ಗಾಯಕನಾಗಿ ಹಾಗೂ ಸಂಗೀತ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಗುರುತು ಮೂಡಿಸಿರುವ ನವೀನ್ ಸಜ್ಜು ಇದೀಗ 'ಲೋ ನವೀನ' ಚಿತ್ರದ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷಯ. ವಿಭಿನ್ನ ಶೈಲಿಯ ಸಂಗೀತ ಮತ್ತು ವಿಶಿಷ್ಟ ಧ್ವನಿಯಿಂದ ಅಭಿಮಾನಿಗಳ ಮನ ಗೆದ್ದಿರುವ ನವೀನ್ ಸಜ್ಜು. ಈ ಚಿತ್ರದ ಮೂಲಕ ನಟನಾಗಿ ಹೊಸ ಅಧ್ಯಯನ ಆರಂಭಿಸಿದ್ದಾರೆ. <ಈಗಾಗಲೇ 'ಲೋ ನವೀನ' ಚಿತ್ರದ ಜನಪದ ಶೈಲಿಯ “ಕೋಣಾಣೆ” ಹಾಡು ಬಿಡುಗಡೆಯಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡು ಎಲ್ಲರ ಮನ ಗೆದ್ದಿದೆ. ಜನಪದ ಟಚ್, ನವೀನ್ ಸಂಗೀತ ಸಂಯೋಜನೆ ಮತ್ತು ವಿಭಿನ್ನ ರಿಲಿಕ್ಸ್ ಹಾಡಿಗೆ ವಿಶೇಷ ಆಕರ್ಷಣೆ ತಂದಿವೆ. ಇದೀಗ ಚಿತ್ರದ ಮತ್ತೊಂದು ಹೊಸ ಹಾಡು “ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡುಗಿ”ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಮಜಾದಾರ್ ಸಾಹಿತ್ಯ ಮತ್ತು ಪೋಕ್ ಫಿಲ್ಮ್ ಹೊಂದಿರುವ ಈ ಹಾಡು ಬಿಡುಗಡೆಯಾಗುತ್ತಿದ್ದಂತೆಯೇ ಎಲ್ಲರ ಗಮನ ಸೆಳೆದಿದೆ. ಈ ಹಾಡನ್ನು ನಟಿ ಸೋನಾಲ್ ಮೋತೆರೊ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.
ಹಾಡು ಬಿಡುಗಡೆ ಸಮಾರಂಭದಲ್ಲಿ ಮಾಜಿ ಸಂಸದ ಪುಟ್ಟರಾಜು, ರಾಮಮೂರ್ತಿ, ಮಾದೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಚಿತ್ರದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈಗಾಗಲೇ ಯಶಸ್ಸು ಕಂಡಿರುವ ನವೀನ್ ಸಜ್ಜು. 'ಲೋ ನವೀನ'ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಇನ್ನಷ್ಟು ಕುತೂಹಲ ಹೆಚ್ಚಾಗಿದೆ.
ಚಿತ್ರದ ನಿರ್ಮಾಪಕ ಬೆನ್ ಚಿಕ್ಕಸ್ವಾಮಿ ಮಾತನಾಡಿ "ನಾನು ಮೂಲತಃ ಮನವಳ್ಳಿಯವನು ಚಿಕ್ಕ ವಯಸ್ಸಿನಿಂದಲೇ ಗ್ರಾಮೀಣ ಜನಪದ ಹಾಡುಗಳನ್ನು ಕೇಳುತ್ತಾ ಬೆಳೆದವನು. ಕಳೆದ 40 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದರು ಕನ್ನಡವನ್ನೇ ಮಾತನಾಡುತ್ತೇನೆ. ಇಂದಿಗೂ ದಿನ ಮುದ್ದೆ, ಉಪ್ಸಾರು ನಮ್ಮ ಆಹಾರದ ಭಾಗವೇ" ಎಂದು ತಮ್ಮ ಕನ್ನಡ ಅಭಿಮಾನವನ್ನು ಹಂಚಿಕೊಂಡರು.
ಮುಂದುವರೆದು ಮಾತನಾಡಿದ ಅವರು "ನವೀನ್ ಸಜ್ಜು ಹೇಳಿದ ಗ್ರಾಮೀಣ ಸೊಗಡಿನ ಕಥೆ ನನಗೆ ತುಂಬಾ ಇಷ್ಟವಾಯಿತು. ಮಣ್ಣಿನ ವಾಸನೆ ಇರುವ ಈ ಕಥೆಯನ್ನು ದೊಡ್ಡ ಪರದೆಯ ಮೇಲೆ ತರುವ ಉದ್ದೇಶದಿಂದಲೇ ನಾನು ಈ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾದೆವು" ಎಂದು ಹೇಳಿದರು. ಗ್ರಾಮೀಣ ಸಂಸ್ಕೃತಿ ಹಾಗೂ ಜನಪದ ಶೈಲಿಯ ಕಥೆಗಳು ಇಂದಿನ ತಲೆಮಾರಿಗೆ ತಲುಪಬೇಕು ಎಂಬ ಆಶಯವು ತಮ್ಮದು ಎಂದರು. ಇನ್ನು ಚಿತ್ರದ ನಾಯಕಿ ವರ್ಷ ಮಾತನಾಡಿ, "ನನಗೆ ಚಿಕ್ಕನಿನಿಂದಲೂ ನಟಿ ಆಗಬೇಕೆಂಬ ಕನಸು ಇತ್ತು.
ಆ ಕನಸು ಇದೀಗ ನನಸಾಗಿದೆ. ಈ ಅವಕಾಶ ನೀಡಿದ ನವೀನ್ ಸಜ್ಜು ಅವರಿಗೆ, ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಹೃತ್ಪೂರ್ವಕ ಧನ್ಯವಾದಗಳು" ಎಂದು ತಮ್ಮ ಸಂತಸ ವ್ಯಕ್ತಪಡಿಸಿದರು. ಇದೇ ಮೊದಲ ಚಿತ್ರದಲ್ಲಿ ಉತ್ತಮ ಪಾತ್ರ ಸಿಕ್ಕಿರುವುದು ಖುಷಿ ತಂದಿದೆ ಎಂದರು. ಒಟ್ಟಾರೆ ಗ್ರಾಮೀಣ ಸೊಗಡಿನ ಕಥೆ ಜನಪದ ಸಂಗೀತ ಮತ್ತು ಹೊಸ ಕಲಾವಿದರ ಸಮಾಗಮನದಿಂದ ಈ ಚಿತ್ರಕ್ಕೆ ಪ್ರೇಕ್ಷಕರಲ್ಲಿ ವಿಶೇಷ ನಿರೀಕ್ಷೆ ಮೂಡಿದೆ.
ಈ ಚಿತ್ರವು ನಿರ್ದೇಶಕ ಧನುರ್ಧಾರಿ ಪವನ್ ಮಾತನಾಡಿ "ಇದು ನನ್ನ ಮೊದಲ ನಿರ್ದೇಶನ ಚಿತ್ರ 'ಲೊ ನವೀನ್' ಚಿತ್ರ ಉತ್ತಮವಾಗಿ ಮೂಡಿಬರಲು ಸಂಪೂರ್ಣ ಚಿತ್ರತಂಡ ನೀಡಿದ ಸಹಕಾರ ಅಪಾರವಾಗಿದೆ ಎಂದು ಹೇಳಿದರು. ಹೊಸ ಪ್ರಯತ್ನಕ್ಕೆ ನಿರ್ಮಾಪಕರು ಹಾಗೂ ಕಲಾವಿದರು ನೀಡಿದ ಬೆಂಬಲವೇ ಈ ಚಿತ್ರದ ಶಕ್ತಿಯಾಗಿದೆ ಎಂದು ಅವರು ತಿಳಿಸಿದರು. ಹಾಡು ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು. ಚಿತ್ರಕ್ಕೆ ಶುಭ ಹಾರೈಸಿದರು .
ಗ್ರಾಮೀಣ ಸೊಗಡಿನ ಕಥೆ ಜನಪದ ಶೈಲಿಯ ಸಂಗೀತ ಮತ್ತು ಹೊಸ ಪ್ರತಿಭೆಗಳ ಸಮಾಗಮನದಿಂದ ಚಿತ್ರಕ್ಕೆ ಈಗಾಗಲೇ ಉತ್ತಮ ನಿರೀಕ್ಷೆ ನಿರ್ಮಾಣವಾಗಿದ್ದು, ಸದ್ಯದಲ್ಲೇ ಈ ಚಿತ್ರ ತೆರೆಗೆ ಬರಲಿದೆ ಎಂದು ತಿಳಿಸಿದೆ. ಚಿತ್ರದ ತಾಂತ್ರಿಕ ತಂಡದ ಕುರಿತು ಧನುರ್ಧಾರಿ ಪವನ್ ಮಾತನಾಡಿದ ಅವರು ಛಾಯಾಗ್ರಹನ ರಿಷಿಕೇಶ್ ನಟ, ನೃತ್ಯ ನಿರ್ದೇಶಕ ವಿನಾಯಕ ಆಚಾರ್ಯ, ಗೀತಾ ರಚನೆಕಾರ ಅಂದಾನಿ ಸೇರಿದಂತೆ ಎಲ್ಲಾ ವಿಭಾಗಗಳ ಕಲಾವಿದರು ಚಿತ್ರಕ್ಕೆ ಉತ್ತಮ ರೂಪ ಬಂದಿದ್ದು, ತಂಡದ ಒಗ್ಗಟ್ಟು ಚಿತ್ರದ ಗುಣಮಟ್ಟದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಚಿತ್ರದ ನಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು ಮಾತನಾಡಿ, "ನಾನು ಮೂಲತಃ ಮನವಳ್ಳಿಯವನು ಹಳ್ಳಿ ಪರಿಸರದಲ್ಲಿ ಬೆಳೆದವನು. ಗಾಯಕನಾಗಿ ನನ್ನ ಪಯಣ ಆರಂಭಿಸಿದ್ದ ನಾನು, ಇದೀಗ 'ಲೋ ನವೀನ' ಚಿತ್ರದ ಮೂಲಕ ನಾಯಕನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ ಎಂದು ಹೇಳಿದರು. ಚಿತ್ರದ ಸಂಗೀತದ ಕುರಿತು ಮಾತನಾಡಿದ ನವೀನ್ ಸಜ್ಜು "ಈ ಚಿತ್ರಕ್ಕೆ ನಾನೇ ಸಂಗೀತ ನೀಡಿದ್ದೇನೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಮೊದಲ ಹಾಡು ‘ಕೋಣಾಣೆ’ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ.
ಈ ಹಾಡು ಈಗಾಗಲೇ ಏಳು ಮಿಲಿಯನ್ಗು ಅಧಿಕ ವೀಕ್ಷಣೆ ಪಡೆದುಕೊಂಡಿದೆ" ಎಂದು ಹಂಚಿಕೊಂಡರು. ಮುಂದುವರೆದು ಮಾತನಾಡಿದ ಅವರು, "ಈ ಅವಕಾಶ ನನಗೆ ಸಿಗಲು ಪ್ರಮುಖ ಕಾರಣವಾದವರು ನಮ್ಮ ಚಿತ್ರದ ನಿರ್ಮಾಪಕರಾದ ಬೆನ್ ಚಿಕ್ಕಸ್ವಾಮಿ ಹಾಗೂ ಕೀರ್ತಿಸ್ವಾಮಿ.
ನಾನು ಒಂದು ಕಾರ್ಯಕ್ರಮದ ನಿಮಿತ್ತ ಅಮೆರಿಕಾಗೆ ಹೋದಾಗ, ಮಾದೇವ ಅವರು ನನಗೆ ಅವರನ್ನು ಭೇಟಿ ಮಾಡಿಸಿದರು. ನಾನು ಹೇಳಿದ ಗ್ರಾಮೀಣ ಸೊಗಡಿನ ಕಥೆಯನ್ನು ಕೇಳಿ ಬೆನ್ನ ಚಿಕ್ಕಸ್ವಾಮಿ ಹಾಗೂ ಕೀರ್ತಿಸ್ವಾಮಿ ಅವರಿಗೆ ತುಂಬಾ ಇಷ್ಟವಾಯಿತು. ಅದೇ ಕಾರಣಕ್ಕೆ ಅವರು ಈ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾದರು. ಅವರಿಗೆ ನನ್ನ ಅನಂತ ಧನ್ಯವಾದಗಳು ಎಂದು ಕೃತಜ್ಞತೆ ವ್ಯಕ್ತಪಡಿಸಿದರು ಎರಡನೆಯ ಹಾಡು ಕೈ ತೊಳೆದುಕೊಂಡು ಮುಟ್ಟಂಗವಳೆ, ನನ್ ಹುಡುಗಿ ಅನಾವರಣಗೊಂಡಿದ್ದು ಇದು ನಾಯಕಿಯನ್ನು ಪರಿಚಯಿಸುವ ಗೀತೆಯೂ ಹೌದು ಎಂದು ತಿಳಿಸಿದರು.
ಈ ಹಾಡನ್ನು ಜನಪ್ರಿಯ ನಾಯಕಿ ಸೋನಾಲ್ ಮತ್ತೇರು ಬಿಡುಗಡೆ ಮಾಡಿಕೊಟ್ಟಿದ್ದಾರೆ ಕಾಡಿಗೆ ಅದಾನಿ ಅವರು ಸಾಹಿತ್ಯ ಬರೆದಿದ್ದಾರೆ ಎಂದು ವಿವರಿಸಿದರು ಜನಪದ ಸಂಗೀತ ಮತ್ತು ಹೊಸ ಪ್ರಯತ್ನಗಳೊಂದಿಗೆ ಲೋ ನವೀನ್ ಚಿತ್ರವು ಪ್ರೇಕ್ಷಕರಲ್ಲಿ ಹೆಚ್ಚಿನ ಮೂಡಿಸಿದೆ ಹಾಡು ಬಿಡುಗಡೆ ಸಮಾರಂಭಕ್ಕೆ ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಆಗಮಿಸಿದ್ದು ಎಲ್ಲರ ಬೆಂಬಲಕ್ಕೆ ನವೀನ್ ಸಜ್ಜು ಧನ್ಯವಾದ ಸಲ್ಲಿಸಿದರು ಆನಂದ್ ವಿಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದ್ದು ಚಿತ್ರದ ಉಳಿದ ಹಾಡುಗಳು ಕೂಡ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು.
ಇನ್ನಷ್ಟು ಓದಿರಿ:
SSC MTS ಪರೀಕ್ಷಾ ಕೇಂದ್ರಗಳ ಪಟ್ಟಿ ಬಿಡುಗಡೆ! ನಿಮ್ಮ ನಗರವನ್ನು ಹೇಗೆ ಪರಿಶೀಲಿಸಬೇಕು? ಇಲ್ಲಿದೆ ಮಾಹಿತಿ.