ತಂದೆಗೆ ಕಿಡ್ನಿ ಕೊಡೋ ಸಮಯ ಬಂದಾಗ ಮಗ ಓಡಿ ಹೋಗಿದ್ದ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿ ಹೀನಾಯವಾಗಿ ಸೋತ ಬಳಿಕ, ಲಾಲು ಪ್ರಸಾದ್ ಯಾದವ್ ಮನೆಯಲ್ಲಿ ಕುದಿಯುತ್ತಿದ್ದ ಕುಟುಂಬ ಕಲಹ ಬೀದಿಗೆ ಬಂದಿದೆ. ತೇಜಸ್ವಿ ಯಾದವ್ ಮತ್ತು ಅವರ ಆಪ್ತರಿಂದ ಅವಮಾನಕ್ಕೊಳಗಾಗಿರುವುದಾಗಿ ಆರೋಪಿಸಿ ಇತ್ತೀಚೆಗೆ ರಾಜಕೀಯದಿಂದ ಹೊರನಡೆಯುವುದಾಗಿ ಘೋಷಿಸಿದ್ದ ಲಾಲು ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಸಾಮಾಜಿಕ ಮಾಧ್ಯಮದಲ್ಲಿ ಸಂವೇದನಾಶೀಲ ವೀಡಿಯೊವನ್ನು ಹಂಚಿಕೊಂಡಿದ್ದು, ವಿವಾದವನ್ನು ಮತ್ತಷ್ಟು ಹೆಚ್ಚಾಗಿದೆ.
ಪಾಟ್ನಾ:
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿ(RJD) ಹೀನಾಯವಾಗಿ ಸೋತ ಬಳಿಕ, ಲಾಲು ಪ್ರಸಾದ್ ಯಾದವ್ ಮನೆಯಲ್ಲಿ ಕುದಿಯುತ್ತಿದ್ದ ಕುಟುಂಬ ಕಲಹ ಬೀದಿಗೆ ಬಂದಿದೆ. ತೇಜಸ್ವಿ ಯಾದವ್ ಮತ್ತು ಅವರ ಆಪ್ತರಿಂದ ಅವಮಾನಕ್ಕೊಳಗಾಗಿರುವುದಾಗಿ ಆರೋಪಿಸಿ ಇತ್ತೀಚೆಗೆ ರಾಜಕೀಯದಿಂದ ಹೊರನಡೆಯುವುದಾಗಿ ಘೋಷಿಸಿದ್ದ ಲಾಲು ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಸಾಮಾಜಿಕ ಮಾಧ್ಯಮದಲ್ಲಿ ಸಂವೇದನಾಶೀಲ ವೀಡಿಯೊವನ್ನು ಹಂಚಿಕೊಂಡಿದ್ದು, ವಿವಾದವನ್ನು ಮತ್ತಷ್ಟು ಹೆಚ್ಚಾಗಿದೆ.
ಕಿಡ್ನಿ ಕೊಡೋ ಸಮಯ ಬಂದಾಗ ಮಗ ಓಡಿ ಹೋಗಿದ್ದ ಎಂದು ತೇಜಸ್ವಿ ಯಾದವ್ ಬಗ್ಗೆ ರೋಹಿಣಿ ಟೀಕೆ ಮಾಡಿದ್ದಾರೆ. ಹಾಗೆಯೇ ರೋಹಿನಿ ಚುನಾವಣೆಗೂ ಮುನ್ನ ಲಾಲು ನಿವಾಸದಲ್ಲಿ ಹೆಚ್ಚು ದಿನಗಳ ಕಾಲ ಇದ್ದರು, ಚುನಾವಣೆಯಲ್ಲಿ ಅವರು ಸೋಲು ಕಾಣುತ್ತಿದ್ದಂತೆ ಮನೆಯಿಮದ ಹೊರಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ರೋಹಿಣಿ ಅವರು ಪತ್ರಕರ್ತ ಕನ್ಹಯ್ಯಾ ಭೇಲಾರಿ ಅವರೊಂದಿಗಿನ ತಮ್ಮ ಫೋನ್ ಸಂಭಾಷಣೆಯ 5 ನಿಮಿಷ, 44 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ನಾನು ನನ್ನ ಪೋಷಕರ ಮನೆಗೆ ಎಷ್ಟು ಬಾರಿ ಭೇಟಿ ನೀಡುತ್ತೇನೆ ಮತ್ತು ನಾನು ಎಷ್ಟು ಕಾಲ ಅಲ್ಲಿಯೇ ಇರುತ್ತೇನೆ ಎಂಬುದರ ಕುರಿತು ನಿಮ್ಮ ಬಳಿ ಯಾವುದೇ ಡೇಟಾ ಇದೆಯೇ ಎಂದು ತೀಕ್ಷ್ಣವಾಗಿ ಪ್ರಶ್ನಿಸುವುದನ್ನು ಕೇಳಬಹುದು.
ತೇಜಸ್ವಿ ತನ್ನನ್ನು ಮನೆಯಿಂದ ಹೊರಹಾಕಿದ್ದಾರೆ, ನನ್ನ ಮೇಲೆ ಚಪ್ಪಲಿ ಎತ್ತಿದ್ದಾರೆ, ಆಪ್ತರು ನನ್ನದು ಕೊಳಕು ಕಿಡ್ನಿ, ಈ ಕೊಳಕು ಕಿಡ್ನಿಯ ಬದಲಾಗಿ ಚುನಾವಣಾ ಟಿಕೆಟ್ ಪಡೆದಿದ್ದಳು ಎಂದು ಆರೋಪಿಸಿರುವುದಾಗಿ ರೋಹಿಣಿ ಹೇಳಿದ್ದರು.
ತನ್ನ ತಂದೆಗೆ ಮೂತ್ರಪಿಂಡವನ್ನು ದಾನ ಮಾಡುವ ನಿರ್ಧಾರವನ್ನು ಪ್ರಶ್ನಿಸುವವರಿಗೆ ಅವರು ಸವಾಲು ಹಾಕಿದರು, ಅವರು ಸಾರ್ವಜನಿಕ ಚರ್ಚೆಗೆ ಸಿದ್ಧರಾಗಿರಬೇಕು ಎಂದು ಹೇಳಿದ್ದರು. ಮಗಳ ಮೂತ್ರಪಿಂಡ ಕೊಳಕು ಎಂದು ಕರೆಯುವವರು ಮೊದಲು ತಮ್ಮ ಸ್ವಂತ ಮೂತ್ರಪಿಂಡವನ್ನು ದಾನ ಮಾಡಬೇಕು. ಬಾಟಲಿ ರಕ್ತ ನೀಡುವ ಯೋಚನೆ ಬಂದರೆ ನಡುಗುವ ಜನರು ಮೂತ್ರಪಿಂಡ ದಾನದ ಬಗ್ಗೆ ಬೋಧಿಸುತ್ತೀರಾ.
ತೇಜಸ್ವಿ ಯಾದವ್ ಲಾಲು ಪ್ರಸಾದ್ಗೆ ತಮ್ಮ ಮೂತ್ರಪಿಂಡವನ್ನು ಏಕೆ ನೀಡಲಿಲ್ಲ ಎಂದು ರೋಹಿಣಿ ಕೇಳುತ್ತಿದ್ದಾರೆ. ಮೂತ್ರಪಿಂಡ ದಾನದ ಬಗ್ಗೆ ಮಾತನಾಡುವುದು ಸುಲಭ, ಆದರೆ ಯಾರೂ ಅದನ್ನು ಮಾಡುವುದಿಲ್ಲ.
ಇನ್ನಷ್ಟು ಓದಿರಿ:
ನಾಲ್ಕೂವರೆ ಗಂಟೆಗಳಲ್ಲಿ ನೀವೂ ಎಐ ಎಕ್ಸ್ಪರ್ಟ್ಗಳಾಗಬಹುದು