Belagavi News:
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಣ್ ನ ವಾಯರಿ ಪ್ರದೇಶದಲ್ಲಿರುವ ರೆಸಾರ್ಟ್ ಗೊಂದಲ ಈಜುಕೊಳದಲ್ಲಿ ನಡೆದ ದುರಂತ ಘಟನೆಯಲ್ಲಿ 25 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಕಲ್ಲಾಪುರ ಜಿಲ್ಲೆಯ ಮೊದಲ ಶ್ರೇಣಿಕ್ ಮಿಲಿಂದ್ ಟಾಕಳೆ (25) ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ವೇಳೆ ರೆಸಾರ್ಟ್ ನ ಈಜುಕೊಳದಲ್ಲಿ ಮಜಾ ಮಾಡುತ್ತಿದ್ದನು. ಈ ವೇಳೆ ಈಜುಕೊಳದ ಆಳವನ್ನು ಗಮನಿಸದೇ ಸುಮಾರು ಎಂಟರಿಂದ ಹತ್ತು ಅಡಿ ಎತ್ತರದಿಂದ ತಲಕೆಳಗಾಗಿ ಜಿಗಿದ ( ಡೈವ್ ) ಪರಿಣಾಮ, ಆಳವಿಲ್ಲದ ಭಾಗಕೆ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಯ ಬಳಿಕ ರೆಸಾರ್ಟ್ ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಅ ಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ನಿಜು ಕೊಳದ ಆಳದ ಕುರಿತು ಸರಿಯಾದ ತಿಳುವಳಿಕೆ ಇಲ್ಲದೆ ಮಾಡಿದ ಸಾಹಸವೇ ಈ ದುರಂತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರವಾಸಿ ಸ್ಥಳಗಳಲ್ಲಿ ಇಂತಹ ಅಪಾಯಕಾರಿ ಸಾಹಸಗಳಿಂದ ದೂರವಿರಲು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮಾಲ್ವಣ್ ರೆಸಾರ್ಟ್ ದುರಂತದ ಹೊಸ ವಿವರ - ಡ್ಯಾನ್ಸ್ ಮಾಡುತ್ತಿದ್ದ ಕ್ಷಣಗಳಲ್ಲೇ 10 ಅಡಿ ಎತ್ತರದಿಂದ ಜಿಗಿದು ಯುವಕ ಸಾವು, ವಿಡಿಯೋ ರೆಕಾರ್ಡ್ :
ಸಿಂಧುದುರ್ಗ ಜಿಲ್ಲೆಯ ಮಾಲ್ವಣ್ ನ ವಾಯರಿ ಪ್ರದೇಶದ ರೆಸಾರ್ಟ್ ಈಜುಕೊಳದಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದ ಹೊಸ ವಿವರಗಳು ಬೆಳಕಿಗೆ ಬಂದಿವೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ 25 ವರ್ಷದ ಶ್ರೇಣಿಕ್ ಮಿಲಿಂದ್ ಟಾಕಳೆ ಮೃತಪಟ್ಟ ಘಟನೆ ಯ ಮೊದಲು ಅವರು ಹಾಗೂ ಅವರ ಸ್ನೇಹಿತರು ಈಜುಕೊಳದ ಪಕ್ಕದಲ್ಲಿ ಸಂತೋಷದಿಂದ ಡಾನ್ಸ್ ಮಾಡುತ್ತಿದ್ದ ದೃಶ್ಯಗಳು ತಿಳಿದು ಬಂದಿವೆ.
ಮೃತ ಶ್ರೇಣಿಕ್ ತನ್ನ 9 ಜನ ಸ್ನೇಹಿತರ ತಂಡದೊಂದಿಗೆ ಜೂನ್ 20ರಂದು ರೆಸಾರ್ಟ್ ಗೆ ಪ್ರವಾಸಕ್ಕೆ ಬಂದಿದ್ದನು. ಘಟನೆಯ ಕೆಲವೇ ಕ್ಷಣಗಳ ಮುನ್ನ, ಇಡೀ ಸ್ನೇಹಿತರ ಗುಂಪು ಈಜುಕೊಳದ ಬಳಿ ಮೋಜು ಮತ್ತು ಎಲ್ಲಿ ತೊಡಗಿಸಿಕೊಂಡಿದ್ದು, ಈ ದೃಶ್ಯವನ್ನು ಅವರ ಸ್ನೇಹಿತರೊಬ್ಬರು ಮೊಬೈಲ್ಸ್ ನಲ್ಲಿ ರೆಕಾರ್ಡ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ವೇಳೆ ಶ್ರೇಣಿಕ್ ಸುಮಾರು 8 ರಿಂದ 10 ಅಡಿ ಎತ್ತರದ ಗೋಡೆಯನ್ನು ಹತ್ತಿ, ಆಳವನ್ನು ಗಮನಿಸದೇ ನೇರವಾಗಿ ಈಜುಕೊಳಕ್ಕೆ ತಲೆಕೆಳಗಾಗಿ ಜಿಗಿದಿದ್ದಾನೆ. ದುರ್ಘಟನೆಯ ಕ್ಷಣದಲ್ಲಿ ತೀವ್ರ ಗಾಯಗೊಂಡು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಘಟನೆಯ ನಂತರ ರೆಸಾರ್ಟ್ ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಅಸಾಭಾವಿಕ ಮರಣ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಈ ಘಟನೆಯಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರವಾಸಿ ಸ್ಥಳಗಳಲ್ಲಿ ಅಪಾಯಕಾರಿ ಸಾಹಸಗಳಿಂದ ದೂರವಿರಲು ಅಧಿಕಾರಿಗಳು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಮಾಲ್ವಣ್ ರೆಸಾರ್ಟ್ ಇದು ಕೊಳ ದುರಂತಕ್ಕೆ ಹೊಸ ವಿವರ - ನಾಲ್ಕು ಅಡಿ ಆಳದ ಮಕ್ಕಳ ಸ್ಕೂಲ್ ಗೆ ಜಿಗಿದು ಯುವಕನ ಭೀಕರ ಸಾವು :
ಮಾಲ್ವಣ್ ನ ವಾಯರಿಂಗ್ ಪ್ರದೇಶದ ರೆಸಾರ್ಟ್, ಈಜುಕೊಳದಲ್ಲಿ ನಡೆದ 25 ವರ್ಷದ ಶ್ರೇಣಿಕ್ ಮಿಲಿಂದ್ ಟಾಕಳೆ ಅವರ ದುರಂತ ಸಾವಿನ ಬಗ್ಗೆ ಮತ್ತಷ್ಟು ಗಂಭೀರ ವಿವರಗಳು ಬೆಳಕಿಗೆ ಬಂದಿವೆ.
ಅವರು ಡೈವ್ ಮಾಡಿದ ಈಜುಕೊಳದ ಭಾಗ ಕೇವಲ ನಾಲ್ಕು ಅಡಿ ಆಳವಿದ್ದು, ಮಕ್ಕಳಿಗಾಗಿ ಮೀಸಲಿರಿಸಲಾಗಿತ್ತು ಎಂದು ತಿಳಿದು ಬಂದಿದೆ. ಆದರೆ, ಅತಿಯಾದ ಎತ್ತರದಿಂದ ಮತ್ತು ವೇಗದಿಂದ ತಲೆಕೆಳಗಾಗಿ ಜಿಗಿದ ಪರಿಣಾಮ, ಶ್ರೇಣಿಕ್ ನ ತಲೆ ನೇರವಾಗಿ ಈಜುಕೊಳದ ಕಾಂಕ್ರೀಟ್ ತಳಭಾಗಕ್ಕೆ ಬಲವಾಗಿ ಅಪ್ಪಳಿಸಿದೆ.
ಈ ತೀವ್ರ ಪೆಟ್ಟಿನಿಂದ ತಲೆಯ ಮುಂಭಾಗಕ್ಕೆ ಗಂಭೀರ ಗಾಯವಾಗಿದ್ದು, ಪ್ರಾಣ ಬಿಟ್ಟಿದ್ದಾನೆ ಎಂದು ವರದಿಯಾಗಿದೆ. ಘಟನೆ ಬಳಿಕ ಸ್ನೇಹಿತರ ತಕ್ಷಣವೇ ಆತನನ್ನು ನೀರಿನಿಂದ ಹೊರತೆಗೆದು ಮಾಲ್ವಣ್ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ ಈ ಆಸ್ಪತ್ರೆಗೆ ತಲುಪುವ ಮುನ್ನವೇ ವೈದ್ಯರು ಶ್ರೇಣಿಕ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಯು ಪ್ರವಾಸಿ ಸ್ಥಳಗಳಲ್ಲಿ ಈಜುಕೊಳ ಸುರಕ್ಷತೆ ಮತ್ತು ಸಾಹಸ ಚಟುವಟಿಕೆಗಳ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರೆದಿದೆ.
ಮಾಲ್ವಣ್ ರೆಸಾರ್ಟ್ ದುರಂತ ಪ್ರಕರಣ ; ಸ್ವಾಭಾವಿಕ ಮರಣ ದಾಖಲು, ತನಿಖೆ ಮುಂದುವರಿಕೆ, ಪ್ರವಾಸಿಗರಿಗೆ ಪೊಲೀಸರ ಎಚ್ಚರಿಕೆ :
ಮಾಲ್ವಣ್ ನ ವಾಯರಿ ಪ್ರದೇಶದ ರೆಸಾರ್ಟ್, ಈಜುಕೊಳದಲ್ಲಿ ನಡೆದ ಯುವಕನ ದುರಂತ ಸಾವಿನ ಘಟನೆಯ ಕುರಿತು ಸ್ಥಳೀಯ ಪೊಲೀಸರು ಅಸ್ ಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶವ ಪರೀಕ್ಷೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೃತ ಯುವಕ ಶ್ರೇಣಿಕ್ ಮಿಲಿಂದ್ ಟಾಕಳೆ ಅವರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ತನಿಖೆಯನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಣೇಶ್ ಮಾನೆ ಅವರ ನೇತೃತ್ವದಲ್ಲಿ ಮುಂದುವರಿಸಲಾಗುತ್ತಿದೆ. ಘಟನೆ ಹೇಗೆ ಸಂಭವಿಸಿತು, ರೆಸಾರ್ಟ್ ನ ಸುರಕ್ಷತಾ ಕ್ರಮಗಳು ಹಾಗೂ ಈಜುಕೊಳದ ವಿನ್ಯಾಸ ಸಂಬಂಧಿತ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ, ಪ್ರವಾಸಿಗರು ರೆಸಾರ್ಟ್ ಗಳು ಹಾಗೂ ಈಜುಕೊಳಗಳಲ್ಲಿ ಅನಗತ್ಯ ಸಾಹಸಗಳು ಅಥವಾ ಅಪಾಯಕಾರಿ ಡೈವಿಂಗ್ ಮಾಡುವುದನ್ನು ತಪ್ಪಿಸಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಇಂತಹ ನಿರ್ಲಕ್ಷವು ಜೀವಕ್ಕೆ ಅಪಾಯಕಾರಿ ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಪ್ರವಾಸಿ ಸ್ಥಳಗಳಲ್ಲಿ ಸುರಕ್ಷಿತ ನಿಯಮಗಳ ಪಾಲನೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
Also Read: