<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

14 ವರ್ಷದ ಬಾಲಕಿಗೆ ಹೆರಿಗೆ ಪ್ರಕರಣ: ಹುಬ್ಬಳ್ಳಿ ಕಿಮ್ಸ್ ವೈದ್ಯರ ಅಚ್ಚರಿಯ ಮಾಹಿತಿ

14 ವರ್ಷದ ಬಾಲಕಿಗೆ ಹೆರಿಗೆ ಪ್ರಕರಣ: ಹುಬ್ಬಳ್ಳಿ ಕಿಮ್ಸ್ ವೈದ್ಯರ ಅಚ್ಚರಿಯ ಮಾಹಿತಿ
Summary: The incident of a 14-year-old minor girl giving birth at home has come to light, and the case has caused concern. Later, the girl and the newborn were treated, and Hubballi KIMS doctors have given important information about this.

Belagavi News:

14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿನ ಜನ್ಮ; ಹುಬ್ಬಳ್ಳಿ ಕಿಮ್ಸ್ ನ್ ನಿರ್ಭಯಾ ವಾರ್ಡ್ ನಲ್ಲಿ ಚಿಕಿತ್ಸೆ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೇವಲ " 14 ವರ್ಷ 3 ತಿಂಗಳ ಪ್ರಾಯದ ಅಪ್ರಾಪ್ತ ಬಾಲಕಿ " ಮನೆಯಲ್ಲೇ ಮಗುವಿನ ಜನ್ಮ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ " ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಕಿಯ ವಯಸ್ಸು ಅತ್ಯಂತ ಕಡಿಮೆ ಇರುವ ಹಿನ್ನೆಲೆಯಲ್ಲಿ, ಆಕೆಗೆ ಕಿಮ್ಸ್ ಆಸ್ಪತ್ರೆಯ ವಿಶೇಷ ಭದ್ರತೆಯ " ನಿರ್ಭಯಾ ವಾರ್ಡ್ "ನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದು, ಅಗತ್ಯ ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ.

ಈ ಕುರಿತು ಕಿಮ್ಸ್ ಸಹಾಯಕ ವೈದ್ಯಕೀಯ ಅಧೀಕ್ಷಕ " ಡಾ. ರಾಜಶೇಖರ್ ದ್ಯಾಬೇರಿ " ಮಾಹಿತಿ ನೀಡಿದ್ದು, " ಜುಲೈ 8ರಂದು ಅಪ್ರಾಪ್ತ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಗೆ ಮನೆಯಲ್ಲಿಯೇ ಹೆರಿಗೆಯಾಗಿರುವ ಪ್ರಾಥಮಿಕ ಮಾಹಿತಿ ನಮಗೆ ಲಭ್ಯವಾಗಿದೆ. ಸದ್ಯ ಆಕೆಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ಮತ್ತು ಆರೈಕೆ ನೀಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಸಂಬಂಧಿತ ಇಲಾಖೆಗಳು ಕಾನೂನು ಕ್ರಮ ಹಾಗೂ ಇಲಾಖೆಯನ್ನು ಮುಂದುವರಿಸಿದ್ದು, ಘಟನೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ.

14 ವರ್ಷದ ಬಾಲಕಿ ಹೆರಿಗೆ, ಹುಬ್ಬಳ್ಳಿ ಕಿಮ್ಸ್, ನಿರ್ಭಯಾ ವಾರ್ಡ್, ಅಪ್ರಾಪ್ತೆ ಗರ್ಭಧಾರಣೆ, ಕರ್ನಾಟಕ ಕ್ರೈಂ ಸುದ್ದಿ, ಕುರಿತು ಈ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 14 ವರ್ಷದ ಪ್ರಾಪ್ತ ಬಾಲಕಿ ಹಾಗೂ ನವಜಾತ ಶಿಶು ಇಬ್ಬರು ಆರೋಗ್ಯವು ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಇಬ್ಬರಿಗೂ ಅಗತ್ಯ ವೈದ್ಯಕೀಯ ಆರೈಕೆ ನೀಡಲಾಗುತ್ತಿದ್ದು, ವೈದ್ಯರ ನಿರಂತರ ನಿಗಾದಲ್ಲಿದ್ದಾರೆ.

ಕಿಮ್ಸ್ ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ. ರಾಜಶೇಖರ್ ದ್ಯಾಬೇರಿ ಅವರ ಪ್ರಕಾರ, ಬಾಲಕಿ ಗರ್ಭಿಣಿಯಾಗಿದ್ದ ವಿಚಾರವಾಗಲಿ ಅಥವಾ ಮನೆಯಲ್ಲೇ ಹೆರಿಗೆ ನಡೆದಿರುವ ವಿಷಯವಾಗಲಿ ಆಸ್ಪತ್ರೆಗೆ ಮುಂಚಿತವಾಗಿ ಯಾವುದೇ ಮಾಹಿತಿ ನೀಡಲಾಗಿರಲಿಲ್ಲ. ಆಸ್ಪತ್ರೆಗೆ ದಾಖಲಾದ ಬಳಿಕವೇ ಪ್ರಕರಣದ ಗಂಭೀರತೆ ಬೆಳಕಿಗೆ ಬಂದಿದೆ.

ಇದಲ್ಲದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ರಾಪ್ತ ಬಾಲಕಿಯೊಂದಿಗೆ ಸದ್ಯ ಆಕೆಯ ಪೋಷಕರು ಇಲ್ಲದಿರುವುದು ಪ್ರಕರಣದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಆಡಳಿತವು ಸಂಬಂಧಿತ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ.

ಅಪ್ರಾಪ್ತ ಬಾಲಕಿಗೆ ಹೆರಿಗೆ ನಡೆದಿರುವ ಹಿನ್ನೆಲೆಯಲ್ಲಿ ಘಟನೆಯ ಹಿನ್ನೆಲೆ, ಜವಾಬ್ದಾರರು ಹಾಗೂ ಕಾನೂನು ಸಂಬಂಧಿತ ಅಂಶಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 14 ವರ್ಷದ ಬಾಲಕಿ ಹೆರಿಗೆ, ಹುಬ್ಬಳ್ಳಿ ಕಿಮ್ಸ್, ನಿರ್ಭಯಾ ವಾರ್ಡ್, ಅಪ್ರಾಪ್ತೆ ಪ್ರಕರಣ, ಪೊಲೀಸ್ ತನಿಖೆ ಕುರಿತ ಈ ಘಟನೆ ರಾಜ್ಯಾದ್ಯಂತ ಗಮನ ಸೆಳೆದಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online