<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

16 ವರ್ಷಗಳ ಕಾಯುವಿಕೆ ಅಂತ್ಯ; ಸ್ಪೇನ್ ಫುಟ್ಬಾಲ್ ವಿಶ್ವಕಪ್ ಸೆಮಿ ಫೈನಲ್ ಗೆ ಲಗ್ಗೆ

16 ವರ್ಷಗಳ ಕಾಯುವಿಕೆ ಅಂತ್ಯ; ಸ್ಪೇನ್ ಫುಟ್ಬಾಲ್ ವಿಶ್ವಕಪ್ ಸೆಮಿ ಫೈನಲ್ ಗೆ ಲಗ್ಗೆ
Summary: The Spanish football team has made history by reaching the semi-finals of a major tournament after 16 years. The Spanish team has defeated its opponent and qualified for the final four with a brilliant performance.

belagavi news :

ಫಿಫಾ ವರ್ಲ್ಡ್ ಕಪ್ 2026: 16 ವರ್ಷಗಳ ಬಳಿಕ ಸೆಮಿ ಫೈನಲ್ ಗೆ ಸ್ಪೇನ್ ಲಗ್ಗೆ

ಫಿಫಾ ವಿಶ್ವಕಪ್ 2026ರಲ್ಲಿ ಸ್ಪೇನ್ ತಂಡದ ಭರ್ಜರಿ ಪ್ರದರ್ಶನ ಮುಂದುವರೆದಿದೆ. 'ಲಾ ರೋಜಾ' ಪಡೆ ಕ್ವಾಟರ್ ಫೈನಲ್ ನಲ್ಲಿ ಬೆಲ್ಜಿಯಂ ತಂಡವನ್ನು ಮಣಿಸುವ ಮೂಲಕ ಸೆಮಿ ಫೈನಲ್ ಹಂತಕ್ಕೆ ಪ್ರವೇಶಿಸಿದೆ. ಈ ಮೂಲಕ ಕಳೆದ ಮೂರು ವಿಶ್ವಕಪ್ ಗಳಲ್ಲಿ (2014, 2018, 2022) ಸಾಧ್ಯವಾಗದ ಸಾಧನೆಯನ್ನು ಸ್ಪೇನ್ ನ ಯುವಪಡೆ ಮಾಡಿ ತೋರಿಸಿದೆ.

ಲಾಸ್ ಏಂಜಲೀಸ್ ಸೋಫಿ ಸ್ಟೇಡಿಯಂ ನಲ್ಲಿ ನಡೆದ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ಮತ್ತು ಬೆಲ್ಜಿಯಂ ನಡುವೆ ಬಾರಿ ಪೈಪೋಟಿ ಕಂಡುಬಂದಿತು. ಅಂತಿಮವಾಗಿ ಸ್ಪೇನ್ ತಂಡವು 1-2 ಅಂತರದಿಂದ ಗೆಲುವು ಸಾಧಿಸಿ ಸೆಮಿ ಫೈನಲ್ ಟಿಕೆಟ್ ಖಚಿತಪಡಿಸಿಕೊಂಡಿತು.

Sponsored

ಈ ಗೆಲುವಿನೊಂದಿಗೆ ಸ್ಪೇನ್ ತಂಡದ 16 ವರ್ಷಗಳ ಸೆಮಿ ಫೈನಲ್ ಬರ ಅಂತ್ಯಗೊಂಡಿದೆ. ವಿಶ್ವ ಕಪ್ ವೇದಿಕೆಯಲ್ಲಿ ಮತ್ತೆ ಪ್ರಬಲ ತಂಡವಾಗಿ ಹೊರಹೊಮ್ಮಿರುವ ಸ್ಪೇನ್, ಯುವ ಆಟಗಾರರ ಶಕ್ತಿ, ಅಕ್ರಮಣಕಾರಿ ಆಟದ ಶೈಲಿ ಮತ್ತು ಸಂಘಟಿತ ಪ್ರದರ್ಶನದ ಮೂಲಕ ಪ್ರಶಸ್ತಿ ರೇಸ್ ನಲ್ಲಿ ಗಮನ ಸೆಳೆದಿದೆ.

2010ರ ವಿಶ್ವಕಪ್ ಚಾಂಪಿಯನ್ ಆಗಿರುವ ಸ್ಪೇನ್, ಇದೀಗ 2026ರ ವಿಶ್ವಕಪ್ ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆಯ ನಿರೀಕ್ಷೆಯಲ್ಲಿದೆ. ಸೆಮಿ ಫೈನಲ್ ನಲ್ಲಿ ಸ್ಪೇನ್ ನ ಪ್ರದರ್ಶನದ ಮೇಲೆ ವಿಶ್ವದ ಫುಟ್ಬಾಲ್ ಅಭಿಮಾನಿಗಳ ಕಣ್ಣು ನೆಟ್ಟಿದೆ.

2010ರ ಬಳಿಕ ಸ್ಪೇನ್ ಗೆ ಸೆಮಿಫೈನಲ್ ಸಂಭ್ರಮ; ಯುವ ಪಡೆ ಸೃಷ್ಟಿಸಿದ ಹೊಸ ಇತಿಹಾಸ

2010ರಲ್ಲಿ ಫಿಫಾ ವಿಶ್ವಕಪ್ ಪ್ರಶಸ್ತಿ ಗೆದ್ದ ಬಳಿಕ ಸ್ಪೇನ್ ತಂಡವು ವಿಶ್ವಕಪ್ ವೇದಿಕೆಯಲ್ಲಿ ಮತ್ತೆ ಸೆಮಿ ಫೈನಲ್ ಹಂತ ತಲುಪಲು ಸಾಧ್ಯವಾಗಿರಲಿಲ್ಲ. 2014, 2018 ಮತ್ತು 2022ರ ವಿಶ್ವಕಪ್ ಗಳಲ್ಲಿ ನಿರೀಕ್ಷಿತ ಯಶಸ್ಸು ಪಡೆಯಲು ವಿಫಲವಾಗಿದ್ದ ಸ್ಪೇನ್, ಈ ಬಾರಿ ಯುವ ಆಟಗಾರರ ಬಲವೊಂದಿಗೆ ಕಣಕ್ಕಿಳಿದು ತನ್ನ 16 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿದೆ.

Sponsored

ಬೆಲ್ಜಿಯಂ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೈನ್ ಆರಂಭದಿಂದಲೇ ಪ್ರಾಬಲ್ಯ ಸಾಧಿಸಿತು. ಚೆಂಡಿನ ಮೇಲಿನ ನಿಯಂತ್ರಣ, ವೇಗದ ಪಾಸ್ ಗಳು ಮತ್ತು ಅಕ್ರಮಣಕಾರಿ ಆಟದ ಮೂಲಕ ಎದುರಾಳಿಗಳಿಗೆ ಒತ್ತಡ ಹೇರಿದ 'ಲಾ ರೋಜಾ' ಪಡೆ 30ನೇ ನಿಮಿಷದಲ್ಲಿ ಮೊದಲ ಯಶಸ್ಸು ಕಂಡಿತು.

ಸ್ಪೇನ್ ಪರ ಪ್ಯಾಬಿಯನ್ ರೂಯಿಜ್ ಅದ್ಭುತ ಫಿನಿಶಿಂಗ್ ಮೂಲಕ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದು ಕೊಟ್ಟರು. ಆದರೆ ಹಿನ್ನಡೆ ಅನುವಿಸಿದ ಬೆಲ್ಜಿಯಂ ಕೂಡ ತಂಡಕ್ಕೆ ತಿರುಗೇಟು

ನೀಡಿತು. ಪಂದ್ಯದ 41ನೇ ನಿಮಿಷದಲ್ಲಿ ಚಾರ್ಲ್ಸ್ ಡಿ ಕೆಟೆ ಲೇರೆ ಅತ್ಯುತ್ತಮ ಗೋಲು ಗಳಿಸಿ ಸ್ಕೋರ್ ನ್ನು 1-1 ರ ಸಮಬಲಕ್ಕೆ ತಂದರು.

'ಸೂಪರ್ ಸಬ್' ಮೇರಿನೋ ಸ್ಪೇನ್ ನೆರವು

Sponsored

ಪಂದ್ಯದ ನಿರ್ಣಾಯಕ ಹಂತದಲ್ಲಿ ಸ್ಪೇನ್ ಪರ ಬದಲಿ ಆಟಗಾರನಾಗಿ ಕಣಕ್ಕಿಳಿದ ಮೇರಿನೋ ಮಹತ್ವದ ಪಾತ್ರ ವಹಿಸಿದರು. ಅವರ ಪರಿಣಾಮಕಾರಿ ಪ್ರದರ್ಶನ ಮತ್ತು ನಿರ್ಣಾಯಕ ಕ್ಷಣದ ಆಟದಿಂದ ಸ್ಪೇನ್ ಗೆಲುವಿನ ಹಾದಿ ಕಂಡುಕೊಂಡಿತು.

ಯುವ ಆಟಗಾರರ ಉತ್ಸಾಹ, ಅನುಭವಿಗಳ ಮಾರ್ಗದರ್ಶನ ಮತ್ತು ತಂಡದ ಸಂಘಟಿತ ಪ್ರದರ್ಶನದೊಂದಿಗೆ ಸ್ಪೇನ್ ಇದೀಗ ಫಿಫಾ ವಿಶ್ವಕಪ್ 2026ರ ಸೆಮಿ ಫೈನಲ್ ನಲ್ಲಿ ಸ್ಥಾನ ಪಡೆದಿದೆ. 2019ರ ಚಾಂಪಿಯನ್ ತಂಡ ಮತ್ತೊಮ್ಮೆ ಫುಟ್ಬಾಲ್ ನ ದೊಡ್ಡ ವೇದಿಕೆಯಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಸುವ ಅವಕಾಶ ಪಡೆದಿದೆ.

ಮೇರಿನೋ ಮ್ಯಾಜಿಕ್, ಬೆಲ್ಜಿಯಂ ವಿರುದ್ಧ ಗೆದ್ದು ಸೆಮಿ ಫೈನಲ್ ಗೆ ಸ್ಪೇನ್

1-1 ರ ಸಮಬಲದೊಂದಿಗೆ ಆರಂಭವಾದ ದ್ವಿತೀಯಾರ್ಧದಲ್ಲಿ ಸ್ಪೇನ್ ಮತ್ತು ಬೆಲ್ಜಿಯಂ ನಡುವೆ ತೀವ್ರ ಪೈಪೋಟಿ ನಡೆಯಿತು. ಉಭಯ ತಂಡಗಳು ಗೆಲುವಿಗಾಗಿ ಹೋರಾಡಿದರು, ಪಂದ್ಯವು ಹೆಚ್ಚುವರಿ ಸಮಯದತ್ತ ಸಾಗುವಂತೆ ಕಂಡುಬಂದಿತು. ಆದರೆ ಕೊನೆಯ ಕ್ಷಣಗಳಲ್ಲಿ ಪಂದ್ಯದ ದಿಕ್ಕೆ ಬದಲಾಯಿತು.

Sponsored

ಬೆಲ್ಜಿಯಂ ತಂಡದ ಪ್ರಮುಖ ಗೋಲ್ ಕೀಪ್ಪರ್ ತಿಬೌಟ್ ಕೌರ್ಟೊಯಿಸ್ ಗಾಯಗೊಂಡು ಮೈದಾನ ತೆರೆದಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಲೂಯಿಸ್ ಡಿ ಲಾ ಪ್ಯುಯೆಂಟೆ, ಪಂದ್ಯದ 86ನೇ ನಿಮಿಷದಲ್ಲಿ ಮೈಕಲ್ ಮೇರಿನೋ ಅವರನ್ನು ಬದಲಿ ಆಟಗಾರನಾಗಿ ಕನೆಕ್ ಇಳಿಸಿದರು.

ಮೈದಾನಕ್ಕೆ ಇಳಿದ ಕೆಲವೇ ಕ್ಷಣಗಳಲ್ಲಿ ಮೆರಿನೋ ತಮ್ಮ ಸಾಮರ್ಥ್ಯವನ್ನು ತೋರಿಸಿದರು. 88 ನೇ ನಿಮಿಷದಲ್ಲಿ ಬೆಲ್ಜಿಯಂನ ಬದಲಿ ಗೋಲ್ ಕೀಪರ್ ಸೆನ್ನೆ ಲ್ಯಾಮೆನ್ಸ್ ಅವರ ತಪ್ಪಿನ ಲಾಭ ಪಡೆದುಕೊಂಡ ಮೆರಿನೋ ನಿರ್ಣಾಯಕ ಸ್ಪೇನ್ ಗೆ 2-1 ಮುನ್ನಡೆ ತಂದು ಕೊಟ್ಟರು.

ಮೇರಿನೋ ಅವರ ಈ 'ಸೂಪರ್ ಸಬ್' ಪ್ರದರ್ಶನದಿಂದ ಸ್ಪೇನ್ ಗೆಲುವು ಸಾಧಿಸಿ 16 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಸೆಮಿ ಫೈನಲ್ ಗೆ ಪ್ರವೇಶಿಸಿತು. ಕೊನೆಯ ಕ್ಷಣದ ಗೋಲು ಸ್ಪೇನ್ ಪಾಳಯದಲ್ಲಿ ಸಂಭ್ರಮದ ಅಲೆ ಎಬ್ಬಿಸಿದೆ, ಬೆಲ್ಜಿಯಂ ತಂಡಕ್ಕೆ ನಿರಾಶೆ ಮೂಡಿಸಿತು.

ಈ ಗೆಲುವಿನೊಂದಿಗೆ ಸ್ಪೇನ್ ಯುವ ಪಡೆ ವಿಶ್ವಕಪ್ 2026ರಲ್ಲಿ ಪ್ರಶಸ್ತಿ ರಸ್ತೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.

Sponsored

ಇತಿಹಾಸ ಬರೆದ ಮೆರಿನೊ; ವಿಶ್ವ ಕಪ್ ನಾಕ್ಔಟ್ ನಲ್ಲಿ ಅಪರೂಪದ ಸಾಧನೆ

ಸ್ಪೇನ್ ತಂಡದ ಗೆಲುವಿನ ರೂವಾರಿ ಮೈಕಲ್ ಮೆರಿನೊ ಫಿಫಾ ವಿಶ್ವಕಪ್ ನಾಕೌಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಬದಲಿ ಆಟಗಾರನಾಗಿ ಮೈದಾನಕ್ಕಿಳಿದು ಸತತ ಎರಡು ನಾಕ್ಔಟ್ ಪಂದ್ಯದಲ್ಲಿ ವಿನ್ನಿಂಗ್ ಗೋಲು ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಮೆರಿನೊ ಪಾತ್ರರಾಗಿದ್ದಾರೆ.

ಪೋರ್ಚುಗಲ್ ವಿರುದ್ಧದ ಪಂದ್ಯದಲ್ಲಿ ಅಂತಿಮ ಕ್ಷಣದಲ್ಲಿ ನಿರ್ಣಾಯಕ ಗೋಲು ಗಳಿಸಿ ಸ್ಪೇನ್ ಗೆ ಜಯ ತಂದು ಕೊಟ್ಟಿದ್ದ ಮೆರಿನೊ , ಬೆಲ್ಜಿಯಂ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ತಮ್ಮ ಅದ್ಭುತ ಪ್ರದರ್ಶನ ಮುಂದುವರೆಸಿದರು. 88ನೇ ನಿಮಿಷದಲ್ಲಿ ಬಾರಿಸಿದ ಗೋಲು ಸ್ಪೇನ್ ತಂಡವನ್ನು ಸೆಮಿ ಫೈನಲ್ ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಸೆಮಿ ಫೈನಲ್ ನಲ್ಲಿ ಸ್ಪೇನ್ ಗೆ ಫ್ರಾನ್ಸ್ ಸವಾಲು

Sponsored

ಫಿಫಾ ವಿಶ್ವಕಪ್ 2026ರಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಪೇನ್ ಇದೀಗ ಸೆಮಿ ಫೈನಲ್ ನಲ್ಲಿ ಬಲಿಷ್ಠ ಪ್ರಾನ್ಸ್ ತಂಡವನ್ನು ಎದುರಿಸಲಿದೆ. ಫ್ರಾನ್ಸ್ ತನ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರಾಕೊ ತಂಡವನ್ನು ಮಣಿಸಿ ಅಂತಿಮ ನಾಲ್ಕರ ಹಂತಕ್ಕೆ ಪ್ರವೇಶಿಸಿದೆ.

ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಈ ಹೈ ವೋಲ್ಟೇಜ್ ಸೆಮಿ ಫೈನಲ್ ಪಂದ್ಯವು ಜುಲೈ 14ರಂದು ಟೆಕ್ಸಾಸ್ ನ ಡಲ್ಲಾಸ್ ಸ್ಟೇಡಿಯಂ ನಲ್ಲಿ ನಡೆಯಲಿದೆ.ವಿಶ್ವದ ಎರಡು ಬಲಿಷ್ಠ ಫುಟ್ಬಾಲ್ ತಂಡಗಳು ಪ್ರಶಸ್ತಿ ಹೋರಾಟದ ಮತ್ತೊಂದು ಮಹತ್ವದ ಹಂತದಲ್ಲಿ ಮುಖಾಮುಖಿಯಾಗಲಿದ್ದು, ಅಭಿಮಾನಿಗಳಲ್ಲಿ ಬಾರಿ ಕುತೂಹಲ ಮೂಡಿಸಿದೆ.

ಯುವ ಆಟಗಾರರ ಶಕ್ತಿ ಮತ್ತು ಮೆರಿನೋ ಅವರ ನಿರ್ಣಾಯಕ ಪ್ರದರ್ಶನದೊಂದಿಗೆ ಮುನ್ನಡೆಯುತ್ತಿರುವ ಸ್ಪೇನ್, ಫ್ರಾನ್ಸ್ ವಿರುದ್ಧವೂ ಅದೇ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ.

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online