<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಅಯೋಧ್ಯೆ ರಾಮ ಮಂದಿರದಲ್ಲಿ ಕೋಟಿ ಕೋಟಿ ವಂಚನೆ ಆರೋಪ

ಅಯೋಧ್ಯೆ ರಾಮ ಮಂದಿರದಲ್ಲಿ ಕೋಟಿ ಕೋಟಿ ವಂಚನೆ ಆರೋಪ
Summary: Allegations of serious irregularities have been made regarding the collection of donations at the Ram temple in Ayodhya. Not only the misuse of donation money, but also allegations of collecting crores of rupees from devotees by issuing fake receipts have come to light. The investigation into the case has intensified, and this development has created a stir across the country.

belagavi news :

ಅಯ್ಯೋಧ್ಯೆ, ಜುಲೈ 9 : ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ಶ್ರೀ ರಾಮ ಮಂದಿರದ ಕಾಣಿಕೆ ಕಳ್ಳತನ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುಗು ಪಡೆಯುತ್ತಿದೆ. ದೇವಸ್ಥಾನದ ಕಾಣಿಕೆ ಹಣ ದುರುಪಯೋಗದ ತನಿಖೆ ವೇಳೆ ಮತ್ತೊಂದು ಆಘಾತಕಾರಿ ಅಕ್ರಮ ಬೆಳಕಿಗೆ ಬಂದಿದ್ದು, ಕೆಲ ಸಿಬ್ಬಂದಿ ನಕಲಿ ದೇಣಿಗೆ ರಸೀದಿ ಪುಸ್ತಕಗಳನ್ನು ಬಳಸಿ ಭಕ್ತರಿಂದ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ದೇವಸ್ಥಾನದ ಅಧಿಕೃತ ರಸಿದಿಗಳ ಮಾದರಿಯಲ್ಲೇ ನಕಲಿ ರಶೀದಿ ಪುಸ್ತಕಗಳನ್ನು ಸಿದ್ಧಪಡಿಸಿ, ದೇಣಿಗೆ ನೀಡಲು ಬಂದ ಭಕ್ತರಿಗೆ ಅವುಗಳನ್ನು ನೀಡಿ ಹಣ ಸಂಗ್ರಹಿಸಲಾಗುತ್ತಿತ್ತು, ಈ ಹಣ ದೇವಸ್ಥಾನದ ಖಾತೆಗೆ ಸೇರುವ ಬದಲು ಆರೋಪಿಗಳ ವೈಯಕ್ತಿಕ ಬಳಕೆಗೆ ಹೋಗುತ್ತಿತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಕಾಣಿಕೆ ಕೌಂಟರ್ ಗಳಲ್ಲಿ ನಡೆದ ಹಣದ ಅಕ್ರಮಗಳ ಜೊತೆಗೆ ಈ ನಕಲಿ ರಶೀದಿ ಜಾಲವು ಹಲವು ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸಾಧ್ಯತೆಯನ್ನು ತನಿಖೆ ಪರಿಶೀಲಿಸುತ್ತಿದೆ. ಸಿಸಿಟಿವಿ ದೃಶ್ಯಾವಳಿ, ಹಣಕಾಸು ದಾಖಲೆಗಳು ಹಾಗೂ ಸಿಬ್ಬಂದಿಯ ವಿಚಾರಣೆ ಆಧರಿಸಿ ಪ್ರಕರಣದ ತನಿಖೆ ಮುಂದುವರೆದಿದ್ದು, ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರನೆ ನಡೆಸಲಾಗುತ್ತಿದೆ.

Sponsored

ಇದೇ ವೇಳೆ, ಅಕ್ರಮವಾಗಿ ಸಂಪಾದಿಸಿರುವ ಆಸ್ತಿಗಳ ವಿವರಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದು, ಕಾನೂನು ಪ್ರಕ್ರಿಯೆಯಂತೆ ಅವುಗಳನ್ನು ಮುಟ್ಟುಗೋಲು ಹಾಕುವ ಕ್ರಮವು ಆರಂಭವಾಗಿದೆ. ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಮಂದಿ ಭಾಗಿಯಾಗಿರುವ ಸಾಧ್ಯತೆಯೂ ತನಿಕಾ ತಂಡ ತಳ್ಳಿ ಹಾಕಿಲ್ಲ.

ಈ ಬೆಳವಣಿಗೆಯ ಬಳಿಕ ಶ್ರೀರಾಮ ಜನ್ಮಭೂಮಿ, ತೀರ್ಥಕ್ಷೇತ್ರ ಟ್ರಸ್ಟ್ ಕಾಣಿಕೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಕ್ರಮ ಕೈಗೊಂಡಿದೆ. ನಗದು ದೇಣಿಗೆಗಿಂತ ಡಿಜಿಟಲ್ ಪಾವತಿ ವಿಧಾನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಭಕ್ತರು ಅಧಿಕೃತ ಕೌಂಟರ್ ಗಳು ಹಾಗೂ ಮಾನ್ಯ ಡಿಜಿಟಲ್ ವ್ಯವಸ್ಥೆಗಳ ಮೂಲಕವೇ ದೇಣಿಗೆ ಸಲ್ಲಿಸುವಂತೆ ಮನವಿ ಮಾಡಲಾಗಿದೆ.

ಪ್ರಕರಣದ ಸಂಪೂರ್ಣ ಸತ್ಯಂಶ ಹೊರಬರಲು ತನಿಖೆ ಮುಂದುವರೆದಿದ್ದು, ತನಿಖಾ ಸಂಸ್ಥೆಗಳ ಅಂತಿಮ ವರದಿಯ ಬಳಿಕವೇ ಆರೋಪಿಗಳ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.

ತನಿಖೆ ವೇಳೆ ಬಂಧಿತ ಆರೋಪಿಗಳು ನೀಡಿರುವ ತನಿಖೆಗಳು ಪೊಲೀಸರನ್ನೇ ಬೆಚ್ಚಿ ಬೀಳಿಸಿವೆ. ಭಕ್ತರ ಭಕ್ತಿ ಮತ್ತು ನಂಬಿಕೆಯನ್ನು ಬಂಡವಾಳ ಮಾಡಿಕೊಂಡು, ದೊಡ್ಡ ಮಟ್ಟದ ದೇಣಿಗೆ ನೀಡಲು ಬಂದವರನ್ನು ಗುರಿಯಾಗಿಸಿಕೊಂಡು ವಂಚನೆ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ.

Sponsored

ತನಿಖಾಧಿಕಾರಿಗಳ ಪ್ರಕಾರ, ಆರೋಪಿಗಳು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೆಸರಿನಲ್ಲಿರುವಂತೆ ಕಾಣುವ ನಕಲಿ ರಶೀದಿ ಪುಸ್ತಕಗಳನ್ನು ಬಳಸಿಕೊಂಡು ಭಕ್ತರಿಂದ ದೇಣಿಗೆ ಹಣ ಸಂಗ್ರಹಿಸುತ್ತಿದ್ದರು. ರಸೀದಿಗಳು ಅಧಿಕೃತ ದಾಖಲೆಗಳಂತೆ ಕಾಣುತ್ತಿದ್ದ ಕಾರಣ, ಭಕ್ತರಿಗೆ ಯಾವುದೇ ಅನುಮಾನ ಮೂಡುತ್ತಿರಲಿಲ್ಲ. ಆದರೆ ಅವರು ನೀಡಿದ ಹಣ ಟ್ರಸ್ಟ್ ನ ಅಧಿಕೃತ ಖಾತೆಗೆ ಜಮೀಯಾಗದೆ, ನೇರವಾಗಿ ಆರೋಪಿಗಳ ಬಳಿ ಸೇರುತ್ತಿತ್ತು ಎಂದು ತನಿಕೆಯಲ್ಲಿ ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ವಶದಲ್ಲಿದ್ದ ಹಳೆಯ ಆವೃತ್ತಿಯ ನಕಲಿ ರಸೀರಿ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ. ಈ ರಶೀದಿಗಳ ಆಧಾರದ ಮೇಲೆ ಎಷ್ಟು ಭಕ್ತರು ವಂಚನೆಗೆ ಒಳಗಾಗಿದ್ದಾರೆ ಏ ಮತ್ತು ಒಟ್ಟಾರೆ ಎಷ್ಟು ಕೋಟಿ ರೂಪಾಯಿ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಅಧಿಕಾರಿಗಳು ಹಣಕಾಸು ದಾಖಲೆಗಳು, ರಸಿದಿ ಪುಸ್ತಕಗಳು ಹಾಗೂ ಬ್ಯಾಂಕ್ ವ್ಯವಹಾರಗಳ ಮಾಹಿತಿಯನ್ನು ಪರಿಶೀಲಿಸುತ್ತಿದ್ದು, ವಂಚನೆಯ ನಿಖರ ಪ್ರಮಾಣವನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ. ಪ್ರಕರಣದಲ್ಲಿ ಇನ್ನೂ ಕೆಲವರ ಪಾತ್ರವಿದೆಯೇ ಎಂಬ ಆಯಾಮದಲ್ಲಿಯೂ ತನಿಖೆ ಸಾಗುತ್ತಿದೆ.

ಕದ್ದ ಹಣದಲ್ಲಿ ಜಾಮೀನು, ಐಷಾರಾಮಿ ಕಾರು ಖರೀದಿ? ಆರೋಪಗಳ ಅಕ್ರಮ ಆಸ್ತಿ ಮೇಲೆ ಎಷ್ಟು ಭಕ್ತರು ವಂಚನೆಗೆ ಒಳಗಾಗಿದ್ದಾರೆ ಮತ್ತು ಒಟ್ಟಾರೆ ಎಷ್ಟು ಕೋಟಿ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Sponsored

ಅಧಿಕಾರಿಗಳು ಹಣಕಾಸು ದಾಖಲೆಗಳು, ರಸೀದಿ ಪುಸ್ತಕಗಳು ಹಾಗೂ ಬ್ಯಾಂಕ್ ವ್ಯವಹಾರಗಳ ಮಾಹಿತಿಯನ್ನು ಪರಿಶೀಲಿಸುತ್ತಿದ್ದು, ವಂಚನೆಯ ನಿಖರ ಪ್ರಮಾಣವನ್ನು ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ. ಪ್ರಕರಣದಲ್ಲಿ ಇನ್ನೂ ಕೆಲವರ ಪಾತ್ರವಿದೆಯೇ ಎಂಬ ಆಯಾಮದಲ್ಲಿಯೂ ತನಿಖೆ ಸಾಗುತ್ತಿದೆ.

ಕಡ್ಡ ಹಣದಲ್ಲಿ ಜಮೀನು, ಐಷಾರಾಮಿ ಕಾರು ಖರೀದಿ? ಆರೋಪಗಳ ಆಸ್ತಿ ಮೇಲೆ ಪೊಲೀಸರ ಕಣ್ಣು

ಅಯ್ಯೋದ್ಯೆ ರಾಮ ಮಂದಿರದ ಕಾಣಿಕೆ ಕಳ್ಳತನ ಮತ್ತು ನಕಲಿ ದೇಣಿಗೆ ರಸೀದಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಈ ಪ್ರಕರಣದಲ್ಲಿ ತಿನ್ನು ಯಾದವ್, ಲವಕುಶ ಮಿಶ್ರಾ, ಕರುಣೇಶ್ ಪಾಂಡೆ ಹಾಗೂ ಅನುಕಲ್ಪ್ ಮಿಶ್ರಾ ಸೇರಿದಂತೆ ಹಲವರನ್ನು ಈಗಾಗಲೇ ಬಂಧಿಸಲಾಗಿದ್ದು, ಮೂವರು ಪ್ರಮುಖ ಆರೋಪಿಗಳು ಅಕ್ರಮವಾಗಿ ಗಳಿಸಿದ ಹಣದಿಂದ ಅಯೋಧ್ಯೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಲೆಬಾಳುವ ಜಮೀನು, ಐಶಾರಾಮಿ ಕಾರುಗಳು ಹಾಗೂ ಮನೆಗಳನ್ನು ಖರೀದಿಸಿರುವ ಮನೆ ಮತ್ತು ವಾಹನಕ್ಕೆ ಸಂಬಂಧಿಸಿದ ಬ್ಯಾಂಕ್ ವ್ಯವಹಾರಗಳು ಹಾಗೂ ಹಣದ ಮೂಲವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅಕ್ರಮ ಸಂಪತ್ತಿನ ಕುರಿತು ಸಾಕ್ಷ್ಯಗಳು ಲಭ್ಯವಾದರೆ, ಸಂಬಂಧಿತ ಆಸ್ತಿಗಳನ್ನು ಕಾನೂನು ಪ್ರಕ್ರಿಯೆಯಂತೆ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ.

ಪ್ರಕರಣದ ತನಿಖೆ ಇನ್ನು ಮುಂದುವರೆದಿದ್ದು, ಹಣದ ಅಕ್ರಮ ಹರಿವು, ಇತರ ಶಂಕಿತ ವ್ಯಕ್ತಿಗಳ ಪಾತ್ರ ಹಾಗೂ ಒಟ್ಟಾರೆ ವಂಚನೆಯ ಪ್ರಮಾಣದ ಕುರಿತು ಪೊಲೀಸರು ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವೇ ಆರೋಪಿಗಳ ಬಗ್ಗೆ ಅಧಿಕೃತ ಚಿತ್ರಣ ಸ್ಪಷ್ಟವಾಗಲಿದೆ.

Sponsored

ರಾಮ ಮಂದಿರ ಕಾಣಿಕೆ ಕಳ್ಳತನ ಪ್ರಕರಣ : ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು, ಭದ್ರತಾ ವ್ಯವಸ್ಥೆ ಮತ್ತಷ್ಟು ಬಿಗಿ

ಅಯ್ಯೋದ್ಯೆ ರಾಮಮಂದಿರದ ಕಾಣಿಕೆ ಕಳ್ಳತನ ಪ್ರಕರಣದ ತನಿಖೆಯಲ್ಲಿ ಸಿಸಿಟಿವಿ ದೃಶ್ಯಗಳು ಪ್ರಮುಖ ಸಾಕ್ಷ್ಯಗಳಾಗಿ ಹೊರಹಮ್ಮಿವೆ. ದೇವಸ್ಥಾನದ ಕಾಣಿಕೆ ಎಣಿಕೆ ಪ್ರದೇಶದ ಕ್ಯಾಮೆರಾಗಳ ಪರಿಶೀಲನೆ ವೇಳೆ, ಹಣ ಎಣಿಸುವ ಸಿಬ್ಬಂದಿಯೇ ನೋಟುಗಳ ಕಟ್ಟುಗಳನ್ನು ಅಡಗಿಸಿಕೊಳ್ಳುತ್ತಿರುವ ದೃಶ್ಯಗಳು ಪತ್ತೆಯಾಗಿವೆ ಎಂದು ತನಿಕಾ ಮೂಲಗಳು ತಿಳಿಸಿವೆ.

ತನಿಖೆಯಲ್ಲಿ, ಕೇವಲ 45 ದಿನಗಳ ಅವಧಿಯಲ್ಲಿ ಹಲವು ಬಾರಿ ಕಾಣಿಕೆ ಹಣ ಅಕ್ರಮವಾಗಿ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದ್ದು, ಈ ಘಟನೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಸಿಸಿಟಿವಿ ದಾಖಲೆಗಳು, ಹಣಕಾಸು ವಿವರಗಳು ಹಾಗೂ ಸಿಬ್ಬಂದಿಯ ವಿಚಾರಣೆ ಆಧರಿಸಿ ಅಧಿಕಾರಿಗಳು ಪ್ರಕರಣದ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

ಇದೀಗ ಕಾಣಿಕೆ ಕಳ್ಳತನದ ಜೊತೆಗೆ ನಕಲಿ ದೇಣಿಗೆ ರಸೀದಿ ವಂಚನೆಯ ಆರೋಪವು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಭದ್ರತೆ ಮತ್ತು ಲೆಕ್ಕಪರಿಶೋಧನಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕ್ರಮ ಕೈಗೊಳ್ಳುತ್ತಿದೆ.

Sponsored

ಮುಂದಿನ ದಿನಗಳಲ್ಲಿ ದೇಣಿಗೆ ಸ್ವೀಕಾರ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸಲು ಕ್ಯೂ ಆರ್ ಕೋಡ್ ಪಾವತಿ, ಬ್ಯಾಂಕ್ ವರ್ಗಾವಣೆ ಹಾಗೂ ಅಧಿಕೃತ ಡಿಜಿಟಲ್ ವಿಧಾನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಭಕ್ತರು ಕೂಡ ಅಧಿಕೃತ ಮಾರ್ಗಗಳ ಮೂಲಕವೇ ದೇಣಿಗೆ ನೀಡುವಂತೆ ಟ್ರಸ್ಟ್ ಮನವಿ ಮಾಡಿದೆ.

ರಾಮ ಮಂದಿರ ಕಾಣಿಕೆ ಕಳ್ಳತನ ಪ್ರಕರಣ, ನಕಲಿ ರಸೀದಿ ವಂಚನೆ, ಅಕ್ರಮ ಆಸ್ತಿ ಖರೀದಿ ಹಾಗೂ ಆರೋಪ ಹಾಗೂ ತನಿಕೆಯ ಮುಂದಿನ ಬೆಳವಣಿಗೆಗಳು ಇದೀಗ ಎಲ್ಲರ ಗಮನ ಸೆಳೆದಿವೆ.

Also Read:

ಆಸ್ಟ್ರೇಲಿಯಾ ಹೂಡಿಕೆದಾರರಿಗೆ ಮೋದಿ ಸಂದೇಶ: ಭಾರತದಲ್ಲಿ ಹೂಡಿಕೆಗೆ ಮುಕ್ತ ಆಹ್ವಾನ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online