<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Health

ಅಗರಬತ್ತಿ ಹೊಗೆಯಿಂದ ಕ್ಯಾನ್ಸರ್ ಸೇರಿ ಗಂಭೀರ ಕಾಯಿಲೆಗಳ ಭೀತಿ !

ಅಗರಬತ್ತಿ ಹೊಗೆಯಿಂದ ಕ್ಯಾನ್ಸರ್ ಸೇರಿ ಗಂಭೀರ ಕಾಯಿಲೆಗಳ ಭೀತಿ !
Summary: A survey has revealed alarming information that the smoke from agarbatti, used to repel mosquitoes, can pose a serious health risk.

Belagavi news:

ಮನೆಗಳಲ್ಲಿ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಅನೇಕರು ಸೊಳ್ಳೆ ಅಗರಬತ್ತಿ, ಕಾಯಿಲ್ ಹಾಗೂ ವಿವಿಧ ಮಸ್ಕಿಟೋ ರಿಪಲೆಂಟ್ ಗಳನ್ನು ಬಳಸುವುದು ಸಾಮಾನ್ಯ. ಆದರೆ, ಈ ಎಲ್ಲಾ ಉತ್ಪನ್ನಗಳು ಸಂಪೂರ್ಣ ಸುರಕ್ಷಿತವಾಗಿರುತ್ತವೆ ಎಂಬುದು ತಪ್ಪು ಕಲ್ಪನೆ ಎನ್ನುವುದು ಆತಂಕ ಕರಿ ಮಾಹಿತಿ ಇದೀಗ ಹೊರ ಬಿದ್ದಿದೆ.

ಇತ್ತೀಚೆಗೆ ಬಿಡುಗಡೆಯಾದ ಎಚ್ ಐಸಿಎ ಸಮೀಕ್ಷಾ ವರದಿ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಭಾರತೀಯ ಪ್ರಕಾರ, ಕೆಲವು ಸೊಳ್ಳೆ ನಿವಾರಕ ಉತ್ಪನ್ನಗಳು ಸೊಳ್ಳೆಗಳನ್ನು ದೂರ ಬಿಡುವುದರ ಜೊತೆಗೆ ಮಾನವ ಆರೋಗ್ಯದ ಮೇಲೂ ಹಾನಿಕಾರಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.

ವಿಶೇಷವಾಗಿ ಸಿಐಆರ್ ನೋಂದಣಿ ಸಂಖ್ಯೆ ಇಲ್ಲದ ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಬಳಸಬಾರದು ಎಂದು ಸಮೀಕ್ಷೆ ಸೂಚಿಸಿದೆ. ಇಂತಹ ಉತ್ಪನ್ನಗಳಲ್ಲಿ ಹಾನಿಕಾರಕ ರಾಸಾಯನಿಕಗಳ ಪ್ರಮಾಣ ಹೆಚ್ಚಿರುವ ಸಾಧ್ಯತೆ ಇದ್ದು, ಸಮಾರೋಪಗಳ ಹೊಗೆ ಉಸಿರಾಟದ ಮೂಲಕ ದೇಹಕ್ಕೆ ಸೇರಿದರೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ತಜ್ಞರು ಹೇಳಿದ್ದಾರೆ.

Sponsored

ಸೊಳ್ಳೆ ಅಗರಬತ್ತಿ ಮತ್ತು ಕಾಯಿಲ್ಗಳಿಂದ ಹೊರಬರುವ ಹೊಗೆ ದೀರ್ಘಕಾಲ ಉಸಿರಾಟದ ಸಮಸ್ಯೆ, ಅಲರ್ಜಿ, ಕಣ್ಣು ಉರಿ, ತಲೆನೋವು ಹಾಗೂ ಶ್ವಾಸಕೋಶ ಸಂಬಂಧಿ ತೊಂದರೆಗಳಿಗೆ ಕಾರಣವಾಗಬಹುದು ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಮಕ್ಕಳಿಗೆ, ವೃದ್ಧರಿಗೆ ಹಾಗೂ ಅಸ್ತಮಾ ರೋಗಿಗಳಿಗೆ ಇದರ ಪರಿಣಾಮ ಹೆಚ್ಚು ಕಾಣಿಸಬಹುದು ಎನ್ನಲಾಗಿದೆ.

ಹೀಗಾಗಿ ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಖರೀದಿಸುವಾಗ ಅವುಗಳ ಗುಣಮಟ್ಟ, ಮಾನ್ಯತೆ ಹಾಗೂ ನೋಂದಣಿ ವಿವರಗಳನ್ನು ಪರಿಶೀಲಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ. ಮನೆ ಒಳಗೆ ಗಾಳಿಯ ಹರಿವಿನ ವ್ಯವಸ್ಥೆ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಹಾಗೂ ಸುರಕ್ಷಿತ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಸೊಳ್ಳೆ ಅಗರಬತ್ತಿ ಬಳಕೆ ಅಪಾಯಕಾರಿಯೇ? ಎಚ್ ಐಸಿಎ ಸಮೀಕ್ಷೆಯಲ್ಲಿ ವೈದ್ಯರ ಆತಂಕಕಾರಿ ಅಭಿಪ್ರಾಯ ಬಹಿರಂಗ :

ಸೊಳ್ಳೆ ಅಗರಬತ್ತಿ, ಕಾಯಿಲ್ ಹಾಗೂ ಇತರ ಮಸ್ಕಿಟೋ ನಿವಾರಕ ಉತ್ಪನ್ನಗಳನ್ನು ಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಇವುಗಳ ಸುರಕ್ಷತೆ ಬಗ್ಗೆ ಇದೀಗ ಎಚ್ಐಸಿಎ ಸಮೀಕ್ಷೆಯಲ್ಲಿ ಆಂತರಿಕವಾಗಿ ಮಾಹಿತಿ ಬಹಿರಂಗವಾಗಿದೆ.

Sponsored

ದೇಶದ ಹನ್ನೆರಡು ನಗರಗಳಲ್ಲಿ ನಡೆದ ಸಮೀಕ್ಷೆ:

ಈ ಸಮೀಕ್ಷೆಯನ್ನು ದೇಶದ 12 ನಗರಗಳಲ್ಲಿ ನಡೆಸಲಾಗಿದ್ದು, 1,264 ಕುಟುಂಬಗಳು ಹಾಗೂ 405 ವೈದ್ಯರು ಭಾಗವಹಿಸಿದ್ದರು. ಸಮೀಕ್ಷೆಯ ಫಲಿತಾಂಶದ ಪ್ರಕಾರ, 70 ಶೇಕಡಾ ವೈದ್ಯರು ಅನಧಿಕೃತ ಸೊಳ್ಳೆ ಅಗರಬತ್ತಿಗಳ ಹೊಗೆ ಉಸಿರಾಟ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅದೇ ರೀತಿ 67 ಶೇಕಡ ವೈದ್ಯರು ಕೆಲವು ಸೊಳ್ಳೆ ಅಗರಬತ್ತಿಗಳ ಹೊಗೆ ಸಿಗರೇಟ್ ಹೊಗೆಯಷ್ಟೇ ಹಾನಿಕಾರಕವಾಗಿರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ವಿಶೇಷವಾಗಿ ಸಿಐಆರ್ ನೊಂದಣಿ ಸಂಖ್ಯೆ ಇಲ್ಲದ ಉತ್ಪನ್ನಗಳ ಬಳಕೆ ಅಪಾಯಕಾರಿ ಆಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಆರೋಗ್ಯದ ಮೇಲೆ ಪರಿಣಾಮ ಏನಾಗುತ್ತದೆ?:

Sponsored

ನಿರಂತರವಾಗಿ ಸೊಳ್ಳೆ ಅಗರಬತ್ತಿ ಅಥವಾ ಕಾಯಿಲ್ ಬಳಸುವುದರಿಂದ ಉಸಿರಾಟದ ತೊಂದರೆ, ಕೆಮ್ಮು, ಗಂಟಲು ಕೆರೆತ ಹಾಗೂ ಎದೆ ಉರಿ ಕಾಣಿಸಬಹುದು. ಕೆಲವರಿಗೆ ಕಣ್ಣಿಗೆ ಉರಿ, ತಲೆನೋವು ಮತ್ತು ಅಲರ್ಜಿ ಸಮಸ್ಯೆಗಳು ಉಂಟಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಅಸ್ತಮಾ, ಸಿಓಪಿಡಿ ಮತ್ತು ಇತರ ಉಸಿರಾಟ ಸಮಸ್ಯೆ ಇರುವವರಿಗೆ ಹೆಚ್ಚು ಅಪಾಯಕಾರಿ ಆಗಬಹುದು. ಮಕ್ಕಳ ಹಾಗೂ ವೈದ್ಯರ ಶ್ವಾಸಕೋಶ ಹೆಚ್ಚು ಸಂವೇದನಾಶೀಲ ವಾಗಿರುವುದರಿಂದ ಅವರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚು ಸಾಧ್ಯತೆ ಇದೆ ಎಂದು ಸಮೀಕ್ಷೆ ಉಲ್ಲೇಖಿಸಲಾಗಿದೆ.

ಸುರಕ್ಷಿತವಾಗಿ ಬಳಸಲು ವೈದ್ಯರ ಸಲಹೆ ಏನು ನೋಡಿ ಇಲ್ಲಿದೆ...:

ಸೊಳ್ಳೆ ನಿವಾರಕ ಉತ್ಪನ್ನಗಳನ್ನು ಖರೀದಿಸುವಾಗ ಪ್ಯಾಕ್ ಮೇಲೆ ಸಿಐಆರ್ 11ನೇ ಸಂಖ್ಯೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಅನಧಿಕೃತ ಅಥವಾ ಲೇಬಲ್ ಇಲ್ಲದ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸುವುದು ಉತ್ತಮ ಎಂದು ಎಚ್ಚರಿಕೆ ನೀಡಲಾಗಿದೆ.

Sponsored

ಕೊಠಡಿಯಲ್ಲಿ ಸರಿಯಾದ ಗಾಳಿಯ ಹರಿವು ಇರಿಸುವುದು, ಮಕ್ಕಳ ಹಾಗೂ ವೈದ್ಯರ ಕೋಣೆಯಲ್ಲಿ ನಿರಂತರ ಹೊಗೆ ಬಳಕೆಯನ್ನು ತಪ್ಪಿಸುವುದು ಮುಖ್ಯವಾಗಿದೆ. ಜೊತೆಗೆ ಮಸ್ಕಿಟೋ ನೆಟ್, ಕಿಟಕಿ ಜಾಲಿ, ಫ್ಯಾನ್ ಆಧಾರಿತ ನಿವಾರಕಗಳು ಮುಂತಾದ ಸುರಕ್ಷಿತ ಪರ್ಯಾಯಗಳನ್ನು ಬಳಸುವುದು ಉತ್ತಮ ಎಂದು ವೈದ್ಯರು ತಿಳಿಸಿದ್ದಾರೆ.

Also Read:

ದಲಿತ ಸ್ವಾಮೀಜಿಗಳ ಪಾದಪೂಜೆ ಮಾಡಿದ ಸಿ.ಟಿ. ರವಿ ದಂಪತಿ: ಭೀಮೋತ್ಸವ ದಲ್ಲಿ ವಿಶೇಷ ಆಚರಣೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online