belagavi news :
ವಿಶ್ವಮಟ್ಟದಲ್ಲಿ ಮಿನುಗಿನ ಹುಬ್ಬಳ್ಳಿ ಪ್ರತಿಭೆ : ಜರ್ಮನಿಯಲ್ಲಿ ಬೆಳ್ಳಿ ಪದಕ ಗೆದ್ದ ಐಶ್ವರ್ಯ ಬಾಲೇಹೊಸೂರ್
ಹುಬ್ಬಳ್ಳಿ,ಜೂನ್ 2026 : ಕರ್ನಾಟಕದ ಹೆಮ್ಮೆಯ ಪುತ್ರಿ, ಹುಬ್ಬಳ್ಳಿಯ ಶೂಟರ್ ಐಶ್ವರ್ಯ ರವಿಚಂದ್ರ ಬಾಲೇಹೊಸೂರ್ ಅವರು ಜರ್ಮನಿಯ ಸುಲ್ ನಗರದಲ್ಲಿ ನಡೆದ ಐ.ಎಸ್.ಎಸ್.ಎಫ್ ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್ಶಿಪ್ ನಲ್ಲಿ ಭಾರತಕ್ಕೆ ಮತ್ತೊಂದು ಗೌರವ ತಂದು ಕೊಟ್ಟಿದ್ದಾರೆ. 50 ಮೀಟರ್ ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅವರು ಬೆಳ್ಳಿ ಪದಕವನ್ನು ಗೆದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಅತ್ಯಂತ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕವು ಕೂದಲೆಳೆ ಅಂತರದಲ್ಲಿ ಕೈತಪ್ಪಿದ್ದರು, ಐಶ್ವರ್ಯ ಅವರ ಹೋರಾಟದ ಮನೋಭಾವ ಮತ್ತು ನಿಖರ ಗುರಿ ಆಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಶ್ವದ ವಿವಿಧ ದೇಶಗಳ ಪ್ರತಿಭಾವಂತ ಶೂಟರ್ ಗಳ ನಡುವೆ ಭಾರತದ ಪರ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದಿರುವ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ.
ಐಶ್ವರ್ಯ ಅವರ ಈ ಸಾಧನೆ ಹುಬ್ಬಳ್ಳಿ ಮಾತ್ರವಲ್ಲದೆ ಕರ್ನಾಟಕ ಮತ್ತು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಕ್ರೀಡಾ ವಲಯದ ಗಣ್ಯರು, ತರಬೇತುದಾರರು ಹಾಗೂ ಸಾರ್ವಜನಿಕರು ಅವರಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ದೊಡ್ಡ ಸಾಧನೆ ಮಾಡಿ ಭಾರತದ ತ್ರಿವರ್ಣ ಧ್ವಜವನ್ನು ವಿಶ್ವದ ವೇದಿಕೆಯಲ್ಲಿ ಮತ್ತಷ್ಟು ಎತ್ತರಕ್ಕೆ ಹಾರಿಸುವ ವಿಶ್ವಾಸ ವ್ಯಕ್ತವಾಗುತ್ತಿದೆ.
ಈ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡ ಒಟ್ಟು 25 ಪದಕಗಳನ್ನು ತನ್ನದಾಗಿಸಿಕೊಂಡು ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿರುವುದು ಮತ್ತೊಂದು ವಿಶೇಷ ಸಾಧನೆಯಾಗಿದೆ. ಭಾರತದ ಯುವ ಶೂಟರ್ಗಳ ಅದ್ಬುತ ಪ್ರದರ್ಶನ ದೇಶದ ಶೂಟಿಂಗ್ ಕ್ರೀಡೆಯ ಭವಿಷ್ಯದ ಬಗ್ಗೆ ಹೊಸ ಭರವಸೆ ಮೂಡಿಸಿದೆ.
ಹುಬ್ಬಳ್ಳಿಯ ಐಶ್ವರ್ಯ ಬಾಲೇಹೊಸೂರ್ ಅವರ ಈ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದು, ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸದಿಂದ ವಿಶ್ವಮಟ್ಟದಲ್ಲಿ ಯಶಸ್ಸು ಸಾಧಿಸಬಹುದು ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ.
ಕೂದಲೆಳೆ ಅಂತರದಲ್ಲಿ ಚಿನ್ನ ಕೈ ತಪ್ಪಿತು : ಜರ್ಮನಿಯಲ್ಲಿ ಬೆಳ್ಳಿ ಪದಕ ಗೆದ್ದು ಮಿನುಗಿದ ಹುಬ್ಬಳ್ಳಿಯ ಐಶ್ವರ್ಯ ಬಾಲೇಹೊಸೂರು
ಜರ್ಮನಿಯ ಸುಲ್ ನಗರದಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್ಶಿಪ್ ನಲ್ಲಿ ಕರ್ನಾಟಕದ ಹುಬ್ಬಳ್ಳಿಯ ಶೂಟರ್ ಐಶ್ವರ್ಯ ರವಿಚಂದ್ರನ್ ಬಾಲೇಹೊಸೂರು ವಿಶ್ವಮಟ್ಟದ ಸಾಧನೆ ಮಾಡಿ ಭಾರತಕ್ಕೆ ಬೆಳ್ಳಿ ಪದಕ ತಂದು ಕೊಟ್ಟಿದ್ದಾರೆ. 50 ಮೀಟರ್ ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಅವರು,ಕೇವಲ ಒಂದು 'ಇನ್ನರ್ - 10' ಶಾರ್ಟ್ ಕೊರತೆಯಿಂದ ಚಿನ್ನದ ಪದಕವನ್ನು ತಪ್ಪಿಸಿಕೊಂಡಿದ್ದು, ಅವರ ಹೋರಾಟ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.
ಸ್ಪರ್ಧೆಯ ಆರನೇ ಹಾಗೂ ಅಂತಿಮ ಸುತ್ತಿನ ಅಂತ್ಯಕ್ಕೆ ಐಶ್ವರ್ಯ ಮತ್ತು ರಷ್ಯಾದ ತಟಸ್ಥ ಅಥ್ಲೆಟ್ ಸೋಫಿಯಾ ಸ್ಮೆಟಾಂಕಿನಾ ಇಬ್ಬರು ತಲಾ 540 ಅಂಕಗಳನ್ನು ಗಳಿಸಿ ಜಂಟಿ ಅಗ್ರಸ್ಥಾನದಲ್ಲಿದ್ದರು. ಬಳಿಕ ವಿಜೇತರನ್ನು ನಿರ್ಧರಿಸಲು ಬಳಸಲಾದ 'ಇನ್ನರ್ -10' ಲೆಕ್ಕಾಚಾರದಲ್ಲಿ ಸೋಫಿಯಾ 12 ಬಾರಿ ನಿಖರ ಗುರಿ ತಲುಪಿದ್ದರೆ, ಐಶ್ವರ್ಯ 11 ಬಾರಿ ಮಾತ್ರ ಗುರಿ ಸಾಧಿಸಿದ್ದರು. ಈ ಕಾರಣದಿಂದ ಕೇವಲ ಒಂದು 'ಇನ್ನರ್ -10' ಶಾಟ್ ಅಂತರದಲ್ಲಿ ಚಿನ್ನದ ಪದಕ ಕೈತಪ್ಪಿ, ಐಶ್ವರ್ಯ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಇದೇ ವಿಭಾಗದಲ್ಲಿ ಮಂಗೋಲಿಯಾದ ಅರಿಯುಂಜಯ ಅಮರಬಯಾಸ್ಗಲನ್ ಕಂಚಿನ ಪದಕ ಗೆದ್ದರು.
ಸ್ಪರ್ಧೆಯ ಆರಂಭದಿಂದಲೇ ಐಶ್ವರ್ಯ ಆತ್ಮವಿಶ್ವಾಸದಿಂದ ಕೂಡಿದ ಪ್ರದರ್ಶನ ನೀಡಿದರು. ಮೊದಲ ಸುತ್ತಿನಲ್ಲೇ 90 ಅಂಕಗಳನ್ನು ಗಳಿಸಿ ಭರ್ಜರಿ ಆರಂಭ ಮಾಡಿದವರು, ನಂತರದ ಐದು ಸುತ್ತುಗಳಲ್ಲೂ ನಿರಂತರವಾಗಿ 90ಕ್ಕೂ ಹೆಚ್ಚು ಅಂಕಗಳನ್ನು ದಾಖಲಿಸಿದ್ದರು. ಐದನೇ ಸುತ್ತಿನವರೆಗೂ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದ ಐಶ್ವರ್ಯ ಅಂತಿಮ ಕ್ಷಣದವರೆಗೂ ಚಿನ್ನಕ್ಕಾಗಿ ಹೋರಾಡಿದರು. ಅವರ ಸ್ಥಿರ ಪ್ರದರ್ಶನ ಮತ್ತು ಮಾನಸಿಕ ದೃಢತೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಮತ್ತೊಮ್ಮೆ ಭಾರತದ ಸಾಮರ್ಥ್ಯವನ್ನು ಸಾಬೀತುಪಡಿಸಿತು.
ಇದೇ ಸ್ಪರ್ಧೆಯಲ್ಲಿ ಭಾರತದ ಇತರ ಶೂಟರ್ ಗಳಾದ ಪಾರ್ಶಿನಾ ಗುಪ್ತ 4ನೇ ಸ್ಥಾನ, ಸಂಸ್ಕೃತಿ ಬಾನಾ ಎಂಟನೇ ಸ್ಥಾನ ಹಾಗೂ ಸೇಜಲ್ ಕಾಂಬ್ಳೆ 13ನೇ ಸ್ಥಾನ ಪಡೆದು ಉತ್ತಮ ಪ್ರದರ್ಶನ ನೀಡಿದರು.
ಈ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ ನಲ್ಲಿ ಭಾರತ ತಂಡ ಒಟ್ಟು ಏಳು ಚಿನ್ನ, ಎಂಟು ಬೆಳ್ಳಿ ಮತ್ತು 10 ಕಂಚಿನ ಪದಕಗಳೊಂದಿಗೆ 25 ಪದಕಗಳನ್ನು ತನ್ನದಾಗಿಸಿಕೊಂಡು ಪದಕ ಪಟ್ಟಿಯಲ್ಲಿ ಜಾಗೃತವಾಗಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಭಾರತೀಯ ಯುವ ಶೂಟರ್ ಗಳ ಈ ಸಾಧನೆ ದೇಶದ ಶೂಟಿಂಗ್ ಕ್ರೀಡೆಗೆ ಹೊಸ ಉತ್ತೇಜನ ನೀಡಿದ್ದು, ಭವಿಷ್ಯದ ಒಲಂಪಿಕ್ ಹಾಗೂ ವಿಶ್ವ ಮಟ್ಟದ ಸ್ಪರ್ಧೆಗಳಿಗೂ ಆಶಾಭಾವನೆ ಮೂಡಿಸಿದೆ.
ಹುಬ್ಬಳ್ಳಿಯ ಐಶ್ವರ್ಯ ಬಾಲೇ ಹೊಸೂರ್ ಅವರ ಈ ಸಾಧನೆ ಕರ್ನಾಟಕದ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿದಾಯಕವಾಗಿದ್ದು, ಕಠಿಣ ಪರಿಶ್ರಮ, ಶಿಸ್ತು ಮತ್ತು ನಿಯಂತ್ರಣ ಅಭ್ಯಾಸದಿಂದ ವಿಶ್ವ ವೇದಿಕೆಯಲ್ಲೂ ಯಶಸ್ಸು ಸಾಧಿಸಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ತಂದೆಯೇ ಮೊದಲ ಗುರು : ಹುಬ್ಬಳ್ಳಿಯ ಶೂಟರ್ ಅಕಾಡೆಮಿ ಯಿಂದ ವಿಶ್ವವೇದಿಕೆಯವರಿಗೆ ಐಶ್ವರ್ಯ ಸಾಧನೆಯ ಪಯಣ
ಜರ್ಮನಿಯ ಸುನ್ ನಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ ಹುಬ್ಬಳ್ಳಿಯ ಯುವ ಶೂಟರ್ ಐಶ್ವರ್ಯ ರವಿಚಂದ್ರನ್ ಬಾಲೇಹೊಸೂರ್ ಅವರ ಯಶಸ್ಸಿನ ಹಿಂದೆ ಹಲವು ವರ್ಷಗಳ ಶ್ರಮ, ಶಿಸ್ತು ಮತ್ತು ಕುಟುಂಬದ ಬೆಂಬಲ ಅಡಗಿದೆ .
.ಕಳೆದ ಫೆಬ್ರುವರಿಯಲ್ಲಿಷ್ಟೇ 18ನೇ ವಯಸ್ಸಿಗೆ ಕಾಲಿಟ್ಟಿರುವ ಐಶ್ವರ್ಯ ಅವರಿಗೆ ಶೂಟಿಂಗ್ ಕಲೆ ಹೊಸದಲ್ಲ. ಅವರ ತಂದೆ ರವಿಚಂದ್ರ ಬಾಲೇಹೊಸೂರ್ ಅವರು ರಾಷ್ಟ್ರೀಯ ಮಟ್ಟದಲ್ಲಿ ' ಸರ್ವಿಸಸ್' ತಂಡವನ್ನು ಪ್ರತಿನಿಧಿಸಿದ ಅನುಭವಿ ಶೂಟರ್. ತಂದೆಯ ಅನುಭವ ಮತ್ತು ಮಾರ್ಗದರ್ಶನವೇ ಐಶ್ವರ್ಯ ಅವರ ಕ್ರೀಡಾ ಬದುಕಿನ ಭದ್ರ ಅಡಿಪಾಯವಾಗಿದೆ.
ಹುಬ್ಬಳ್ಳಿಯಲ್ಲಿ ರವಿಚಂದ್ರನ್ ಬಾಲೇಹೊಸೂರ್ ಹಾಗೂ ಅವರ ಸಹೋದರ ಶಿವಾನಂದ್ ಬಾಲೇಹೊಸೂರ್ ನಡೆಸುತ್ತಿರುವ ಶೂಟಿಂಗ್ ಅಕಾಡೆಮಿಯಲ್ಲಿ ಐಶ್ವರ್ಯ ತಮ್ಮ ಆರಂಭಿಕ ತರಬೇತಿಯನ್ನು ಪಡೆದು, ಪ್ರತಿ ದಿನ ಕಠಿಣ ಅಭ್ಯಾಸದ ಮೂಲಕ ತಮ್ಮ ಗುರಿಯನ್ನು ಮತ್ತಷ್ಟು ಚುರುಕುಗೊಳಿಸಿಕೊಂಡು. ಬಾಲ್ಯದಿಂದಲೇ ಶೂಟಿಂಗ್ ಮೇಲಿನ ಆಸಕ್ತಿ, ನಿರಂತರ ಅಭ್ಯಾಸ ಮತ್ತು ತರಬೇತುದಾರರ ಮಾರ್ಗದರ್ಶನ ಅವರ ಪ್ರತಿಭೆಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದೆ.
ಐಶ್ವರ್ಯ ಅವರ ಪ್ರತಿಭೆ ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದದ್ದು 2023ರಲ್ಲಿ. ಆಗ ಕೇವಲ 15 ವರ್ಷದ ಯಶಸ್ಸಿನಲ್ಲಿ ಭೂಪಾಲ್ ನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಶೂಟಿಂಗ್ ಚಾಂಪಿಯನ್ಶಿವ್ನ 50 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಎಲ್ಲರ ಗಮನ ಸೆಳೆದಿದ್ದರು. ಕಿರಿಯ ವಯಸ್ಸಿನಲ್ಲಿ ಹಿರಿಯರ ವಿಭಾಗದಲ್ಲಿ ಸಾಧನೆ ಮಾಡಿದ ಅವರು, ಭವಿಷ್ಯದ ಭರವಸೆಯ ಶೂಟರ್ ಎಂಬ ಗುರುತನ್ನು ಪಡೆದಿದ್ದರು.
ಈ ವರ್ಷ ದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಶೂಟಿಂಗ್ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಅಂತರಾಷ್ಟ್ರೀಯ ಸ್ಪರ್ಧೆಗೆ ಅರ್ಹತೆ ಪಡೆದಿದ್ದರು. ಆ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಐಶ್ವರ್ಯ ಈಗ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಹೆಸರನ್ನು ಜಾಗತಿಕ ವೇದಿಕೆಯಲ್ಲಿ ಮೆರೆಯಿಸಿದ್ದಾರೆ.
ಹುಬ್ಬಳ್ಳಿಯ ಈ ಯುವತಿಯ ಸಾಧನೆಗೆ ರಾಜ್ಯದ್ಯಂತ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಕ್ರೀಡಾ ಕ್ಷೇತ್ರದ ಗಣ್ಯರು, ಶೂಟಿಂಗ್ ತರಬೇತುದಾರರು ಹಾಗೂ ಸಾರ್ವಜನಿಕರು ಐಶ್ವರ್ಯ ಅವರ ಸಾಧನೆಯನ್ನು ಕೊಂಡಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅವರು ವಿಶ್ವ ಚಾಂಪಿಯನ್ ಹಾಗೂ ಒಲಂಪಿಕ್ ಪದಕ ವಿಜೇತರಾಗಿ ದೇಶಕ್ಕೆ ಇನ್ನಷ್ಟು ಗೌರವ ತಂದು ಕೊಡಲಿ ಎಂಬ ಹಾರೈಕೆಗಳು ವ್ಯಕ್ತವಾಗುತ್ತಿವೆ.
ಹುಬ್ಬಳ್ಳಿಯ ಶೂಟಿಂಗ್ ಅಕಾಡೆಮಿಯಿಂದ ಆರಂಭವಾದ ಐಶ್ವರ್ಯ ಬಾಲೇಹೊಸೂರ್ ಅವರ ಪಯಣ ಇದೀಗ ವಿಶ್ವವೇದಿಕೆಯನ್ನು ತಲುಪಿದ್ದು, ಕರ್ನಾಟಕದ ಯುವ ಕ್ರೀಡಾಪಟುಗಳಿಗೆ ಹೊಸ ಕನಸುಗಳನ್ನು ಕಟ್ಟಿಕೊಡುವ ಸ್ಫೂರ್ತಿದಾಯಕ ಯಶೋಗಾಥೆಯಾಗಿ ರೂಪುಗೊಂಡಿದೆ.
Also Read:
ಸಮಂತಾ ಅದೃಷ್ಟ ಬದಲಿಸಿದ ಸಿನಿಮಾ : ನಿರ್ಮಾಪಕರಿಲ್ಲದೆ ಶುರುವಾಗಿ ಈಗ ಕೋಟಿ ರೂ.ಗಳಿಗೆ