<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಬೆಂಗಳೂರು ಅಭಿವೃದ್ಧಿಗೆ ಡಿಕೆಶಿ ಮಾಸ್ಟರ್ ಪ್ಲಾನ್!

ಬೆಂಗಳೂರು ಅಭಿವೃದ್ಧಿಗೆ ಡಿಕೆಶಿ ಮಾಸ್ಟರ್ ಪ್ಲಾನ್!
Summary: Deputy Chief Minister DK Shivakumar (DKS) has said that the construction of double-decker roads, multi-level parking buildings and flyovers will give a significant boost to the "Brand Bengaluru" concept.

belagavi news:

ಬೆಂಗಳೂರು: ನಗರದ ಹೃದಯ ಭಾಗವಾದ ಕೆ. ಆರ್. ಮಾರುಕಟ್ಟೆಯಲ್ಲಿ ನಿರ್ಮಿಸಲಾದ ನೆಲಮಹಡಿ ವಾಹನ ನಿಲುಗಡೆ ಸಂಕೀರ್ಣವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಲೋಕಪಣ್ಣಿಗೊಳಿಸಿದರು. ಈ ಯೋಜನೆ ನಗರದಲ್ಲಿನ ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಕೈಗೊಳ್ಳಲಾಗಿದೆ.

ಬೆಂಗಳೂರು ಅಭಿವೃದ್ಧಿಯತ್ತ ಮತ್ತೊಂದು ಹೆಜ್ಜೆ

ಡಬಲ್ ಡೆಕ್ಕರ್ ರಸ್ತೆಗಳು, ಪಾರ್ಕಿಂಗ್ ಕಟ್ಟಡಗಳು, ಮೇಲ್ಸೇತುವೆಗಳು ಮತ್ತು ಅಂಡರ್ ಪಾಸ್ ಗಳು ಸೇರಿ "ಬ್ರ್ಯಾಂಡ್ ಬೆಂಗಳೂರು"ನಿರ್ಮಾಣಕ್ಕೆ ಬಲ ತುಂಬಲಿವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

Sponsored

ಇಂದು ಎಂ.ಜಿ ರಸ್ತೆಯಲ್ಲಿ ಮೆಟ್ರೋ ಕಂಬಗಳಿಗೆ ಡೈನಾಮಿಕ್ ಲೈಟಿಂಗ್ ವ್ಯವಸ್ಥೆ ಕೆ ಆರ್ ಮಾರುಕಟ್ಟೆಯಲ್ಲಿ ವಾಹನ ನಿಲುಗಡೆ ಸಂಕೀರ್ಣದ ಕಾರ್ಯಾಚರಣೆ ಹಾಗೂ ಬನಶಂಕರಿ ಬಸ್ ನಿಲ್ದಾಣದ ಜಂಕ್ಷನ್ ನಲ್ಲಿ ಸ್ಕೈ ವಾಕ್ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.

ಈ ವೇಳೆ ಮಾತನಾಡಿದವರು ಕೆ ಆರ್ ಮಾರುಕಟ್ಟೆಯಲ್ಲಿ ನೂತನ ಪಾರ್ಕಿಂಗ್ ಕಟ್ಟಡ ಲೋಕಾರ್ಪಣೆ ಮಾಡಿದ್ದು,

ಇದರ ನಿರ್ವಹಣೆಯನ್ನು ಖಾಸಗಿ ಯವರಿಗೆ ನೀಡಲಾಗಿದೆ. ವಾಹನ ನಿಲುಗಡೆಗೆ ಹೆಚ್ಚು ಶುಲ್ಕ ವಿಧಿಸಿಲ್ಲ. ತುತ್ತ ಮುತ್ತ 1 ಕಿಲೋಮೀಟರ್ ಯಾರು ವಾಹನ ನಿಲ್ಲಿಸಬಾರದು ಎಂದು ಪೊಲೀಸರು ತಿಳಿಸಬೇಕು. ಅಂಗಡಿ ಮಾಲೀಕರು ವಾಹನಗಳನ್ನು ಅಲ್ಲಿಯೇ ನಿಲ್ಲಿಸಬೇಕು. ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್ ಮಾಡಲಾಗುವುದು ಎಂದು ತಿಳಿಸಿದರು.

ಪಾರ್ಕಿಂಗ್ ಕಟ್ಟಡಗಳು ಖಾಸಗಿ ಅವರಿಗೆ ಉತ್ತೇಜನ: ಪಾರ್ಕಿಂಗ್ ಕಟ್ಟಡಗಳನ್ನು ಖಾಸಗಿಯವರಿಗೆ ದಿಸೆಯಲ್ಲಿ ಹೊಸ ನಿಯಮವನ್ನು ರೂಪಿಸಲಾಗುತ್ತಿದೆ. ಸಂಚಾರದಟ್ಟಣೆ ಇರುವ ಪ್ರದೇಶಗಳಲ್ಲಿ ರಸ್ತೆ ಬದಿ ವಾಹನ ನಿಲುಗಡೆಗೆ ಅವಕಾಶ ನೀಡುವುದಿಲ್ಲ. ಜನರಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಪಾರ್ಕಿಂಗ್ ಕಟ್ಟಡಗಳನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು.. ಸರ್ಕಾರದ ಪಾರ್ಕಿಂಗ್ ವ್ಯವಸ್ಥೆಯ ಜೊತೆಗೆ ಖಾಸಗಿ ಪಾರ್ಕಿಂಗ್ ವ್ಯವಸ್ಥೆಗಳಿಗೂ ಉತ್ತೇಜನ ನೀಡಲಾಗುತ್ತದೆ.

Sponsored

ಸಣ್ಣ ಜಾಗದಲ್ಲೇ ಹೆಚ್ಚು ವಾಹನಗಳನ್ನು ನಿಲ್ಲಿಸಲು ಸಾಧ್ಯವಾಗುವ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲು ಖಾಸ್ಕಿ ಅವರನ್ನು ಪ್ರೋತ್ಸಾಹಿಸುವ ಯೋಜನೆ ಇದೆ. ಉದಾಹರಣೆಗೆ, 10/12 ಅಳತೆಯ ಜಾಗದಲ್ಲಿ 20 ವಾಹನಗಳನ್ನು ನಿಲ್ಲಿಸುವ ತಂತ್ರಜ್ಞಾನಗಳ ಬಗ್ಗೆ ಗಮನ ಹರಿಸಲಾಗಿದೆ.

ಕೆ. ಆರ್ .ಮಾರ್ಕೆಟ್ ನಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ಸರಿಯಾಗಿ ಬಳಸಲಾಗುತ್ತಿರಲಿಲ್ಲ ಹೂವಿನ ವ್ಯಾಪಾರಿಗಳನ್ನು ಸೇರಿಸಿ ಅನೇಕರು ಆ ಕಟ್ಟಡಗಳಿಗೆ ಸ್ಥಳಾಂತರವಾಗಿರಲಿಲ್ಲ. ಈಗ ದುರಸ್ತಿ ಮತ್ತು ಯೋಜಿತ ಕ್ರಮಗಳ ಮೂಲಕ ಅವರನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗಿದೆ. ವ್ಯಾಪಾರಿಗಳು ಬಳಕೆ ಮಾಡದಿದ್ದರೆ ಬಾಡಿಗೆಗೆ ನೀಡುವುದು ಅಥವಾ ಸರ್ಕಾರಿ ಕಚೇರಿಗಳನ್ನು ತೆರೆಯುವುದು ಎಂಬ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ.

ನಗರದಲ್ಲಿ ಸುಮಾರು 44 ಕಿಲೋಮೀಟರ್ ಉದ್ದದ ಡಬಲ್ ಡೆಕ್ಕರ್ ಮಾರ್ಗ ನಿರ್ಮಾಣ ಮಾಡುವ ಆಲೋಚನೆ ಕೈಗೊಳ್ಳಲಾಗಿದೆ. ಈ ಕುರಿತು ಮುಂಚಿತವಾಗಿ ಯೋಚಿಸಿದ್ದರೆ, 336 ಕಿ.ಮೀ ಉದ್ದದ ಮೆಟ್ರೋ ಯೋಜನೆಯಲ್ಲಿ ಕನಿಷ್ಠ 200 ಕಿ.ಮೀ ಬಾಗವನ್ನು ಡಬಲ್ ಡೆಕ್ಕರ್ ರೂಪದಲ್ಲಿ ನಿರ್ಮಿಸಲು ಸಾಧ್ಯವಾಗುತ್ತಿತ್ತು.

ಆದಾಗ್ಯೂ ಈಗಳು ತಡವಾಗಿಲ್ಲ. ಎಲ್ಲಾ ಶಾಸಕರು ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಂಗಳೂರಿನ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಲಾಗುವುದು ನಗರದ ಜನರ ನಿರೀಕ್ಷೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುತ್ತಿದೆ. ಅಭಿವೃದ್ಧಿ ಎನ್ನುವುದು ಒಂದೇ ರಾತ್ರಿ ನಡೆಯುವ ಕೆಲಸವಲ್ಲ ಇದಕ್ಕೆ ಸಮಯ ಅಗತ್ಯವಿದೆ ಎಂದು ಹೇಳಿದರು.

Sponsored

ಎಂ ಜಿ ರಸ್ತೆಯಲ್ಲಿ ಹೊಸ ಮಾದರಿಯಲ್ಲಿ ಡೈನಮಿಕ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ.

ನಗರದಾದ್ಯಂತ ಬೀದಿ ದೀಪಗಳ ಬೆಳಕು ಹೆಚ್ಚಿಸುವ ಕಾರ್ಯವನ್ನು ಮುಂದುವರಿಸಲಾಗುವುದು. ಜಿ ಬಿ ಎ ಹಾಗೂ ಬಿ ಎಂ ಆರ್ ಸಿ ಎಲ್ ವತಿಯಿಂದ ಈ ಕಾರ್ಯಗಳನ್ನು ಸಂಯೋಜಿತವಾಗಿ ಕೈಗೊಳ್ಳಲಾಗುತ್ತದೆ. ಗಾಂಧಿ ಬಜಾರ್ ಹಾಗೂ ಕೆ. ಆರ್ ಮಾರ್ಕೆಟ್ ಪ್ರದೇಶಗಳನ್ನು ಸ್ವಚ್ಛವಾಗಿ ಕಾಯ್ದುಕೊಳ್ಳಲು ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಇಲ್ಲಿ ವಾಹನ ನಿಲ್ದಾಣಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಪಿಇಎಸ್ ಕಾಲೇಜ್ ಬಳಿಯ ಮೇಲ್ಸೆ ತುವೆಯನ್ನು ಈಗಾಗಲೇ ಲೋಕಾಪನೆ ಮಾಡಲಾಗಿದೆ.

ಎಲಿವೇಟೆಡ್ ಕಾರಿಡಾರ್ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಸುಮಾರು 128 ಕಿಲೋಮೀಟರ್ ಉದ್ದದ ಮೇಲ್ಸೇತುವೆಗಳು ಹಾಗೂ ಅಂಡರ್ ಪಾಸ್ಗಳನ್ನು ನಿರ್ಮಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ.

ಹಿಂದಿನ ಕಾಲದಲ್ಲಿ ರಾಮಲಿಂಗಾ ರೆಡ್ಡಿ ಅವರು ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾರೆ ಆರು ಕಿಲೋಮೀಟರ್ ಉದ್ದದ ಡಬಲ್ ಡೆಕ್ಕರ್ ಕುರಿತು ಆಲೋಚನೆ ಮಾಡಿದರು. ತಾವು ನಾಗ್ಪುರ, ಚೆನ್ನೈ ಸೇರಿದಂತೆ ವಿವಿಧ ನಗರಗಳ ಡಬಲ್ ಡೆಕ್ಕರ್ ಯೋಜನೆಗಳನ್ನು ಅಧ್ಯಯನ ಮಾಡಿದ್ದಾಗಿ ಮತ್ತು ಈ ಕುರಿತು ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾಗಿ ಅವರು ತಿಳಿಸಿದ್ದಾರೆ.

Sponsored

ಬನಶಂಕರಿ ಜಂಕ್ಷನ್ ನಲ್ಲಿ ಸ್ಕೈ ವಾಕ್ ನಿರ್ಮಾಣದ ಕುರಿತು ಈ ಹಿಂದೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಪ್ರಸ್ತಾವನೆ ನೀಡಿದ್ದರು. ಈ ವಿಷಯವು ಕ್ಯಾಬಿನೆಟ್ ಸಭೆಯಲ್ಲೂ ಚರ್ಚೆಗೆ ಬಂದಿದೆ. ಸರ್ಕಲ್ ಪ್ರದೇಶವನ್ನು ಹೊರತುಪಡಿಸಿ ಮೇಲ್ಸೇತುವೆ ನಿರ್ಮಾಣದ ಬಗ್ಗೆ ರಾಮಲಿಂಗಾರೆಡ್ಡಿ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಭವಿಷ್ಯದಲ್ಲಿ ಇದು ಕನಕಪುರ ಮಾರ್ಗದ ಪ್ರಮುಖ ಜಂಕ್ಷನ್ ಆಗಲಿದ್ದು ಹೆಚ್ಚಿನ ಸಂಚಾರದ ಒತ್ತಡ ನಿರೀಕ್ಷಿಸಲಾಗಿದೆ ಈ ಪ್ರದೇಶದಲ್ಲಿ ದಿನನಿತ್ಯ ಸುಮಾರು 30 ರಿಂದ 40,000 ಜನರ ಓಡಾಟ ಇರುವುದಾಗಿ ಅಂದಾಜಿಸಲಾಗಿದೆ. ಆದರಿಂದ ಮುಂದಿನ ದಿನಗಳಲ್ಲಿ ಸಂಚಾರದಟ್ಟನೆ ಉಂಟಾಗದಂತೆ ಯೋಜನೆ ರೂಪಿಸಲಾಗುತ್ತಿದೆ.

ಅದೇ ಜಂಕ್ಷನ್ ಬಳಿ ದಕ್ಷಿಣ ಪಾಲಿಕೆ ಕಚೇರಿ ಸ್ಥಾಪಿಸುವ ಕುರಿತು ಸಹ ಪ್ರಸ್ತಾವನೆ ಇದೆ ಎಂದು ತಿಳಿಸಿದ್ದಾರೆ. ಬನಶಂಕರಿ ವೃತ್ತಿಯು ಪ್ರಮುಖ ಸಂಚಾರ ಕೇಂದ್ರವಾಗಿದ್ದು ಇಲ್ಲಿ ಬಸ್ ನಿಲ್ದಾಣ ಸೇರಿದಂತೆ ಹಲವು ಪ್ರಮುಖ ಸಂಪರ್ಕಗಳಿವೆ ಸುರಕ್ಷತೆಗಾಗಿ ಅಂತರಾಷ್ಟ್ರೀಯ ಮಾನದಂಡಗಳಲ್ಲಿ ಸ್ಕೈ ವಾಕ್ ಗೆ ಈಗಾಗಲೇ ಅಡಿಪಾಯ ಹಾಕಲಾಗಿದೆ. ಇದನ್ನು ಇನ್ನಷ್ಟು ವಿತರಿಸುವ ಕುರಿತು ಆಲೋಚನೆ ನಡೆಯುತ್ತಿದೆ. ಈ ಯೋಜನೆಯ ತಾಂತ್ರಿಕ ಸಾಧತೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು ಅಷ್ಟೇ ಸಂಖ್ಯೆ ವಾಹನಗಳಿವೆ. ಪರಿಹಾರದ ಮತ್ತ ಹೆಚ್ಚಳವಾಗಿರುವ ಕಾರಣಕ್ಕೆ ಕಟ್ಟಡಗಳನ್ನು ನೆಲಸಮ ಮಾಡದೆ ಬೇರೆ ಪರಿಹಾರ ಮಾಡಬೇಕು ಎಂದು ಮೇಲ್ಸೇಸೇತುವೆಗಳ ನಿರ್ಮಾಣ ಮಾಡಲಾಗುತ್ತಿದೆ. ನಾಯಂಡಹಳ್ಳಿ ವಿಜಯನಗರ ಬಳಿ ನೈಸ್ ರಸ್ತೆ ಪ್ರವೇಶ ಕಲ್ಪಿಸಲಾಗಿದೆ.1.5 ಕಿಲೋಮೀಟರ್ ಉದ್ದವಿದ್ದು ಇದರಿಂದ ಜನರ ಸಮಯ ಉಳಿತಾಯವಾಗಲಿದೆ ಎಂದರು.

Also Read:

Sponsored

ಈ ರಾಶಿಗೆ ಮೇ ತಿಂಗಳಲ್ಲಿ ಅದೃಷ್ಟದ ಜೊತೆಗೆ ಶನಿ ಪ್ರಭಾವ ತಪ್ಪದು

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online