<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಸಿದ್ದಗಂಗಾ ಮಠದ ಅಂಗಳದಲ್ಲಿ ಮೂಡಿದ 'ಓ ಬೆಳಕೆ'; ಡಾಲಿ ಧನಂಜಯ್ ಚಿತ್ರದ ಹೊಸ ಹಾಡು ಬಿಡುಗಡೆ

ಸಿದ್ದಗಂಗಾ ಮಠದ ಅಂಗಳದಲ್ಲಿ ಮೂಡಿದ 'ಓ ಬೆಳಕೆ'; ಡಾಲಿ ಧನಂಜಯ್ ಚಿತ್ರದ ಹೊಸ ಹಾಡು ಬಿಡುಗಡೆ
Summary: The song 'Oh Belake', written by Dolly Dhananjay, is an emotional prayer song for children. What is special is that the entire shooting of this song was done in the sacred courtyard of Siddaganga Math in Tumkur with the children there.

BELAGAVI NEWS :

ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ ನಿರ್ಮಾಪಕ ಡಾಲಿ ಧನಂಜಯ್ ಅವರ ಬಹು ನಿರೀಕ್ಷಿತ ಸಿನಿಮಾ 'ಮದರ್ ಪ್ರಾಮಿಸ್ : ಫಾದರ್ ಆಫ್ ಆಲ್ ಪ್ರಾಮಿಸಸ್' ಬಿಡುಗಡೆಯತ್ತ ಸಾಗುತ್ತಿದ್ದು, ಚಿತ್ರದ ಮೇಲಿನ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಚಿತ್ರದ ಕಂಟೆಂಟ್, ಹಾಡುಗಳು ಹಾಗೂ ವಿಭಿನ್ನ ಪ್ರಚಾರ ತಂತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ಚಿತ್ರತಂಡ, ಇದೀಗ ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆಸಿದ ವಿಶೇಷ ಚಿತ್ರೀಕರಣದ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದೆ.

ಡಾಲಿ ಧನಂಜಯ್ ನಿರ್ಮಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ಹೊಸ ಹಾಡು 'ಓ ಬೆಳಕೆ' ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಪ್ರೇಮಗೀತೆ ಮತ್ತು ಹಳ್ಳಿ ಸೊಗಡಿನ ಹಾಡುಗಳ ಮೂಲಕ ಈಗಾಗಲೇ ತಮ್ಮ ಸಾಹಿತ್ಯದ ಛಾಪು ಮೂಡಿಸಿರುವ ಡಾಲಿ, ಇದೇ ಮೊದಲ ಬಾರಿಗೆ ಮಕ್ಕಳಿಗಾಗಿ ಭಾವನಾತ್ಮಕ ಪ್ರಾರ್ಥನಾ ಗೀತೆಯನ್ನು ರಚಿಸಿರುವುದು ವಿಶೇಷ.

'ಓ ಬೆಳಕೆ' ಹಾಡು ಮಕ್ಕಳ ಭಾವನೆಗಳು, ಆಶಯಗಳು ಮತ್ತು ಬದುಕಿನ ಮೌಲ್ಯಗಳನ್ನು ಹೃದಯ ಸ್ಪರ್ಶಿಯಾಗಿ ಕಟ್ಟಿ ಕೊಡುವ ಪ್ರಾರ್ಥನಾ ಗೀತೆಯಾಗಿದೆ. ಈ ಹಾಡಿನ ಸಂಪೂರ್ಣ ಚಿತ್ರೀಕರಣವನ್ನು ತುಮಕೂರು ಸಿದ್ದಗಂಗಾ ಮಠದ ಪವಿತ್ರ ಅಂಗಳದಲ್ಲಿ ಅಲ್ಲಿನ ಮಕ್ಕಳೊಂದಿಗೆ ನಡೆಸಲಾಗಿದ್ದು, ಮಕ್ಕಳ ಮುಗ್ಧತೆ ಮತ್ತು ಹಾಡಿನ ಭಾವನಾತ್ಮಕ ನಿರೂಪಣೆ ಪ್ರೇಕ್ಷಕರ ಮನ ಮುಟ್ಟುವಂತಿದೆ. ಸಿದ್ದಗಂಗಾ ಮಠದ ಹಿನ್ನೆಲೆ ಹಾಡಿನ ಸಂದೇಶಕ್ಕೆ ಮತ್ತಷ್ಟು ಅರ್ಥಪೂರ್ಣತೆಯನ್ನು ನೀಡಿದ್ದು, 'ಓ ಬೆಳಕೆ' ಚಿತ್ರದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದೆ.

ಡಾಲಿ ಧನಂಜಯ್ ಅವರ ಸಾಹಿತ್ಯದಲ್ಲಿ ಮೂಡಿ ಬರುವ 'ಓ ಬೆಳಕೆ' ಹಾಡು ಮಕ್ಕಳ ಮನದಾಳದ ಭಾವನೆಗಳನ್ನು ಪ್ರತಿಬಿಂಬಿಸುವ ಹೃದಯಸ್ಪರ್ಶಿ ಪ್ರಾರ್ಥನಾ ಗೀತೆಯಾಗಿದೆ. ಈ ಹಾಡಿನ ಸಂಪೂರ್ಣ ಚಿತ್ರೀಕರಣವನ್ನು ತುಮಕೂರಿನ ಸಿದ್ದಗಂಗಾ ಮಠದ ಪವಿತ್ರ ಅಂಗಳದಲ್ಲಿ ಅಲ್ಲಿನ ಮಕ್ಕಳೊಂದಿಗೆ ನಡೆಸಲಾಗಿದೆ.

ಹಾಡಿನ ಚಿತ್ರೀಕರಣದ ವೇಳೆ 'ಮದರ್ ಪ್ರಾಮಿಸ್' ಚಿತ್ರ ತಂಡ ದಿನವಿಡೀ ಮಕ್ಕಳೊಂದಿಗೆ ಬೆರೆತು ಮಠದ ಆವರಣ, ಶಾಲೆ, ಅನ್ನ ದಾಸೋಹ ಅಡುಗೆಮನೆ ಸೇರಿದಂತೆ ಹಲವು ಸ್ಥಳಗಳಲ್ಲಿ ಸಮಯ ಕಳೆಯಿತು. ಮಕ್ಕಳ ಮುಗ್ದ ನಗು, ಅವರ ಬದುಕಿನ ಸರಳತೆ ಮತ್ತು ಮಠದ ಆಧ್ಯಾತ್ಮಿಕ ವಾತಾವರಣ ಹಾಡಿನ ಪ್ರತಿಯೊಂದು ದೃಶ್ಯಕ್ಕೂ ಜೀವ ತುಂಬಿದ್ದು, ಪ್ರೇಕ್ಷಕರ ಮನಸ್ಸನ್ನು ತಟ್ಟುವ ಅನುಭವವನ್ನು ನೀಡುತ್ತದೆ.

ಇತ್ತೀಚಿನ ದಿನಗಳಲ್ಲಿ ಕಮರ್ಷಿಯಲ್, ರೋಮ್ಯಾಂಟಿಕ್ ಮತ್ತು ಮಾಸ್ ಹಾಡುಗಳು ಹೆಚ್ಚಾಗಿ ಕೇಳಿ ಬರುತ್ತಿರುವ ನಡುವೆ, ಮೌಲ್ಯಗಳು, ಪ್ರಾರ್ಥನೆ ಮತ್ತು ಮಕ್ಕಳ ಭಾವನೆಗಳನ್ನು ಕೇಂದ್ರವಾಗಿಟ್ಟುಕೊಂಡ 'ಓ ಬೆಳಕೆ' ವಿಭಿನ್ನ ಅನುಭವವನ್ನು ನೀಡುತ್ತದೆ. ಬಿಡುಗಡೆಯಾದ ಬೆನ್ನಲಿ ಹಾಡು ಸಿನಿಮಾ ಪ್ರೇಕ್ಷಕರು, ಸಂಗೀತ ಪ್ರಿಯರು ಹಾಗೂ ನೆಟ್ಟಿಗರ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಗಳಿಸುತ್ತಿದೆ.

ಹೊಸ ಪ್ರತಿಭೆಗಳಿಗೆ ನಿರಂತರವಾಗಿ ಅವಕಾಶ ನೀಡುತ್ತಾ ತನ್ನದೇ ಆದ ವಿಭಿನ್ನ ಸಿನಿಮಾಗಳನ್ನು ನಿರ್ಮಿಸುತ್ತಿರುವ ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್, 'ಮದರ್ ಪ್ರಾಮಿಸ್: ಫಾದರ್ ಆಫ್ ಆಲ್ ಪ್ರಾಮಿಸಿಸ್' ಚಿತ್ರದ ಮೂಲಕವೂ ಹೊಸತನದ ಪ್ರಚಾರ ತಂತ್ರಗಳನ್ನು ಅನುಸರಿಸುತ್ತಿದೆ.

ಏಪ್ರಿಲ್ 10 ರಂದು ಬಿಡುಗಡೆಯಾದ ಚಿತ್ರದ ಮೊದಲ ಹಾಡು ' Veni Vidi Vici' ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಸಂಚಲನ ಮೂಡಿಸಿತು. "ಆರ್‌ಸಿಬಿ.... 18 ವರ್ಷ... 6255 ದಿನಗಳ ನಂತರ...." ಎಂಬ ಸಾಲುಗಳಿಂದ ಆರಂಭವಾಗುವ ಈ ಹಾಡು ಆರ್‌ಸಿಬಿಯ ಐತಿಹಾಸಿಕ ಗೆಲುವಿನ ಸಂಭ್ರಮವನ್ನು ಸಂಭ್ರಮ ಭರಿತವಾಗಿ ಕಟ್ಟಿಕೊಟ್ಟಿದ್ದು, ಗುರುಕಿರಣ್ ಅವರ ಜೋಶ್ ಭರಿತ ಗಾಯನ ಅಭಿಮಾನಿಗಳ ಮನ ಗೆದ್ದಿತ್ತು.

ಅದರ ಬಳಿಕ ಮಾತೃ ದಿನದ ಅಂಗವಾಗಿ ಬಿಡುಗಡೆಯಾದ 'ನೀನೇ ಬೇಕು ಅಮ್ಮ' ಹಾಡು ತಾಯಿ-ಮಗುವಿನ ಬಾಂಧವ್ಯವನ್ನು ಭಾವನಾತ್ಮಕವಾಗಿ ಕಟ್ಟಿಕೊಟ್ಟು ಸಿಹಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಬಿಡುಗಡೆಯಾಗಿರುವ 'ಓ ಬೆಳಕೆ' ಹಾಡು ಮಕ್ಕಳ ಪ್ರಾರ್ಥನೆ, ಮೌಲ್ಯಗಳು ಮತ್ತು ಅಶಾದಾಯವನ್ನು ಹೃದಯ ಸ್ಪರ್ಶಿಯಾಗಿ ತೆರೆ ಮೇಲೆ ತಂದು ಮತ್ತೊಮ್ಮೆ ಕನ್ನಡಿಗರ ಗಮನ ಸೆಳೆಯುತ್ತಿದೆ. ಒಂದಕ್ಕೊಂದು ಭಿನ್ನವಾದ ಮೂರು ಹಾಡುಗಳ ಮೂಲಕ 'ಮದರ್ ಪ್ರಾಮಿಸ್' ಚಿತ್ರತಂಡ ಚಿತ್ರದ ವೈವಿದ್ಯತೆಯನ್ನು ಅನಾವರಣಗೊಳಿಸಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

'ಮದರ್ ಪ್ರಾಮಿಸ್' ಎಂಬ ಶೀರ್ಷಿಕೆ ಭಾವನೆಗಳನ್ನು ಮೂಡಿಸುವಂತಿದ್ದು, ಅದೇ ಭಾವನಾತ್ಮಕತೆಯನ್ನು ಹಾಸ್ಯ ಮತ್ತು ತ್ರಿಲ್ಲಿಂಗ್ ಕಥೆಯೊಂದಿಗೆ ತೆರೆ ಮೇಲೆ ತರಲು ನಿರ್ದೇಶಕ ಪೂರ್ಣ ಸಜ್ಜಾಗಿದ್ದಾರೆ. ಕುಟುಂಬದ ಪ್ರತಿಯೊಬ್ಬರನ್ನು ಸೆಳೆಯುವ ಮನರಂಜನೆಯ ಜೊತೆಗೆ ಮನಸ್ಸಿಗೆ ತಾಕುವ ಕತೆಯನ್ನು ಚಿತ್ರತಂಡ ಕಟ್ಟಿಕೊಟ್ಟಿದೆ ಎಂಬ ನಿರೀಕ್ಷೆ ಮೂಡಿದೆ.

ಚಿತ್ರದಲ್ಲಿ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಾಗಭೂಷಣ್, ವಿನಯ್ ಪ್ರಸಾದ್, ಗೀತಾ, ಗುರುದತ್ತ ಸೇರಿದಂತೆ ಅನುಭವಿ ಹಾಗೂ ಹೊಸ ಪ್ರತಿಭೆಗಳ ದೊಡ್ಡ ಬಳಗವೇ ಅಭಿನಯಿಸಿದೆ. ಡಾಲಿ ಪಿಚ್ಚರ್ ಸಂಯೋಗದಲ್ಲಿ ಹರ್ಷ ಮುರುಂಡಿ ಶಿವಲಿಂಗಪ್ಪ ಚಿತ್ರವನ್ನು ನಿರ್ಮಿಸಿದ್ದು, ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಅಧಿಕೃತವಾಗಿ ಹೆಜ್ಜೆ ಇಡುತ್ತಿದ್ದಾರೆ.

ಚಿತ್ರಕ್ಕೆ ನಿರ್ದೇಶನ ಪೂರ್ಣ ಅವರೊಂದಿಗೆ 'ಡೇರ್ ಡೆವಿಲ್ ಮುಸ್ತಫ' ಜಾತಿಯ ಶಶಾಂಕ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೈಜೋಡಿಸಿರುವುದು ಮತ್ತೊಂದು ವಿಶೇಷ. ರಾಹುಲ್ ರಾಯ್ ಅವರ ಛಾಯಾಗ್ರಹಣ ಮತ್ತು ನವನೀತ್ ಶ್ಯಾಮ್ ಅವರ ಸಂಗೀತ ಚಿತ್ರಕ್ಕೆ ಮತ್ತಷ್ಟು ಮೆರಗೂ ನೀಡಿದೆ. ಈಗಾಗಲೇ ಒಂದರ ಹಿಂದೆ ಒಂದರಂತೆ ಬಿಡುಗಡೆಯಾಗುತ್ತಿರುವ ವಿಭಿನ್ನ ಪ್ರಮೋಷನ್ ಕಂಟೆಂಟ್ ಮತ್ತು ಮನಮುಟ್ಟುವ ಹಾಡುಗಳ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿರುವ 'ಮದರ್

ಪ್ರಾಮಿಸ್: ಫಾದರ್ ಆಫ್ ಆಲ್ ಪ್ರಾಮಿಸಸ್' ಇದೇ ಜುಲೈ 10ರಂದು ರಾಜ್ಯಾದ್ಯಂತ ಭರ್ಜರಿಯಾಗಿ ತೆರೆ ಕಾಣಲು ಸಜ್ಜಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online