<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಭಾರತ-ಇಸ್ರೇಲ್ ಸ್ನೇಹಕ್ಕೆ ಹೊಸ ಅಧ್ಯಾಯ; ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಸಿದ್ಧತೆ

ಭಾರತ-ಇಸ್ರೇಲ್ ಸ್ನೇಹಕ್ಕೆ ಹೊಸ ಅಧ್ಯಾಯ; ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಸಿದ್ಧತೆ
Summary: Chhatrapati Shivaji Maharaj, the proud warrior of India and the founder of Swarajya, is receiving another important honor at the global level. A plan has been formed to install a statue of Shivaji Maharaj in Israel as a symbol of the friendly relations between India and Israel.

BEALAGVI NEWS :

ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷಿಯ ಸಂಬಂಧಗಳು ಕಳೆದ ಕೆಲವು ವರ್ಷಗಳಿಂದ ರಾಜ್ಯ ತಾಂತ್ರಿಕ, ರಕ್ಷಣಾ, ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಮನಾರ್ಹವಾಗಿ ಬಲಗೊಂಡಿವೆ. ಈ ಸ್ನೇಹದ ಬಗ್ಗೆ ಮತ್ತೊಂದು ಮಹತ್ವದ ಆಯಾಮ ಸೇರ್ಪಡೆಯಾಗಲಿದ್ದು, ಭಾರತದ ಅಮರವೀರ ಹಾಗೂ ಹಿಂದವಿ ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಇಸ್ರೇಲ್ ನಲ್ಲಿ ಸ್ಥಾಪಿಸುವ ಯೋಜನೆಯನ್ನು ಅಲ್ಲಿನ ಅಧಿಕಾರಿಗಳು ಘೋಷಿಸಿದ್ದಾರೆ.

ಮುಂಬೈನಲ್ಲಿರುವ ಇಸ್ರೇಲ್ ನ ಕಾನ್ಸುಲ್ ಜನರಲ್ ಯಾನಿವ್ ರೇವಾಚ್ ಅವರು ಈ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಕಳೆದ ವಾರ ಆಚರಿಸಲಾದ ಶಿವರಾಜ್ಯಾಭಿಷೇಕ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ಇಸ್ರೇಲ್ ನ ಪ್ರಮುಖ ನಗರದಲ್ಲಿ ಶೀಘ್ರದಲ್ಲೇ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆಯನ್ನು ಸ್ಥಾಪಿಸುವ ಯೋಜನೆಯ ರೂಪಗೊಂಡಿದೆ ಎಂದು ತಿಳಿಸಿದ್ದಾರೆ.

ಈ ನಿರ್ಧಾರ ಕೇವಲ ಒಂದು ಪ್ರತಿಮೆ ಸ್ಥಾಪನೆಯೇ ಸೀಮಿತವಾಗಿಲ್ಲ. ಇದು ಭಾರತ ಮತ್ತು ಇಸ್ರೇಲ್ ನಡುವಿನ ಐತಿಹಾಸಿಕ ಸ್ನೇಹ, ಪರಸ್ಪರ ಗೌರವ ಹಾಗೂ ಸಾಂಸ್ಕೃತಿಕ ಬಾಂಧವ್ಯದ ಪ್ರತೀಕವಾಗಿಯು ಪರಿಗಣಿಸಲಾಗುತ್ತಿದೆ. ಯುದ್ಧ ತಂತ್ರ, ಆಡಳಿತ ದಕ್ಷತೆ, ಸಮುದ್ರ ಭದ್ರತೆ ಹಾಗೂ ರಾಷ್ಟ್ರ ನಿರ್ಮಾಣದ ದೃಷ್ಟಿಕೋನಕ್ಕೆ ಜಗತ್ತಿನಾದ್ಯಂತ ಗೌರವಿಸಲ್ಪಡುವ ಶಿವಾಜಿ ಮಹಾರಾಜರ ಸ್ಮರಣೆಯನ್ನು ಇಸ್ರೇಲ್ ನೆಲದಲ್ಲಿ ಶಾಶ್ವತಗೊಳಿಸುವ ಪ್ರಯತ್ನ ಇದಾಗಿದೆ.

Sponsored

ಭಾರತೀಯ ಇತಿಹಾಸದಲ್ಲಿ ಅಪ್ರತಿಮ ಸ್ಥಾನ ಪಡೆದಿರುವ ಶಿವಾಜಿ ಮಹಾರಾಜರು ಧೈರ್ಯ, ನಾಯಕತ್ವ ಮತ್ತು ಸ್ವಾಭಿಮಾನದ ಸಂಕೇತವಾಗಿ ಗುರುತಿಸಿಕೊಂಡಿದ್ದಾರೆ. ಅವರ ಪ್ರತಿಮೆ ಇಸ್ರೇಲ್ ನಲ್ಲಿ ಸ್ಥಾಪನೆಯಾಗುವುದರಿಂದ ಅಲ್ಲಿನ ಜನರಿಗೆ ಭಾರತೀಯ ಇತಿಹಾಸ ಮತ್ತು ಮರಾಠ ಸಾಮ್ರಾಜ್ಯದ ಪರಂಪರೆಯನ್ನು ಪರಿಚಯಿಸುವ ಅವಕಾಶ ದೊರೆಯಲಿದೆ. ಜೊತೆಗೆ, ಎರಡು ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ವಿನಿಮಯಕ್ಕೂ ಇದು ಹೊಸ ಉತ್ತೇಜಿನ ನೀಡುವ ನಿರೀಕ್ಷೆ ಇದೆ.

ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಇಸ್ರೇಲ್ ರಕ್ಷಣಾ ಸಹಕಾರ, ಕೃಷಿ ತಂತ್ರಜ್ಞಾನ, ನೀರಿನ ನಿರ್ವಹಣೆ, ನವೋದಯ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ನಿಕಟವಾಗಿ ಸಹಕರಿಸುತ್ತಿವೆ. ಈಗ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆ ಯೋಜನೆಯು ಈ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ. ಭಾರತೀಯರ ಹೆಮ್ಮೆಯ ವೀರನಿಗೆ ವಿದೇಶಿ ನೆಲದಲ್ಲಿ ದೊರೆಯುತ್ತಿರುವ ಈ ಗೌರವವು ದೇಶದ ಜನರಲ್ಲಿ ಸಂತಸ ಮೂಡಿಸಿದೆ.

"ಭಾರತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರಭಾವ ಏನು ಮತ್ತು ಅವರು ಎಷ್ಟು ಮುಖ್ಯ ಎಂಬುದನ್ನು ನಾವು ನಿಖರವಾಗಿ ಅರ್ಥ ಮಾಡಿಕೊಂಡಿದ್ದೇವೆ. ಮಹಾರಾಜರ ದೊಡ್ಡ ಪ್ರತಿಮೆಯನ್ನು ನಿರ್ಮಿಸಿ ಇಸ್ರೇಲ್ ಗೆ ಕಳುಹಿಸುವುದು ನಮ್ಮ ಉದ್ದೇಶವಾಗಿದೆ. ಇದು ಕೇವಲ ನಿಯಮಿತ ಯೋಜನೆಗಿಂತ ಹೆಚ್ಚಿನದಾಗಿರುತ್ತದೆ. ಈ ಯೋಜನೆಯ ಮೂಲಕ ಭಾರತೀಯರು ತಮ್ಮ ಲಿಇಸ್ರೇ ಇಸ್ರೇಲಿ ಗೆಳೆಯರೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ. ನಾವು ಆ ಪ್ರತಿಮೆಯನ್ನು ಇಸ್ರೇಲ್ ನ ಪ್ರಮುಖ ನಗರದಲ್ಲಿ ಸ್ಥಾಪನೆ ಮಾಡಲಿದ್ದೇವೆ"ಎಂದು ಯಾನಿಮ್ ರೇವಾಚ್ ಹೇಳಿದ್ದಾರೆ.

ಇಸ್ರೇಲ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದ ಯೋಜನೆಗೆ ಮಹಾರಾಷ್ಟ್ರ ಸರ್ಕಾರವು ಸಹಕಾರ ನೀಡಲಿದ್ದು, ಈ ಕುರಿತು ಎರಡು ಪಕ್ಷಗಳ ನಡುವೆ ಮಹತ್ವದ ಚರ್ಚೆಗಳು ನಡೆದಿವೆ. ಪ್ರತಿಮೆಯು ಶಿವಾಜಿ ಮಹಾರಾಜರ ಐತಿಹಾಸಿಕ ವ್ಯಕ್ತಿತ್ವ, ಪರಂಪರೆ ಹಾಗೂ ನಾಯಕತ್ವವನ್ನು ಸಮರ್ಪಕವಾಗಿ ಪ್ರತಿಬಿಂಬಿಸುವಂತೆ ರೂಪುಗೊಳ್ಳಬೇಕು ಎಂಬ ಉದ್ದೇಶದಿಂದ ಇಸ್ರೇಲ್ ವಿಶೇಷ ಗಮನ ಹರಿಸುತ್ತಿದೆ.

Sponsored

ಈ ಕುರಿತು ಮಾತನಾಡಿರುವ ಮುಂಬೈನಲ್ಲಿ ಇಸ್ರೇಲ್ ಕಾನ್ಸುಲ್ ಜನರಲ್ ಯಾನಿವ್ ರೇವಾಚ್, "ಶಿವಾಜಿ ಮಹಾರಾಜರ ಪರಂಪರೆಗೆ ತಕ್ಕಂತೆ ಸ್ಮಾರಕವನ್ನು ರೂಪಿಸಲು ಐತಿಹಾಸಿಕ ಉಲ್ಲೇಖಗಳು, ಕಲಾತ್ಮಕ ಸಲಹೆಗಳು ಮತ್ತು ವಿನ್ಯಾಸದ ಪರಿಗಣನೆಗಳ ವಿಷಯದಲ್ಲಿ ಮಹಾರಾಷ್ಟ್ರ, ಸರ್ಕಾರದ ಸರ್ಕಾರವನ್ನು ಕೋರಲಾಗಿದೆ. ಈ ಮನವಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಕ್ಷಣವೇ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಅಗತ್ಯ ನೆರವು ಒದಗಿಸಲು ಒಪ್ಪಿಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ಮುಖ್ಯಮಂತ್ರಿ ಫಡ್ನವೀಸ್ ಅವರಿಗೆ ಬರೆದ ಪತ್ರದಲ್ಲಿ ರೇವಾಚ್, ಇಸ್ರೇಲ್ ನಲ್ಲಿ ನಿರ್ಮಾಣವಾಗಲಿರುವ ಶಿವಾಜಿ ಮಹಾರಾಜರ ಪ್ರತಿಮೆಯ ಮಹತ್ವವನ್ನು ವಿವರಿಸಿದ್ದಾರೆ. "ಈ ಸ್ಮಾರಕವು ಭಾರತ ಮತ್ತು ಇಸ್ರೇಲ್ ನಡುವಿನ ಗಾಡ ಸ್ನೇಹ ಹಾಗೂ ನಿಕಟ ರಾಜ ತಾಂತ್ರಿಕ ಸಂಬಂಧಗಳ ಪ್ರಬಲ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ವಿಶ್ವಾಸ ನಮಗಿದೆ. ವಿಶೇಷವಾಗಿ ಮಹಾರಾಷ್ಟ್ರ ಮತ್ತು ಭಾರತೀಯ ಯಹೂದಿ ಸಮುದಾಯದ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಪರಿಗಣಿಸಿದೆ, ಈ ಪ್ರತಿಮೆ ಇನ್ನಷ್ಟು ಅರ್ಥಪೂರ್ಣವಾಗಲಿದೆ"ಎಂದು ಅವರು ಉಲ್ಲೇಖಿಸಿದ್ದಾರೆ.

ರೇವಾಚ್ ಅವರು ತಮ್ಮ ಪತ್ರದಲ್ಲಿ ಭಾರತದ ಯಹೂದಿ ಸಮುದಾಯ ಮತ್ತು ಇಸ್ರೇಲ್ ನಡುವಿನ ಸಂಬಂಧಗಳನ್ನು ಪ್ರಸ್ತಾಪಿಸಿದ್ದಾರೆ. ಮಹಾರಾಷ್ಟ್ರ ಮೂಲದ ಅನೇಕ ಯಾವುದೇ ಕುಟುಂಬಗಳು ನಂತರ ಇಸ್ರೇಲ್ ಗೆ ವಲಸೆ ಹೋಗಿದ್ದು, ಅವರ ಸಂತತಿಯವರು ಇಂದು ಇಸ್ರೇಲ್ ನ ಸಮಾಜ, ಆರ್ಥಿಕತೆ, ಶಿಕ್ಷಣ ಮತ್ತು ಸಾರ್ವಜನಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ ಅವರ ಪ್ರತಿಮೆ ಇಸ್ರೇಲ್ ನಲ್ಲಿ ಸ್ಥಾಪನೆಯಾಗುವುದು ಕೇವಲ ಐತಿಹಾಸಿಕ ವ್ಯಕ್ತಿಗೆ ಸಲ್ಲುವ ಗೌರವ ಮಾತ್ರವಲ್ಲ, ಎರಡು ಪ್ರಜಾಸತ್ತಾತ್ಮಕ ರಾಷ್ಟ್ರಗಳ ನಡುವಿನ ಸ್ನೇಹ, ಪರಸ್ಪರ ಗೌರವ ಮತ್ತು ಸಾಂಸ್ಕೃತಿಕ ಭಾಂದವ್ಯದ ಪ್ರತೀಕವಾಗಿಯೂ ಗುರುತಿಸಿಕೊಳ್ಳಲಾಗಿದೆ. ಈ ಯೋಜನೆಯು ಭಾರತ -ಇಸ್ರೇಲ್ ಸಂಬಂಧಗಳ ಇತಿಹಾಸದಲ್ಲಿ ಹೊಸ ಅಧ್ಯಯನವನ್ನು ಬರೆಯುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

Sponsored

ಭಾರತ ಪ್ರವಾಸದ ವೇಳೆ ಭಾರತೀಯರು ಇಸ್ರೇಲ್ ಹಾಗೂ ಅದರ ರಾಷ್ಟ್ರೀಯ ವೀರರ ಬಗ್ಗೆ ಹೊಂದಿರುವ ಅಪಾರ ಗೌರವವನ್ನು ಕಂಡಿರುವುದಾಗಿ ಅವರು ತಿಳಿಸಿದ್ದಾರೆ.

"ನಾನು ಭಾರತದಲ್ಲಿ ಎಲ್ಲೇ ಪ್ರಯಾಣಿಸಿದರು, ಇಸ್ರೇಲ್ ಮತ್ತು ನಮ್ಮ ರಾಷ್ಟ್ರೀಯ ವೀರರ ಬಗ್ಗೆ ಜನರ ದೃಷ್ಟಿಯಲ್ಲಿ ಅಪಾರ ಗೌರವವನ್ನು ಗಮನಿಸಿದ್ದೇವೆ. ಆದರೆ ಇಸ್ರೇಲ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಸ್ನೇಹ ಮತ್ತು ಪರಸ್ಪರ ಗೌರವದ ಭಾವನೆಯ ಹಿನ್ನೆಲೆಯಲ್ಲಿ, ಮುಂಬೈನಲ್ಲಿರುವ ಇಸ್ರೇಲ್ ಕನ್ಸುಲೆಟ್ ಜನರಲ್ ಇಸ್ರೇಲ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಿದೆ"ಎಂದು ರೇವಾಚ್ ಹೇಳಿದ್ದಾರೆ.

ಈ ಘೋಷಣೆ ಭಾರತ ಮತ್ತು ಇಸ್ರೇಲ್ ನಡುವಿನ ಬೆಳೆಯುತ್ತಿರುವ ಸಾಂಸ್ಕೃತಿಕ ಬಾಂಧವ್ಯದ ಪ್ರತೀಕವಾಗಿ ಪರಿಗಣಿಸಲಾಗುತ್ತದೆ. ಭಾರತದ ಇತಿಹಾಸದಲ್ಲಿ ಅಪಾರ ಗೌರವ ಪಡೆದಿರುವ ಛತ್ರಪತಿ ಶಿವಾಜಿ ಮಹಾರಾಜ ಅವರ ವ್ಯಕ್ತಿತ್ವ, ನಾಯಕತ್ವ ಮತ್ತು ಸ್ವರಾಜ್ಯದ ಕಲ್ಪನೆಯನ್ನು ಇಸ್ರೇಲ್ ಜನತೆಗೆ ಪರಿಚಯಿಸುವ ಉದ್ದೇಶವು ಈ ಯೋಜನೆಯ ಹಿಂದೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಮಹತ್ವದ ಉಪಕ್ರಮಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, "ಇದು ಅತ್ಯಂತ ಸಂತಸದ ಸುದ್ದಿ. ಶಿವರಾಜ್ಯಾಭಿಷೇಕ ದಿನದ ಶುಭ ಸಂದರ್ಭದಲ್ಲಿ ಇಸ್ರೇಲ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಯನ್ನು ಸ್ಥಾಪಿಸುವ ಐತಿಹಾಸಿಕ ಘೋಷಣೆ ಮಾಡಿದ ಇಸ್ರೇಲ್ ಕಾನ್ಸುಲ್ ಜನರಲ್ ಯೂನೀವ್ ರೇವಾಚ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಮಹತ್ವದ ಉಪಕ್ರಮಕ್ಕೆ ಮಹಾರಾಷ್ಟ್ರ ಸರ್ಕಾರ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡಲಿದೆ"ಎಂದು ತಿಳಿಸಿದ್ದಾರೆ.

Sponsored

ಅಲ್ಲದೆ,"ಜೈ ಭವಾನಿ, ಜೈ ಶಿವಾಜಿ" ಎಂಬ ಘೋಷಣೆಯೊಂದಿಗೆ ತಮ್ಮ ಸಂತಸವನ್ನು ವ್ಯಕ್ತಪಡಿಸಿರುವ ಫಡ್ನವೀಸ್, ಈ ಯೋಜನೆಯನ್ನು ಮಹಾರಾಷ್ಟ್ರದ ಹೆಮ್ಮೆ ಹಾಗೂ ಭಾರತ ಇಸ್ರೇಲ್ ಸ್ನೇಹದ ಹಾಗೂ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.

ಇಸ್ರೇಲ್ ನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಯಾಗುವುದು ಕೇವಲ ಒಂದು ಸ್ಮಾರಕ ನಿರ್ಮಾಣವಲ್ಲ, ಎರಡು ರಾಷ್ಟ್ರಗಳ ನಡುವಿನ ಸ್ನೇಹ, ಪರಸ್ಪರ ಗೌರವ ಮತ್ತು ಐತಿಹಾಸಿಕ ಬಾಂಧವ್ಯದ ಶಾಶ್ವತ ಸಂಕೇತವಾಗಲಿದೆ. ಈ ಉಪಕ್ರಮವು ಜಾಗತಿಕ ಮಟ್ಟದಲ್ಲಿ ಶಿವಾಜಿ ಮಹಾರಾಜರ ಪರಂಪರೆ ಮತ್ತು ಅವರ ಆದರ್ಶಗಳನ್ನು ಮತ್ತಷ್ಟು ಪ್ರಸಾರ ಮಾಡುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಒಟ್ಟಿನಲ್ಲಿ ಭಾರತ ಇಸ್ರೇಲ್ ಸಾಂಸ್ಕೃತಿಕ ಸಂಬಂಧದ ಪ್ರತೀಕವಾಗಿ ಇಸ್ರೇಲ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆ ಆಗಲಿರುವುದು ನಿಜಕ್ಕೂ ಸಂತಸದ ಸಂಗತಿ.

Also Read:

Sponsored

ಕನ್ನಡ ಭಕ್ತರ ಮೇಲೆ ದೌರ್ಜನ್ಯ ಆರೋಪ: ಕೊಟ್ಟಿಯೂರು ದೇವಾಲಯದಲ್ಲಿ ತಾರತಮ್ಯ ವಿವಾದ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online