Belagavi news:
ಚಿಕ್ಕಮಗಳೂರು: ಡಾ. ಬಿ.ಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯನ್ನು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಏಪ್ರಿಲ್ 14ರಿಂದ ಮನೆಮನೆಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದ್ದು, ಇದರ ಸಮಾರೋಪ ಕಾರ್ಯಕ್ರಮವನ್ನು "ಭೀಮೋತ್ಸವ" ಹೆಸರಿನಲ್ಲಿ ಆಯೋಜಿಸಲಾಯಿತು.
ವಿಧಾನ ಪರಿಷತ ಸದಸ್ಯ ಸಿ.ಟಿ. ರವಿ ಅವರ ನಿವಾಸದಲ್ಲಿ ನಡೆದ ಈ ಕಾರ್ಯಕ್ರಮದ ಬಳಿಕ ಸಿ.ಟಿ . ರವಿ ಹಾಗೂ ಅವರ ಪತ್ನಿ ಮೂವರು ದಲಿತ ಸ್ವಾಮೀಜಿಗಳಿಗೆ ಪಾದ ಪೂಜೆ ಸಲ್ಲಿಸಿದರು.
ಬಿಜೆಪಿ ವತಿಯಿಂದ ಆಯೋಜಿಸಲಾದ ಈ ಭೀಮೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶಿವಶಂಕರ ಶಿವಯೋಗಿ ಮಹಾಸ್ವಾಮೀಜಿ, ಶ್ರೀ ಬಸವ ನಾಗಿದೇವ ಮಹಾ ಸ್ವಾಮೀಜಿ ಹಾಗೂ ಶ್ರೀ ಕುಂಬಾರ್ ಗುಂಡಯ್ಯ ಮಹಾಸ್ವಾಮೀಜಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ತುಮಕೂರು: ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನ ಸಮಾವೇಶ ಹಿನ್ನೆಲೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದವರು, ಅಭಿವೃದ್ಧಿ ಇಲ್ಲದ ಸಾಧನೆಯನ್ನು ಸಾಧನೆ ಎಂದು ಹೇಳಲಾಗುವುದಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು ಅವರು, " ಕಾಂಗ್ರೆಸ್ ಎಂದರೆ ಜಿಗಣೆ ಇದ್ದಂತೆ, ಬಡವರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ರಕ್ತವನ್ನು ಹೀರುವ ಪಕ್ಷ" ಎಂದು ಹೇಳಿಕೆ ನೀಡಿದರು.
ಸರ್ಕಾರ ಬಂದ ನಂತರ ರಾಜ್ಯದಲ್ಲಿ ಯಾರು ತೃಪ್ತಿಯಿಂದಿಲ್ಲ ಎಂದು ಆರೋಪಿಸಿದ ಅವರು, ಶಾಂತಿಯ ತೋಟದಲ್ಲಿ ಅಶಾಂತಿ ಸೃಷ್ಟಿಸುವುದು ಕಾಂಗ್ರೆಸ್ ಸಂಸ್ಕೃತಿ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಗೊಂದಲ ಮತ್ತು ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷವೇ ಎಂದು ಅವರು ಆರೋಪಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತೈಲ ಸಿಗುವುದು ಕಷ್ಟಕರವಾಗುತ್ತಿರುವ ಹಿನ್ನೆಲೆಯಲ್ಲಿ ಇಂಧನವನ್ನು ಮಿತವಾಗಿ ಬಳಸಿ ಎಂದು ನೀಡಿರುವ ಸಲಹೆಯನ್ನು ಸಮರ್ಥಿಸಿಕೊಂಡರು. ದೇಶದ ಪ್ರಧಾನಿಯಾಗಿ ಇಂತಹ ಸಲಹೆ ನೀಡುವುದು ತಪ್ಪಲ್ಲ ಎಂದು ಹೇಳಿದ ಅವರು, ಜನರಿಗೆ ಇದು ತಪ್ಪಾಗಿ ಕಾಣುತ್ತಿಲ್ಲ ಆದರೆ ಕಾಂಗ್ರೆಸ್ಸಿಗೆ ಮಾತ್ರ ಏಕೆ ತಪ್ಪಾಗಿ ಕಾಣುತ್ತಿದೆ ಎಂದು ಪ್ರಶ್ನಿಸಿದರು.
ಮಿತವಾಗಿ ಬಳಕೆ ಮಾಡುವುದರಿಂದ ದೇಶದ ಆರ್ಥಿಕತೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದ ಅವರು, ನಾವು ಡಾಲರ್ ಮೇಲೆ ಅವಲಂಬಿತವಾಗಿ ಬದುಕಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟರು. ಪ್ರಧಾನಿ ಮೋದಿ ಅವರು ನೀಡಿರುವುದು ಕೇವಲ ಸಲಹೆ ಮಾತ್ರ, ಅದು ಕಟ್ಟುನಿಟ್ಟಿನ ಆದೇಶವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಪ್ರಶ್ನಿಸಿದ ಅವರು, " ವಾಲ್ಮೀಕಿ ನಿಗಮದ ಹಣ ದುರ್ಬಳತೆ ಮಾಡಿಕೊಂಡಿರುವುದು ಸಾಧನೆಯಾ? ಎಸ್ಇಪಿ ಮತ್ತು ಟಿಎಸ್ ಪಿ ಅನುದಾನವನ್ನು ಸರಿಯಾಗಿ ಬಳಸದೆ ಹಂಚಿಕೆ ಮಾಡಿರುವುದು ಸಾಧನೆಯಾ? ಕಳೆದ ಮೂರು ವರ್ಷಗಳಲ್ಲಿ ಕಾರ್ಮಿಕ ಇಲಾಖೆಯಲ್ಲಿ ನಡೆದ ಹಣಕಾಸು ಅಕ್ರಮಗಳು ಸಾಧನೆಯಾ? ಎಂದು ವಾಗ್ದಾಳಿ ನಡೆಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಬೋರ್ ವೆಲ್ ಕೊರೆಸಲು ಹಣ ನೀಡದೆ ನಿರ್ಲಕ್ಷ್ಯ ವಹಿಸಿರುವುದೇ ಸಾಧನೆಯಾ ಎಂದು ಪ್ರಶ್ನಿಸಿದ ಅವರು, ಇಂತಹ ವಿಚಾರಗಳನ್ನು ಸಾಧನೆ ಎಂದು ಹೇಳುವ ಮೊದಲು ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.
Also Read:
ಕರುನಾಡ ಚಕ್ರವರ್ತಿಯ ಮಾಸ್ ಎಂಟ್ರಿ: ' ಬೇಲ್ ' ಜೆಡಿಎಸ್ ಟೀಸರ್ ನೋಡಿ ಅಭಿಮಾನಿಗಳ ಸಂಭ್ರಮ