<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

24 ಜೀವಾವಧಿ ಕೈದಿಗಳಿಗೆ ಸಹಿಸುದ್ದಿ - ಪರಪ್ಪನ ಅಗ್ರಹಾರ ಜೈಲಿನಿಂದ ಅವಧಿ ಪೂರ್ವ ಬಿಡುಗಡೆ

24 ಜೀವಾವಧಿ ಕೈದಿಗಳಿಗೆ ಸಹಿಸುದ್ದಿ - ಪರಪ್ಪನ ಅಗ್ರಹಾರ ಜೈಲಿನಿಂದ ಅವಧಿ ಪೂರ್ವ ಬಿಡುಗಡೆ
Summary: 24 lifers from Parappana Agrahara Central Jail have been granted early release for their good conduct in prison. This important decision by the Karnataka government is considered a step towards rehabilitation and encouraging good conduct.

Belagavi News:

ಸನ್ನಡತೆ, ಪರಿವರ್ತನೆ ಮತ್ತು ಉತ್ತಮ ನಡತೆಯನ್ನು ಪರಿಗಣಿಸಿ, ರಾಜ್ಯಪಾಲರ ಆದೇಶದಂತೆ ರಾಜ್ಯದ 24 ಜೀವಾವಧಿ ಕೈದಿಗಳಿಗೆ ಅವಧಿ ಪೂರ್ವ ಬಿಡುಗಡೆ ನೀಡಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಗಳು ಈ ಆದೇಶದೊಂದಿಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಯ ಆದೇಶ ಪತ್ರಗಳನ್ನು ವಿತರಿಸಲಾಯಿತು. ಜೈಲಿನಿಂದ ಹೊರ ಬಂದ ಕೈದಿಗಳು ಹೊಸ ಜೀವನ ಆರಂಭಿಸುವ ಸಂಕಲ್ಪ ವ್ಯಕ್ತಪಡಿಸಿದ್ದು, ಸಮಾಜದ ಮುಖ್ಯ ವಾಹಿನಿಗೆ ಮರಳುವ ವಿಶ್ವಾಸ ವ್ಯಕ್ತವಾಗಿದೆ.

ತಿಳಿದೋ ತಿಳಿಯದೆಯೋ ನಡೆದ ಅಪರಾಧಗಳಿಗಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಈ ಕೈದಿಗಳ ಉತ್ತಮ ನಡತೆ, ಸಿಕ್ತು ಮತ್ತು ಮನ ಪರಿವರ್ತನೆಯನ್ನು ಪರಿಗಣಿಸಿ ರಾಜ್ಯಪಾಲರು ಅವಧಿ ಪೂರ್ವ ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ. ಈ ಕ್ರಮವು ಶಿಕ್ಷೆಯ ಜೊತೆಗೆ ಪುನರ್ವಸತಿ ಮತ್ತು ಸಾಮಾಜಿಕ ಮರು ಸ್ಥಾಪನೆಗೂ ಸರ್ಕಾರ ಆದ್ಯತೆ ನೀಡುತ್ತಿರುವುದನ್ನು ತೋರಿಸುತ್ತದೆ.

ಸನ್ನಡತೆಯ ಆಧಾರದ ಮೇಲೆ ಕೈದಿಗಳಿಗೆ ನೀಡಲಾದ ಈ ಅವಧಿ ಪೂರ್ವ ಬಿಡುಗಡೆ, ಜೈಲು ಸುಧಾರಣಾ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದ್ದು, ಉತ್ತಮ ನಡತೆ ಜೀವನದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಎಂಬ ಸಂದೇಶವನ್ನು ಸಾರಿದೆ.

ಪರಪ್ಪನ ಅಗ್ರಹಾರದಲ್ಲಿ 24 ಜೀವಾವಧಿ ಕೈದಿಗಳ ಬಿಡುಗಡೆ - ಹೊಸ ಬದುಕಿನತ್ತ ಹೆಜ್ಜೆ , ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಕಾರಾಗೃಹ :

ಜೈಲಿನ ಕತ್ತಲ ಕೋಣೆಯಿಂದ ಹೊರ ಬಂದು ಹೊಸ ಬದುಕಿನತ್ತ ಹೆಜ್ಜೆಯನ್ನು ಇಡುವ ಐತಿಹಾಸಿಕ ಕ್ಷಣಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಎಂದು ಸಾಕ್ಷಿಯಾಯಿತು. ಸನ್ನಡತೆ ಮತ್ತು ಮನಪರಿವರ್ತನೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಂಡ ಜೀವಾವಧಿ ಕೈದಿಗಳ ಅಧಿಕೃತ ಬಿಡುಗಡೆ ಕಾರ್ಯಕ್ರಮ ಭಾವನಾತ್ಮಕ ವಾತಾವರಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬಿಡುಗಡೆಯ ಆದೇಶ ಪತ್ರಗಳನ್ನು ವಿತರಿಸಿದರು. ಈ ವೇಳೆ ಕಾರಾಗೃಹ ಇಲಾಖೆಯ ಎಡಿಜಿಪಿ ಅಲೋಕ್ ಕುಮಾರ್, ಜೈಲು ಮುಖ್ಯ ಸೂಪರಿಂಟೆಂಡೆಂಟ್ ಅಂಶು ಕುಮಾರ್ ಸೇರಿದಂತೆ ಇಲಾಖೆಯ ಹೆರಿಯಾ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಡುಗಡೆಗೊಂಡ ಕೈದಿಗಳು ಹೊಸ ಜೀವನ ಆರಂಭಿಸುವ ಸಂಕಲ್ಪ ದೊಂದಿಗೆ ಜೈಲಿನಿಂದ ಹೊರಬಂದರು. ಸಮಾಜದ ಮುಖ್ಯ ವಾಹಿನಿಗೆ ಮರಳುವ ಅವಕಾಶ ದೊರೆತಿರುವುದು ಅವರಲ್ಲಿ ಹೊಸ ಬರವಸೆ ಮೂಡಿಸಿದ್ದು, ಪುನರ್ವಸತಿ ಮತ್ತು ಉತ್ತಮ ನಡತೆಯ ಮಹತ್ವವನ್ನು ಈ ಕಾರ್ಯಕ್ರಮ ಮತ್ತೊಮ್ಮೆ ಎತ್ತಿ ತೋರಿಸಿದೆ.

ಸನ್ನಡತೆ, ಸಿಸ್ತು ಮತ್ತು ಮನ ಪರಿವರ್ತನೆಗೆ ನೀಡಿದ ಮಾನ್ಯತೆಯಾಗಿ ನಡೆದ ಈ ಅವಧಿ ಪೂರ್ವ ಬಿಡುಗಡೆ ಕಾರ್ಯಕ್ರಮ, ಜೈಲು ಸುಧಾರಣಾ ವ್ಯವಸ್ಥೆಯ ಮಾನವೀಯ ಮುಖವನ್ನು ಪ್ರತಿಬಿಂಬಿಸುವ ಮಹತ್ವದ ಬೆಳವಣಿಗೆಯಾಗಿದೆ.

ಸನ್ನಡತೆಯಿಂದ ಸಿಕ್ಕ ಹೊಸ ಬದುಕು - 24 ಜೀವಾವಧಿ ಕೈದಿಗಳಿಗೆ ಅವಧಿ ಪೂರ್ವ ಬಿಡುಗಡೆ, ಕುಟುಂಬಗಳಲ್ಲಿ ಸಂಭ್ರಮ :

ಒಮ್ಮೆ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದ 24 ಜೀವಾವಧಿ ಕೈದಿಗಳು, ಈಗ ಸನ್ನಡತೆ ಮತ್ತು ಮನ ಪರಿವರ್ತನೆಯ ಆಧಾರದ ಮೇಲೆ ಹೊಸ ಜೀವನ ಆರಂಭಿಸುವ ಅವಕಾಶ ಪಡೆದಿದ್ದಾರೆ. ಜೈಲಿನಲ್ಲಿದ್ದ ಅವಧಿಯಲ್ಲಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ , ಉತ್ತಮ ನಡವಳಿಕೆಯನ್ನು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಅವರಿಗೆ ಅವಧಿ ಪೂರ್ವ ಬಿಡುಗಡೆ ಮಂಜೂರಾಗಿದೆ.

ಕಾರಾಗೃಹ ಇಲಾಖೆಯು ಕೈದಿಗಳ ನಡುವಳಿಕೆ, ಶಿಸ್ತು, ಮನ ಪರಿವರ್ತನೆ ಹಾಗೂ ಪುನರ್ವಸತಿಗೆ ಸಂಬಂಧಿಸಿದ ಅಂಶಗಳನ್ನು ಕಾನೂನು ಬದ್ಧವಾಗಿ ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರು 24 ಜೀವಾವಧಿ ಕೈದಿಗಳ ಅವಧಿ ಪೂರ್ವ ಬಿಡುಗಡೆ ಅನುಮೋದನೆ ನೀಡಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಕೈದಿಗಳು ಹೊಸ ಬದುಕು ಆರಂಭಿಸುವ ಸಂಕಲ್ಪ ವ್ಯಕ್ತಪಡಿಸಿದ್ದು, ಅವರ ಕುಟುಂಬಗಳಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಹಲವು ವರ್ಷಗಳ ಬಳಿಕ ತಮ್ಮ ಆತ್ಮೀಯರನ್ನು ಮತ್ತೆ ಭೇಟಿಯಾದ ಕುಟುಂಬ ಸದಸ್ಯರು ಭಾವನಾತ್ಮಕ ಕ್ಷಣಗಳನ್ನು ಹಂಚಿಕೊಂಡರು.

ಸನ್ನಡತೆ, ಶಿಸ್ತು ಮತ್ತು ಮನ ಪರಿವರ್ತನೆಗೆ ನೀಡಲಾದ ಈ ಮಾನ್ಯತೆ ಜೈಲು ಸುಧಾರಣಾ ವ್ಯವಸ್ಥೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದ್ದು, ಸಮಾಜದ ಮುಖ್ಯ ವಾಹಿನಿಗೆ ಮರಳಲು ಅವಕಾಶ ನೀಡುವ ಪುನರ್ವಸತಿ ಕ್ರಮವಾಗಿ ಈ ನಿರ್ಧಾರವನ್ನು ಪರಿಗಣಿಸಲಾಗುತ್ತಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online