Belagavi News:
ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಕರ್ನಾಟಕದ 116 ವರ್ಷದ ಭೀಮವ್ವ (ಲಕ್ಷ್ಮವ್ವ) ತಮ್ಮ ಜೀವನದಲ್ಲೇ ಸಾಬೀತುಪಡಿಸಿದ್ದಾರೆ. ಕೋಲು ಹಿಡಿದು, ಯಾರ ಸಹಾಯವನ್ನು ಪಡೆಯದೆ ತಿರುಪತಿಯ ಅಲಿಪಿರಿ ಮಾರ್ಗದ 3,550 ಮೆಟ್ಟಿಲುಗಳನ್ನು ಏರಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿರುವ ಅವರ ಸಾಧನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಭಕ್ತರಿಗೆ ಸ್ಪೂರ್ತಿಯಾಗಿದೆ.
ಇಂದು 60-70 ವರ್ಷ ದಾಟಿದ ನಂತರ ಮಂಡಿ ನೋವು, ಆಯಾಸ ಮತ್ತು ದೈಹಿಕ ಸಮಸ್ಯೆಗಳಿಂದ ಬಳಲುವವರು ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ, 116 ವರ್ಷದ ಭೀಮವ್ವ ಅವರ ಈ ಪಾದಯಾತ್ರೆ ಅಚ್ಚರಿ ಮೂಡಿಸಿದೆ. ಪ್ರತಿಯೊಂದು ಮೆಟ್ಟಿಲನ್ನು, "ಗೋವಿಂದಾ ....ಗೋವಿಂದಾ ...." ಎಂದು ನಾಮಸ್ಮರಣೆ ಮಾಡುತ್ತಾ ಏರಿದವರು, ಅಚಲ ಭಕ್ತಿ ಮತ್ತು ದೃಢಸಂಕಲ್ಪದ ಅಪರೂಪದ ಮಾದರಿಯಾಗಿದ್ದಾರೆ.
ಕರ್ನಾಟಕದ ಹಳ್ಳಿಯಂದರ ನಿವಾಸಿಯಾಗಿರುವ ಲಕ್ಷ್ಮವ್ವ, ಸ್ಥಳೀಯವಾಗಿ ಭೀಮವ್ವ ಎಂದೆ ಪರಿಚಿತರಾಗಿದ್ದಾರೆ. ತಮ್ಮ ವಯಸ್ಸಿನ ಹೊರತಾಗಿಯೂ ಯಾವುದೇ ವಿಶೇಷ ನೆರವಿಲ್ಲದೆ ಅಲಿಪಿರಿ ಮೆಟ್ಟಿಲುಗಳನ್ನು ಯಶಸ್ವಿಯಾಗಿ ಏರಿ ತಿರುಮಲ ತಲುಪಿರುವುದು ಎಲ್ಲರ ಪಾತ್ರವಾಗಿದೆ.
ಭೀಮವ್ವ ಅವರ ಅಪರೂಪದ ಭಕ್ತಿ ಮತ್ತು ಮಾನಸಿಕ ಧೃಡತೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, "ಭಕ್ತಿಗೆ ವಯಸ್ಸಿಲ್ಲ" ಎಂಬ ಸಂದೇಶವನ್ನು ಮತ್ತೊಮ್ಮೆ ಸಾರಿದೆ.
116 ವರ್ಷದ ಭೀಮವ್ವ ನ ಅಚಲ ಭಕ್ತಿ - ತಿರುಪತಿಯ ಅಲಿಪಿರಿ ಮೆಟ್ಟಿಲು ಹತ್ತಿದ ಸಾಧನೆ ಸಾವಿರಾರು ಮಂದಿಗೆ ಸ್ಫೂರ್ತಿ :
ಕರ್ನಾಟಕದ ಭೀಮವ್ವ ಅವರ ಸಾಧಾರಣ ದೃಢಸಂಕಲ್ಪ, ಆತ್ಮವಿಶ್ವಾಸ ಮತ್ತು ಅತ್ಲ ಭಕ್ತಿಯನ್ನು ಕಂಡು ಅಲ್ಲಿ ಪಿರಿ ಮಾರ್ಗದಲ್ಲಿದ್ದ ಸಹಾಯಕರು ಹಾಗೂ ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 116 ವರ್ಷದ ಇಳಿವಯಸ್ಸಿನಲ್ಲೂ ಕೈಯಲ್ಲಿ ಕೋಲು ಹಿಡಿದು ಸಾವಿರಾರು ಮೆಟ್ಟಿಲುಗಳನ್ನು ಏರಿದ ಅವರ ಮನೋಬಲ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಭೀಮವ್ವ ಅವರ ಈ ಅಪರೂಪದ ಯಾತ್ರೆ, "ವಯಸ್ಸು ಕೇವಲ ಸಂಖ್ಯೆ; ದೃಢಸಂಕಲ್ಪ ಇದ್ದರೆ ಅಸಾಧ್ಯವೂ ಸಾಧ್ಯ" ಎಂಬ ಸಂದೇಶವನ್ನು ಸಾರುತ್ತಿದೆ. ದೈಹಿಕ ಮಿತಿಗಳ ನಡುವೆಯೂ ಅಖಿಲ ನಂಬಿಕೆ ಮತ್ತು ಭಕ್ತಿಯಿಂದ ಅವರು ತಿರುಮಲ ತಲುಪಿರುವುದು ಅನೇಕ ಭಕ್ತರಿಗೆ ಪ್ರೇರಣೆಯಾಗಿದೆ.
ಈ ವೃದ್ಧಾಪ್ಯದಲ್ಲೂ ಅವರಿಗೆ ದೊರೆತಿರುವ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಕಂಡು, ಅನೇಕ ಭಕ್ತರು ಇದನ್ನು ಶ್ರೀ ವೆಂಕಟೇಶ್ವರ ಸ್ವಾಮಿಯ ಕೃಪೆಯ ಪ್ರತೀಕವೆಂದು ಭಾವಿಸಿದ್ದಾರೆ. ಭೀಮವ್ವ ಅವರ ಸಾಧನೆಯ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದ್ದು, ದೇಶಾದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಒಟ್ಟಾರೆ, 116 ವರ್ಷದ ಭೀಮವ್ವ ಅವರ ಅಲಿಪಿರಿ ಪಾದಯಾತ್ರೆ ಕೇವಲ ವೈಯಕ್ತಿಕ ಸಾಧನೆ ಅಲ್ಲ; ಭಕ್ತಿ, ಮನೋಬಲ ಮತ್ತು ದುಡಸ ಸಂಕಲ್ಪದ ಜೀವಂತ ಉದಾಹರಣೆಯಾಗಿ ಸಾವಿರಾರು ಜನರಿಗೆ ಸ್ಪೂರ್ತಿಯಾಗಿದೆ.