belagavi news :
iPhone Price Hike: ಉತ್ಪನ್ನಗಳನ್ನು ಖರೀದಿಸಲು ಯೋಜಿಸುತ್ತಿರುವ ಗ್ರಾಹಕರಿಗೆ ಕಂಪನಿಯಿಂದ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಐಫೋನ್, ಐಪ್ಯಾಡ್ ಹಾಗೂ ಮ್ಯಾಕ್ ಸೇರಿದಂತೆ ಆಪಲ್ ಸಾಧನೆಗಳ ಬೆಲೆ ಏರಿಕೆ ಅನಿವಾರ್ಯ ಎಂದು ಕಂಪನಿಯ ಸಿಇಒ ಟಿಮ್ ಕುಕ್ ತಿಳಿಸಿದ್ದಾರೆ.
ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೆಚ್ಚುತ್ತಿರೋ ಬೇಡಿಕೆಯ ಹಿನ್ನೆಲೆಯಲ್ಲಿ ಮೆಮೊರಿ ಹಾಗೂ ಸ್ಟೋರೇಜ್ ಚಿಪ್ ಗಳ ಬೆಲೆಯಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಇದೇ ಆಪಲ್ ಉತ್ಪನ್ನಗಳ ದರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಹಲವು ಸ್ಮಾರ್ಟ್ ಫೋನ್ ಕಂಪನಿಗಳು ಬೆಲೆ ಹೆಚ್ಚಿಸಿದರೂ, ಆಪಲ್ ಇದುವರೆಗೆ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹಾಕದೆ ಇರಲು ಪ್ರಯತ್ನಿಸಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ವೆಚ್ಚವನ್ನು ಮುಂದುವರೆದು ಬರಿಸುವುದು ಕಷ್ಟವಾಗುತ್ತಿದೆ ಎಂದು ಟಿಮ್ ಕುಕ್ ಸ್ಪಷ್ಟಪಡಿಸಿದ್ದಾರೆ.
AI ತಂತ್ರಜ್ಞಾನ ವೇಗವಾಗಿ ವಿಸ್ತರಿಸುತ್ತಿರುವುದರಿಂದ ಡೇಟಾ ಸೆಂಟರ್ ಗಳು ಮತ್ತು ಸರ್ವರ್ ಗಳಿಗಾಗಿ ಮೆಮೊರಿ ಮತ್ತು ಸ್ಟೋರೇಜ್ ಚಿಪ್ ಗಳ ಬೇಡಿಕೆ ಗಗನಕ್ಕೇರಿದೆ. ಇದರ ಪರಿಣಾಮವಾಗಿ DRAM ಸೇರಿದಂತೆ ಪ್ರಮುಖ ಚಿಪ್ ಮಾರುಕಟ್ಟೆಯಲ್ಲಿ ಪೂರೈಕೆ ಒತ್ತಡ ಹೆಚ್ಚಾಗಿ ಬೆಲೆ ಏರಿಕೆ ಕಂಡು ಬರುತ್ತಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಆಪಲ್ ಉತ್ಪನ್ನಗಳ ಬೆಲೆ ಏರಿಕೆ ಯಾವಾಗ ಮತ್ತು ಯಾವಾಗ ಉತ್ಪನ್ನಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಪನಿ ಇನ್ನು ಸ್ಪಷ್ಟವಾಗಿ ಘೋಷಿಸಿಲ್ಲ. ಆದರೆ ಮಾರುಕಟ್ಟೆ ವಿಶ್ಲೇಷಕರು ಪ್ರಕಾರ, ಮೊದಲ ಹಂತದಲ್ಲಿ ಮ್ಯಾಕ್ ಗಳು ಮತ್ತು ಐಪ್ಯಾಡ್ ಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಹೆಚ್ಚು ಇದೆ. ಇತ್ತೀಚೆಗೆ ಮ್ಯಾಕ್ ಮಿನಿ ಆರಂಭಿಕ ಬೆಲೆಯಲ್ಲಿ ಕಂಡ ಹೆಚ್ಚಳವನ್ನು ಈ ದಿಕ್ಕಿನ ಮೊದಲ ಸೂಚನೆಯಾಗಿ ನೋಡಲಾಗುತ್ತಿದೆ.
ಆಪಲ್ ಈ ವರ್ಷದ ಸೆಪ್ಟೆಂಬರ್ ನಲ್ಲಿ ಐಫೋನ್ 18 ಸೀರಿಸ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಜೊತೆಗೆ ಕಂಪನಿಯ ಮೊದಲ ಫೋಲ್ಡಬಲ್ ಐಫೋನ್ ಕೂಡ ಪರಿಚಯವಾದಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಚಿಪ್ ಬೆಲೆಗಳು ಇದೇ ರೀತಿಯಲ್ಲಿ ಮುಂದುವರೆದರೆ ಹೊಸ ಐಫೋನ್ ಮಾದರಿಗಳನ್ನು ಬೆಲೆ ಏರಿಕೆ ಅನಿವಾರ್ಯವಾಗಬಹುದು ಎಂದು ವಿಶ್ಲೇಷಕರ ಅಂದಾಜಿಸಿದ್ದಾರೆ.
ಸಾಮಾನ್ಯವಾಗಿ ಹೊಸ ಮಾದರಿಗಳು ಬಿಡುಗಡೆಯಾದ ನಂತರ ಹಳೆಯ ಐಫೋನ್ ಗಳ ಬೆಳೆ ಇಳಿಯುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಉತ್ಪದನ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಳೆಯ ಮಾದರಿಗಳಲ್ಲಿ ದೊಡ್ಡಮಟ್ಟದ ಬೆಲೆ ಕಡಿತ ಕಾಣದೇ ಇರಬಹುದು ಎಂಬ ನಿರೀಕ್ಷೆಯೂ ಇದೆ.
ಈ ನಡುವೆಯೇ ಟಿಮ್ ಕುಕ್ ಅವರು ಪ್ರಸ್ತುತ ಪರಿಸ್ಥಿತಿಯನ್ನು ' ಅಸಾಧಾರಣ' ಎಂದು ಬಣ್ಣಿಸಿದ್ದು, ತಮ್ಮ 4 ದಶಕಗಳ ತಂತ್ರಜ್ಞಾನ ಅನುಭವದಲ್ಲಿ ಇಂತಹ ಒತ್ತಡದ ಪರಿಸ್ಥಿತಿಯನ್ನು ಎಂದಿಗೂ ಎದುರಿಸಿಲ್ಲ ಎಂದು ತಿಳಿಸಿದ್ದಾರೆ.
Also Read:
ಶಿರಡಿ ಸಾಯಿಬಾಬಾ ದೇಗುಲಕ್ಕೆ ಹರಿದು ಬಂದ ಭಕ್ತರ ಕಾಣಿಕೆ : 2025 - 26 ರಲ್ಲಿ ₹660 ಕೋಟಿ ದೇಣಿಗೆ