<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಫುಟ್ಬಾಲ್ ಲೋಕಕ್ಕೆ ಬಾವುಕ ಕ್ಷಣ!ಪೋರ್ಚುಗಲ್ ಸೋಲು,ಕಣ್ಣೀರಿನ ವಿದಾಯ ಹೇಳಿದ ರೊನಾಲ್ಡೊ

ಫುಟ್ಬಾಲ್ ಲೋಕಕ್ಕೆ ಬಾವುಕ ಕ್ಷಣ!ಪೋರ್ಚುಗಲ್ ಸೋಲು,ಕಣ್ಣೀರಿನ ವಿದಾಯ ಹೇಳಿದ ರೊನಾಲ್ಡೊ
Summary: Portugal's team has been eliminated from the tournament after losing the decisive match against Spain. With this, football legend Cristiano Ronaldo's big dream of winning the FIFA World Cup has been shattered once again.

BELAGAVI NEWS :

ಪೋರ್ಚುಗಲ್ ಟ್ರೋಫಿ ಕನಸು ಅಂತ್ಯ :ಕಣ್ಣೀರಿನೊಂದಿಗೆ ರೊನಾಲ್ಡೊ ವಿಶ್ವಕಪ್ ಗೆ ವಿದಾಯ

ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಫಾ ವಿಶ್ವಕಪ್ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಡಲ್ಲಾಸ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ನ 16 ರ ಘಟ್ಟದ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಪೋರ್ಚುಗಲ್ 1-0 ಅಂತರದ ಸೋಲು ಅನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದೆ.

ಈ ಗೆಲುವಿನೊಂದಿಗೆ ತಂಡ ವಾಟರ್ ಫೈನಲ್ ಹಂತಕ್ಕೆ ಮುನ್ನಡೆದರೆ,ಪೋರ್ಚುಗಲ್ ನ ವಿಶ್ವಕಪ್ ಪಯಣ ಅಂತ್ಯಗೊಂಡಿದೆ.ಪಂದ್ಯದ ಬಳಿಕ ಕ್ರಿಸ್ಟಿಯಾನೊ ರೊನಾಲ್ಡೊ ಬಾವುಕರಾಗಿ ಕಣ್ಣೀರಿನೊಂದಿಗೆ ವಿಶ್ವಕಪ್ ಗೆ ವಿದಾಯ ಹೇಳಿದ ಕ್ಷಣಗಳು ಅಭಿಮಾನಿಗಳ ಗಮನ ಸೆಳೆದವು.

Sponsored

ಮೈಕಲ್ ಮೆರಿನೊ ಗೋಲಿನಿಂದ ಸ್ಪೇನ್ ಆಟಗಾರ ಮೈಕಲ್ ಮೆರಿನೊ ದಾಖಲಿಸಿದರು. 90 + 1 ನೇನಿಮಿಷದಲ್ಲಿ ಗಾಯದ ಸಮಯದಲ್ಲಿ ಬಂದ ಈ ಗೋಲು ಪಂದ್ಯದಲ್ಲಿ ಫಲಿತಾಂಶವನ್ನೇ ಬದಲಿಸಿತು.

ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಮೆರಿನೊ, ಫೆರಿನಾ ಟೊರೆಸ್ ನೀಡಿದ ಪಾಸ್ ಅನ್ನು ಸಮರ್ಥವಾಗಿ ಬಳಸಿಕೊಂಡು ಪೋರ್ಚುಗಲ್ ಗೋಲ್ ಕೀಪರ್ ಡಿಯಾಗೋ ಕೋಸ್ಟಾ ಅವರ ಬಲಾ ಭಾಗದಿಂದ ಚಂಡನ್ನು ಗೋಲ್ ಪೋಸ್ಟ್ ಗೆ ಸೇರಿಸಿದರು.

ಕೊನೆಯ ಕ್ಷಣದವರೆಗೂ ಹೋರಾಡಿದ ಪೋರ್ಚುಗಲ್ ಗೆ ಸೋಲು ತಪ್ಪಿಸಲಾಗಲಿಲ್ಲ. ವಿಶ್ವ ಪುಟ್ಬಾಲ್ ನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿರುವ ರೋನಾಲ್ಡೊ ಗೆ ಫಿಫಾ ವಿಶ್ವಕಪ್ ಟ್ರೋಫಿ ಮಾತ್ರ ಅಲಭ್ಯ ಕನಸಾಗಿಯೇ ಉಳಿದಿದೆ .

ಇದರೊಂದಿಗೆ ಸ್ಪೇನ್ ತಂಡ ವಾಟರ್ ಫೈನಲ್ ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಈ ಫಿಫಾ ವಿಶ್ವಕಪ್ ನಲ್ಲಿ ಸ್ಪೇನ್ ವಿರುದ್ಧ ಯಾವುದೇ ತಂಡ ಇದುವರೆಗೂ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಿಲ್ಲ ಎಂಬುದು ಗಮನಾರ್ಹವಾಗಿದೆ.

Sponsored

16 ವರ್ಷಗಳ ಬಳಿಕ ಸ್ಪೆನ್ ವಿಶ್ವಕಪ್ ಕ್ವಾರ್ಟರ್ ಫೈನಲ್ ಗೆ; ರೊನಾಲ್ಡೊ ಗೆ ಕೊನೆಯ ವಿಶ್ವಕಪ್ ಅಂತ್ಯ

ಫಿಫಾ ವಿಶ್ವಕಪ್ ನಲ್ಲಿ ಸ್ಪೇನ್ ತಂಡವು 16 ವರ್ಷಗಳ ಬಳಿಕ ಮತ್ತೆ ಕ್ವಾಟರ್ ಫೈನಲ್ ಪ್ರವೇಶಿಸಿದೆ. 2010ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಸ್ಪೇನ್, ಬಳಿಕ ನಡೆದ ಮೂರು ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಹಂತ ತಲುಪಲು ವಿಫಲವಾಯಿತು. ಇದೀಗ ದೀರ್ಘ ವಿರಾಮದ ನಂತರ ಸ್ಪೇನ್ ಮತ್ತೊಮ್ಮೆ ಪ್ರಶಸ್ತಿ ಹೋರಾಟದ ಮುಂದಿನ ಹಂತಕ್ಕೆ ತಲುಪಿದೆ.

ಪೋರ್ಚುಗಲ್ ವಿರುದ್ಧದ 16ರ ಘಟ್ಟದ ಪಂದ್ಯದಲ್ಲಿ 1-0 ಅಂತರದ ಗೋಲು ಸಾಧಿಸಿದ ಸ್ಪೇನ್, ಕ್ವಾರ್ಟರ್ ಫೈನಲ್ ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ. ಮುಂದಿನ ಪಂದ್ಯದಲ್ಲಿ ಸ್ಪೇನ್ ತಂಡವು ಶುಕ್ರವಾರ ಕ್ಯಾಲಿಫೋರ್ನಿಯಾದ ಇಂಗಲ್ ವುಡ್ ನಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

ರೊನಾಲ್ಡೊಗೆ ಕೊನೆಯ ವಿಶ್ವಕಪ್ ಪಯಣ:

Sponsored

ಇದೇ ವೇಳೆ, ಪೋರ್ಚುಗಲ್ ನ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಅವರಿಗೆ ಇದು ಕೊನೆಯ ಫಿಫಾ ವಿಶ್ವಕಪ್ ಟೂರ್ನಿ ಆಗಿದೆ. ತಮ್ಮ ಐದನೇ ವಿಶ್ವಕಪ್ ನಲ್ಲಿ ಆಡಿದ ರೊನಾಲ್ಡೊ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಈ ವಿಶ್ವಕಪ್ ನಲ್ಲಿ ರೊನಾಲ್ಡೊ ಪೋರ್ಚುಗಲ್ ಪರ 5 ಪಂದ್ಯಗಳಲ್ಲಿ ಮೂರು ಗೋಲುಗಳನ್ನು ದಾಖಲಿಸಿದರು. ಅದರಲ್ಲಿ ಎರಡು ಗೋಲುಗಳು ಚೊಚ್ಚಲ ಬಾರಿಗೆ ಟೂರ್ನಿಯಲ್ಲಿ ಭಾಗವಹಿಸಿದ ಉಜ್ಬೇಕಿಸ್ತಾನ್ ವಿರುದ್ಧ ಬಂದರೆ, ಕ್ರೊಯೇಷಿಯಾ ವಿರುದ್ಧದ 32ರ ಘಟ್ಟದ ಪಂದ್ಯದಲ್ಲಿ ಫೆನಾಲಿಟಿ ಮೂಲಕ ಮತ್ತೊಂದು ಗೋಲು ಗಳಿಸಿದರು.

ವಿಶ್ವ ಫುಟ್ಬಾಲ್ ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ರೊನಾಲ್ಡೊಗೆ ವಿಶ್ವಕಪ್ ಟ್ರೋಫಿ ಗೆಲ್ಲುವ ಕನಸು ಈ ಬಾರಿ ಕೂಡ ನನಸಾಗಲಿಲ್ಲ. ಅವರ ಬಾವುಕವಿದಾಯದ ಕ್ಷಣಗಳು ಫುಟ್ಬಾಲ್ ಅಭಿಮಾನಿಗಳಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.

ರೊನಾಲ್ಡೊ ವಿಶ್ವ ಕಪ್ ಗೆ ವಿದಾಯ : ಐದು ವಿಶ್ವಕಪ್ ಗಳಲ್ಲಿ ಗೋಲುಗಳಿಸಿದ ಏಕೈಕ ಆಟಗಾರನ ದಾಖಲೆ

Sponsored

ಸ್ಪೇನ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ್ದ ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ, ಈ ಬಾರಿ ಫಿಫಾ ವಿಶ್ವಕಪ್ ತಮ್ಮ ಪಾಲಿಗೆ ಕೊನೆಯ ಟೂರ್ನಿ ಆಗಲಿದೆ ಎಂದು ಹೇಳಿದ್ದರು.

"ನಾವು ಈ ವಿಶ್ವ ಕಪ್ ನಲ್ಲಿ ಪಂದ್ಯಗಳನ್ನು ಗೆದ್ದು ಆನಂದಿಸಿದ್ದೇವೆ. ಆದರೆ, ಫಲಿತಾಂಶ ಏನೇ ಆಗಿದ್ದರು, ನಿರ್ಮಲ ಮನಸ್ಸಿನಿಂದ ಈ ಟೂರ್ನಿಯಿಂದ ಹಿಂದೆ ಸರಿಯುತ್ತೇನೆ" ಎಂದು ರೊನಾಲ್ಡೊ ಹೇಳಿದ್ದರು.

ಆದರೆ, ವಿಶ್ವಕಪ್ ನಿಂದ ದೂರವಾದರೂ ರೋನಾಲ್ಡೊ ತಕ್ಷಣವೇ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸುವುದಿಲ್ಲ. ತಮ್ಮ ನಿವೃತ್ತಿಯ ಸಮಯದ ಬಗ್ಗೆ ತಮಗೆ ಸ್ಪಷ್ಟತೆ ಇದೆ ಎಂದು ಅವರು ತಿಳಿಸಿದರು.

ಐದು ವಿಶ್ವಕಪ್ ಗಳಲ್ಲಿ ದಾಖಲೆ ಬರೆದ ರುನಾಲ್ಡೊ:

Sponsored

ಕ್ರಿಸ್ಟಿಯಾನೊ ರೋನಾಲ್ಡೊ ಮೊದಲ ಬಾರಿಗೆ 2006ರ ಜರ್ಮನಿ ಫಿಫಾ ವಿಶ್ವಕಪ್ ನಲ್ಲಿ ಪೋರ್ಚುಗಲ್ ಪರ ಕಣಕ್ಕಿಳಿದರು. ಟೂರ್ನಿಯಲ್ಲಿ ಇರಾನ್ ವಿರುದ್ಧ ತಮ್ಮ ಮೊದಲ ವಿಶ್ವಕಪ್ ಗೋಲು ದಾಖಲಿಸಿದರು. ಆ ಮೂಲಕ ಪೋರ್ಚುಗಲ್ ತಂಡ 40 ವರ್ಷಗಳ ಬಳಿಕ ವಿಶ್ವ ಕಪ್ ಸೆಮಿ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದಾದ ಬಳಿಕ ರೊನಾಲ್ಡೊ2019ರ ದಕ್ಷಿಣ ಆಫ್ರಿಕಾ ವಿಶ್ವಕಪ್, 2014ರ ಬ್ರೆಜಿಲ್ ವಿಶ್ವ ಕಪ್, 2018ರ ರಷ್ಯಾ ವಿಶ್ವಕಪ್ ಹಾಗೂ 2022ರ ಕತಾರ್ ವಿಶ್ವಕಪ್ ಗಳಲ್ಲಿ ಭಾಗವಹಿಸಿದ್ದರು.

ತಾವು ಆಡಿದ ಪ್ರತಿ ವಿಶ್ವಕಪ್ ಟೂರ್ನಿಯಲ್ಲೂ ಕನಿಷ್ಠ ಒಂದು ಗೋಲು ಗಳಿಸಿರುವ ರೋನಾಲ್ಡೊ, ಈ ಸಾಧನೆ ಮಾಡಿದ ವಿಶ್ವದ ಏಕೈಕ ಪುರುಷ ಪುಟ್ಬಾಲ್ ಆಟಗಾರ ಎಂಬ ವಿಶೇಷ ದಾಖಲೆಯನ್ನು ಹೊಂದಿದ್ದಾರೆ.

ವಿಶ್ವ ಕಪ್ ಫುಟ್ಬಾಲ್ ನಲ್ಲಿ ಅಸಂಖ್ಯಾತ ದಾಖಲೆಗಳನ್ನು ನಿರ್ಮಿಸಿರುವ ರೊನಾಲ್ಡೊ ಗೆ ಫಿಫಾ ವಿಶ್ವಕಪ್ ಟ್ರೋಫಿ ಮಾತ್ರ ಕೈಗೆಟುಕದ ಕನಸಾಗಿ ಉಳಿದಿದೆ.

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online