Belagavi News:
ಲಂಡನ್, ಯುಕೆ: ಯಹೂದಿ ಸಮುದಾಯದ ಭದ್ರತೆ ಹೆಚ್ಚಿಸುವ ಉದ್ದೇಶದಿಂದ ಬ್ರಿಟನ್ ಸರ್ಕಾರ 250 ಬಿಲಿಯನ್ ಪೌಂಡ್ ಗಿಂತ ಹೆಚ್ಚಿನ ಮೊತ್ತದ ಭದ್ರತಾ ಪ್ಯಾಕೇಜ್ ಘೋಷಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ ಯಹೂದಿ ಸಮುದಾಯದ ವಿರುದ್ಧ ನಡೆದ ದಾಳಿಗಳು ಹಾಗೂ ಹೆಚ್ಚುತ್ತಿರುವ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಈ ಪ್ಯಾಕೇಜ್ ಮೂಲಕ ಯಹೂದಿ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ 500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲು ನೆರವಾಗಲಿದೆ. ಇದರಲ್ಲಿ ಲಂಡನ್ ನಲ್ಲಿ 300 ಅಧಿಕಾರಿಗಳು ನಿಯೋಜನೆಯೂ ಸೇರಿದೆ ಎಂದು ವರದಿಯಾಗಿದೆ.
ಸಿನಗಾಗ್ ಗಳು, ಯಹೂದಿ ಶಾಲೆಗಳು ಹಾಗೂ ಪ್ರಮುಖ ಸಮುದಾಯ ಸ್ಥಳಗಳ ಹೊರಭಾಗದಲ್ಲಿ ಹೆಚ್ಚಿನ ಪೊಲೀಸ್ ಗಸ್ತು ಮತ್ತು ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು. ಈ ಕುರಿತು ಮಾತನಾಡಿದ ಬ್ರಿಟನ್ ಪ್ರಧಾನಿ " ಕೀರ್ ಸ್ಟಾರ್ಮರ್ " ದೇಶದಲ್ಲಿ ಹೆಚ್ಚುತ್ತಿರುವ ಯಹೂದಿ ವಿರೋಧಿ ಧೋರಣೆಗಳು ಬ್ರಿಟನ್ ನ ಮೌಲ್ಯಗಳಿಗೆ ಸವಾಲಾಗಿದೆ ಎಂದು ಹೇಳಿದ್ದಾರೆ.
ಮೂರು ವರ್ಷಗಳ ಅವಧಿಯಲ್ಲಿ ಈ ಹಣವನ್ನು ಬಳಸಲು ಉದ್ದೇಶಿಸಲಾಗಿದ್ದು, ಯಹೂದಿ ವಿರೋಧಿ ಮನೋಭಾವದ ವಿರುದ್ಧ ಜಾಗೃತಿ ಮತ್ತು ಶಿಕ್ಷಣ ಕ್ರಮಗಳಿಗೂ ಅನುದಾನ ನೀಡಲಾಗುವುದು. ಯಹೂದಿ ಸಮುದಾಯವು ಹೆಚ್ಚುತ್ತಿರುವ ಗಂಭೀರ ಅಪರಾಧ, ಭಯೋತ್ಪಾದನೆ ಬೆದರಿಕೆ ಹಾಗೂ ವೈರಿ ರಾಷ್ಟ್ರಗಳ ಹಸ್ತಕ್ಷೇಪದಂತಹ ಸವಾಲುಗಳನ್ನು ಎದುರಿಸುತ್ತಿದೆ ಎಂದು ಲಂಡನ್ ಮೆಟ್ರೋಪಾಲಿಟನ್ ಪೊಲೀಸ್ ಉಪ ಆಯುಕ್ತ " ಮ್ಯಾಟ್ ಜುಕ್ಸ್ " ತಿಳಿಸಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ನಡೆದ ಚೂರಿ ಇರಿತ ಪ್ರಕರಣದ ಬಳಿಕ ಬ್ರಿಟನ್ ನಲ್ಲಿ ಯಹೂದಿ ಸಮುದಾಯದ ಭದ್ರತಾ ಕುರಿತು ಹೆಚ್ಚಿನ ಗಮನಹರಿಸಲಾಗಿದೆ. ಲಂಡನ್ ನ ಪ್ರಮುಖ ಯಹೂದಿ ಪ್ರದೇಶವಾದ " ಗೋಲ್ಡರ್ಸ್ ಗ್ರೀನ್" ನಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಕತ್ತಿಯಿಂದ ದಾಳಿ ನಡೆದಿದ್ದು, ಪೊಲೀಸರು ಇದನ್ನು ಭಯೋತ್ಪಾದನಾ ದಾಳಿ ಎಂದು ಪರಿಗಣಿಸಿದ್ದರು.ವಸಂತಕಾಲದಲ್ಲಿ ನಡೆದ ಭದ್ರತಾ ಆತಂಕಕಾರಿ ಘಟನೆಗಳ ಸರಣಿಯಲ್ಲಿ ಇದು ಒಂದು ಎಂದು ತಿಳಿಸಲಾಗಿದೆ.
ಬ್ರಿಟನ್ ಸರ್ಕಾರದ ಪ್ರಕಟಣೆಯ ಪ್ರಕಾರ, ಈ ಹೊಸ ಭದ್ರತಾ ಪ್ಯಾಕೇಜ್ ನ ಭಾಗವಾಗಿ 59 ಮಿಲಿಯನ್ ಪೌಂಡ್ ಗಳನ್ನು ಭಯೋತ್ಪಾದನ ನಿಗ್ರಹ ಪೊಲೀಸ್ ವಿಭಾಗಕ್ಕೆ ನೀಡಲಾಗುವುದು. ದೇಶದ ಭದ್ರತೆಗೆ ಸಂಬಂಧಿಸಿದ ಅಪಾರಗಳು ಹಾಗೂ ಬೆದರಿಕೆಗಳನ್ನು ಎದುರಿಸಲು ಈ ಹಣವನ್ನು ಬಳಸಲಾಗುತ್ತದೆ.
ಗೋಲ್ಡರ್ಸ್ ಗ್ರೀನ್ ದಾಳಿಯ ಬಳಿಕ ಪ್ರಧಾನಿ ಕೀರ್ ಸ್ಟಾರ್ಮರ್ ಹೆಚ್ಚುವರಿ ಭದ್ರತಾ ಅನುದಾನದ ಭರವಸೆ ನೀಡಿದ್ದರು. ಇದೇ ವೇಳೆ, ಇರಾನ್ ಬಿಟ್ರನ್ ನಲ್ಲಿರುವ ಯಹೂದಿ ಸಮುದಾಯಕ್ಕೆ ಹಾನಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದರು.
ಯಹೂದಿ ವಿರೋಧಿ ಘಟಕಗಳ ಹೆಚ್ಚಳದ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಲಂಡನ್ ಮೆಟ್ರೋಪಾಲಿಟನ್ ಪೊಲೀಸರು ಯಹೂದಿ ಸಮುದಾಯದ ರಕ್ಷಣೆಗೆ ವಿಶೇಷ ಘಟಕ ರಚಿಸಿರುವುದಾಗಿ ಘೋಷಿಸಿದ್ದರು.