<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಡಾಲಿ ಧನಂಜಯ್ ಕುಟುಂಬಕ್ಕೆ ಹೊಸ ಅತಿಥಿ! ಗಂಡು ಮಗು ಜನನ

ಡಾಲಿ ಧನಂಜಯ್ ಕುಟುಂಬಕ್ಕೆ ಹೊಸ ಅತಿಥಿ! ಗಂಡು ಮಗು ಜನನ
Summary: Famous actor Dolly Dhananjay and his wife Dhanyata have welcomed a baby boy. "May your love be with you," they shared their happiness with their fans. Fans and film industry dignitaries are showering their best wishes on this sweet news.

belagavi news:

ಸ್ಯಾಂಡಲ್ ವುಡನ್ ಕ್ಯೂಟ್ ಕಪಲ್ ಆಗಿರುವ ನಟ ಧನಂಜಯ್ ಹಾಗೂ ಧನ್ಯತಾ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಈ ಸಂತಸದ ಸುದ್ದಿಯಿಂದ ಕುಟುಂಬದಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿದ್ದು ಅಭಿಮಾನಿಗಳು ಹಾಗೂ ಚಿತ್ರರಂಗದವರು ದಂಪತಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದ ಜನಪ್ರಿಯ ನಟ ಧನಂಜಯ್ ತಂದೆಯಾಗಿರುವ ಸಂತಸದ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೇ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿ ಶೀಘ್ರದಲ್ಲೇ ಪೋಷಕರಾಗಲಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದರು.

ಇಂದು ಅವರು ಗಂಡು ಮಗುವಿನ ಆಗಮನದ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಗುವಿನ ಪುಟ್ಟ ಕೈಗಳನ್ನು ಹಿಡಿದಿರುವ ಫೋಟೋವನ್ನು ಹಂಚಿಕೊಂಡಿರುವ ಧನಂಜಯ್,"ಗಂಡು ಮಗುವನ್ನು ಸ್ವಾಗತಿಸಿದ್ದೇವೆ. ನಿಮ್ಮ ಪ್ರೀತಿ ಆಶೀರ್ವಾದವಿರಲಿ" ಎಂದು ಬರೆದುಕೊಂಡಿದ್ದಾರೆ. ಈ ಸುದ್ದಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದವರು ಶುಭಾಶಯ ಮಹಾಪೂರ ಹರಿಸುತ್ತಿದ್ದಾರೆ.

Sponsored

ಖ್ಯಾತ ನಟ ಧನಂಜಯ್ ಹಾಗೂ ವೈದ್ಯೆ ಧನ್ಯತಾ ಅವರು 2025ರ ಫೆಬ್ರವರಿ 16 ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದರು. ಈ ವರ್ಷದ ಆರಂಭದಲ್ಲೇ ಧನಂಜಯ್ ಅವರು ತಂದೆಯಾಗಿರುತ್ತಿರುವ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು ಎಂದು ವರದಿಯಾಗಿದೆ. ಈ ವೇಳೆಯಲ್ಲಿ ಅವರಿಗೆ ಶುಭಾಶಯ ಗಳ ಮಹಾಪೂರ ಹರಿದುಬಂದಿತ್ತು.

ಇತ್ತೀಚಿಗೆ ದಂಪತಿ ಬೇಬಿ ಬಂಪ ಫೋಟೋಗಳನ್ನು ಹಂಚಿಕೊಂಡು ಶೀಘ್ರದಲ್ಲೇ ಪೋಷಕರಾಗುತ್ತಿರುವುದಾಗಿ ತಿಳಿಸಿದರು. ಇದೀಗ ಅವರು ಗಂಡು ಮಗುವಿನ ಆಗಮನದ ಸಂತಸದ ಸುದ್ದಿಯನ್ನು ಆನ್ಲೈನ್ನಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋಗೆ ಅಭಿಮಾನಿಗಳು ಭಾರಿ ಪ್ರೀತಿ ತೋರಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಕಮೆಂಟ್ ವಿಭಾಗದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿಸುತ್ತಿದ್ದಾರೆ. ನಟಿ ಮೇಘನಾ ರಾಜ್ "ಅಭಿನಂದನೆಗಳು"ಎಂದು ಶುಭಾಶಯ ತಿಳಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯ ಉರುಡುಗ "ನಿಮ್ಮಿಬ್ಬರಿಗೂ ಅಭಿನಂದನೆಗಳು. ಜೂನಿಯರ್ ಡಿ ಗೆ ನನ್ನ ಪ್ರೀತಿ"ಎಂದು ಹೇಳಿದ್ದಾರೆ. ಕಾಂತಾರ ಖ್ಯಾತಿಯ ಸಪ್ತಮಿ ಗೌಡ "ಓ ಮೈ ಗಾಡ್, ಬೇಬಿ ಡಿ .ಡಿ"ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ನಟಿ ಅಮೂಲ್ಯ ಕೂಡ " ಕಂಗ್ರಾಜುಲೇಷನ್ಸ್ ಎಂದು ಶುಭ ಹಾರೈಸಿದ್ದಾರೆ.

ಅಭಿನಂದನೆಗಳು ಧನು ಮತ್ತು ಧಾನ್ಯ! ಪುಟ್ಟದನುವಿಗೆ ನನ್ನ ಅಪ್ಪುಗೆಗಳು'ಎಂದು ಕೆಎಂ ಚೈತನ್ಯ ಬರೆದುಕೊಂಡಿದ್ದರೆ, ರೀಷ್ಮಾ ನಾಣಯ್ಯ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಹೀಗೆ ಅನೇಕ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

Sponsored

ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಹೊಂದಿರುವ ನಟ ಧನಂಜಯ್ ಅವರಿಗೆ ಮದುವೆ ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಬಹಳ ದಿನಗಳಿಂದ ಕೇಳಿ ಬರುತ್ತಿತ್ತು. ಸಮಯ ಕೂಡಿ ಬಂದಾಗ ಮನಸ್ಸಿಗೆ ಇಷ್ಟವಾದ ಸಂಗಾತಿ ಸಿಕ್ಕಾಗ ಮದುವೆ ಆಗುತ್ತೇನೆ ಎಂದು ಧನಂಜಯ್ ಹೇಳುತ್ತಲ್ಲೆ ಬಂದಿದ್ದರು.

ಅಂತಿಮವಾಗಿ 2024ರ ನವೆಂಬರ್ 1ರಂದು ಅವರು ತಮ್ಮ ಬಾಳ ಸಂಗಾತಿಯಾಗಲಿರುವ ಧನ್ಯತಾ ಅವರನ್ನು ಪರಿಚಯಿಸಿದ್ದರು. ಸುಂದರ ಪ್ರೀವಿಡ್ಡಿಂಗ್ ವಿಡಿಯೋ ಹಂಚಿಕೊಂಡು ವೈದ್ಯೆ ಯಾಗಿರುವ ಧನ್ಯತಾ ಕೈ ಹಿಡಿಯುವುದಾಗಿ ಅಧಿಕೃತವಾಗಿ ಘೋಷಿಸಿದ್ದರು.

ನಂತರ 2025ರ ಫೆಬ್ರುವರಿ 16 ಭಾನುವಾರ ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ಈ ಭವ್ಯ ವಿವಾಹ ಸಮಾರಂಭಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗಿದರು.

ಇನ್ನು ಡಾಲಿ ಧನಂಜಯ್ ಸಿನಿಮಾ ವಿಚಾರ ಗಮನಿಸೋದಾದ್ರೆ, ಇತ್ತೀಚಿಗಷ್ಟೇ 'ಮದರ್ ಪ್ರಾಮಿಸ್: ಫಾದರ್ ಆಫ್ ಆಲ್ ಪ್ರಾಮಿಸಸ್'ಘೋಷಣೆಯಾಗಿದೆ. ಉಳಿದಂತೆ 'ಹೆಗ್ಗಣ ಮುದ್ದು','ಉತ್ತರಕಾಂಡ','666 ಆಪರೇಷನ್ ಡ್ರೀಮ್ ಥಿಯೇಟರ್',' ಜಿಂಗೊ'ಸೇರಿ ಹಲವು ಪ್ರಾಜೆಕ್ಟ್ ನಟನ ಕೈಯಲ್ಲಿದ್ದು ಬಿಡುಗಡೆಗೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Sponsored

Also Read:

ಬೆಂಗಳೂರು ಅಭಿವೃದ್ಧಿಗೆ ಡಿಕೆಶಿ ಮಾಸ್ಟರ್ ಪ್ಲಾನ್!

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online