<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ವರ್ಚುಯಲ್ ಮೂಲಕ ಕೋರ್ಟ್ ಗೆ ಹಾಜರಾದ ಅಲ್ಲು ಅರ್ಜುನ್; ಕಾಲ್ತುಳಿತ ಪ್ರಕರಣದ ವಿಚಾರಣೆ ಮುಂದೂಡಿಕೆ.

ವರ್ಚುಯಲ್ ಮೂಲಕ ಕೋರ್ಟ್ ಗೆ ಹಾಜರಾದ ಅಲ್ಲು ಅರ್ಜುನ್; ಕಾಲ್ತುಳಿತ ಪ್ರಕರಣದ ವಿಚಾರಣೆ ಮುಂದೂಡಿಕೆ.
Summary: Actor Allu Arjun has appeared in court virtually in connection with the stampede case against him. The court, which heard the arguments of both parties during the hearing of the case, has postponed the hearing to a later date. This development has led to a lot of discussion in the film industry and fan circles, increasing curiosity about the next stage of the case.

Belagavi News:

ಹೈದರಾಬಾದ್: Allu Arjun ಆರೋಪಿಯಾಗಿರುವ Sandhya Theatre ಕಾಲ್ತುಳಿತ ಪ್ರಕರಣದ ವಿಚಾರಣೆಯನ್ನು ಹೈದರಾಬಾದ್ Nampally Criminal Court ಜುಲೈ 6ಕ್ಕೆ ಮುಂದೂಡಿಕೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರಾಗುವಂತೆ ಅಲ್ಲು ಅರ್ಜುನ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ, ಶೂಟಿಂಗ್ ನಿಮಿತ್ತ ಮುಂಬೈನಲ್ಲಿ ಇರುವುದರಿಂದ ಖುದ್ದು ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ ನಟ, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದರು. ಈ ಮನವಿಯನ್ನು ನ್ಯಾಯಾಲಯ ಅಂಗೀಕರಿಸಿದ್ದು, ಅಲ್ಲು ಅರ್ಜುನ್ ವರ್ಚುಯಲ್ ಮೂಲಕ ವಿಚಾರಣೆಗೆ ಹಾಜರಾದರು.

ಆದರೆ, ಪ್ರಕರಣದ ಕೆಲ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ ಕಾರಣ ವಿಚಾರಣೆಯನ್ನು ಮುಂದೂಡಲಾಯಿತು. ಸಂಧ್ಯಾ ಥಿಯೇಟರ್ ಆಡಳಿತ ಮಂಡಳಿಯ ಪರ ವಕೀಲ ಭಾನು ಚಂದರ್ ಮಾತನಾಡಿ, 23 ಆರೋಪಿಗಳ ಪೈಕಿ ಒಬ್ಬರು ಅಥವಾ ಇಬ್ಬರು ಗೈರುಹಾಜರಾಗಿದ್ದರಿಂದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜುಲೈ 6ಕ್ಕೆ ನಿಗದಿಪಡಿಸಿದೆ ಎಂದು ತಿಳಿಸಿದರು. ಮುಂದಿನ ವಿಚಾರಣೆಗೆ ಎಲ್ಲಾ 23 ಆರೋಪಿಗಳು ಕಡ್ಡಾಯವಾಗಿ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ ಎಂದರು.

Sponsored

ಈ ಪ್ರಕರಣದಲ್ಲಿ ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್ ಅವರನ್ನು 11 ನೇ ಆರೋಪಿಯಾಗಿ ಗುರುತಿಸಿದ್ದು, ಸಂಧ್ಯಾ ಥಿಯೇಟರ್ ಆಡಳಿತ ಮಂಡಳಿಯ ಸದಸ್ಯರನ್ನು 1ರಿಂದ 10ನೇ ಆರೋಪಿಗಳೆಂದು ಪಟ್ಟಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 23 ಆರೋಪಿಗಳ ವಿರುದ್ಧ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ .

2024 ರ ಡಿಸೆಂಬರ್ 4 ರಂದು, Pushpa 2: The Rule ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕಾಗಿ ಸಂಧ್ಯಾ ಥಿಯೇಟರ್ ಗೆ ಆಗಮಿಸಿದ್ದ ಅಲ್ಲು ಅರ್ಜುನ್ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಸೇರಿದ್ದರು. ಈ ವೇಳೆ ಉಂಟಾದ ಭಾರೀ ನೂಕುನಗ್ಗಲು ಮತ್ತು ಕಾಲ್ತುಳಿತದಿಂದ ದುರಂತ ಸಂಭವಿಸಿದ್ದು, ಪ್ರಕರಣವು ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು.

2024 ರ ಡಿಸೆಂಬರ್ 4 ರಂದು ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದರು. ಥಿಯೇಟರ್ ನೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪುತ್ರ ಶ್ರೀತೇಜ ಕಾಲ್ತುಳಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಘಟನೆಯ ಬಳಿಕ ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆಯ ಆಧಾರದ ಮೇಲೆ ಸಂಧ್ಯಾ ಥಿಯೇಟರ್ ಆಡಳಿತ ಮಂಡಳಿ ಸೇರಿದಂತೆ ಒಟ್ಟು 23 ಮಂದಿಯನ್ನು ಆರೋಪಿಗಳಾಗಿ ಗುರುತಿಸಲಾಗಿದ್ದು, ನಟ ಅಲ್ಲು ಅರ್ಜುನ್ ಅವರನ್ನು 11 ನೇ ಆರೋಪಿಯಾಗಿ ಸೇರಿಸಲಾಗಿದೆ.

Sponsored

ದುರಂತದ ನಂತರ ಮೃತಪಟ್ಟ ರೇವತಿ ಅವರ ಕುಟುಂಬಕ್ಕೆ ನೆರವಾಗಲು ಅಲ್ಲು ಅರ್ಜುನ್ ಆರ್ಥಿಕ ಸಹಾಯ ಘೋಷಿಸಿದ್ದರು. ಜೊತೆಗೆ ಅವರ ತಂದೆ ಹಾಗೂ ಖ್ಯಾತ ನಿರ್ಮಾಪಕ Allu Aravind ಅವರು ಕುಟುಂಬಕ್ಕೆ 2 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದ್ದರು. ಈ ಮೂಲಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಬೆಂಬಲ ನೀಡುವ ಪ್ರಯತ್ನ ಮಾಡಲಾಗಿತ್ತು.

ಈ ಪ್ರಕರಣದ ವಿಚಾರಣೆ ಇದೀಗ ನ್ಯಾಯಾಲಯದಲ್ಲಿ ಮುಂದುವರೆಯುತ್ತಿದ್ದು, ಮುಂದಿನ ವಿಚಾರಣೆ ಜುಲೈ 6 ರಂದು ನಡೆಯಲಿದೆ. ಪ್ರಕರಣದ ಬೆಳವಣಿಗೆಗಳ ಮೇಲೆ ಸಿನಿರಂಗ ಮತ್ತು ಅಭಿಮಾನಿಗಳ ವಲಯದ ಗಮನ ನೆಟ್ಟಿದೆ.

Also Read:

ಸಂಪುಟ ವಿಸ್ತರಣೆ ಫಾರ್ಮುಲಾ ಬಹಿರಂಗ ? ಹೆಚ್.ಡಿ.ಕೆ ವಿವಾದಾತ್ಮಕ ಹೇಳಿಕೆ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online