<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Business

ಪ್ರಧಾನಿ ಮೋದಿ ಭೇಟಿಯಾದ ಅಮೆಜಾನ್ ಸಿಇಒ: 4 ವರ್ಷಗಳಲ್ಲಿ $48 ಬಿಲಿಯನ್ ಹೂಡಿಕೆ ಘೋಷಣೆ

ಪ್ರಧಾನಿ ಮೋದಿ ಭೇಟಿಯಾದ ಅಮೆಜಾನ್ ಸಿಇಒ: 4 ವರ್ಷಗಳಲ್ಲಿ $48 ಬಿಲಿಯನ್ ಹೂಡಿಕೆ ಘೋಷಣೆ
Summary: After meeting Prime Minister Narendra Modi, the Amazon CEO announced that he will invest about $48 billion in India over the next four years. This huge investment is expected to give a significant boost to India's digital economy, e-commerce sector and technology. The announcement is said to further strengthen the India-Amazon partnership.

Belagavi News:

ನವದೆಹಲಿ: ಜಾಗತಿಕ ಟೆಕ್ ದೈತ್ಯ ಅಮೆಜಾನ್ ನ ಸಿಇಒ ಆ್ಯಂಡಿ ಜೆಸ್ಸಿ ಅವರು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು. ಈ ಭೇಟಿ ಬಳಿಕ ಅವರು ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ 48 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಮಾತನಾಡಿದ ಜೆಸ್ಸಿ, 2010 ರಿಂದ amazon ಭಾರತದಲ್ಲಿ ಈಗಾಗಲೇ ಸುಮಾರು 40 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ ಎಂದು ತಿಳಿಸಿದ್ದಾರೆ. ಹಿಂದಿ 2026 ರಿಂದ 2030ರ ಅವಧಿಗೆ 35 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಯೋಜನೆ ಘೋಷಿಸಲಾಗಿತ್ತು. ಆದರೆ ಇದೀಗ ಈ ಮೊತ್ತವನ್ನು ಹೆಚ್ಚಿಸಿ 48 ಬಿಲಿಯನ್ ಡಾಲರ್ ಗೆ ವಿಸ್ತರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಹೂಡಿಕೆಯ ಒಂದು ಪ್ರಮುಖ ಭಾಗವನ್ನು ಕೃತಕ ಬುದ್ಧಿಮತ್ತೆ AI ಮತ್ತು ಕ್ಲೌಡ್ ತಂತ್ರಜ್ಞಾನ ಅಭಿವೃದ್ಧಿಗೆ ಮೀಸಲಿಡಲಾಗಿದ್ದು, ಅದಕ್ಕಾಗಿ ಹೆಚ್ಚುವರಿಯಾಗಿ 13 ಬಿಲಿಯನ್ ಡಾಲರ್ ಬಳಕೆಯಾಗಲಿದೆ ಎಂದು ತಿಳಿದಿದ್ದಾರೆ.

Sponsored

ಇದಲ್ಲದೆ, ಮುಂದಿನ ಐದು ವರ್ಷಗಳಲ್ಲಿ ಕ್ಲೌಡ್ ಮೂಲಸೌಕರ್ಯಕ್ಕಾಗಿ ಒಟ್ಟು 21 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗುವುದು ಎಂದು ತಿಳಿಸಿರುವ ಜೆಸ್ಸಿ, ಈ ಹೂಡಿಕೆಗಳು ಮುಂಬೈ ಮತ್ತು ಹೈದರಾಬಾದ್ ನಲ್ಲಿ ಅಮೆಜಾನ್ ವೆಬ್ ಸರ್ವಿಸಸ್ (AWS) ಡೇಟಾ ಸೆಂಟರ್ ಸಾಮರ್ಥ್ಯವನ್ನು ವಿಸ್ತರಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಭಾರತವು ಜಾಗತಿಕವಾಗಿ ಕ್ಲೌಡ್ ಮತ್ತು ಕೃತಕ ಬುದ್ಧಿಮತ್ತೆ AI ಹಬ್ ಆಗಿ ವೇಗವಾಗಿ ಬೆಳೆಯುತ್ತಿದೆ ಎಂದು ಅಮೆಜಾನ್ ಸಿಇಓ ಆ್ಯಂಡಿ ಜೆಸ್ಸಿ ಹೇಳಿದ್ದಾರೆ. ದೇಶದ ಕ್ಲೌಡ್ ಮತ್ತು AI ಕ್ಷೇತ್ರದಲ್ಲಿ ಹೂಡಿಕೆಗಳನ್ನು ಮುಂದುವರೆಯಿಸಲಾಗುತ್ತಿದ್ದು, ಇದು ದೀರ್ಘಾವಧಿಯಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಯೋಜನೆಯ ಭಾಗವಾಗಿ, ಕಂಪನಿಯು 2030ರ ಅಂತ್ಯದ ವೇಳೆಗೆ ತನ್ನ ಉದ್ಯೋಗ ಪರಿಸರ ವ್ಯವಸ್ಥೆಯ ಮೂಲಕ ಸುಮಾರು 3.8 ಮಿಲಿಯನ್ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.

ಅದೇ ರೀತಿ, 2030ರ ವೇಳೆಗೆ ಹಲವು ಮಹತ್ವಾಕಾಂಕ್ಷಿ ಗುರಿಗಳನ್ನು ಚಾರಿಸುವ ಉದ್ದೇಶವು ಹೊಂದಿದೆ. ಅದರಲ್ಲಿ 80 ಬಿಲಿಯನ್ ಡಾಲರ್ ಮೌಲ್ಯದ ಇ -ಕಾಮರ್ಸ್ ರಫ್ತುಗಳನ್ನು ಸಕ್ರಿಯಗೊಳಿಸುವುದು, 15 ಮಿಲಿಯನ್ ಸಣ್ಣ ಉದ್ಯಮಗಳಿಗೆ AI ಪ್ರಯೋಜನಗಳನ್ನು ವಿಸ್ತರಿಸುವುದು, ಹಾಗೂ 4 ಮಿಲಿಯನ್ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ AI ಶಿಕ್ಷಣವನ್ನು ಪರಿಚಯಿಸುವುದು ಸೇರಿವೆ ಎಂದು ತಿಳಿಸಿದ್ದಾರೆ.

Sponsored

Also Read : ನಾಳೆಯಿಂದ ಉತ್ತರ ಕರ್ನಾಟಕದಲ್ಲಿ ಭರ್ಜರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online