<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

5 ತಿಂಗಳಲ್ಲಿ 3 ಮದುವೆ, ಬಳಿಕ ವಂಚನೆ! ಕಿಲಾಡಿ ಮಹಿಳೆಯ ಅಚ್ಚರಿ ಪ್ರಕರಣ

5 ತಿಂಗಳಲ್ಲಿ 3 ಮದುವೆ, ಬಳಿಕ ವಂಚನೆ! ಕಿಲಾಡಿ ಮಹಿಳೆಯ ಅಚ್ಚರಿ ಪ್ರಕರಣ
Summary: The case of a Khiladi woman who cheated through 3 marriages in just 5 months is now a cause of curiosity. After the marriage, she used to leave saying that she would go to the temple, but she never returned.

BELAGAVI NEWS :

ಹಮೀರ್ ಪುರ್, ಜೂನ್ 15; ಹಿಮಾಚಲ ಪ್ರದೇಶದ ಹಮೀರ್ ಪೂರದಲ್ಲಿ ವಿಚಿತ್ರ ಹಾಗೂ ಅಚ್ಚರಿ ಮೂಡಿಸುವ ಘಟನೆ ಬೆಳಕಿಗೆ ಬಂದಿದೆ. ಶೀತಲ್ ಎಂಬ ಮಹಿಳೆ ಕೇವಲ 5 ತಿಂಗಳ ಅವಧಿಯಲ್ಲಿ ಮೂರು ಬಾರಿ ಮದುವೆಯಾಗಿದ್ದು, ಬಳಿಕ ಸುಳ್ಳು ನೆಪಗಳನ್ನು ಹೇಳಿ ಪರಾರಿಯಾಗಿದ್ದಾಳೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಸ್ಥಳೀಯರ ಹೇಳಿಕೆಗಳ ಪ್ರಕಾರ, ಮದುವೆಯಾದ ನಂತರ ಆಕೆ ಕೆಲಕಾಲ ಗಂಡನ ಮನೆಯಲ್ಲಿ ಇದ್ದು, ನಂತರ "ದೇವಸ್ಥಾನಕ್ಕೆ ಹೋಗುತ್ತೇನೆ" ಸೇರಿದಂತೆ ವಿವಿಧ ನೆಪಗಳನ್ನು ಹೇಳಿ ಮನೆ ಬಿಟ್ಟು ಹೋಗುತ್ತಿದ್ದಳು ಎಂದು ತಿಳಿದುಬಂದಿದೆ. ಬಳಿಕ ಮತ್ತೆ ಸಂಪರ್ಕಕ್ಕೆ ಸಿಗದ ಕಾರಣ ಪ್ರಕರಣ ಬೆಳಕಿಗೆ ಬಂದಿದೆ.

ಈ ಘಟನೆ ಸಂಬಂಧ ಸಾರ್ವಜನಿಕರ ಹಿತದೃಷ್ಟಿಯಿಂದ ಪೊಲೀಸರು ಎಚ್ಚರಿಕೆಯಿಂದ ಕ್ರಮ ಕೈಗೊಂಡಿದ್ದು, ಮಹಿಳೆಯರ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇಂತಹ ಘಟನೆಗಳು ಮದುವೆ ಸಂಬಂಧಗಳ ವಿಶ್ವಾಸಕ್ಕೆ ಧಕ್ಕೆ ತರುವಂತಿವೆ ಎಂಬ ಅಭಿಪ್ರಾಯ ಸ್ಥಳೀಯರಲ್ಲಿ ವ್ಯಕ್ತವಾಗಿದೆ.

ಹಿಮಾಚಲ ಪ್ರದೇಶದ ಹಮೀರ್ ಪುರ್ ದಲ್ಲಿ ಶೀತಲ್ ಎಂಬ ಮಹಿಳೆ ಕೇವಲ ಐದು ತಿಂಗಳ ಅವಧಿಯಲ್ಲಿ ಮೂವರು ವ್ಯಕ್ತಿಗಳನ್ನು ಮದುವೆಯಾಗಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಮದುವೆಯಾದ ಬಳಿಕ ಆಕೆ ದೇವಸ್ಥಾನಕ್ಕೆ ಹೋಗಬೇಕು. ಸಂಬಂಧಿಕರ ಮರಣವಾಗಿದೆ ಸೇರಿದಂತೆ ವಿವಿಧ ನೆಪಗಳನ್ನು ಹೇಳಿ ಮನೆಯಿಂದ ಹೊರಟು ಮತ್ತೆ ಮರಳಿ ಬಾರದ ರೀತಿಯಲ್ಲಿ ಪರಾರಿಯಾಗುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯ ಪತ್ತೆಯಾಗಿ ವಿಶೇಷ ತಂಡ ರಚಿಸಿದ್ದಾರೆ. ಜೊತೆಗೆ ಇಂತಹ ವಂಚನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ವಿವಾಹದ ಹಿನ್ನೆಲೆ ಪರಿಶೀಲನೆ ಹಾಗೂ ಮಧ್ಯವರ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಮಾರ್ಗಸೂಚಿ ನೀಡಿದ್ದಾರೆ.

ಈ ಘಟನೆ ಸ್ಥಳೀಯ ಮಟ್ಟದಲ್ಲಿ ಮಾತ್ರವಲ್ಲದೆ ಸಾಮಾಜಿಕ ಕೂಡ ಚರ್ಚೆಗೆ ಕಾರಣವಾಗಿದ್ದು , ವಿವಾಹ ಸಂಬಂಧಗಳಲ್ಲಿ ಜಾಗೃತಿಯ ಅಗತ್ಯವಿದೆ ಎಂಬ ಸಂದೇಶವನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.

ಸಂತ್ರಸ್ತ ಕುಟುಂಬಗಳು ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಹಿಮಾಚಲ ಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಹಿನ್ನಲೆಯಲ್ಲಿ ಇಡೀ ವಂಚನೆ ಜಾಲವನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.

ಆರೋಪಗಳ ಪ್ರಕಾರ, ಮಹಿಳೆ ಜನವರಿಯಲ್ಲಿ ಬಿಲಾಸ್ ಪುರದ ಜೆಜ್ವಿನ್ , ಫೆಬ್ರವರಿಯಲ್ಲಿ ಹಮೀರ್ ಪುರ್ ದ ಗಲೋಡ್ ಹಾಗೂ ಮೇ ತಿಂಗಳಲ್ಲಿ ಬಲ್ಹಸಿನಾ ಪ್ರದೇಶದಲ್ಲಿ ಮದುವೆಯಾಗಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗುವ ನೆಪ್ಪ ಅಥವಾ ಸಂಬಂಧಿಕರ ಮರಣದ ಸುಳ್ಳು ಕಾರಣ ನೀಡಿ ಆಕೆ ನಾಪತ್ತೆಯಾಗುತ್ತಿದ್ದಳು ಎಂಬುದು ಆರೋಪವಾಗಿದೆ.

ಎಲ್ಲಾ ಮೂರು ಘಟನೆಗಳಲ್ಲೂ ಒಂದೇ ರೀತಿಯ ಮಾದರಿ ಕಂಡುಬಂದಿರುವುದರಿಂದ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾರ್ವಜನಿಕರನ್ನು ಇಂತಹ ವಂಚನೆಗಳಿಂದ ರಕ್ಷಿಸಲು ಪೊಲೀಸ್ ಇಲಾಖೆ ವಿಶೇಷ ಎಚ್ಚರಿಕೆ ಮಾರ್ಗ ಸೂಚಿಗಳ ಬಿಡುಗಡೆ ಮಾಡಿದ್ದು, ವಿವಾಹದ ಹಿಂದೆ ಇರುವ ವ್ಯಕ್ತಿಗಳ ಹಿನ್ನೆಲೆ ಪರಿಶೀಲನೆ ಮಾಡುವಂತೆ ಸಲಹೆ ನೀಡಲಾಗಿದೆ.

ಮದುವೆಗಳನ್ನು ಏರ್ಪಡಿಸುವ ಮುನ್ನ ವಧು ಅಥವಾ ವರದ ಕುಟುಂಬದ ಹಿನ್ನೆಲೆಯನ್ನು ಸ್ಥಳೀಯ ಮಟ್ಟದಲ್ಲಿ ಸಂಪೂರ್ಣವಾಗಿ ಪರಿಶೀಲಿಸಿಕೊಳ್ಳುವುದು ಅತ್ಯಗತ್ಯ ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಮದುವೆ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ನಡೆ ಅಥವಾ ದಾಖಲೆಗಳ ಕುರಿತು ಸಣ್ಣ ಅನುಮಾನ ಬಂದರು ತಕ್ಷಣವೇ ಸ್ಥಳೀಯ ಆಡಳಿತ ಅಥವಾ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಈ ಘಟನೆ ಹಿಮಾಚಲ ಪ್ರದೇಶದಲ್ಲಿ ಒಂದು ಹೊಸ ಧನಾತ್ಮಕ ಜಾಗೃತಿಗೆ ಕಾರಣವಾಗಿದೆ. ಹಮೀರ್ ಪುರ್ ಮತ್ತು ಬಿಲಾಸ್ ಪುರ್ ಜಿಲ್ಲೆಗಳ ಜನರು ಇದೀಗ ಮದುವೆ ನಿಶ್ಚಯಿಸುವ ಮೊದಲು ವಂಚನೆಗೆ ಒಳಗಾಗದಂತೆ ತಡೆಯಲು ಹೆಚ್ಚಿನ ಎಚ್ಚರಿಕೆ ವಹಿಸುತ್ತಿದ್ದಾರೆ. ಸ್ಥಳೀಯ ಅಧಿಕಾರಿಗಳು ಹಾಗೂ ಪಂಚಾಯತ್ ಮಟ್ಟದಲ್ಲಿ ಪರಿಶೀಲನೆ ಕಾರ್ಯಕ್ರಮಗಳನ್ನು ಬಳಪಡಿಸಲಾಗುತ್ತಿದ್ದು, ಭವಿಷ್ಯದಲ್ಲಿ ಇಂತಹ ವಂಚಕ ಜಾಲಗಳ ವಿರುದ್ಧ ಪರಿಣಾಮಕಾರಿ ನಿಯಂತ್ರಣ ಸಾಧ್ಯವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online