<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Life_Style

ಜೀವನದ ಮೊದಲ ಹೀರೋಗೆ ಸಮರ್ಪಿತ ದಿನ: Father's Day ವಿಶೇಷತೆ ಏನು?

ಜೀವನದ ಮೊದಲ ಹೀರೋಗೆ ಸಮರ್ಪಿತ ದಿನ: Father's Day ವಿಶೇಷತೆ ಏನು?
Summary: When is Father's Day celebrated this year? What is the history, significance and emotional story behind this special day? This day is celebrated all over the world to pay tribute to the love, sacrifice and guidance of fathers. Learn how Father's Day started, what is its significance and what is the heartwarming story behind this day.

ತಾಯಿಯ ಪ್ರೀತಿಯ ಬಗ್ಗೆ ಹೆಚ್ಚಾಗಿ ಮಾತನಾಡಲಾಗುತ್ತದೆ. ಆದರೆ ಕುಟುಂಬಕ್ಕಾಗಿ ತಂದೆ ಮಾಡುವ ತ್ಯಾಗ, ಹೋರಾಟ ಮತ್ತು ಸಮರ್ಪಣೆಯೂ ಅಷ್ಟೇ ಅಮೂಲ್ಯ. ಇದೇ ಕಾರಣಕ್ಕೆ ಪ್ರತಿವರ್ಷ ಜೂನ್ ತಿಂಗಳ ಮೂರನೇ ಭಾನುವಾರವನ್ನು Father's day ಆಗಿ ಆಚರಿಸಲಾಗುತ್ತದೆ. ತಂದೆಯ ಪ್ರೀತಿ, ಮಾರ್ಗದರ್ಶನ ಮತ್ತು ಕುಟುಂಬಕ್ಕಾಗಿ ಅವರು ಮಾಡುವ ಅನೇಕ ತ್ಯಾಗಗಳಿಗೆ ಗೌರವ ಸಲ್ಲಿಸುವ ದಿನ ಇದಾಗಿದೆ.

2026ರಲ್ಲಿ Father's Day ಜೂನ್ 21ರಂದು ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ಅನೇಕರು ತಮ್ಮ ತಂದೆಗೆ ಕೃತಜ್ಞತೆ ಸಲ್ಲಿಸಿ, ಅವರೊಂದಿಗೆ ಸಮಯ ಕಳೆಯುತ್ತಾರೆ, ಉಡುಗೊರೆಗಳನ್ನು ನೀಡುತ್ತಾರೆ ಹಾಗೂ ಜೀವನದಲ್ಲಿ ಅವರ ಕೊಡುಗೆಯನ್ನು ಸ್ಮರಿಸುತ್ತಾರೆ.

ಅಚ್ಚರಿಯ ಸಂಗತಿಯೆಂದರೆ, Father's Day ಅನ್ನು ಯಾವುದೇ ಸರ್ಕಾರ ಅಥವಾ ಸಂಸ್ಥೆಯ ಆರಂಭಿಸಿಲ್ಲ. ತನ್ನ ತಂದೆಯ ಮೇಲಿನ ಅಪಾರ ಗೌರವ ಮತ್ತು ಪ್ರೀತಿಯಿಂದ ಪ್ರೇರಿತಳಾದ ಒಬ್ಬ ಮಗಳು ಈ ದಿನದ ಆಚರಣೆಗೆ ನಾಂದಿ ಹಾಡಿದ್ದಳು. ಇಂದು ಅದೇ ಅಭಿಯಾನ ವಿಶ್ವದಾದ್ಯಂತ ಕೋಟ್ಯಾಂತರ ಜನರು ಆಚರಿಸುವ ವಿಶೇಷ ದಿನವಾಗಿ ಬೆಳೆದಿದೆ.

Father's day ಆರಂಗದ ಹಿಂದೆ ಒಂದು ಹೃದಯಸ್ಪರ್ಶಿ ಕಥೆಯಿದೆ. ಈ ವಿಶೇಷ ದಿನವನ್ನು ಆರಂಭಿಸಿದ ಕೀರ್ತಿ ಅಮೆರಿಕದ Sonora Smart Dodd ಅವರಿಗೆ ಸಲ್ಲುತ್ತದೆ. 1909 ರಲ್ಲಿ ಚರ್ಚ್ ನಲ್ಲಿ Mother's Day ಕುರಿತು ಧರ್ಮೋಪದೇಶ ಕೇಳುತ್ತಿದ್ದ ವೇಳೆ, ತಾಯಂದಿರಿಗೆ ಇರುವಂತೆ ತಂದೆಯರಿಗೂ ಒಂದು ವಿಶೇಷ ದಿನ ಇರಬೇಕು ಎಂಬ ಆಲೋಚನೆ ಅವರ ಮನಸ್ಸಿನಲ್ಲಿ ಮೂಡಿತ್ತು.

Sponsored

ಸೋನೋರಾ ಅವರ ತಾಯಿ 6ನೇ ಮಗುವಿನ ಜನ್ಮ ನೀಡುವಾಗ ನಿಧನರಾದರು. ನಂತರ ಅವರ ತಂದೆ William Jackson Smart ಒಬ್ಬರೇ ಆರು ಮಕ್ಕಳನ್ನು ಸಾಕಿ ಬೆಳೆಸಿದರು. ಮಗಳ ಶಿಕ್ಷಣ, ಪಾಲನೆ ಮತ್ತು ಉತ್ತಮ ಭವಿಷ್ಯಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನೇ ಮುಡುಪಾಗಿಟ್ಟ ತಂದೆಯ ತ್ಯಾಗ ಮತ್ತು ಸಮರ್ಪಣೆ ಸೋನೋರಾ ಅವರ ಮೇಲೆ ಆಳವಾದ ಪ್ರಭಾವ ಬೀರಿತ್ತು.

ತಮ್ಮ ತಂದೆಯ ಅಪಾರ ಪ್ರೀತಿ, ಕಷ್ಟ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದಲೇ ಸೋನೋರಾ Father's Day ಆಚರಣೆಗೆ ಚಾಲನೆ ನೀಡಿದರು. ಅವರ ಒಂದು ಆಲೋಚನೆಯೇ ಇಂದು ವಿಶ್ವದಾದ್ಯಂತ ಕೋಟ್ಯಂತರ ಜನರು ತಮ್ಮ ತಂದೆಗೆ ಕೃತಜ್ಞತೆ ಸಲ್ಲಿಸುವ ವಿಶೇಷ ದಿನವಾಗಿ ಬೆಳೆದಿದೆ. Father's day ಕೇವಲ ಒಂದು ಆಚರಣೆ ಅಲ್ಲ ಕುಟುಂಬಕ್ಕಾಗಿ ಮೌನವಾಗಿ ಶ್ರಮಿಸುವ ಪ್ರತಿಯೊಬ್ಬ ಪ್ರೀತಿ ಮತ್ತು ತ್ಯಾಗಕ್ಕೆ ಸಲ್ಲಿಸುವ ಗೌರವವಾಗಿದೆ.

ಮೊದಲ ಬಾರಿಗೆ ತಂದೆಯ ದಿನಾಚರಣೆ ಯಾವಾಗ?

ತಂದೆಯ ದಿನಾಚರಣೆಯ ಇತಿಹಾಸವು 1919 ರಿಂದ ಆರಂಭವಾಗುತ್ತದೆ. Sonora Smart Dodd ಅವರ ಉಪಕ್ರಮದ ಫಲವಾಗಿ, ಜೂನ್ 19, 1910 ರಂದು Spokane ನಗರದಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ತಂದೆಯ ದಿನಾಚರಣೆ ನಡೆಯಿತು.

Sponsored

ಈ ಆಚರಣೆ ನಂತರ ಅಮೆರಿಕದ ವಿವಿಧ ರಾಜ್ಯಗಳಿಗೆ ಹಾಗೂ ಇತರ ದೇಶಗಳಿಗೆ ವಿಸ್ತರಿಸಿತು. ಬಳಿಕ Calvin Coolidge ಸೇರಿದಂತೆ ಹಲವು ನಾಯಕರು ತಂದೆಯ ದಿನಾಚರಣೆಯನ್ನು ಬೆಂಬಲಿಸಿದರು. ಅವರ ಪ್ರೋತ್ಸಾಹದಿಂದ ಈ ದಿನದ ಮಹತ್ವ ಮತ್ತಷ್ಟು ಹೆಚ್ಚಾಗಿ, ಜಾಗತಿಕ ಮಟ್ಟದಲ್ಲಿ ಆಚರಿಸಲಾಗುವ ವಿಶೇಷ ದಿನವಾಗಿ ರೂಪಗೊಂಡಿತು.

ರಾಷ್ಟ್ರೀಯ ಮನ್ನಣೆಗೆ ಬೇಕಾಯಿತೇ 62 ವರ್ಷ?

ತಂದೆಯ ದಿನಾಚರಣೆಯ 1910 ರಲ್ಲಿ ಆರಂಭವಾದರೂ, ಯುನೈಟೆಡ್ ಸ್ಟೇಟ್ಸ್ ನಲ್ಲಿ ಅದಕ್ಕೆ ಅಧಿಕೃತ ರಾಷ್ಟ್ರೀಯ ಮನ್ನಣೆ ದೊರಕಲು ಹಲವು ದಶಕಗಳೇ ಬೇಕಾಯಿತು. ಕೊನೆಗೆ 1972ರಲ್ಲಿ Richard Nixon ಅವರು ತಂದೆಯವರ ದಿನವನ್ನು ಅಧಿಕೃತವಾಗಿ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ನೀಡುವ ಕಾನೂನಿಗೆ ಸಹಿ ಹಾಕಿದರು.

ಈ ಕಾನೂನಿನ ಮೂಲಕ ಜೂನ್ ತಿಂಗಳ ಮೂರನೇ ಭಾನುವಾರವನ್ನು ಅಧಿಕೃತವಾಗಿ ಫಾದರ್ಸ್ ಡೇ ಆಗಿ ಆಚರಿಸಲು ನಿಗದಿಪಡಿಸಲಾಯಿತು. ಹೀಗಾಗಿ ಆರಂಭದಿಂದ ಅಧಿಕೃತ ಮಾನ್ಯತೆ ಪಡೆಯುವವರಿಗೆ ಸುಮಾರು 62 ವರ್ಷಗಳ ದೀರ್ಘ ಪ್ರಯಾಣ ನಡೆದಿತು.

Sponsored

Also Read :

ಸಿನಿಪ್ರಿಯರಿಗೆ ಗುಡ್ ನ್ಯೂಸ್: ಮನೆಯಲ್ಲೇ ವೀಕ್ಷಿಸಿ ' ಲವ್ ಮಾಕ್ಟೈಲ್ 3', ಇಲ್ಲಿದೆ ಸಂಪೂರ್ಣ ಮಾಹಿತಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online