<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಅಮರನಾಥ ಯಾತ್ರೆ 2026 ಆರಂಭ : ಅಮರನಾಥ ಯಾತ್ರೆಗೆ ಹೋಗುವ ಮೊದಲು ಇದನ್ನು ಓದಿ ; ನಿಷೇಧಿತ ವಸ್ತುಗಳ ಸಂಪೂರ್ಣ ಪಟ್ಟಿ

ಅಮರನಾಥ ಯಾತ್ರೆ 2026 ಆರಂಭ : ಅಮರನಾಥ ಯಾತ್ರೆಗೆ ಹೋಗುವ ಮೊದಲು ಇದನ್ನು ಓದಿ ; ನಿಷೇಧಿತ ವಸ್ತುಗಳ ಸಂಪೂರ್ಣ ಪಟ್ಟಿ
Summary: Devotees going on Amarnath Yatra starting from July 3 should know these important rules without fail. What are the prohibited items during the pilgrimage? Here is the complete information...

Belagavi News:

ಲಕ್ಷಾಂತರ ಶಿವಭಕ್ತರು ವರ್ಷಪೂರ್ತಿ ಕಾತುರದಿಂದ ಕಾಯುವ ಪವಿತ್ರ ಅಮರನಾಥ ಯಾತ್ರೆ 2026 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಜುಲೈ 3 ರಿಂದ ಅಧಿಕೃತವಾಗಿ ಆರಂಭವಾಗಲಿರುವ ಈ ಮಹಾ ಯಾತ್ರೆಯು ಆಗಸ್ಟ್ 28 ರ ವರೆಗೆ ನಡೆಯಲಿದೆ. ಹಿಮಾಲಯದ ದುರ್ಗಮ ಪ್ರದೇಶದಲ್ಲಿ ನಡೆಯುವ ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರು ಮುಂಚಿತವಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡರೆ ಮಾತ್ರ ಸುರಕ್ಷಿತ ಹಾಗೂ ಸುಗಮ ಯಾತ್ರೆ ಸಾಧ್ಯ.

ಯಾತ್ರೆ ಆರಂಭಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜೇಷ್ಠ ಪೌರ್ಣಮಿಯ ಶುಭ ಸಂದರ್ಭದಲ್ಲಿ ಸಾಂಪ್ರದಾಯಿಕ ಪ್ರಥಮ ಪೂಜೆ ನೆರವೇರಿಸುವ ಮೂಲಕ ಬಾಬಾ, ಬರ್ಫಾನಿ ಯಾತ್ರೆಗೆ ಅಧಿಕೃತ ಚಾಲನೆ ನೀಡಿದ್ದಾರೆ.

ಯಾತ್ರೆಗೆ ಹೊರಡುವ ಮುನ್ನ ಈ ಸಿದ್ಧತೆಗಳು ಕಡ್ಡಾಯ :

ಅಮರನಾಥ ಯಾತ್ರೆಯ ವೇಳೆ ಹವಾಮಾನ ಕ್ಷಣಕ್ಕೂ ಬದಲಾಗುವ ಸಾಧ್ಯತೆ ಇರುವುದರಿಂದ ಬೆಚ್ಚನೆಯ ಬಟ್ಟೆಗಳು, ಮಳೆ ರಕ್ಷಣೆಗಾಗಿ ರೈನ್ ಕೋರ್ಟ್, ಉತ್ತಮ ಗುಣಮಟ್ಟದ ಟ್ರೆಕ್ಕಿಂಗ್ ಶೂಗಳು, ವೈಯಕ್ತಿಕ ಔಷಧಿಗಳು ಹಾಗೂ ಅಗತ್ಯ ಗುರುತಿನ ದಾಖಲೆಗಳನ್ನು ಕಡ್ಡಾಯವಾಗಿ ಜೊತೆಯಲ್ಲಿ ಇಟ್ಟುಕೊಳ್ಳಬೇಕು. ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಯಾತ್ರೆಗೆ ಸಿದ್ದರಾಗುವುದು ಕೂಡ ಅಷ್ಟೇ ಮುಖ್ಯ.

ಅನಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಬೇಡಿ :

ಯಾತ್ರೆಯ ವೇಳೆ ಭಾರವಾದ ಅಥವಾ ಅನಗತ್ಯ ಸಾಮಾನುಗಳನ್ನು ಹೊತ್ತುಕೊಂಡು ಹೋಗುವುದನ್ನು ತಪ್ಪಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಆಡಳಿತ ನೀಡುವ ಸೂಚನೆಗಳನ್ನು ಅನುಸರಿಸಿದರೆ ಯಾತ್ರೆಯನ್ನು ಸುರಕ್ಷಿತವಾಗಿ ಪೂರ್ಣಗೊಳಿಸಬಹುದು.

ಪ್ರತಿ ವರ್ಷ ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಹಿಮದಿಂದ ರೂಪಗೊಳ್ಳುವ ಸ್ವಯಂ ಭೂ ಶಿವಲಿಂಗದ ದರ್ಶನಕ್ಕಾಗಿ ಅಮರನಾಥ ಗುಹೆಗೆ ಭೇಟಿ ನೀಡುತ್ತಾರೆ. ಈ ಬಾರಿ ಕೂಡ ಭಾರಿ ಸಂಖ್ಯೆಯ ಭಕ್ತರು ಯಾತ್ರೆಯಲ್ಲಿ ಪಾಲ್ಗೊಳ್ಳುವ ನೀರಿಕ್ಷೆ ಇದ್ದು, ಆಡಳಿತವೂ ಭದ್ರತೆ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಕುರಿತು ವ್ಯಾಪಕ ಚರ್ಚೆಗಳನ್ನು ಕೈಗೊಂಡಿದೆ.

ಅಮರನಾಥ ಯಾತ್ರೆಗೆ ತೆರಳುತ್ತಿದ್ದಿರಾ? ಬ್ಯಾಗ್ ನಲ್ಲಿ ಈ ವಸ್ತುಗಳು ಕಡ್ಡಾಯ; ಸುರಕ್ಷಿತ ಯಾತ್ರೆಗೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ :

ಜುಲೈ 3 ರಿಂದ ಆರಂಭವಾಗಲಿರುವ ಪವಿತ್ರ ಅಮರನಾಥ ಯಾತ್ರೆ 2026 ಗೆ ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಶುಭ ಭಕ್ತರು ಸಿದ್ಧತೆ ನಡೆಸುತ್ತಿದ್ದಾರೆ. ಹಿಮಾಲಯದ ದುರ್ಗಮ ಪರ್ವತ ಮಾರ್ಗದಲ್ಲಿ ನಡೆಯುವ ಈ ಯಾತ್ರೆ ಭಕ್ತರಿಗೆ ಆಧ್ಯಾತ್ಮಿಕ ಅನುಭವ ನೀಡುವುದರ ಜೊತೆಗೆ ದೈಹಿಕ ಸಾಮರ್ಥ್ಯಕ್ಕೂ ಸವಾಲು ಒಡ್ಡುತ್ತದೆ. ಆದ್ದರಿಂದ ಯಾತ್ರೆಗೆ ತೆರಳುವ ಮುನ್ನ ಸರಿಯಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ.

ಅಮರನಾಥ ಯಾತ್ರೆಯ ಮಾರ್ಗವು ಸಮುದ್ರ ಮಟ್ಟದಿಂದ ಹೆಚ್ಚಿನ ಎತ್ತರದಲ್ಲಿರುವುದರಿಂದ ಇಲ್ಲಿನ ಹವಾಮಾನ ಕೆಲವೇ ಕ್ಷಣಗಳಲ್ಲಿ ಬದಲಾಗಬಹುದು. ಬೆಳಗ್ಗೆ ಬಿಸಿಲಿದ್ದರೂ, ಮಧ್ಯಾಹ್ನ ಅಥವಾ ಸಂಜೆ ವೇಳೆ ತೀವ್ರ ಚಳಿ , ಮಳೆ ಅಥವಾ ಗಾಳಿ ಎದುರಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಯಾತ್ರಿಕರೂ ತಮ್ಮ ಬ್ಯಾಗ್ ನಲ್ಲಿ ಅಗತ್ಯ ವಸ್ತುಗಳನ್ನು ಮಾತ್ರ ಪ್ಯಾಕ್ ಮಾಡಬೇಕು.

ಚಳಿಯಿಂದ ರಕ್ಷಿಸಿಕೊಳ್ಳಲು ಥರ್ಮಲ್ ಒಳ ಉಡುಪು, ಉಣ್ಣೆಯ ಸ್ವೆಟರ್ , ಜಲ ನಿರೋಧಕ ಅಥವಾ ವಿಂಡ್ ಬ್ರೇಕರ್ ಜಾಕೆಟ್, ಕೈಗವಸುಗಳು , ಉಣ್ಣಿಯ ಟೋಪಿ, ಮಫ್ಲರ್, ಹೆಚ್ಚುವರಿ ಉಣ್ಣೆಯ ಸಾಕ್ಸ್ ಹಾಗೂ ರೈನ್ ಕೋಟ್ ಕಡ್ಡಾಯವಾಗಿ ಇರಬೇಕು. ಈ ವಸ್ತುಗಳು ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಆರೋಗ್ಯ ಕಾಪಾಡಲು ನೆರವಾಗುತ್ತವೆ.

ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಕೂಡ ಅಗತ್ಯವಾಗಿದೆ. ಬಿಪಿ, ಮಧುಮೇಹ, ಅಸ್ತಮಾ ಅಥವಾ ಇತರ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ತಮ್ಮ ನಿಯಮಿತ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕೊಂಡೊಯ್ಯಬೇಕು. ಜೊತೆಗೆ ಪ್ರಥಮ ಚಿಕಿತ್ಸಾ ಕಿಟ್ ನಲ್ಲಿ ಜ್ವರ, ಮೈ ಕೈ ನೋವು, ವಾಂತಿ ಹಾಗೂ ಸಣ್ಣ ಗಾಯಗಳಿಗೆ ಅಗತ್ಯ ಔಷಧಿಗಳು ಮತ್ತು ಗುಲಾಮಗಳನ್ನು ಇಟ್ಟುಕೊಳ್ಳುವುದು ಉತ್ತಮ.

ಯಾತ್ರಿಯ ವೇಳೆ ಯಾವುದೇ ತೊಂದರೆಯ ದುರಾಗದಂತೆ ಅಗತ್ಯ ದಾಖಲೆಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕು. ಅಮರನಾಥ ಯಾತ್ರೆ ನೊಂದಣಿ ಚೀಟಿ, ಕಡ್ಡಾಯ ಆರೋಗ್ಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಅಥವಾ ಇತರ ಮಾನ್ಯ ಸರ್ಕಾರಿ ಗುರುತಿನ ಚೀಟಿ ಹಾಗೂ ತುರ್ತು ಸಂಪರ್ಕ ಸಂಖ್ಯೆಗಳ ಪಟ್ಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಈ ದಾಖಲೆಗಳ ಮುದ್ರಿತ ಪ್ರತಿಹ ಜೊತೆಗೆ ಮೊಬೈಲ್ ನಲ್ಲಿ ಡಿಜಿಟಲ್ ಪ್ರತಿಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವುದು ಒಳಿತು.

ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಲು ಸನ್ ಗ್ಲಾಸ್, ಸನ್ ಸ್ಕ್ರೀನ್, ಲಿಪ್ ಬಾಮ್, ಟಾರ್ಚ್, ಪವರ್ ಬ್ಯಾಂಕ್, ಮೊಬೈಲ್ ಚಾರ್ಜರ್, ನೀರಿನ ಬಾಟಲಿ, ಡ್ರೈ ಫ್ರೂಟ್ಸ್, ಎನರ್ಜಿ ಬಾರ್ ಗಳು ಹಾಗೂ ಗ್ಲುಕೋಸ್ ಪ್ಯಾಕೆಟ್ ಗಳನ್ನು ಕೊಂಡೋಯ್ಯುವುದು ಸೂಕ್ತ. ಇವು ದೀರ್ಘ ನಡಿಗೆ ಮತ್ತು ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಯಾತ್ರಿಕರಿಗೆ ಸಹಕಾರಿಯಾಗುತ್ತವೆ.

ಯಾತ್ರೆಗೆ ತೆರಳುವಾಗ ಅನಗತ್ಯ ಅಥವಾ ಭಾರವಾದ ಸಾಮಾನುಗಳನ್ನು ತೆಗೆದುಕೊಂಡು ಹೋಗುವುದನ್ನು ತಪ್ಪಿಸುವುದು ಉತ್ತಮ. ಕಡಿಮೆ ತೂಕದ ಬ್ಯಾಗ್ , ಅಗತ್ಯ ವಸ್ತುಗಳು ಮತ್ತು ಆಡಳಿತ ನೀಡಿರುವ ಸುರಕ್ಷಿತ ಮಾರ್ಗಸೂಚಿಗಳನ್ನು ಪಾಲಿಸಿದರೆ ಅಮರನಾಥಯಾತ್ರೆಯನ್ನು ಸುರಕ್ಷಿತವಾಗಿ, ಸುಗಮವಾಗಿ ಹಾಗೂ ಯಶಸ್ವಿಯಾಗಿ ಪೂರ್ಣಗೊಳಿಸಬಹುದು.

ಅಮರನಾಥ ಯಾತ್ರೆ 2026 - ಈ ವಸ್ತುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬೇಡಿ; ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ :

ಅಮರನಾಥ ಯಾತ್ರೆಯ ದುರ್ಗಮ ಪರ್ವತ ಮಾರ್ಗದಲ್ಲಿ ಪ್ರಯಾಣಿಸುವಾಗ ಬ್ಯಾಗ್ ನ ತೂಕ ಸಾಧ್ಯವಾದಷ್ಟು ಕಡಿಮೆ ಇರಬೇಕು. ಆದ್ದರಿಂದ ದುಬಾರಿ ಆಭರಣಗಳು, ಹೆಚ್ಚಿನ ಪ್ರಮಾಣದ ನಗದು, ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ವಸ್ತುಗಳು, ಮಧ್ಯ , ತಂಬಾಕು ಹಾಗೂ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಾರದು. ವೈದ್ಯರ ಅಧಿಕೃತ ಸಲಹೆ ಇಲ್ಲದೆ ಆಮ್ಲಜನಕ ಸಿಲೆಂಡರ್ ಅಥವಾ ವಿಶೇಷ ಔಷಧಿಗಳನ್ನು ಬಳಸುವುದನ್ನು ತಪ್ಪಿಸಬೇಕು.

ಸಮುದ್ರ ಮಟ್ಟದಿಂದ ಹೆಚ್ಚಿನ ಎತ್ತರದಲ್ಲಿ ನಡೆಯುವ ಈ ಯಾತ್ರೆಯಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇರುವುದರಿಂದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ. ಬೆಟ್ಟ ಹತ್ತುವಾಗ ಆತುರ ಪಡದೆ ನಿಧಾನವಾಗಿ ಸಾಗಬೇಕು, ಸಾಕಷ್ಟು ನೀರು ಕುಡಿಯಬೇಕು ಹಾಗೂ ಮಧ್ಯ ಮಧ್ಯ ವಿಶ್ರಾಂತಿ ಪಡೆಯಬೇಕು. ಸ್ಥಳೀಯ ಆಡಳಿತ ಮತ್ತು ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಸುರಕ್ಷಿತ ಯಾತ್ರೆಗೆ ಅತ್ಯಗತ್ಯ.

ಉಸಿರಾಟದ ತೊಂದರೆ, ತಲೆ ತಿರುಗುವಿಕೆ ಅಥವಾ ಎದೆ ನೋವು ಕಾಣಿಸಿಕೊಂಡರೆ ತಕ್ಷಣ ಸಮೀಪದ ವೈದ್ಯಕೀಯ ಕೇಂದ್ರವನ್ನು ಸಂಪರ್ಕಿಸಬೇಕು. ಅಮರನಾಥ ಯಾತ್ರೆ ಕೇವಲ ಆಧ್ಯಾತ್ಮಿಕ ಅನುಭವವಲ್ಲ, ದೈಹಿಕವಾಗಿ ಸವಾಲಿನ ಪಯಣವು ಆಗಿರುವುದರಿಂದ ಸೂಕ್ತ ಸಿದ್ಧತೆ, ಆರೋಗ್ಯ ಮುನ್ನೆಚ್ಚರಿಕೆ ಹಾಗೂ ಸರಿಯಾದ ಯೋಜನೆ ಯೊಂದಿಗೆ ಯಾತ್ರೆ ಕೈಗೊಂಡರೆ ಸುರಕ್ಷಿತವಾಗಿ ಬಾಬಾ ಬರ್ಫಾನಿ ದರ್ಶನ ಪಡೆಯಬಹುದು.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online