<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಅನುಶ್ರೀ ಡಿಫರೆಂಟ್ ಲುಕ್! ಮಕ್ಕಳ ಗೆಟಪ್ ನಲ್ಲಿ ಗಮನ ಸೆಳೆದ ಆ್ಯಂಕರ್

ಅನುಶ್ರೀ ಡಿಫರೆಂಟ್ ಲುಕ್! ಮಕ್ಕಳ ಗೆಟಪ್ ನಲ್ಲಿ ಗಮನ ಸೆಳೆದ ಆ್ಯಂಕರ್
Summary: Popular anchor Anushree has attracted the attention of fans by appearing in this very different children's getup. Anushree, who is always known for her stylish and energetic presentation, has gone viral on social media. Her photos and videos in children's style outfits are getting a lot of response from fans. Fans have expressed their appreciation for this different avatar of hers.

Belagavi News:

' ಸ ರಿ ಗ ಮ ಪ ಲಿಟಲ್ ಚಾಂಪ್ಸ್' ವೇದಿಕೆಯ ಹಾಡುಗಳ ಜೊತೆಗೆ ಮನರಂಜನೆಗೂ ಹೆಸರುವಾಸಿಯಾಗಿದೆ. ಇತ್ತೀಚಿಗೆ ಪ್ರಸಾರವಾದ ವಿಶೇಷ ಸಂಚಿಕೆಯಲ್ಲಿ ಮೆಂಟರ್ ಗಳು ಎಲ್ಲರೂ ಶಾಲಾ ಮಕ್ಕಳ ವೇಷಧಾರಣೆಯಲ್ಲಿ ವೇದಿಕೆಗೆ ಆಗಮಿಸಿ, ಶಿಶುಗೀತೆಗಳನ್ನು ಹಾಡುವ ಮೂಲಕ ಬಾಲ್ಯದ ನೆನಪುಗಳನ್ನು ಮರುಕಳಿಸುವಂತಹ ಮನರಂಜನಾತ್ಮಕ ಕ್ಷಣಗಳನ್ನು ಸೃಷ್ಟಿಸಿದರು.

ಈ ವಿಶೇಷ ಎಪಿಸೋಡ್ ನಲ್ಲಿ ಸ್ಪರ್ಧಿಗಳು ಹಾಗೂ ಮೆಂಟರ್ ಗಳ ಪ್ರದರ್ಶನವೇ ಪ್ರಮುಖ ಆಕರ್ಷಣೆಯಾಗಿದ್ದರೂ ಎಲ್ಲರ ಗಮನ ಸೆಳೆದಿದ್ದು, ನಿರೂಪಕಿ ಅನುಶ್ರೀ ಅವರ ವಿಭಿನ್ನ ಹಾಜರಾತಿ , ಅವರ ಶೈಲಿ, ಎನರ್ಜಿ ಹಾಗೂ ನಿರೂಪಣಾ ರೀತಿಗೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕಾರ್ಯಕ್ರಮದ ಇಡೀ ವಾತಾವರಣವನ್ನು ಮತ್ತಷ್ಟು ಜೀವಂತಗೊಳಿಸಿದ ಅನುಶ್ರೀ, ತಮ್ಮ ಸ್ವಭಾವಿಕ ಹಾಸ್ಯಭರಿತ ನಿರೂಪಣೆಯ ಮೂಲಕ ಹಂಚಿಕೆಗೆ ವಿಶೇಷ ಕಳೆ ತಂದರು. ಅಭಿಮಾನಿಗಳು ಈ ಹಂಚಿಕೆಯನ್ನು ಸಾಮಾಜಿಕ ಜಾಲತಾಣಗಳನ್ನು ಹಂಚಿಕೊಳ್ಳುತ್ತಾ, ಅನುಶ್ರೀ ಅವರ ನಿರೂಪಣೆಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Sponsored

' ಸ ರಿ ಗ ಮ ಪ ಲಿಟಲ್ ಚಾಂಪ್ಸ್ ' ವಿಶೇಷ ಸಂಚಿಕೆಯಲ್ಲಿ ಸದಾ ಸೀರೆ ಅಥವಾ ಮಾಡರ್ನ್ ಉಡುಗೆಯಲ್ಲಿ ಮಿಂಚುವ ನಿರೂಪಕಿ ಅನುಶ್ರೀ ಬಾರಿ ಸಂಪೂರ್ಣ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡರು. ಕಾರ್ಯಕ್ರಮದ ಥೀಮ್ ಗೆ ತಕ್ಕಂತೆ ಶಾಲಾ ಬಾಲಕಿಯಂತೆ ಕ್ಯೂಟ್ ಲುಕ್ ನಲ್ಲಿ ರೆಡಿಯಾಗಿ ಅವರು ವೇದಿಕೆಗೆ ಎಂಟ್ರಿ ನೀಡಿದರು.

ತಲೆಗೆ ಮುದ್ದಾದ ಹೇರ್ ಬ್ಯಾಂಡ್ ಧರಿಸಿ, ಕೈಯಲ್ಲಿ ವಾಟರ್ ಬಾಟಲ್ ಹಿಡಿದು ತರಲೆ ಶಾಲಾ ಹುಡುಗಿಯ ಶೈಲಿಯಲ್ಲಿ ಅನುಶ್ರೀ ವೇದಿಕೆಗೆ ಬಂದ ಕ್ಷಣವೇ ಪ್ರೇಕ್ಷಕರ ಗಮನ ಸಳೆದಿತು. ಅವರ ಈ ವಿಭಿನ್ನ ಹಾಗೂ ನೈಸರ್ಗಿಕ ಅಭಿನಯ ಶೈಲಿಗೆ ಸ್ಟುಡಿಯೋದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಯಿತು.

ಈ ಸಂಚಿಕೆಯಲ್ಲಿ ಮೆಂಟರ್ ಗಳು ಹಾಗೂ ಜಡ್ಜ್ ಗಳು ಕೂಡ ತಮ್ಮ ವಿಶೇಷ ಲುಕ್ ಮತ್ತು ಪ್ರದರ್ಶನದ ಮೂಲಕ ಗಮನ ಸೆಳೆದರು. ಆದರೆ ಕಾರ್ಯಕ್ರಮದ ಇಡೀ ವಾತಾವರಣವನ್ನು ಇನ್ನಷ್ಟು ಮನರಂಜನಾತ್ಮಕವಾಗಿಸಿದ್ದು, ಅನುಶ್ರೀ ಅವರ ಕ್ಯೂಟ್ ಶಾಲಾ ಹುಡುಗಿ ಅವತಾರವೇ ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿದೆ.

Also Read:

Sponsored

ಸತೀಶ್ ವಿವಾದಾತ್ಮಕ ಹೇಳಿಕೆ ಪ್ರಕರಣ : ಸ್ಪಷ್ಟನೇ ಜೊತೆಗೆ ಕ್ಷಮೆಯಾಚನೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online