<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ವಿಶ್ವ ಯೂತ್ ಚೆಕ್ ಪದಕ ಗೆದ್ದ ಬೆಂಗಳೂರಿನ 13ರ ಪ್ರತಿಭೆ:ಗಣಿತ ಒಲಂಪಿಯಾಡ್ ನಲ್ಲೂ ಸಾಧನೆ

ವಿಶ್ವ ಯೂತ್ ಚೆಕ್ ಪದಕ ಗೆದ್ದ ಬೆಂಗಳೂರಿನ 13ರ ಪ್ರತಿಭೆ:ಗಣಿತ ಒಲಂಪಿಯಾಡ್ ನಲ್ಲೂ ಸಾಧನೆ
Summary: A 13-year-old girl from Bengaluru has made the country proud at the international level. This talented student, who recently won the only title for India at the World Youth Championship, has now proven her mettle once again by achieving a significant achievement in the Math Olympiad.

BELAGAVI NEWS :

ಬೆಂಗಳೂರು ಮೂಲದ 13 ವರ್ಷದ ಪ್ರತಿಭೆ ಪ್ರತೀತಿ ಬೋರ್ಡೊಲೊಯ್ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ತಂದು ಕೊಟ್ಟಿದ್ದಾರೆ. ಇಟಲಿಯಲ್ಲಿ ನಡೆದ FIDE ವಿಶ್ವ ಯೂತ್ ಚೆಸ್ ಚಾಂಪಿಯನ್ಶಿಪ್ ನಲ್ಲಿ ಅವರು ಭಾರತಕ್ಕೆ ಏಕೈಕ ಬೆಳ್ಳಿ ಪದಕ ಗೆದ್ದು ಗಮನ ಸೆಳೆದಿದ್ದು,ಇದರೊಂದಿಗೆ ವಿಶ್ವ ಚೆಸ್ ಫೆಡರೇಶನ್ ನೀಡಿರುವ WFM ( women FIDA Master ) ಗೌರವ ಹಕ್ಕು ಪಾತ್ರರಾಗಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಅತ್ಯುತ್ತಮ ತಂತ್ರಜ್ಞಾನಾತ್ಮಕ ಚಿಂತನೆ ಮತ್ತು ಸ್ಪರ್ಧಾತ್ಮಕ ಸಾಮರ್ಥ್ಯ ಪ್ರದರ್ಶಿಸಿರುವ ಪ್ರತೀತಿ, ಕೇವಲ ಚೆಸ್ ಕ್ಷೇತ್ರದಲ್ಲಿ ಅಲ್ಲದೆ ಗಣಿತದಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಅವರು ಅಂತರಾಷ್ಟ್ರೀಯ ಗಣಿತ ಒಲಂಪಿಯಾಡ್ ಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವುದು ಅದರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ.

ಚೆಸ್ ದಂತಕತೆ ಗ್ಯಾರಿ ಕಸ್ಪರೋವ್ ಅವರಂತೆಯೇ ಏಪ್ರಿಲ್ 13 ರಂದು ಜನಿಸಿರುವ ಪ್ರತೀತಿ, ಅತಿ ಕಡಿಮೆ ವಯಸ್ಸಿನಲ್ಲಿಯೇ ದೇಶಕ್ಕೆ ಅಂತರಾಷ್ಟ್ರೀಯ ಗೌರವ ತಂದುಕೊಟ್ಟು ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿ ಪರಿಣಮಿಸಿದ್ದಾರೆ. ಅವರ ಸಾಧನೆಗಳು ಭಾರತೀಯ ಕ್ರೀಡಾ ಮತ್ತು ಶೈಕ್ಷಣಿಕ ವಲಯದಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಗಿವೆ .

ಪ್ರತಿಭೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ಬೆಂಗಳೂರಿನ 13 ವರ್ಷದ ಶಾಲಾ ಬಾಲಕಿ ಪ್ರತೀತಿ ಬೋರ್ಡೊಲೊಯ್ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ. ಇಟಲಿಯಲ್ಲಿ ನಡೆದ ಪ್ರತಿಷ್ಠಿತ FIDE ವಿಶ್ವ ಯೂತ್ ಚರ್ಚ್ ಚಾಂಪಿಯನ್ಶಿಪ್ ನಲ್ಲಿ ಭಾರತಕ್ಕೆ ಏಕೈಕ ಪದಕ ತಂದು ಕೊಡುವ ಮೂಲಕ ಈಕೆ ದೇಶದ ಗಮನ ಸೆಳೆದಿದ್ದಾಳೆ.

ಇಟಲಿಯ ಮಾಂಟೆಸಿಲ್ವಾನೊದಲ್ಲಿ ನಡೆದ ಈ ಚಾಂಪಿಯನ್ಶಿಪ್ ನ 18 ವರ್ಷದೊಳಗಿನ ಬಾಲಕಿಯ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರತೀತಿ ಬೋರ್ಡೋಲೋಯ್ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ವಿಶ್ವದ ಅತ್ಯುತ್ತಮ ಯುವ ಚೆಸ್ ಆಟಗಾರರ ವಿರುದ್ಧ ಸ್ಪರ್ಧಿಸಿ ಪೋಡಿಯಂ ಸ್ಥಾನ ಗಳಿಸುವ ಮೂಲಕ ಅವರು ಈ ವರ್ಷದ ಟೂರ್ನಿಯಲ್ಲಿ ಭಾರತಕ್ಕೆ ಸಿಕ್ಕ ಏಕೈಕ ಪದಕ ವಿಜೇತರಾಗಿದ್ದಾರೆ. ಈ ಸಾಧನೆಯೊಂದಿಗೆ ಅವರಿಗೆ ಪ್ರತಿಷ್ಠಿತ 'ವುಮನ್ ಫಿಡೆ ಮಾಸ್ಟರ್' ಗೌರವವೂ ದೊರೆತಿದೆ.

ಚೆಸ್ ಮಾತ್ರವಲ್ಲದೆ, ಗಣಿತದಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿರುವ ಪ್ರತೀತಿ, ಅಂತರಾಷ್ಟ್ರೀಯ ಗಣಿತ ಒಲಂಪಿಯಾಡ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಅಪರೂಪದ ಯುವ ಪ್ರತಿಭೆಯಾಗಿದ್ದಾರೆ.

ಬಹು ಮುಖ ಸಾಮರ್ಥ್ಯದಿಂದ ಕಿರಿಯ ವಯಸ್ಸಿನಲ್ಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಈಕೆ, ಭಾರತದ ಯುವ ಪೀಳಿಗೆಗೆ ಪ್ರೇರಣೆಯಾಗಿ ಪರಿಣಮಿಸಿದ್ದಾರೆ.

ಪ್ರತೀತಿ ಬೋಡೊಲೊಯ್ ಕುರಿತು ಚೆಸ್ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿರುವ ಒಂದು ವಿಶೇಷ ಸಂಗತಿ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಲೋಕದ ಸಾರ್ವಕಾಲಿಕ ದಂತಕತೆ ಗ್ಯಾರಿ ಕಸ್ಪರೋವ್ ಅವರೊಂದಿಗೆ ಈ ಯುವ ಪ್ರತಿಭೆಯ ಜನ್ಮದಿನ ಒಂದೇ ಆಗಿರುವುದು ಈ ಅಚ್ಚರಿಯ ಅಂಶವಾಗಿದೆ.

ಕಸ್ಪರೋವ್ ಅವರು ಏಪ್ರಿಲ್ 13,1963 ರಂದು ಜನಿಸಿದರೆ, ಪ್ರತೀತಿ ಅವರು ಸರಿಯಾಗಿ 50 ವರ್ಷಗಳ ನಂತರ ಏಪ್ರಿಲ್ 13, 2013 ರಂದು ಜನಿಸಿದ್ದಾರೆ. ಒಂದೇ ದಿನ ಜನಿಸಿದ ಈ ಅಪರೂಪದ ಕಾಕತಾಳಿಯವೂ ಚೆಸ್ ಸಮುದಾಯದಲ್ಲಿ ವಿಶೇಷ ಚರ್ಚೆಗೆ ಕಾರಣವಾಗಿದೆ. ಬಾಲ್ಯದಿಂದಲೇ ಚೆಸ್ ಕಡೆಗೆ ಆಕರ್ಷಣೆ ಮತ್ತು ತೀಕ್ಷ್ಣ ಚಿಂತನೆಯ ಸಾಮರ್ಥ್ಯವನ್ನು ತೋರಿಸಿರುವ ಪ್ರತೀತಿ, ಈ ಸಾಮ್ಯತೆಯಿಂದಾಗಿ ಇನ್ನಷ್ಟು ಗಮನ ಸೆಳೆಯುತ್ತಿದ್ದಾರೆ.

ಪ್ರತೀತಿಯವರ ಕೋಚ್ ಹಾಗೂ ಗ್ರಾಂಡ್ ಮಾಸ್ಟರ್ ಪ್ರವೀಣ್ ಥಿಪ್ಸೆ ಅವರ ಪ್ರಕಾರ, ಇದು ಕೇವಲ ಜನ್ಮದಿನದ ಕಾಕತಾಳಿಯವಲ್ಲ."ಕಸ್ಪರೋವ್ ಅವರ ಕೆಲವು ಆಟದ ಲಕ್ಷಣಗಳು ಪ್ರತೀತಿ ಅವರಲ್ಲೂ ಕಾಣಿಸುತ್ತವೆ.ಟೂರ್ನಿಯ ಕಠಿಣ ಪರಿಸ್ಥಿತಿಯಲ್ಲಿ ಒಂದು ಪಾಯಿಂಟ್ ಹಿಂದೆ ಇದ್ದರೂ, ಧೃತಿಗೆಡದೆ ಎದುರಾಳಿಯನ್ನು ಹೇಗೆ ಸೋಲಿಸಬೇಕು ಮತ್ತು ಅಗ್ರಸ್ಥಾನಕ್ಕೆ ಇರಬೇಕು ಎಂಬುದನ್ನು ಏಕೆ ಅದ್ಭುತವಾಗಿ ಯೋಚಿಸುತ್ತಾಳೆ," ಎಂದು ಅವರು ಹೇಳಿದ್ದಾರೆ.

ಈ ವಿಶೇಷ ಹಿನ್ನೆಲೆ ಹಾಗೂ ಅಂತರಾಷ್ಟ್ರೀಯ ಸಾಧನೆಗಳು ಪ್ರತೀತಿ ಬೋರ್ಡೊಲೋಯಾ, ಕೇವಲ ಚೆಸ್ ಕ್ಷೇತ್ರದಲ್ಲಿ ಅಲ್ಲದೆ ವಿದ್ಯಾಭ್ಯಾಸದಲ್ಲಿಯು ಅತ್ಯುತ್ತಮ ಸಾಧನೆ ಮಾಡುತ್ತಿರುವ ಪ್ರತಿಭಾವಂತಿಯಾಗಿ ಗುರುತಿಸಿಕೊಂಡಿದ್ದಾರೆ.ಗಣಿತದಲ್ಲಿ ಅಪಾರ ಪಾಂಡಿತ್ಯ ಹೊಂದಿರುವ ಈಕೆ, ಈಗಾಗಲೇ ಭಾರತದ ಯುವ ಗಣಿತ ಪ್ರತಿಭೆಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ

ದೇಶದ ಹಲವು ಪ್ರತಿಷ್ಠಿತ ಗಣಿತ ಒಲಂಪಿಯಾಡ್ ಗಳಿಗೆ ಅರ್ಹತೆ ಪಡೆದು,ಜಾಗತಿಕ ಮಟ್ಟದ ಗಣಿತ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಪ್ರತಿತಿ,ತಮ್ಮ ಶೈಕ್ಷಣಿಕ ಸಾಧನೆಯ ಮೂಲಕವೂ ಗಮನ ಸೆಳೆದಿದ್ದಾರೆ.ಇಂತಹ ಸಾಧನೆಗಳು ಅವರ ಪ್ರಮುಖ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸುತ್ತವೆ.

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವುದು ಕೇವಲ ಒಂದು ಕ್ಷಣದ ಯಶಸ್ಸಲ್ಲ. ಇದರ ಹಿಂದೆ ಪ್ರತೀತಿ ಅವರ ನಿರಂತರ ಪರಿಶ್ರಮ, ಚೆಸ್ ಆಟದ ತಂತ್ರಜ್ಞಾನಾತ್ಮಕ ಅಧ್ಯಯನ, ಒಗಟುಗಳನ್ನು ಬಿಡಿಸುವ ಶಿಸ್ತು ಮತ್ತು ಕುಟುಂಬದ ಬಲವಾದ ಬೆಂಬಲ ಪ್ರಮುಖ ಪಾತ್ರ ವಹಿಸಿದೆ. ಈ ಎಲ್ಲ ಅಂಶಗಳು ಸೇರಿ ಅವರನ್ನು ಇಂದಿನ ಮಟ್ಟಿಗೆ ತಲುಪಿಸುವಲ್ಲಿ ಸಹಕಾರಿಯಾಗಿವೆ.

ಪ್ರತೀತಿ ಅವರ ಸಾಧನೆಗಳು ಯುವ ಪೀಳಿಗೆಗೆ ಪ್ರೇರಣೆಯಾಗಿದ್ದು, ಚೆಸ್ ಮತ್ತು ಶಿಕ್ಷಣ ಎರಡರಲ್ಲೂ ಸಮತೋಲನ ಸಾಧಿಸಿ ದೊಡ್ಡ ಗುರಿಗಳನ್ನು ಸಾಧಿಸಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿವೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online