Agni 3 Ballistic Missile: ಒಡಿಶಾದ ಚಾಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಿಂದ ಅಗ್ನಿ-3 ಮಾಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಇದು ಭಾರತವು ಶತ್ರು ರಾಷ್ಟ್ರಗಳ ಒಳಭಾಗದಲ್ಲಿರುವ ಪ್ರಮುಖ ಗುರಿಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ಮಾಡಲು ಅನುವು ಮಾಡಿ ಕೊಡುತ್ತ ಕೊಡುತ್ತವೆ. ಪರೀಕ್ಷೆಯ ಎಲ್ಲಾ ಕಾರ್ಯಾಚರಣೆ ಮತ್ತು ತಾಂತ್ರಿಕ ನಾಯತಾಂಕಗಳು ಸಂಪೂರ್ಣವಾಗಿ ನಿರೀಕ್ಷೆಯಂತೆ ಇದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಗ್ನಿ- 3 ಪರಮಾಣು ಸಾಮರ್ಥ್ಯದ ಕ್ಷಿಪಣಿಯಾಗಿದ್ದು, ಸುಮಾರು 3000 ರಿಂದ 3500 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಕ್ಷಿಪಣಿ ಉಡಾವಣೆಯನ್ನು ಕಾರ್ಯತಂತ್ರದ ಪಡೆಗಳ ಕಮಾಂಡ್ ನ ಮೇಲ್ವಿಚಾರಣೆಯಲ್ಲಿ ನಡೆಸಲಾಗಿದೆ.
ಈ ಯಶಸ್ವಿ ಪರೀಕ್ಷೆಯೊಂದಿಗೆ ಭಾರತ ತನ್ನ ರಕ್ಷಣಾ ಸಿದ್ಧತೆಯನ್ನು ಜಗತ್ತಿಗೆ ಸ್ಪಷ್ಟವಾಗಿ ತೋರಿಸಿದ್ದು, ಶತ್ರು ರಾಷ್ಟ್ರಗಳಲ್ಲಿ ಎದೆ ನಡುಕ ಶುರುವಾಗಿದೆ. ದೇಶದ ಭದ್ರತೆ ಗಡಿ ರಕ್ಷಣೆ ಮತ್ತು ರಾಷ್ಟ್ರೀಯ ಸ್ವಾಭಿಮಾನಕ್ಕೆ ಅಗ್ನಿ - 3 ಕ್ಷಿಪಣಿ ಪ್ರಮುಖ ಕವಚವಾಗಿದ್ದು, ಭಾರತೀಯ ಸೇನೆ ಮತ್ತು ವಿಜ್ಞಾನಿಗಳ ಸಾಮರ್ಥ್ಯಕ್ಕೆ ಇದು ಜೀವಂತ ಸಾಕ್ಷಿಯಾಗಿದೆ.
ಭಾರತ ಶಾಂತಿಯ ಪರವಾಗಿದರು ತನ್ನ ಭದ್ರತೆಗೆ ಯಾವುದೇ ರಾಜಿಯಿಲ್ಲ ಎಂದು ಸಂದೇಶವನ್ನು ಅಗ್ನಿ - 3 ಕ್ಷಿಪಣಿ ವಿಶ್ವಕ್ಕೆ ಸಾರಿದೆ.
ಅಗ್ನಿ -3 ಭಾರತಕ್ಕೆ ಏಕೆ ವಿಶೇಷ? ಅಗ್ನಿ - 3 ಭಾರತದ ಮಧ್ಯಮ- ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ. ಇದು ಪರಮಾಣು ಅಥವಾ ಸಾಂಪ್ರದಾಯಿಕ ಸಿಡಿ ತಲೆಗಳನ್ನು ಒಳಗೊಂಡಂತೆ 1,500 ಕಿಲೋ ಗ್ರಾಂ ಗಳಷ್ಟು ಪೇಲೋಡ್ ಸಾಗಿಸಬಲ್ಲದು ಮತ್ತು 450 km ಗಳಗಿಂತ ಹೆಚ್ಚು ಹಾರಾಟದ ಎತ್ತರವನ್ನು ಅಗ್ನಿ ಕ್ಷಿಪಣಿ ಹೊಂದಿದೆ.
ಇದು ಎರಡು ಹಂತದ ಘನ ಇಂಧನ ಕ್ಷಿಪಣಿಯಾಗಿದ್ದು, 16.7 ಮೀಟರ್ ಉದ್ದ 2 ಮೀಟರ್ ವ್ಯಾಸ ಮತ್ತು 48,300 ಕಿಲೋ ಗ್ರಾಂ ಗಳಷ್ಟು ಉಡಾವಣಾ ತೂಕವನ್ನು ಹೊಂದಿದೆ.
DRDO ಅಭಿವೃದ್ಧಿಪಡಿಸಿದ್ದ ಇದನ್ನು ರೈಲು ಮೊಬೈಲ್ ಮತ್ತು ರಸ್ತೆ ಮೊಬೈಲ್ ಫ್ಲಾಟ್ ಫಾರ್ಮ್ ಗಳಿಂದ ಉಡಾಯಿಸಬಹುದು. ಇದರ ನಿಖರತೆಯು ಸುಧಾರಿತ ಸಂಚಾರಣೆ ಮತ್ತು ಮಾರ್ಗದರ್ಶನ ವ್ಯವಸ್ಥೆಗಳಿಂದ ಹೊರಬಂದಿದೆ.
ಪಾಕಿಸ್ತಾನ ಮತ್ತು ಚೀನಾಕ್ಕೆ ಪ್ರಮುಖ ಬೆದರಿಕೆ? : ಅಗ್ನಿ-3 ರ 3,000 - 3,500 ಕಿಲೋಮೀಟರ್ ವ್ಯಾಪ್ತಿಯು ಪಾಕಿಸ್ತಾನ ಮತ್ತು ಚೀನಾದ ಒಳ ಭಾಗವನ್ನು ಒಳಗೊಂಡಿದೆ. ಹೀಗಾಗಿ ಭಾರತವು ಎರಡು ದೇಶಗಳಲ್ಲಿ ಪ್ರಮುಖ ಗುರಿಗಳನ್ನು ತನ್ನ ವ್ಯಾಪ್ತಿಯಲ್ಲಿ ಬಂದಿದೆ. ಇದರಲ್ಲಿ ಎಲ್ಲ ಪ್ರಮುಖ ಪಾಕಿಸ್ತಾನಿ ನಗರಗಳು, ಬೀಜಿಂಗ್ ಮತ್ತು ಶಾಂಘೈನಂತಹ ಚೀನಾದ ನಗರಗಳು ಸೇರಿದೆ.
ಈ ಕ್ಷಿಪಣಿ ಚೀನಾ ಕಿಂತಾ ಪಾಕಿಸ್ತಾನಕ್ಕೆ ಹೆಚ್ಚು ಕಳವಳವ ಉಂಟುಮಾಡುತ್ತದೆ. ಆದರೆ ಯಾವುದೇ ಪ್ರತಿ ಕ್ರಮಗಳನ್ನು ಸಹ ಹೊಂದಿಲ್ಲ. ಏಕೆಂದರೆ ಇದು ತನ್ನ ಎಲ್ಲಾ ನಗರಗಳ ಮೇಲೆ ವಿನಾಶವನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಅಗ್ನಿ -3 ಅನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಮಾಧ್ಯಮ ಶ್ರೇಣಿಯ ಕ್ಷಿಪಣಿ ಗಳಲ್ಲಿ ಒಂದೊಂದು ಪರಿಗಣಿಸಲಾಗಿದೆ.
ಈ ಕ್ಷಿಪಣಿ ಅತ್ಯಂತ ವಿಶೇಷತೆಗಳು:
ಅಗ್ನಿ - 3 ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಪರಮಾಣು ಸಾಮರ್ಥ್ಯದ ಮಾಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಯಾಗಿವೆ.
ಈ ಕ್ಷಿಪಣಿ ಕೂಡಾ ಸಾಕಷ್ಟು ದೊಡ್ಡದಾಗಿದೆ.
ಇದು ಪಾಕಿಸ್ತಾನದ ಸಂಪೂರ್ಣ ಭಾಗ ಮತ್ತು ಚೀನಾದ ಅರ್ಧದಷ್ಟು ಭಾಗವನ್ನು ಒಳಗೊಂಡಿವೆ.
50 ಟನ್ ಕ್ಷಿಪಣಿಯು ಎರಡು ಹಂತದ ಘನ- ಇಂಧನ ಎಂಜಿನ್ ಅನ್ನು ಹೊಂದಿದೆ.
ಈ ಕ್ಷಿಪಣಿ 3,000 ದಿಂದ 3,500 ಕಿಲೋಮೀಟರ್ ದೂರದ ಗುರಿಗಳನ್ನು ನಿಖರವಾಗಿ ಹೊಡೆಯುವ ಸಾಮರ್ಥ್ಯ ಹೊಂದಿವೆ.
ಇದು 17 ಮೀಟರ್ ಉದ್ದ ಮತ್ತು 2 ಮೀಟರ್ ವ್ಯಾಸವನ್ನು ಹೊಂದಿವೆ. ಇದು ಒಂದು ಸೆಕೆಂಡಿನಲ್ಲಿ ಐದು ಕಿಲೋಮೀಟರ್ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಕ್ಷಿಪಣಿ 1.5 ಟನ್ ವಾರ್ ಹೆಡ್ ಅನ್ನು ಸಾಗಿಸುವ ಸಾಮರ್ಥ್ಯ ಹೊಂದಿವೆ.
ಇನ್ನಷ್ಟು ಓದಿರಿ:
ಶೌಚಾಲಯದ ಸ್ಥಿತಿ ಪ್ರಶ್ನಿಸಿದ್ದಕ್ಕೆ ರೈಲಿನಿಂದ ಹೊರಗೆ