H16 News
Logo

By Samreen | Published on November 19, 2025

Image Not Found
Breaking News / November 19, 2025

ಪ್ರಧಾನಿ ಮೋದಿ ಕಾಲುಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ

ಪುಟ್ಟಪರ್ಥಿಯಲ್ಲಿ ನಡೆದ ಸತ್ಯ ಸಾಯಿ ಬಾಬಾ ಜನ್ಮದಿನಾಚರಣೆಯಲ್ಲಿ ಐಶ್ವರ್ಯಾ ರೈ ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಈ ವಿಡಿಯೋ ಸಖತ್ ವೈರಲ್ ಆಗಿದೆ. ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಮಾನವೀಯತೆಯ ಬಗ್ಗೆ ಮಾತನಾಡಿದ ಐಶ್ವರ್ಯಾ, ಮೋದಿ ಉಪಸ್ಥಿತಿಗೆ ಧನ್ಯವಾದ ಅರ್ಪಿಸಿ, ಸಾಯಿ ಬಾಬಾ ಸಂದೇಶ ಸ್ಮರಿಸಿದರು.

ಆಂಧ್ರಪ್ರದೇಶದ ಪುಟ್ಟಪರ್ಥಿಯಲ್ಲಿ ಸತ್ಯ ಸಾಯಿಬಾಬ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್, ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು ಮೊದಲಾದವರು ಭಾಗಿ ಆಗಿದ್ದರು. ಬಾಲಿವುಡ್ ನಟಿ ಐಶ್ವರ್ಯಾ ರೈ ಕೂಡ ಈ ಸಂದರ್ಭದಲ್ಲಿ ವೇದಿಕೆ ಮೇಲೆ ಹಾಜರದ್ದರು. ಅವರು ಪ್ರಧಾನಿ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ವೇದಿಕೆ ಮೇಲೆ ಐಶ್ವರ್ಯಾ ಅವರು ಮಾತನಾಡಿದರು. ‘ಜಗತ್ತಿನಲ್ಲಿ ಒಂದೇ ಜಾತಿ ಇರುವುದು, ಅದುವೇ ಮಾನವೀಯತೆ. ಒಂದೇ ಧರ್ಮ ಇರೋದು ಅದುವೇ ಪ್ರೀತಿ. ಒಂದೇ ಭಾಷೆ ಇರೋದು ಅದುವೆ ಹೃದಯದ ಭಾಷೆ. ದೇವ ಒಬ್ಬನೇ, ಅವನು ಸರ್ವವ್ಯಾಪಿ’ ಎಂದು ಐಶ್ವರ್ಯಾ ರೈ ಹೇಳಿದರು. ವೇದಿಕೆ ಮೇಲೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಹಾಜರಿ ಹಾಕಿದ್ದರು. ವೇದಿಕೆ ಏರಿದ ಐಶ್ವರ್ಯಾ ಅವರು ಪ್ರಧಾನಿ ಮೋದಿ ಬಳಿ ತೆರಳಿ ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಮೋದಿ ಅವರು ಐಶ್ವರ್ಯಾ ತಲೆಮೇಲೆ ಕೈ ಇರಿಸಿ ಆಶೀರ್ವಾದ ಮಾಡಿದ್ದಾರೆ. ಐಶ್ವರ್ಯಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು. ಸತ್ಯ ಸಾಯಿ ಬಾಬಾ ಅವರು 2011ರ ಏಪ್ರಿಲ್ 24 ರಂದು ಪುಟ್ಟಪರ್ತಿಯಲ್ಲಿ ನಿಧನ ಹೊಂದಿದರು. ಆಗ ಅವರ ವಯಸ್ಸು 84 ವರ್ಷ. ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಸಿನಿಮಾ ವಿಷಯಕ್ಕೆ ಬರೋದಾದರೆ, ಐಶ್ವರ್ಯಾ ರೈ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು, 2023ರ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾದಲ್ಲಿ. ಇದಾದ ಬಳಿಕ ಅವರು ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ. ‘ನಿಮ್ಮ ಇಲ್ಲಿನ ಉಪಸ್ಥಿತಿಯು ಈ ಶತಮಾನೋತ್ಸವ ಆಚರಣೆಗೆ ಸ್ಫೂರ್ತಿಯನ್ನು ನೀಡುತ್ತದೆ. ನಿಜವಾದ ನಾಯಕತ್ವವೇ ಸೇವೆ. ಮನುಷ್ಯನಿಗೆ ಸೇವೆ ಮಾಡುವುದು ದೇವರಿಗೆ ಸೇವೆ ಮಾಡಿದಂತೆ ಎಂಬ ಸಾಯಿಬಾಬ ಅವರ ಮಾತನ್ನು ನೆನಪಿಸುತ್ತದೆ’ ಎಂದು ಐಶ್ವರ್ಯಾ ಹೇಳಿದರು. ಪ್ರಧಾನಿ ಮೋದಿ ಬಗ್ಗೆ ಅವರು ಸಂತೋಷ ಹೊರಹಾಕಿದರು. ‘ಈ ವಿಶೇಷ ಸಂದರ್ಭದಲ್ಲಿ ಇಂದು ನಮ್ಮೊಂದಿಗೆ ಇದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ಸ್ಫೂರ್ತಿದಾಯಕ ಮಾತುಗಳನ್ನು ಕೇಳಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಐಶ್ವರ್ಯಾ ಹೇಳಿದರು. ಇನ್ನಷ್ಟು ಓದಿರಿ: ಲೆಬನಾನ್ನಲ್ಲಿ ಪ್ಯಾಲೆಸ್ತೀನಿಯನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ, 13 ಮಂದಿ ಸಾವು
Sponsored Ads
image computer academy
image computer academy
image computer academy
image computer academy
LANDSCAPING IN CAD
LANDSCAPING IN CAD
HSRNEWS
HSRNEWS

Related News

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy