<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಸಿನಿಪ್ರಿಯರಿಗೆ ಗುಡ್ ನ್ಯೂಸ್: ಮನೆಯಲ್ಲೇ ವೀಕ್ಷಿಸಿ ' ಲವ್ ಮಾಕ್ಟೈಲ್ 3', ಇಲ್ಲಿದೆ ಸಂಪೂರ್ಣ ಮಾಹಿತಿ

ಸಿನಿಪ್ರಿಯರಿಗೆ ಗುಡ್ ನ್ಯೂಸ್: ಮನೆಯಲ್ಲೇ ವೀಕ್ಷಿಸಿ ' ಲವ್ ಮಾಕ್ಟೈಲ್ 3', ಇಲ್ಲಿದೆ ಸಂಪೂರ್ಣ ಮಾಹಿತಿ
Summary: Love Mocktail 3, which was a hit in theaters, is now ready to reach every home through OTT. There is a lot of curiosity among movie lovers about the digital release of this feel-good movie that can be watched with the family. On which OTT platform is streaming available? From which day can it be watched? Here is the complete information.

Belagavi News:

Love Mocktail 3: ಈ ವರ್ಷದ ಕನ್ನಡ ಚಿತ್ರರಂಗದ ಮೊದಲ ಸೂಪರ್ ಹಿಟ್ ಆಗಿ ಹೊರಹೊಮ್ಮಿರುವ Love Mocktail 3 ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ತಂದೆಯ ಪ್ರೀತಿ, ಕುಟುಂಬದ ಒಡನಾಟ, ಜವಾಬ್ದಾರಿ ಮತ್ತು ಯಾವುದೇ ಸಂದರ್ಭದಲ್ಲಿ ಜೊತೆಯಾಗಿ ಸಾಗುವ ಕೌಟುಂಬಿಕ ಮೌಲ್ಯಗಳನ್ನು ಈ ಸಿನಿಮಾ ಅತ್ಯಂತ ಮನೋಜ್ಞವಾಗಿ ತೆರೆ ಮೇಲೆ ಮೂಡಿಸಿದೆ.

ರಕ್ತ ಸಂಬಂಧಗಳ ಮಹತ್ವವನ್ನು ಹೃದಯಸ್ಪರ್ಶಿಯಾಗಿ ಬಿಂಬಿಸಿರುವ ಈ ಚಿತ್ರ, ಪ್ರೀತಿ, ನೋವು ಹಾಗೂ ಜೀವನದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಭಾವನಾತ್ಮಕವಾಗಿ ಕಟ್ಟಿಕೊಡುತ್ತದೆ. ಹಲವು ಭಾವನೆಗಳ ಪದರಗಳನ್ನು ಒಳಗೊಂಡಿರುವ ಕಥೆ ಪ್ರೇಕ್ಷಕರನ್ನು ಸಿನಿಮಾ ಮುಗಿದ ಬಳಿಕವೂ ಕಾಡುವಂತಿದೆ.

ಕಾಳಜಿ, ನಂಬಿಕೆ ಮತ್ತು ಬದ್ಧತೆಯ ಮೂಲಕ ನಿರ್ಮಾಣವಾಗುವ ಸಂಬಂಧಗಳ ಸೌಂದರ್ಯವನ್ನು ಚಿತ್ರ ಮನಮುಟ್ಟುವ ರೀತಿಯಲ್ಲಿ ತೆರೆದಿಟ್ಟಿದ್ದು, ಕುಟುಂಬ ಸಮೇತ ವೀಕ್ಷಿಸಬಹುದಾದ ಉತ್ತಮ ಚಿತ್ರ ಎಂಬ ಮೆಚ್ಚುಗೆಯನ್ನು ಪಡೆದಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸುಮಾರು 15 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ.

Sponsored

ಚಿತ್ರದಲ್ಲಿ ಮಿಲನಾ ನಾಗರಾಜ್, ಸಂವೃತಾ ಸುನಿಲ್, ರೇಚಲ್ ಡೇವಿಡ್ , ಅಮೃತಾ ಅಯ್ಯಂಗಾರ್ , ದಿಲೀಪ್ ರಾಜ್ ಹಾಗೂ ಶ್ವೇತಾ ಆರ್. ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಅವರ ಅಭಿನಯಕ್ಕೂ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Love Mocktail 3 ಚಿತ್ರದ ಕಥೆಯ ಕೇಂದ್ರಬಿಂದು ಆದಿತ್ಯ ಅಲಿಯಾಸ್ ಆದಿ (ಡಾರ್ಲಿಂಗ್ ಕೃಷ್ಣ). ದತ್ತು ಪಡೆದ ಮಗಳು ನಿಧಿಯನ್ನು ತನ್ನ ಸ್ವಂತ ಮಗಳಂತೆ ಪ್ರೀತಿಯಿಂದ ಮತ್ತು ಜವಾಬ್ದಾರಿಯಿಂದ ಸಾಕುತ್ತಿರುವ ಆದಿಯ ಬದುಕು, ಅಪ್ಪ -ಮಗಳ ಮಧುರ ಭಾಂದವ್ಯ, ಸಣ್ಣ ಸಣ್ಣ ಸಂತೋಷಗಳು ಮತ್ತು ಮರೆಯಲಾಗದ ನೆನಪುಗಳಿಂದ ತುಂಬಿರುತ್ತದೆ.

ಆದಿ ಮತ್ತು ನಿಧಿಯ ಜೀವನದಲ್ಲಿ ಕೇರ್ ಟೇಕರ್, ಜಗ್ಗಾ ಮಮ್ಮಿ ಹಾಗೂ ಆತ್ಮೀಯ ಸ್ನೇಹಿತ ವಿಜಯ್ ಸದಾ ಬೆಂಬಲವಾಗಿ ನಿಂತಿರುತ್ತಾರೆ. ಎಲ್ಲವೂ ಸುಗಮವಾಗಿ ಸಾಗುತ್ತಿರುವಾಗ ಡಾ. ಶಾಂತಾ ನಿಧಿ ತನ್ನ ಸ್ವಂತ ಮೊಮ್ಮಗಳು ಎಂದು ಹೇಳಿಕೊಂಡು ಬರುವುದರಿಂದ ಅವರ ಜೀವನದಲ್ಲಿ ಅನಿರೀಕ್ಷಿತ ಉಂಟಾಗುತ್ತದೆ.

ಅಲ್ಲಿಂದ ಆರಂಭವಾಗುವ ಕಾನೂನು ಹೋರಾಟ, ಭಾವನಾತ್ಮಕ ಸಂಘರ್ಷ ಮತ್ತು ಸಂಬಂಧಗಳ ಪರೀಕ್ಷೆ ಕಥೆಯನ್ನು ಮತ್ತಷ್ಟು ರೋಚಕವಾಗಿಸುತ್ತದೆ. ಒಂದರ ಮೇಲೊಂದು ಸವಾಲುಗಳು ಎದುರಾಗುತ್ತಿದ್ದಂತೆ, ತಾನು ಪ್ರೀತಿಯಿಂದ ಕಟ್ಟಿಕೊಂಡಿರುವ ಕುಟುಂಬವನ್ನು ಉಳಿಸಿಕೊಳ್ಳಲು ಅತಿ ನಡೆಸುವ ಹೋರಾಟ ಪ್ರೇಕ್ಷಕರ ಮನ ಮುಟ್ಟುತ್ತದೆ ಅಪ್ಪ -ಮಗಳ ಬಾಂಧವ್ಯ ತ್ಯಾಗ ಮತ್ತು ಪ್ರೀತಿಯ ಮೌಲ್ಯಗಳನ್ನು ಈ ಸಿನಿಮಾ ಹೃದಯಸ್ಪರ್ಶಿಯಾಗಿ ತೆರೆದಿರುತ್ತದೆ.

Sponsored

ಕುಟುಂಬ ಸಮೇತ ಕುಳಿತು ನೋಡಬಹುದಾದ ಈ ಸೂಪರ್ ಹಿಟ್ ಸಿನಿಮಾ ಜೂನ್ 21ರಂದು ಸಂಜೆ 4:30ಕ್ಕೆ Zee Kannada ವಾಹಿನಿಯ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ನಲ್ಲಿ ಪ್ರಸಾರವಾಗಲಿದೆ.

Also Read:

ರಿಷಬ್ ಶೆಟ್ಟಿ ಹೊಸ ದಾಖಲೆ ! ₹ 500 ಕೋಟಿ ವೆಚ್ಚದಲ್ಲಿ ಮೂಡಿಬರಲಿದೆ ಶಿವಾಜಿ ಮಹಾರಾಜ್ ಕಥೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online