<?= $pageTitle ?>
Logo
ಮುಖಪುಟ ಓದುವುದು ಕೇಳು
Technology

ಮೆಟಾ ಅಲರ್ಟ್ ಸಿಸ್ಟಂದಿಂದ ದೊಡ್ಡ ಅನಾಹುತ ತಪ್ಪಿತು: ಕೇವಲ 8 ನಿಮಿಷದಲ್ಲಿ ಯುವಕನ ರಕ್ಷಿಸಿದ ಪೊಲೀಸರು!

ಮೆಟಾ ಅಲರ್ಟ್ ಸಿಸ್ಟಂದಿಂದ ದೊಡ್ಡ ಅನಾಹುತ ತಪ್ಪಿತು: ಕೇವಲ 8 ನಿಮಿಷದಲ್ಲಿ ಯುವಕನ ರಕ್ಷಿಸಿದ ಪೊಲೀಸರು!
Summary: Meta Platform's Suicide Alert System Averted a Major Disaster: Police Acted Quickly and Saved a Young Man in Just 8 Minutes. The Technology and the Police Team's Timely Response Saved the Life of the Man. Here is the Complete Details on Suicide Alert, Meta Safety System and Rescue Operation.

BELAGAVI NEWS :

ಮೀರತ್ (ಉತ್ತರ ಪ್ರದೇಶ): ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಬಂದ ಆತ್ಮಹತ್ಯೆ ಅಲರ್ಟ್ ಅನ್ನು ತಕ್ಷಣವೇ ಮೆಟಾ ಸಂಸ್ಥೆ ಪೊಲೀಸರಿಗೆ ಹಂಚಿಕೊಂಡ ಪರಿಣಾಮ 25 ವರ್ಷದ ಯುವಕನ ಜೀವ ಉಳಿದ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ Meta Platforms ಮತ್ತು ಉತ್ತರ ಪ್ರದೇಶ ಪೊಲೀಸರ ನಡುವಿನ ಸಮನ್ವಯದಿಂದ ಈ ರಕ್ಷಣಾ ಕಾರ್ಯ ಯಶಸ್ವಿಯಾಗಿದೆ. ಯುವಕ ಇನ್ಸ್ಟಾಗ್ರಾಮ್ ನಲ್ಲಿ ಸ್ವಯಂ ಹಾನಿ ಸೂಚಿಸುವ ರೀತಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾನೆ ಎಂದು ವರದಿಯಾಗಿದೆ. ವಿಡಿಯೋದಲ್ಲಿ ಆತ ಬಿಳಿ ಬಣ್ಣದ ದ್ರವವನ್ನು ಕುಡಿಯುತ್ತಿರುವ ದೃಶ್ಯ ಹಾಗೂ ಆತ್ಮಹಾನಿಗೆ ಸಂಬಂಧಿಸಿದ ಸಂದೇಶವೂ ಇದ್ದವು.

ಈ ಪೋಸ್ಟ್ ಗಮನಿಸಿದ ತಕ್ಷಣ ಮೆಟಾ ಸಂಸ್ಥೆ ಪೊಲೀಸ್ ಮುಖ್ಯ ಕಚೇರಿಯ ಸೋಶಿಯಲ್ ಮೀಡಿಯಾ ಸೆಂಟರ್ ಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಬಳಿಕ ಡಿಜಿಪಿ ತಕ್ಷಣ ಕ್ರಮ ಕೈಗೊಂಡು ಮೀರತ್ ಪೊಲೀಸರಿಗೆ ಮಾಹಿತಿ ನೀಡಿದ್ದು , ಯುವಕನ ಮೊಬೈಲ್ ನಂಬರ್ ಹಾಗೂ ಸ್ಥಳದ ವಿವರಗಳನ್ನು ಹಂಚಿಕೊಂಡಿದ್ದಾರೆ.

ಅದರ ನಂತರ ಹಿರಿಯ ಎಸ್ಪಿ ಮಾರ್ಗದರ್ಶನದಲ್ಲಿ ಪೊಲೀಸರು ಸಂಧಾನ ಪ್ರದೇಶಕ್ಕೆ ತೆರಳಿ ಯುವಕನ ಮನೆ ಪತ್ತೆ ಹಚ್ಚಿದ್ದಾರೆ. ಒಳಗೆ ಹೋಗಿದ್ದಾಗ ಯುವಕನ ಗಂಭೀರ ಸ್ಥಿತಿಯಲ್ಲಿ ಇದ್ದು, ಅಂತ ಸೇವಿಸಿದ್ದ ದ್ರಾವಣದ ಬಾಟಲ್ ಕೂಡ ಸ್ಥಳದಲ್ಲಿ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದ ಸಹಾಯದಿಂದ ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾನೆ. ಸದ್ಯ ಯುವಕ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಆತ್ಮಹಾನಿ ಸೂಚನೆಗಳನ್ನು ಗುರುತಿಸುವಲ್ಲಿ ತಂತ್ರಜ್ಞಾನ ಮತ್ತು ಪೊಲೀಸರ ತ್ವರಿತ ಪ್ರತಿಕ್ರಿಯೆಯ ಮಹತ್ವವನ್ನು ಮತ್ತೊಮ್ಮೆ ತೋರಿಸಿದೆ.

ಆತ್ಮಹತ್ಯೆ ಯತ್ನಿಸಿದ ಯುವಕನನ್ನು ರಕ್ಷಿಸಿದ ನಂತರ, ಆತನ ನಿರ್ಧಾರದ ಹಿನ್ನೆಲೆ ಕುರಿತು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸಂಬಂಧ ಅಂತ್ಯಗೊಂಡ ಬಳಿಕ ಉಂಟಾದ ಒತ್ತಡ ಮತ್ತು ಖಿನ್ನತೆಯಿಂದಾಗಿ ತಾನು ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಗಿ ಯುವಕ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಯುವಕನಿಗೆ ಹಾಗೂ ಕುಟುಂಬ ಸದಸ್ಯರಿಗೆ ಸಮಾಲೋಚನೆ ನಡೆಸಿ ಅಗತ್ಯ ಮಾನಸಿಕ ಬೆಂಬಲ ಮತ್ತು ನೆರವನ್ನು ಒದಗಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Meta Platforms ಮತ್ತು ಉತ್ತರ ಪ್ರದೇಶ ಪೊಲೀಸರ ನಡುವಿನ ಸಹಕಾರ 2022 ರಿಂದಲೇ ನಡೆಯುತ್ತಿದ್ದು, ಫೇಸ್ಬುಕ್ ಅಥವಾ ಇನ್ ಸ್ಟಾಗ್ರಾಂನಲ್ಲಿ ಆತ್ಮಹತ್ಯೆ ಸೂಚಿಸುವ ಪೋಸ್ಟ್ ಅಥವಾ ವಿಡಿಯೋ ಕಂಡುಬಂದ ತಕ್ಷಣವೇ ಸಂಬಂಧಿಸಿದ್ದ ಅಲರ್ಟ್ ನೇರವಾಗಿ ಪೊಲೀಸ್ ವ್ಯವಸ್ಥೆಗೆ ತಲುಪುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

2023 ಜನೆವರಿ 1ರಿಂದ 2026 ಮೇ 31ರವರೆಗೆ ಈ ಅಲರ್ಟ್ ವ್ಯವಸ್ಥೆಯಿಂದ ರಾಜ್ಯದಲ್ಲಿ ಒಟ್ಟು 3,011 ಜನರ ಜೀವ ಉಳಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವ್ಯವಸ್ಥೆ ತ್ವರಿತ ಪ್ರತಿಕ್ರಿಯೆ ಮತ್ತು ತಂತ್ರಜ್ಞಾನ ಆಧಾರಿತ ರಕ್ಷಣಾ ಕಾರ್ಯಚರಣೆಗೆ ಮಹತ್ವದ ಉದಾಹರಣೆಯಾಗಿದೆ.

Also Read:

ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ಮತ್ತೆ ವಾಗ್ದಾಳಿ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online