<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

"ಯತ್ನಾಳ ಸರಿ ಹೇಳಿದ್ದಾರೆ" ಎಂದ ಜನಾರ್ದನ್ ರೆಡ್ಡಿ - ಗಂಗಾವತಿ ಶಾಸಕ ಹೇಳಿದ್ದೇನೆ?

"ಯತ್ನಾಳ ಸರಿ ಹೇಳಿದ್ದಾರೆ" ಎಂದ ಜನಾರ್ದನ್ ರೆಡ್ಡಿ - ಗಂಗಾವತಿ ಶಾಸಕ ಹೇಳಿದ್ದೇನೆ?
Summary: Gangavathi MLA Khadak has reacted sharply after Janardhan Reddy expressed support for Yathnal's statement. These statements have led to a new debate in state politics.

Belagavi news:

ರಾಜ್ಯ ರಾಜಕಾರಣದಲ್ಲಿ ಮತ್ತೆ ಚರ್ಚೆಗೆ ಕಾರಣವಾದ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಗೆ ಇದೀಗ ಮಾಜಿ ಸಚಿವ ಜನಾರ್ಧನ್ ರೆಡ್ಡಿ ಬೆಂಬಲ ಸೂಚಿಸಿರುವುದು ಹೊಸ ರಾಜಕೀಯ ಸಂಚಲನ ಸೃಷ್ಟಿಸಿದೆ. ಯತ್ನಾಳ್ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ತಾನು ಸಹ ಒಪ್ಪುತ್ತೇನೆ ಎಂದ ರೆಡ್ಡಿ ಹೇಳಿಕೆ ನೀಡಿದ ಬೆನ್ನಲ್ಲೇ, ಗಂಗಾವತಿ ಶಾಸಕ ತೀವ್ರ ಪ್ರತಿಕ್ರಿಯೆ ನೀಡಿ ರಾಜಕೀಯ ಭಾಗವಾದಕ್ಕೆ ಮತ್ತಷ್ಟು ಕಾವು ನೀಡಿದ್ದಾರೆ.

ಜನಾರ್ದನ್ ರೆಡ್ಡಿ ಮಾಧ್ಯಮಗಳೊಂದಿಗೆ ಮಾತನಾಡಿ,"ಯತ್ನ ಹೇಳಿಕೆಯಲ್ಲಿ ತಪ್ಪೇನಿಲ್ಲ. ಕೆಲ ವಿಚಾರಗಳನ್ನು ಅವರು ನೇರವಾಗಿ ಹೇಳಿದ್ದಾರೆ ಅಷ್ಟೇ", ಎಂದು ಅಭಿಪ್ರಾಯಪಟ್ಟರು. ಈ ಹೇಳಿಕೆ ರಾಜ್ಯ ಬಿಜೆಪಿಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಪಕ್ಷದ ಒಳ ರಾಜಕೀಯ ಮತ್ತೆ ಮುನ್ನೆಲೆಗೆ ಬಂದಿದೆ.

ಇದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ ಗಂಗಾವತಿ ಶಾಸಕ,"ಯಾರು ಏನು ಹೇಳುತ್ತಾರೆ ಎಂಬುದಕ್ಕಿಂತ ಪಕ್ಷದ ಶಿಸ್ತು ಮುಖ್ಯ. ಸಾರ್ವಜನಿಕವಾಗಿ ಇಂತಹ ಹೇಳಿಕೆಗಳು ಪಕ್ಷಕ್ಕೆ ಹಾನಿ ಉಂಟು ಮಾಡುತ್ತವೆ", ಎಂದು ತಿರುಗೇಟು ನೀಡಿದರು. ಅಲ್ಲದೆ, ಕೆಲ ನಾಯಕರು ವೈಯಕ್ತಿಕ ಅಭಿಪ್ರಾಯಗಳನ್ನು ಪಕ್ಷದ ನಿಲುವಿನಂತೆ ಬಿಂಬಿಸುವುದು ಸರಿಯಲ್ಲ ಎಂದು ಎಚ್ಚರಿಸಿದರು.

Sponsored

ರಾಜ್ಯ ರಾಜಕೀಯದಲ್ಲಿ ಯತ್ನಾಳ್ ಹೇಳಿಕೆಗಳ ಸದ್ದು ಕಡಿಮೆಯಾಗುವ ಮುನ್ನವೇ ಜನಾರ್ದನ್ ರೆಡ್ಡಿ ನೀಡಿದ ಬೆಂಬಲ ಮತ್ತು ಗಂಗಾವತಿ ಶಾಸಕರ ಪ್ರತಿಕ್ರಿಯೆ ಹೊಸ ರಾಜಕೀಯ ಚರ್ಚೆಗೆ ವೇದಿಕೆ ಸಿದ್ಧಪಡಿಸಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಒಳಗನ್ನಿನ ಸಂಘರ್ಷ ಮತ್ತಷ್ಟು ಬಿರುಸು ಪಡೆಯುವ ಸಾಧ್ಯತೆಗಳಿವೆ.

ಬಿಜೆಪಿ ಶಾಸಕ ಜನಾರ್ಧನ್ ರೆಡ್ಡಿ ಅವರು ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿವಾದಾತ್ಮಕ ಹೇಳಿಕೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಶಾಲಾ ಹಾಜರಾತಿಯ ವೇಳೆ ವಿದ್ಯಾರ್ಥಿಗಳು "ಎಸ್ ಸರ್" ಎನ್ನುವ ಬದಲು "ಜೈ ಶ್ರೀ ರಾಮ್" ಎಂದು ಹೇಳಬೇಕು ಎಂಬ ಯತ್ನಾಳ್ ಅವರ ಕರೆಯನ್ನು ರೆಡ್ಡಿ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ.

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜನಾರ್ದನ್ ರೆಡ್ಡಿ, "ಈ ವಿಷಯಕ್ಕೆ ನೂರಕ್ಕೆ ನೂರು ನನ್ನ ಬೆಂಬಲ ಇದೆ. ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಧಾರ್ಮಿಕ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವುದು ತಪ್ಪಲ್ಲ" ಎಂದು ಹೇಳಿದರು. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದಕ್ಕೂ ಮೊದಲು ಬಸನಗೌಡ ಪಾಟೀಲ್ ಯತ್ನಾಳ ಶಾಲೆಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ "ಜೈ ಶ್ರೀ ರಾಮ್" ಘೋಷಣೆಯ ಬಳಕೆಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಹೇಳಿಕೆ ಪರ ವಿರೋಧಿ ಚರ್ಚೆಗೆ ಕಾರಣವಾಗಿದ್ದು, ಇದೀಗ ಜನಾರ್ದನ್ ರೆಡ್ಡಿ ಬೆಂಬಲ ನೀಡಿರುವುದು ವಿಷಯಕ್ಕೆ ಮತ್ತಷ್ಟು ರಾಜಕೀಯ ಬಣ ತಂದಿದೆ.

Sponsored

ವಿಪಕ್ಷ ನಾಯಕರು ಮತ್ತು ಹಲವು ಸಂಘಟನೆಗಳು ಈ ಹೇಳಿಕೆಯನ್ನು ಟೀಕಿಸುತ್ತಿದ್ದು, ಶಿಕ್ಷಣ ಕ್ಷೇತ್ರವನ್ನು ರಾಜಕೀಯ ಹಾಗೂ ಧಾರ್ಮಿಕ ವಿಚಾರಗಳಿಂದ ದೂರ ಇಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿವೆ. ಮತ್ತೊಂದೆಡೆ, ಬಿಜೆಪಿ ಬೆಂಬಲಿಗರು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಇದನ್ನು ನೋಡುತ್ತಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಯತ್ನಾಳ್ ಮತ್ತು ಜನಾರ್ಧನ್ ರೆಡ್ಡಿ ಹೇಳಿಕೆಗಳು ಹೊಸ ವಿವಾದಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಮತ್ತಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.

ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಒಲೈಕೆ ಮಾಡುತ್ತಿದೆ: ಹಿಜಾಬ್ ವಿವಾದದ ಕುರಿತು ಜನಾರ್ಧನ್ ರೆಡ್ಡಿ ವಾಗ್ದಾಳಿ:

ಬಿಜೆಪಿ ಶಾಸಕ ಜನಾರ್ಧನ್ ರೆಡ್ಡಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸರ್ಕಾರ ಅಲ್ಪಸಂಖ್ಯಾತರನ್ನು ಒಲೈಸುವ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಹಿಜಾಬ್ ವಿವಾದದ ವಿಚಾರವನ್ನು ಉಲ್ಲೇಖಿಸಿದ ಅವರು, ಕಾಂಗ್ರೆಸ್ ಪಕ್ಷ ಸಮಾಜವನ್ನು ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

Sponsored

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ,"ಹಿಜಾಬ್ ವಿಚಾರ ಈಗಾಗಲೇ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ಇದೆ. ಆದರೂ ಸರ್ಕಾರ ಆದೇಶ ಹೊರಡಿಸುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಸಿದೆ", ಎಂದು ಆರೋಪಿಸಿದರು. ಸರ್ಕಾರದ ಕ್ರಮವು ಕಾನೂನು ಪ್ರಕ್ರಿಯೆಗೂ ವಿರುದ್ಧವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಮುಂದುವರೆದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವರು,"ಕಾಂಗ್ರೆಸ್ ಪಕ್ಷವು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಸಮಾಜವನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಪ್ರಯತ್ನ ಮಾಡುತ್ತಿದೆ. ಇದು ರಾಜ್ಯದ ಸಾಮರಸ್ಯಕ್ಕೆ ಒಳ್ಳೆಯದಲ್ಲ", ಎಂದು ಹೇಳಿದರು.

ರಾಜು ರಾಜಕೀಯದಲ್ಲಿ ಹಿಜಾಬ್ ವಿವಾದ ಮತ್ತೆ ಚರ್ಚೆಗೆ ಗ್ರಾಸವಾಗುತ್ತಿರುವ ಸಂದರ್ಭದಲ್ಲಿ ಜನಾರ್ಧನ್ ರೆಡ್ಡಿ ನೀಡಿರುವ ಈ ಹೇಳಿಕೆ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈ ವಿಷಯದ ಕುರಿತು ವಾಗ್ವಾದ ಮುಂದುವರೆಯುವ ಸಾಧ್ಯತೆಗಳಿವೆ.

Also Read:

Sponsored

ಬೆಂಗಳೂರಿನ ವಿವಿಧಡೆ ಭಾರಿ ಗಾಳಿ ಮಳೆ : ರಸ್ತೆಗಳು ಜಲಾವೃತ ಟ್ರಾಫಿಕ್ ಜಾಮ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online