BELAGAVINEWS :
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮಾಡಿರುವ ಎಡವಟ್ಟಿನಿಂದಾಗಿ ಮಹಾರಾಷ್ಟ್ರದ ನಾಗ್ಪುರದ 18 ವರ್ಷದ ನೀಟ್ ಅಭ್ಯರ್ಥಿಯೊಬ್ಬನಿಗೆ ಭಾರತದಿಂದ ಸುಮಾರು 2,500 ಕಿಲೋಮೀಟರ್ ದೂರದಲ್ಲಿರುವ ಅಬುದಾಬಿಯಲ್ಲಿ ಪರೀಕ್ಷಾ ಕೇಂದ್ರ ಹಂಚಿಕೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಪಾಸ್ ಪೋರ್ಟ್ ಕೂಡ ಇಲ್ಲದ ವಿದ್ಯಾರ್ಥಿಗೆ ವಿದೇಶಿ ಪರೀಕ್ಷಾ ಕೇಂದ್ರ ಸಿಕ್ಕಿರುವುದು ಕುಟುಂಬವನ್ನು ತೀವ್ರ ಆತಂಕಕ್ಕೆ ದೂಡಿದೆ.
ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಮರುಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆಯಾದ ಬಳಿಕ ಈ ಎಡವಟ್ಟು ಪತ್ತೆಯಾಗಿದೆ. ನಾಗ್ಪುರದ ನಿವಾಸಿ ಅಬ್ದುಲ್ಲಾ ಮಹಮ್ಮದ್ ತಾಲಿಬ್ ಎಂಬ ವಿದ್ಯಾರ್ಥಿಗೆ ಜೂನ್ 14ರಂದು ಎನ್‌ಟಿಎ ನೀಡಿದ ಪ್ರವೇಶ ಪತ್ರದಲ್ಲಿ 'ಅಬುದಾಬಿ ಇಂಡಿಯನ್ ಸ್ಕೂಲ್' ಅನ್ನು ಪರೀಕ್ಷಾ ಕೇಂದ್ರವಾಗಿ ನಮೂದಿಸಲಾಗಿದೆ.
ಆದರೆ ವಿದ್ಯಾರ್ಥಿ ಅರ್ಜಿ ಸಲ್ಲಿಸುವ ವೇಳೆ ತನ್ನ ಆಯ್ಕೆಯಾಗಿ ಸ್ಥಳೀಯ ಜಿಲ್ಲೆಯ ಮೂರು ಪರೀಕ್ಷಾ ಕೇಂದ್ರಗಳನ್ನಷ್ಟೇ ನೀಡಿದ್ದಾನೆ ಎಂದು ಕುಟುಂಬ ಹೇಳಿದೆ. ಇಂತಹ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ವಿದೇಶದ ಪರೀಕ್ಷಾ ಕೇಂದ್ರ ಹಂಚಿಕೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಅತ್ಯಂತ ಆತಂಕಕಾರಿ ಸಂಗತಿ ಎಂದರೆ, ವಿದ್ಯಾರ್ಥಿಯ ಬಳಿ ಪಾಸ್ ಪೋರ್ಟ್ ಸಹ ಇಲ್ಲ. ಹೀಗಿರುವಾಗ ವಿದೇಶದಲ್ಲಿ ಪರೀಕ್ಷೆ ಬರೆಯುವುದು ಅಸಾಧ್ಯವಾಗಿದ್ದು, ಎನ್‌ಟಿಎ ನಿರ್ಲಕ್ಷದಿಂದ ವಿದ್ಯಾರ್ಥಿಯ ಭವಿಷ್ಯವೇ ಸಂಕಷ್ಟಕ್ಕೆ ಸಿಲುಕಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಪರೀಕ್ಷಾ ಕೇಂದ್ರ ಹಂಚಿಕೆ ಪ್ರಕ್ರಿಯೆಯಲ್ಲಿ ಎನ್‌ಟಿಎ ಕಾರ್ಯ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಇದೀಗ ವಿದ್ಯಾರ್ಥಿಯ ಕುಟುಂಬ ತಕ್ಷಣವೇ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿ ನ್ಯಾಯ ಒದಗಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದೆ.
ಪಾಸ್ ಪೋರ್ಟ್ ಇಲ್ಲದ ವಿದ್ಯಾರ್ಥಿಗೆ ಅಬುದಾಬಿ ಸೆಂಟರ್ ; ವಿಮಾನ ಟಿಕೆಟ್ ಗಾಗಿ ಕುಟುಂಬದ ಪರದಾಟ!
ಸಾಮಾನ್ಯವಾಗಿ ಅನಿವಾಸಿ ಭಾರತೀಯರು ಹಾಗೂ ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಮಾತ್ರ ವಿದೇಶಗಳಲ್ಲಿ ಪರೀಕ್ಷ ಕೇಂದ್ರಗಳನ್ನು ಹಂಚಿಕೆ ಮಾಡುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ,ನಾಗ್ಪುರದ ಸ್ಥಳೀಯ ವಿದ್ಯಾರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಗೆ ಅಬುದಾಬಿ ಪರೀಕ್ಷಾ ಕೇಂದ್ರ ನೀಡಿರುವುದು ಕುಟುಂಬವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.
ಹಾಲ್ ಟಿಕೆಟ್ ನಲ್ಲಿ ಅಬುದಾಬಿಯ ಪರೀಕ್ಷಾ ಕೇಂದ್ರ ಕಂಡ ತಕ್ಷಣವೇ ವಿದ್ಯಾರ್ಥಿಯ ಪೋಷಕರು ಎನ್‌ಟಿಎ ಸಹಾಯವಾಣಿಯನ್ನು ಸಂಪರ್ಕಿಸಿದ್ದಾರೆ. ವಿದ್ಯಾರ್ಥಿಗಳ ತಪ್ಪನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದರು ,ಪರೀಕ್ಷೆಗೆ ಕೇವಲ ಎರಡು ದಿನಗಳು ಬಾಕಿ ಇರುವವರೆಗೂ ಯಾವುದೇ ಸ್ಪಷ್ಟ ಪರಿಹಾರ ದೊರೆಯಲಿಲ್ಲ ಎನ್ನಲಾಗಿದೆ.
ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ, ಒಂದು ವೇಳೆ ಕೇಂದ್ರ ಬದಲಾವಣೆಯಾಗದಿದ್ದರೆ ಮಗನನ್ನು ವಿದೇಶಕ್ಕೆ ಕಳಿಸುವ ಅನಿವಾರ್ಯತೆ ಎದುರಾಗಬಹುದು ಎಂಬ ಆತಂಕದಲ್ಲಿ ಕುಟುಂಬ ತುರ್ತು ಪಾಸ್ ಪೋರ್ಟ್ ಅರ್ಜಿ ಸಲ್ಲಿಸುವುದು, ವಿಮಾನ ಟಿಕೆಟ್ಗಳ ಕುರಿತು ಮಾಹಿತಿ ಸಂಗ್ರಹಿಸುವುದು ಸೇರಿದಂತೆ ಹಲವು ಸಿದ್ಧತೆಗಳಲ್ಲಿ ತೊಡಗಿಕೊಂಡಿತ
.ಈ ಎಲ್ಲಾ ಬೆಳವಣಿಗೆಗಳು ಈಗಾಗಲೇ ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕಾರದ ವಿವಾದದಿಂದ ಮಾನಸಿಕ ಒತ್ತಡದಲ್ಲಿದ್ದ ಅಬ್ದುಲ್ಲಾ ಗೆ ಮತ್ತಷ್ಟು ಆಘಾತ ಉಂಟು ಮಾಡಿವೆ. ಜಿಯೋ ಪರೀಕ್ಷೆಯ ಸಿದ್ಧತೆಯತ್ತ ಗಮನ ಹರಿಸಬೇಕಾದ ಸಮಯದಲ್ಲಿ ಆಡಳಿತಾತ್ಮಕ ಎಡಬಟ್ಟಿನಿಂದ ವಿದ್ಯಾರ್ಥಿ ಹಾಗೂ ಕುಟುಂಬ ಅನಗತ್ಯ ಸಂಕಷ್ಟ ಅನುಭವಿಸುವಂತಹ ಆಗಿದೆ.
ಎನ್‌ಟಿಎಯ ಈ ನಿರ್ಲಕ್ಷದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ಆಗ್ರೋಶ ವ್ಯಕ್ತವಾಗಿದ್ದು,ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುವ ಇಂತಹ ತಪ್ಪುಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಕೇಳಿ ಬರುತ್ತಿವೆ.
ಕೇಂದ್ರ ಬದಲಾವಣೆಯಿಂದ ಪೋಷಕರಿಗೆ ತೊಂದರೆ: ಮೀಟ್ ನಲ್ಲಿ ಮತ್ತೊಂದು ಗೊಂದಲ; ತಾಂತ್ರಿಕ ದೋಷವೇ ಕಾರಣವೆಂದು ಶಂಕೆ
ಕೇಂದ್ರದ ತಿಂಗಳು ನೀಟ್ ಪರೀಕ್ಷೆ ರದ್ದಾದ ಬಳಿಕ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಪೋಷಕರ ಮೊಬೈಲ್ ಸಂಖ್ಯೆಗಳಲ್ಲಿ ಸಂದೇಶ ಕಳುಹಿಸಿ, ಹಳೆಯ ಪರೀಕ್ಷಾ ಕೇಂದ್ರವನ್ನೇ ಮುಂದುವರಿಸಬೇಕೇ ಅಥವಾ ಹೊಸ ಕೇಂದ್ರ ಬೇಕೆ ಎಂಬ ಆಯ್ಕೆಯನ್ನು ನೀಡಿತ್ತು. ಆದರೆ ನಾಗ್ಪುರ ವ್ಯಾಪ್ತಿಯಲ್ಲಿ ಹಳೆಯ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದ ಹಲವಾರು ವಿದ್ಯಾರ್ಥಿಗಳಿಗೆ ಈ ಹಾಲ್ ಟಿಕೆಟ್ ನಲ್ಲಿ ಸಂಪೂರ್ಣವಾಗಿ ವಿಭಿನ್ನ ಹಾಗೂ ದೂರದ ಜಿಲ್ಲೆಗಳ ಮತ್ತು ಗ್ರಾಮಾಂತರ ಪ್ರದೇಶಗಳ ಪರೀಕ್ಷಾ ಕೇಂದ್ರಗಳನ್ನು ಹಂಚಿಕೆ ಮಾಡಲಾಗಿದೆ .
ಪೋಷಕರು ಯಾವುದೇ ಹೊಸ ಬೇಡಿಕೆ ಸಲ್ಲಿಸದಿದ್ದರೂ ಕೇಂದ್ರಗಳನ್ನು ಬದಲಾಯಿಸಿರುವುದು ಮತ್ತು ಜೊತೆಗೆ ಪರೀಕ್ಷಾ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಬ್ಯಾಂಕ್ ವಿವರಗಳನ್ನು ಸಂಗ್ರಹಿಸುವುದು ಗೊಂದಲವನ್ನು ಹೆಚ್ಚಿಸಿದೆ. ಈ ಎಲ್ಲ ಬೆಳವಣಿಗೆಗಳು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಾರ್ಥಮಿಕ ಮಾಹಿತಿಯ ಪ್ರಕಾರ, ಡೇಟಾಬೇಸ್ ಅಪ್ಡೇಟ್ ಮಾಡುವ ವೇಳೆ ಉಂಟಾದ ತಾಂತ್ರಿಕ ದೋಷವೇ ಈ ಗೊಂದಲಕ್ಕೆ ಕಾರಣವಾಗಬಹುದು ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತಕ್ಷಣ ಮಧ್ಯ ಪ್ರವೇಶ ಮಾಡಿ, ವಿದ್ಯಾರ್ಥಿಗೆ ನಾಗ್ಪುರದಲ್ಲಿ ಹೊಸ ಪರೀಕ್ಷಾ ಕೇಂದ್ರವನ್ನು ಹಂಚಿಕೆ ಮಾಡುವುದಾಗಿ ಬರವಸೆ ನೀಡಿದ್ದಾರೆ.
ಈ ಘಟನೆ ಮತ್ತೊಮ್ಮೆ ನೀಟ್ ಪರೀಕ್ಷಾ ನಿರ್ವಹಣೆಯಲ್ಲಿನ ಲೋಪಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು,ವಿದ್ಯಾರ್ಥಿಗಳ ಭವಿಷ್ಯದ ವಿಚಾರದಲ್ಲಿ ಇಂತಹ ತಾಂತ್ರಿಕ ದೋಷಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
Also Read:
ಡೀಸೆಲ್ ಬೆಲೆ ಏರಿಕೆ ಶಾಕ್ : ಬಸ್ ದರ ಏರಿಕೆ ಅನಿವಾರ್ಯವೇ? ಡಿಕೆಶಿ ಹೇಳಿದ್ದೇನು?