಕ ಪ್ರೇಮ ಭಾವದೊಂದಿಗೆ ಮೂಡಿಬಂದಿದ್ದು, ಸಂಗೀತ, ದೃಶ್ಯ ವೈಭವ ಹಾಗೂ ಕಲಾವಿದರ ಅಭಿನಯದಿಂದ ಗಮನ ಸೆಳೆಯುತ್ತಿದೆ. ಹಾಡು ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಸಮಾಜದ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆರಂಭಿಸಿದೆ.

ಕಿಯಾರಾ, ನಯನತಾರಾ ಎಂಟ್ರಿ ಗೆ ಹೆಚ್ಚಿದ ಕುತೂಹಲ :

ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಕಿಯಾರಾ ಅಡ್ವಾಣಿ ಮತ್ತು ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರ ಪಾತ್ರಗಳ ಬಗ್ಗೆ ಈಗಾಗಲೇ ಕುತೂಹಲ ಹೆಚ್ಚಾಗಿದೆ. 'ಮನಮೋಹಕ' ಹಾಡಿನ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಯಶ್ ಅವರ ಫ್ಯಾನ್ ಇಂಡಿಯಾ ಅಭಿಮಾನಿಗಳು ಕನ್ನಡ ಸೇರಿದಂತೆ ಇತರ ಭಾಷೆಗಳನ್ನು ಬಿಡುಗಡೆಯಾದ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Toxic Song - ಯಶ್ - ತಾರಾ ಸುತಾರಿಯಾ 'ಮನಮೋಹಕ ' ಮೆಲೋಡಿ ಸದ್ದು ; ಪ್ರೇಕ್ಷಕರ ಮನ ಗೆದ್ದ ರೋಮ್ಯಾಂಟಿಕ್ ಕೆಮೆಸ್ಟ್ರಿ :

ರಾಕಿಂಗ್ ಸ್ಟಾರ್ ಯಶ್ ಅಭಿನಯದ toxic ಚಿತ್ರದ ಎರಡನೇ ಹಾಡು ಮನಮೋಹಕ ಬಿಡುಗಡೆಯಾದ ಬಳಿಕ ಭರ್ಜರಿ ಗಮನ ಸೆಳೆಯುತ್ತಿದೆ. ಈ ಮೆಲೋಡಿ ಪ್ರಣಯಗೀತೆಯಲ್ಲಿ ಯಶ್ ಮತ್ತು ಬಾಲಿವುಡ್ ನಟಿ ತಾರಾ ಸುತಾರಿಯಾ ಅವರ ರೋಮ್ಯಾಂಟಿಕ್ ಸ್ಕ್ರೀನ್ ಕೆಮೆಸ್ಟ್ರಿ ಮೆಚ್ಚುಗೆಗೆ ಪಾತ್ರವಾಗಿದೆ.

ಹಾಡಿನಲ್ಲಿನ ಯಶ್ - ತಾರಾ ಜೋಡಿಯ ಮೂಡಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇಬ್ಬರ ನಡುವಿನ ಮನಮೋಹಕ ದೃಶ್ಯಗಳು ಹಾಗೂ ಭಾವನಾತ್ಮಕ ಅಭಿನಯ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಪ್ರಮೋದ್ ಮೊರವಂತೆ ಸಾಹಿತ್ಯ, ಸಿದ್ದಾರ್ಥ್ ಬಸರೂರ್ ಧ್ವನಿಗೆ ಮೆಚ್ಚುಗೆ :

'ಮನಮೋಹಕ ' ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಸಿದ್ದಾರ್ಥ್ ಬಸರೂರ್ ಅವರ ಕಂಠಸಿರಿಯಲ್ಲಿ ಹಾಡು ಮತ್ತಷ್ಟು ವಿಶೇಷವಾಗಿದೆ. ಮಧುರ ಸಂಗೀತ ಮತ್ತು ಸುಂದರ ಸಾಹಿತ್ಯದಿಂದ ಈ ಗೀತೆ ಸಂಗೀತಪ್ರಿಯರ ಲೂಪ್ ಲಿಸ್ಟ್ ಸೇರಿದೆ.

ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

'ತಬಾಹಿ' ಬಳಿಕ ವಿಭಿನ್ನ ಪ್ರಣಯ ಗೀತೆ :

Toxic ಚಿತ್ರದ ಮೊದಲ ಹಾಡು 'ತಬಾಹಿ' ವಿಭಿನ್ನ ಶೈಲಿ ಮತ್ತು ಬೋಲ್ಡ್ ಪ್ರಸ್ತುತಿಯಿಂದ ಗಮನ ಸೆಳೆದಿತ್ತು. ಇದೀಗ ಅದರ ಬಳಿಕ ಬಿಡುಗಡೆಯಾಗಿರುವ 'ಮನ ಮೋಹಕ ' ಸಂಪೂರ್ಣ ವಿಭಿನ್ನವಾದ ರೋಮ್ಯಾಂಟಿಕ್ ಟಚ್ ಹೊಂದಿದ್ದು, ಅಭಿಮಾನಿಗಳಲ್ಲಿ ಹೊಸ ಕುತೂಹಲ ಮೂಡಿಸಿದೆ.

ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಸೃಜನಶೀಲತೆ ಹಾಡಿನ ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದು, Toxic ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

Toxic Movie - 'ಮನಮೋಹಕ' ಹಾಡಿಗೆ ಭರ್ಜರಿ ರೆಸ್ಪಾನ್ಸ್ ; ಯಶ್, ನಯನತಾರಾ, ಟಿ ಯಾರ ಎಂಟ್ರಿಯಿಂದ ಹೆಚ್ಚಿದ ಕುತೂಹಲ :

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಫ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್ ಚಿತ್ರದ ಎರಡನೇ ಹಾಡು 'ಮನಮೋಹಕ' ಬಿಡುಗಡೆಯಾದ ಬಳಿಕ ಭಾರಿ ಸದ್ದು ಮಾಡುತ್ತಿದೆ. ದೃಶ್ಯ ವೈಭವ, ಸಂಗೀತ ಮತ್ತು ಸ್ಟಾರ್ಗಳ ಪ್ರಭಾವದಿಂದ ಹಾಡು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರಮಂದಿರಗಳಲ್ಲಿ 'ಮನಮೋಹಕ ' ಹಾಡಿನ ದೃಶ್ಯ ವೈಭವ ಅಭಿಮಾನಿಗಳಿಗೆ ವಿಶೇಷ ಅನುಭವ ನೀಡಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

ಯೂಟ್ಯೂಬ್ ನಲ್ಲಿ 'ಮನೆ ಮೋಹಕ ' ಸಾಂಗ್ ಗೆ ಭರ್ಜರಿ ಪ್ರತಿಕ್ರಿಯೆ :

ಮಲ್ಟಿಸ್ಟಾರರ್ ತಾರಾಗಣ ಹೊಂದಿರುವ Toxic ಚಿತ್ರದ ಮನಮೋಹಕ ಹಾಡು ಈಗಾಗಲೇ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಭಾರಿ ವೀಕ್ಷಣೆ ಹಾಗೂ ಲೈಕ್ಸ್ ಪಡೆಯುವ ಮೂಲಕ ಹಾಡು ಟ್ರೆಂಡಿಂಗ್ ನಲ್ಲಿ ಮುನ್ನಡೆಯುತ್ತಿದೆ.

ನಯನತಾರಾ ಎಂಟ್ರಿಗೆ ಹೆಚ್ಚಿದ ಕುತೂಹಲ :

Toxic ಚಿತ್ರದ ಪ್ರಮುಖ ಪಾತ್ರೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರು 'ಮನಮೋಹಕ ' ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಅವರ ವಿಭಿನ್ನ ಹಾಗೂ ಸಸ್ಪೆನ್ಸ್ ತುಂಬಿದ ಎಂಟ್ರಿ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಕಿಯಾರ ಅಡ್ವಾಣಿ ಕೂಡ ಹಾಡಿನಲ್ಲಿ ಮಿಂಚು :

ಚಿತ್ರದ ಮೊದಲ ಹಾಡು '' ತಬಾಹಿ " ಎಲ್ಲಿ ಯಶ್ ಜೊತೆ ಬೋಲ್ಡ್ ಮತ್ತು ರೋಮ್ಯಾಂಟಿಕ್ ಲುಕ್ ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ಕಿಯಾರ ಅಡ್ವಾಣಿ, ಇದೀಗ ಮನಮೋಹಕ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಇದ್ದಾರೆ ಅವರ ಉಪಸ್ಥಿತಿ ಕೂಡ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ.

ಗೀತಾ ಮೋಹನ್ ದಾಸ್ ನಿರ್ದೇಶನದ Toxic ಚಿತ್ರವು ಪ್ಯಾನ್ - ಇಂಡಿಯಾ ಮಟ್ಟದಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದು, ಯಶ್ ಅಭಿಮಾನಿಗಳು ಸಿನಿಮಾದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

'ಮನಮೋಹಕ ' ಮೂಲಕ ಮತ್ತೆ ಮೋಡಿ ಮಾಡಿದ ಗೀತ ಸಾಹಿತ್ಯ ಪ್ರಮೋದ್ ಮರವಂತೆ :

ರಾಕಿಂಗ್ ಸ್ಟಾರ್ ಯಶ್ ಅಭಿನಯದ toxic ಚಿತ್ರದ 'ಮನಮೋಹಕ' ಹಾಡು ಭಾರಿ ಮೆಚ್ಚುಗೆ ಪಡೆಯುತ್ತಿದ್ದು, ಈ ಗೀತೆಯ ಸಾಹಿತ್ಯಕ್ಕೆ ಗೀತ ಸಾಹಿತಿ ಪ್ರಮೋದ್ ಮರವಂತೆ ಅವರ ಕೊಡುಗೆ ಗಮನ ಸೆಳೆಯುತ್ತಿದೆ.

ಮಧುರ ಪ್ರಣಯಗೀತೆಗೆ ತಮ್ಮ ವಿಭಿನ್ನ ಶೈಲಿಯ ಪದಗಳ ಮೂಲಕ ಜೀವ ತುಂಬಿರುವ ಪ್ರಮೋದ್ ಮರವಂತೆ, ಯಶ್ ಮತ್ತು ತಾರಾ ಸುತಾರಿಯ ಜೋಡಿಯ ಕೆಮೆಸ್ಟ್ರಿ ಗೆ ಮತ್ತಷ್ಟು ಮೆರವು ನೀಡಿದ್ದಾರೆ. ಐದು ಭಾಷೆಗಳಲ್ಲಿ ಬಿಡುಗಡೆಯಾದ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ.

ಉಡುಪಿ ಜಿಲ್ಲೆಯ ಮರವಂತೆ ಮೂಲದ ಪ್ರಮೋದ್ , 'ಸಿಂಗಾರ ಸಿರಿಯೇ ' ಸಿರಿದಂತೆ ಹಲವು ಜನಪ್ರಿಯ ಹಾಡುಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಮೆಲೋಡಿ ಹಾಡುಗಳಿಂದ ಹಿಡಿದು ಮಾಸ್ ಗೀತೆಗಳುವರೆಗೆ ವಿಭಿನ್ನ ಶೈಲಿಯಲ್ಲಿ ಸಾಹಿತ್ಯ ನೀಡುವ ಮೂಲಕ ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online