<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತ ಸಾಗರ: ಒಂದೇ ದಿನ 50 ಸಾವಿರಕ್ಕೂ ಹೆಚ್ಚು ಭಕ್ತರಿಂದ ದರ್ಶನ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತ ಸಾಗರ: ಒಂದೇ ದಿನ 50 ಸಾವಿರಕ್ಕೂ ಹೆಚ್ಚು ಭಕ್ತರಿಂದ ದರ್ಶನ
Summary: A huge ocean of devotees has flowed into the Kukke Subramanya temple. More than 50 thousand devotees have had darshan of Sri Subramanya Swamy in a single day. Thousands of devotees participated in various services including special puja, sarpa sanskar, ashlesha bali. There was a huge crowd at the temple and special arrangements have been made for the convenience of the devotees. Read complete information on Kukke Subramanya, devotees' darshan, temple news, Karnataka news and today's latest updates here.

Belagavi News:

ಕುಕ್ಕೆ ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ನಾಗಾರಾಧನೆಯ ಸುಪ್ರಸಿದ್ಧ ಕ್ಷೇತ್ರ ದಕ್ಷೀಣ ಭಾರತದ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಾನುವಾರ 50,000 ಗಿಂತಲೂ ಹೆಚ್ಚು ಭಕ್ತರು ಆಗಮಿಸಿ, ದರ್ಶನ ಪಡೆದರು.

ಶುಕ್ರವಾರ ಮೊಹರಂ, ಶನಿವಾರ ನಾಲ್ಕನೇ ಶನಿವಾರ ಹಾಗೂ ಭಾನುವಾರವು ರಜೆ ಹಿನ್ನೆಲೆ ಸರಕಾರಿ ಕಚೇರಿಗಳು, ಇನ್ನಿತರ ಸಂಘಗಳ ಸಂಸ್ಥೆಗಳ ನೌಕರರಿಗೆ ಸರಣಿ ರಜೆ ಲಭ್ಯವಾಗಿತ್ತು. ಇದರಿಂದ ರಾಜ್ಯದ ವಿವಿಧ ಪುಣ್ಯಕ್ಷೇತ್ರಗಳ ದರ್ಶನ ಹಾಗೂ ಸೇವೆ ಮಾಡುತ್ತಾ ಶುಕ್ರವಾರದಿಂದಲೇ ಕುಕ್ಕೆಗೆ ಅಧಿಕ ಸಂಖ್ಯೆಯಲ್ಲಿ ಭಕ್ತರ ಆಗಮನವಾಗಿತ್ತು.

ಶುಕ್ರವಾರ ಹಾಗೂ ಶನಿವಾರದಿಂದಲೇ ದೇವಳದ ಎಲ್ಲಾ ವಸತಿ ಗೃಹಗಳು ತುಂಬಿದ್ದು , ಹಾಸಿಗೆ ಹೊಸ ಟಿವಿ ಗ್ರಹಗಳಲ್ಲಿ ಕೊಡಭಕ್ತರು ಕಾದರಿಸಿದರು. ರಾತ್ರಿ ವಾಸ್ತವ್ಯಕ್ಕಾಗಿ ಕೊಠಡಿಗಳು ಭರ್ತಿಯಾಗಿ ಅದೆಷ್ಟೋ ಭಕ್ತರು ತಂಗುವಿಕೆಗಾಗಿ ಕೊಠಡಿ ಇಲ್ಲದೆ ಶ್ರೀದೇವಳದ ರಥ ಬೀದಿ ಸಭಾಂಗಣದಲ್ಲಿ ಹಾಗೂ ಶ್ರೀದೇವರದ ಛತ್ರಗಳಲ್ಲಿ ಆಶ್ರಯವನ್ನು ಪಡೆದಿದ್ದು ಕಂಡು ಬಂದಿದೆ.

Sponsored

ಇತ್ತ ಶ್ರೀ ದೇವಳದ ಸುತ್ತಮುತ್ತ ಹಾಗೂ ಅಧಿಸುಬ್ರಹ್ಮಣ್ಯ ಸುತ್ತಮುತ್ತ ಇರುವ ಪಾರ್ಕಿಂಗ್ ಪ್ರದೇಶಗಳೆಲ್ಲವೂ ವಾಹನಗಳಿಂದ ಭರ್ತಿಯಾಗಿದ್ದು, ಮಾರ್ಗದ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವ ದೃಶ್ಯ ಕಂಡುಬಂದಿದೆ. ಶನಿವಾರ ಹಾಗೂ ಭಾನುವಾರ ಮುಂಜಾನೆಯಿಂದಲೇ ಕುಮಾರಧಾನ ಸ್ನಾನಗಟ್ಟದಲ್ಲಿ ಭಕ್ತರು ತೀರ್ಥ ಸ್ನಾನ ಮಾಡಿ ದೇವಳದ ಹೋರಾಂಗಣದಿಂದಲೇ ಸರತಿ ಸಾಲಿನಲ್ಲಿ ಬಂದು ಶ್ರೀ ದೇವರ ದರ್ಶನ ಮಾಡಿದ್ದರು. ತದನಂತರ ತೀರ್ಥ ಪ್ರಸಾದ ಸ್ವೀಕರಿಸಿದರು.

ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರಾಂತ್ಯದ ಹಿನ್ನೆಲೆಯಲ್ಲಿ ಭಕ್ತರ ಮಹಾಪ್ರವಾಹ ಕಂಡು ಬಂದಿದೆ. ಶನಿವಾರ ಹಾಗೂ ಭಾನುವಾರ ಮುಂಜಾನೆಯಿಂದಲೇ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದು. ಒಂದು ದಿನ 50 ಸಾವಿರಕ್ಕೂ ಹೆಚ್ಚು ಭಕ್ತರು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಭಕ್ತರ ಅನುಕೂಲಕ್ಕಾಗಿ ದೇವಸ್ಥಾನ ಆಡಳಿತದಿಂದ ನಿರಂತರ ಅನ್ನದಾನ ಸೇವೆ ಯಶಸ್ವಿಯಾಗಿ ಆಯೋಜಿಸಲಾಯಿತು. ಬೆಳಗ್ಗೆ 8ಗಂಟೆಯಿಂದ 10ಗಂಟೆಯವರೆಗೆ ಉಪಹಾರ ವಿತರಣೆ ನಡೆದಿದ್ದು. ಬಳಿಕ ಬೆಳಗ್ಗೆ 10:30ರಿಂದ ಸಂಜೆ 4ಗಂಟೆಯವರೆಗೆ ನಿರಂತರ ಅನ್ನದಾನ ಜರುಗಿತ್ತು. ಅನ್ನದಾನದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಸಾಂಬಾರ್, ಚಟ್ನಿ, ಪಲ್ಯ, ಪಾಯಸ ಹಾಗೂ ಮಜ್ಜಿಗೆ ಸೇರಿದಂತೆ ಸಾಂಪ್ರದಾಯಿಕ ಪ್ರಸಾದ ಭೋಜನವನ್ನು ವಿತರಿಸಲಾಯಿತು.

ಭಕ್ತರ ಸುಗಮ ದರ್ಶನಕ್ಕಾಗಿ ಶ್ರೀದೇವಳದ ಅಧಿಕಾರಿಗಳು, ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸ್ ಇಲಾಖೆ ವಿಶೇಷ ವ್ಯವಸ್ಥೆ ಕೈಗೊಂಡಿದ್ದರು. ದೇವಸ್ಥಾನದ ಆವರಣ, ಅನ್ನದಾನ ಕೇಂದ್ರ ಹಾಗೂ ವಾಹನ ನಿಲುಗಡೆ ಪ್ರದೇಶಗಳಲ್ಲಿ ಶಿಸ್ತುಬದ್ಧ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾವುದೇ ತೊಂದರೆ ಆಗದಂತೆ ಭಕ್ತರಿಗೆ ನೆರವು ನೀಡಲಾಯಿತು.

Sponsored

ಪ್ರತಿನಿತ್ಯ ಲಕ್ಷಾಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕರ್ನಾಟಕದ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳು ಅತ್ಯಧಿಕ ಆದಾಯ ಗಳಿಸುವ ದೇವಾಲಯವಾಗಿ ತನ್ನ ಸ್ಥಾನವನ್ನು ಮತ್ತೊಮ್ಮೆ ಉಳಿಸಿಕೊಂಡಿದೆ. 2025-26ನೇ ಆರ್ಥಿಕ ವರ್ಷದಲ್ಲಿ ದೇವಸ್ಥಾನವು ದಾಖಲೆಯ 167.89 ಕೋಟಿ ರೂ. ಆದಾಯ ಗಳಿಸಿದ್ದು. ಸತತ 15ನೇ ವರ್ಷವೂ ರಾಜ್ಯದ ಅತಿ ಹೆಚ್ಚು ಆದಾಯ ಗಳಿಸಿದ ಮುಜರಾಯಿ ದೇವಸ್ಥಾನ ಎಂಬ ಹೆಗ್ಗಡಿಕೆಯನ್ನು ಕಾಯ್ದುಕೊಂಡಿದೆ.

Also Read:

ಬಾಂಗ್ಲಾದೇಶ ರಾಜಕೀಯದಲ್ಲಿ ಸಂಚಲನ : ದೇಶಕ್ಕೆ ಮರಳುವೆ ಎಂದ ಶೇಖ್ ಹಸೀನಾ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online