Belagavi News :
ರೈಲು ಭೋಗಿಯೊಂದನ್ನು ನವ ವಿವಾಹಿತ ದಂಪತಿಗಾಗಿ ಹನಿಮೂನ್ ರೂಮ್ ನಂತೆ ಅಲಂಕರಿಸಿದ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಮಧ್ಯ ರೈಲು ಕ್ರಮ ಕೈಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ನಾಂದೇಡ್ ವಿಭಾಗದ ಮುಖ್ಯ ಟಿಕೀಟ್ ಇನ್ಸ್ಪೆಕ್ಟರ್ ಗಿರೀಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
ನಂದಿಗ್ರಾಮ್ ಎಕ್ಸ್ಪ್ರೆಸ್ ನ ಎಸಿ ರೈಲು ಕೋಚ್ ಅನ್ನು ನಿಯಮಗಳಿಗೆ ವಿರುದ್ಧವಾಗಿ ಹೂವುಗಳು ಹಾಗೂ ಇತರ ಅಲಂಕಾರಗಳಿಂದ ಹನಿಮೂನ್ ರೂಮ್ ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ವಿಡಿಯೋ ವೈರಲ್ ಆದ ಬಳಿಕ ರೈಲ್ವೆ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಯಮ ಉಲ್ಲಂಘನೆ ಆರೋಪದ ಮೇಲೆ ಅಧಿಕಾರಿಯನ್ನು ಅಮಾನತುಗೊಳಿಸಿದೆ. ಜೊತೆಗೆ ಘಟನೆ ಕುರಿತು ವಿವರವಾದ ತನಿಖೆ ನಡೆಸಲು ಆದೇಶಿಸಲಾಗಿದೆ.
ರೈಲ್ವೆ ನಿಯಮಗಳ ಪ್ರಕಾರ ಪ್ರಯಾಣಿಕರ ಬಳಕೆಯ ರೈಲು ಭೋಗಿಗಳನ್ನು ಖಾಸಗಿ ಕಾರ್ಯಕ್ರಮಗಳು ಅಥವಾ ವಿಶೇಷ ಅಲಂಕಾರಗಳಿಗೆ ಬಳಸುವ ಬಗ್ಗೆ ಅನುಮತಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.
ರೈಲು ಫಸ್ಟ್ ಎಸಿ ಕೂಪ್ ಹನಿಮೂನ್ ರೂಮ್ ಪ್ರೀತಿ ಅಲಂಕಾರ - ವೈರಲ್ ವಿಡಿಯೋ ಬೆನ್ನಲ್ಲೇ ರೈಲ್ವೆ ಯಿಂದ ತನಿಖೆ :
ರೈಲು ಭೋಗಿಯ ಫಸ್ಟ್ ಎಸಿ ಕುಪ್ ಅನ್ನು ಹನಿಮೂನ್ ರೂಮ್ ಮಾದರಿಯಲ್ಲಿ ಅಲಂಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈಲ್ವೆ ಇಲಾಖೆ ತನಿಖೆಗೆ ಮುಂದಾಗಿದೆ.
ವೈರಲ್ ವಿಡಿಯೋದಲ್ಲಿ ಫಸ್ಟ್ ಎಸಿ ಕೂಪ್ ಅನ್ನು ಹೃದಯ ಆಕಾರದ ರಿಬ್ಬನ್ ಗಳು, ಗುಲಾಬಿ ಹೂವುಗಳು, ಕೆಂಪು ಹಾರ್ಟ್ ಆಕಾರದ ಬಲೂನ್ ಗಳು ಹಾಗೂ ರೋಮ್ಯಾಂಟಿಕ್ ಲೈಟಿಂಗ್ ಗಳಿಂದ ಅಲಂಕರಿಸಿರುವುದು ಕಾಣಿಸಿದೆ. ಜೊತೆಗೆ ಗೋಡಿ ಒಂದರಲ್ಲಿ " ಐ ಲವ್ ಯು " ಎಂಬ ಸಂದೇಶವು ಕಂಡು ಬಂದಿದೆ.
ವಿಶೇಷವಾಗಿ ಸಜ್ಜುಗೊಳಿಸಿದ ಮಲಗುವ ವ್ಯವಸ್ಥೆ ಸೇರಿದಂತೆ ಕೋಚ್ ನ ಒಳಭಾಗವು ಐಶಾರಾಮಿ ಹೋಟೆಲ್ ಕೊಠಡಿಯಂತೆ ಕಾಣುತ್ತಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೋ ಅಧಿಕಾರಿಗಳ ಗಮನಕ್ಕೆ ಬಂದ ಬಳಿಕ ದಕ್ಷಿಣ ಮಧ್ಯ ರೈಲ್ವೆ ಇಲಾಖೆ ತನಿಖೆ ಆದೇಶಿಸಿದೆ. ಅನುಮತಿ ಇಲ್ಲದೆ ರೈಲು ಭೋಗಿಯನ್ನು ಈ ರೀತಿಯಲ್ಲಿ ಅಲಂಕರಿಸಿದ ಆರೋಪದ ಹಿನ್ನೆಲೆಯಲ್ಲಿ ರೈಲ್ವೆ ಕಾಯ್ದೆಯ ಸಂಬಂಧಿತ ನಿಯಮಗಳ ಅಡಿಯಲ್ಲಿ ಅಲಂಕಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ .
ತನಿಖೆಯ ವೇಳೆ ಬಲ್ಲರ್ಶಾ - ಮುಂಬೈ ನಂದೇಡ್ ಗ್ರಾಮ್ ಎಕ್ಸ್ಪ್ರೆಸ್ ರೈಲು ಸಂಖ್ಯೆ 11002 ರ ಎಸಿ ಕೋಚ್ ನ ಬರ್ತ್ ಸಂಖ್ಯೆ 19 ಮತ್ತು 20ರಲ್ಲಿ ಈ ರೀತಿಯ ಅಲಂಕಾರ ಮಾಡಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ರೈಲು ಭೋಗಿಗಳಲ್ಲಿ ಅನಧಿಕೃತ ಬದಲಾವಣೆ ಹಾಗೂ ಖಾಸಗಿ ಬಳಕೆಯ ಕುರಿತು ರೈಲ್ವೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.
ರೈಲು ಭೋಗಿ ಹನಿಮೂನ್ ರೂಮ್ ಅಲಂಕಾರ ವಿವಾದ - ಅನುಮತಿ ಪಡೆಯದೆ ಎಸಿ ಕೋಚ್ ಗೆ ಪ್ರವೇಶ, CTI ಅಮಾನತು :
ರೈಲು ಫಸ್ಟ್ ಎಸಿ ಕೋಚ್ ಅನ್ನು ಹನಿಮೂನ್ ಮಾದರಿಯಲ್ಲಿ ಅಲಂಕರಿಸಿದ ಪ್ರಕರಣದಲ್ಲಿ ಹೊಸ ಮಾಹಿತಿ ಹೊರ ಬಿದ್ದಿದೆ. ನವ ವಿವಾಹಿತರಾಗಿ ಖಾಸಗಿ ಅಲಂಕಾರರು ಹೂವು, ಬಲೂನ್ ಉತ್ಪಾಗು ಇತರ ಅಲಂಕಾರಿಕ ವಸ್ತುಗಳಿಂದ ಎಸಿ ಕೋಚ್ ಅನ್ನು ಸಿದ್ಧಪಡಿಸಿದ್ದರು ಎನ್ನಲಾಗಿದ್ದು, ಇದಕ್ಕಾಗಿ ರೈಲ್ವೆ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ತನಿಕೆಯಲ್ಲಿ ತಿಳಿದು ಬಂದಿದೆ.
ರೈಲ್ವೆ ನಿಯಮಗಳ ಪ್ರಕಾರ, ಅನುಮತಿ ಇಲ್ಲದೆ ಹೊರಗಿನ ವ್ಯಕ್ತಿಗಳು ಅಥವಾ ಖಾಸಗಿ ಅಲಂಕಾರರು ಎಸಿ ಕೋಚ್ ಗಳಿಗೆ ಪ್ರವೇಶಿಸುವಂತಿಲ್ಲ. ಈ ಘಟನೆ ಸುರಕ್ಷತಾ ನಿಯಮಗಳ ಗಂಭೀರ ಉಲ್ಲಂಘನೆ ಎಂದು ರೈಲ್ವೆ ಇಲಾಖೆ ಪರಿಗಣಿಸಿದೆ.
ತನಿಖೆಯಲ್ಲಿ ಖಾಸಗಿ ಡೆಕೋರೇಟರ್ ಗಳು ಮೊದಲ ಎಸಿ ಕೋಚ್ ಗೆ ಪ್ರವೇಶಿಸಿ ಅನುಮತಿ ಇಲ್ಲದೆ ಅಲಂಕಾರ ಮಾಡಿರುವುದು ದೃಢಪಟ್ಟಿದೆ ಎನ್ನಲಾಗಿದೆ. ಘಟನೆ ನಡೆದ ವೇಳೆ ಕರ್ತವ್ಯದಲ್ಲಿದ್ದ ನಾಂದೇಡ್ ನ ಮುಖ್ಯ ಟಿಕೇಟ್ ಇನ್ಸ್ಪೆಕ್ಟರ್ ಗಿರೀಶ್ ಕುಮಾರ್ ಅವರನ್ನು ನಿರ್ಲಕ್ಷದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.
ಅಲಂಕಾರರು ರೈಲು ಕೋಚ್ಗೆ ಹೇಗೆ ಪ್ರವೇಶ ಪಡೆದರು ಎಂಬುದರ ಕುರಿತು ರೈಲ್ವೆ ಇಲಾಖೆ ವಿವರವಾದ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಬೇರೆ ಯಾವುದೇ ರೈಲ್ವೆ ಸಿಬ್ಬಂದಿ ಭಾಗಿಯಾಗಿರುವುದು ಪತ್ತೆಯಾದರೆ ಅವರ ವಿರುದ್ಧವು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಮಧ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎ.ಶ್ರೀಧರ್ ಅವರು, ಮಹಾರಾಷ್ಟ್ರದ ಜಲ್ನಾ ನಿಲ್ದಾಣದಲ್ಲಿ ಕೆಲವು ಖಾಸಗಿ ಡೆಕೋರೇಟರ್ ಗಳು ಬೋಗಿಯೊಳಗೆ ಪ್ರವೇಶಿಸಿರುವುದು ಅನಧಿಕೃತವಾಗಿದ್ದು, ಇದನ್ನು ಗಂಭೀರ ಲೋಕವೆಂದು ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.
ಅನುಮತಿ ಇಲ್ಲದೆ ರೈಲು ಭೋಗಿಗೆ ಪ್ರವೇಶ, ಟಿಕೆಟ್ ಇಲ್ಲದೆ ಪ್ರಯಾಣ ಹಾಗೂ ಅತಿಕ್ರಮಣ ಆರೋಪಗಳ ಹಿನ್ನೆಲೆಯಲ್ಲಿ ರೈಲ್ವೆ ಕಾಯಿದೆಯ ಸಂಬಂಧಿತ ನಿಯಮಗಳ ಅಡಿಯಲ್ಲಿ ಡೆಕೋರೇಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯಾವುದೇ ವಿಶೇಷ ಕಾರ್ಯಕ್ರಮಕ್ಕಾಗಿ ರೈಲು ಕೋಚ್ ಗಳನ್ನು ಅಲಂಕರಿಸಲು ಕಡ್ಡಾಯವಾಗಿ ರೈಲ್ವೆ ಅನುಮತಿ ಪಡೆಯುಬೇಕು ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇನ್ನು ಮುಂದೆ ಹೀಗೆ ರೈಲಿನೊಳಗೆ ಅನುಮತಿ ಇಲ್ಲದೆ ಹನಿಮೂನ್ ಡೆಕೋರೇಟ್ ಮಾಡುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.