H16 News
Logo

By Rakshita | Published on November 19, 2025

Image Not Found
Breaking News / November 19, 2025

ಆಸ್ಟ್ರೇಲಿಯಾದಲ್ಲಿ ಅಪಘಾತ; ಭಾರತೀಯ ಮೂಲದ ಗರ್ಭಿಣಿ ಟೆಕ್ಕಿ

ಪತಿ, ಮೊದಲ ಮಗನೊಂದಿಗೆ ರಸ್ತೆ ದಾಟುವಾಗ ಈ ಅನಾಹುತ ಸಂಭವಿಸಿದ್ದು, ಮೃತಪಟ್ಟ ಮಹಿಳೆಯ ಡೆಲಿವರಿಗೆ ಮುಂದಿನ ವಾರ ದಿನಾಂಕ ನಿಗದಿಯಾಗಿತ್ತು.

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಭಾರತೀಯ ಮೂಲದ ಟೆಕ್ಕಿಯೊಬ್ಬರು 33 ವರ್ಷದ ಸಮನ್ವಿತಾ ಧಾರೇಶ್ವರ್ ಕಳೆದ ಶುಕ್ರವಾರ ರಾತ್ರಿ 8 ಗಂಟೆಯ ನಂತರ ಹಾರ್ನ್ಸ್ಬೈನಲ್ಲಿರುವ ಜಾರ್ಜ್ ಸ್ಟ್ರೀಟ್ನಲ್ಲಿ ತಮ್ಮ ಪತಿ ಮತ್ತು ಮೂರು ವರ್ಷದ ಮಗನೊಂದಿಗೆ ರಸ್ತೆ ದಾಟುತ್ತಿದ್ದಾಗ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಹೊಟ್ಟೆಯಲ್ಲಿದ್ದ ಶಿಶುವಿನೊಂದಿಗೆ ಸಾವನ್ನಪ್ಪಿದ್ದಾರೆ. ಇವರು ರಸ್ತೆ ದಾಟುವಾಗ ಕಿಯಾ ಕಾರು ಅವರಿಗೆ ರಸ್ತೆ ದಾಟಲು ಅವಕಾಶ ನೀಡಿ ನಿಂತಿತ್ತು. ಈ ವೇಳೆ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು, ಕಿಯಾ ಕಾರಿಗೆ ಡಿಕ್ಕಿ ಹೊಡೆದಿತ್ತು. ಬಿಎಂಡಬ್ಲ್ಯೂ ಕಾರು ಡಿಕ್ಕಿ ಹೊಡೆದ ರಭಸಕ್ಕೆ ನಿಂತಿದ್ದ ಕಿಯಾ ಕಾರು ಮಹಿಳೆಗೆ ಡಿಕ್ಕಿಯಾಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿನ 7ನ್ಯೂಸ್.ಕಾಮ್ ಈ ಸುದ್ದಿಯನ್ನು ವರದಿ ಮಾಡಿದೆ. ಗಂಭೀರವಾಗಿ ಗಾಯಗೊಂಡ ಸಮನ್ವಿತಾ ಧಾರೇಶ್ವರಿ ಅವರಿಗೆ ತಕ್ಷಣಕ್ಕೆ ಆರೈಕೆ ನೀಡಿ ತುರ್ತು ಚಿಕಿತ್ಸೆಗೆ ವೆಸ್ಟ್ಮೀಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಧಾರೇಶ್ವರಿಯವರು ಇನ್ನೊಂದು ವಾರದಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಬೇಕಿತ್ತು. ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ನಡೆದ ಭೀಕರ ಅಪಘಾತದಲ್ಲಿ ಭಾರತೀಯ ಮೂಲದ ಎಂಟು ತಿಂಗಳ ಗರ್ಭಿಣಿ ಮತ್ತು ಅವರ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ. ಘಟನೆ ಬಳಿಕ ಪೊಲೀಸರು ಬಿಎಂಡಬ್ಲ್ಯೂ ಕಾರು ಚಾಲನೆ ಮಾಡುತ್ತಿದ್ದ 19ರ ಹದಿಹರೆಯದ ಯುವಕನನ್ನು ಬಂಧಿಸಿದ್ದು, ಈತನನ್ನು ಆ್ಯರಾನೊ ಪಾಪ್ಲಾಗೊ ಎಂದು ಗುರುತಿಸಲಾಗಿದೆ. ಅಪಾಯಕಾರಿ ಚಾಲನೆಯಿಂದ ಸಾವು ಸಂಭವಿಸಿದೆ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಮಹಿಳೆಯ ಸಾವಿಗೆ ಕಾರಣರಾಗಿದ್ದಲ್ಲದೇ ಭ್ರೂಣದ ಹತ್ಯೆಗೂ ಕಾರಣವಾದ ಆರೋಪವನ್ನು ಈತನ ಮೇಲೆ ಹೊರಿಸಲಾಗಿದೆ. ಮ್ಯಾಜಿಸ್ಟ್ರೇಟ್ ರೇ ಪ್ಲಿಬರ್ಸೆಕ್ ಈತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಇದೊಂದು ದುರಂತ ಎಂದು ಹೇಳಿದ್ದಾರೆ. ಈ ಘಟನೆ ಎರಡೂ ಕುಟುಂಬಗಳಿಗೆ ದುಃಖವನ್ನುಂಟು ಮಾಡಿದೆ. ಸಂತ್ರಸ್ತ ಕುಟುಂಬದ ನೋವಿಗೆ ನಾವು ಸ್ಪಂದಿಸುತ್ತೇವೆ ಎಂದು ತಿಳಿಸಿದ್ದಾರೆ. ಧಾರೇಶ್ವರಿಯ ಲಿಂಕ್ಡಿನ್ ಪ್ರೋಫೈಲ್ ಪ್ರಕಾರ ಅವರು ಅಲಸ್ಕೊ ಯೂನಿಫಾರ್ಮ್ಸ್ನಲ್ಲಿ ಐಟಿ ಸಿಸ್ಟಂ ಅನಾಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಾರು ಅಪಘಾತದದಲ್ಲಿ ಬಿಎಂಡಬ್ಲ್ಯೂ ಚಾಲನೆ ಮಾಡುತ್ತಿದ್ದ 19 ವರ್ಷದ ಚಾಲಕ ಹಾಗೂ ಕಿಯಾ ಕಾರು ಚಾಲನೆ ಮಾಡುತ್ತಿದ್ದ 48 ವರ್ಷದ ಚಾಲಕ ಗಾಯಗೊಂಡಿದ್ದು, ಈ ಎರಡೂ ಕಾರಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಇನ್ನಷ್ಟು ಓದಿರಿ : ಶ್ರೀ ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ
Sponsored Ads
image computer academy
image computer academy
image computer academy
image computer academy
LANDSCAPING IN CAD
LANDSCAPING IN CAD
HSRNEWS
HSRNEWS

Related News

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy