<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಶಿರಡಿ ಸಾಯಿಬಾಬಾ ದೇಗುಲಕ್ಕೆ ಹರಿದು ಬಂದ ಭಕ್ತರ ಕಾಣಿಕೆ : 2025 - 26 ರಲ್ಲಿ ₹660 ಕೋಟಿ ದೇಣಿಗೆ

ಶಿರಡಿ ಸಾಯಿಬಾಬಾ ದೇಗುಲಕ್ಕೆ ಹರಿದು ಬಂದ ಭಕ್ತರ ಕಾಣಿಕೆ : 2025 - 26 ರಲ್ಲಿ ₹660 ಕೋಟಿ ದೇಣಿಗೆ
Summary: The immense faith of devotees in Shirdi Sai Baba has been proven once again. In the year 2025-26, devotees from all over the country and abroad have donated a record amount of foreign currency to the Sansthan, with devotees residing abroad alone offering ₹4.89 crore worth of foreign currency. In addition, the temple has received an income of ₹39.55 crore from darshan and aarti fees. The donations given by devotees in the form of gold, silver, cash and foreign currency reflect the popularity and emotional attachment of Shri Sai Sansthan.

belagavi news :

ಮಹಾರಾಷ್ಟ್ರದ ಪ್ರಸಿದ್ಧ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭಕ್ತರು ಭಕ್ತಿ ಮತ್ತೊಮ್ಮೆ ದಾಖಲೆ ನಿರ್ಮಿಸಿದೆ. 25-26ನೇ ಹಣಕಾಸು ವರ್ಷದಲ್ಲಿ ದೇವಾಲಯಕ್ಕೆ ನಗದು, ಡಿಜಿಟಲ್ ಮತ್ತು ವಸ್ತು ರೂಪದಲ್ಲಿ ಒಟ್ಟು ಸುಮಾರು ₹660 ಕೋಟಿ ದೇಣಿಗೆಗಳು ಹರಿದು ಬಂದಿವೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನ ತಿಳಿಸಿದೆ.

ಸಂಸ್ಥಾನದ ಸಿಇಓ ಗೋರಕ್ಷ ಗಾಡಿಲ್ಕರ್ ನೀಡಿದ ಮಾಹಿತಿಯಂತೆ, ಸಾಯಿಬಾಬಾದ ಸ್ಥಿರ ಠೇವಣಿಗಳು ₹3,618 ಕೋಟಿಗೆ ತಲುಪಿದ್ದು, ಅದರಿಂದಲೇ ₹256 ಕೋಟಿ ಬಡ್ಡಿ ಆದಾಯ ಲಭಿಸಿದೆ. ಕಳೆದ ಒಂದು ವರ್ಷದಲ್ಲಿ ಮೂರು ಕೋಟಿಗೂ ಹೆಚ್ಚು ಭಕ್ತರು ಶಿರಡಿಗೆ ಭೇಟಿ ನೀಡಿರುವುದು ಸಂಸ್ಥಾನದ ಆದಾಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಇದರ ಜೊತೆಗೆ, ಭಕ್ತರು ಸಾಯಿ ಸಂಸ್ಥಾನದ ಆಸ್ಪತ್ರೆಗಳಿಗೆ ₹15 ರಿಂದ ₹20 ಕೋಟಿ ಮೌಲ್ಯದ ಆಧುನಿಕ ವೈದ್ಯಕೀಯ ಉಪಕರಣಗಳನ್ನು ದಾನ ನೀಡಿದ್ದಾರೆ. ದೇಣಿಗೆ, ಡಿಜಿಟಲ್ ಕೊಡುಗೆಗಳು ಮತ್ತು ವಿವಿಧ ಸೇವೆಗಳ ಮೂಲಕ ಸಂಸ್ಥಾನದ ಆರ್ಥಿಕ ಸ್ಥಿತಿ ವರ್ಷದಿಂದ ವರ್ಷಕ್ಕೆ ಮತ್ತಷ್ಟು ಬಲವಾಗುತ್ತಿದ್ದು, ಶಿರಡಿ ಸಾಯಿಬಾಬಾ ಮೇಲಿನ ಭಕ್ತರ ಅಚಲ ನಂಬಿಕೆಗೆ ಇದು ಸಾಕ್ಷಿಯಾಗಿದೆ.

Sponsored

ವಿದೇಶಗಳಲ್ಲಿ ವಾಸಿಸುವ ಸಾಯಿ ಭಕ್ತರು ಸುಮಾರು ₹4.89 ಕೋಟಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ನೀಡಿದರೆ, ₹39.55 ಕೋಟಿ ಅನುದಾನವು ದರ್ಶನ ಮತ್ತು ಆರತಿ ಶುಲ್ಕದಿಂದ ಬಂದಿದೆ. ಸಂಸ್ಥಾನವು ಈ ದೇಣಿಗೆಗಳನ್ನು ವಿವಿಧ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಿದೆ. ಇದರಿಂದ ಸಂಸ್ಥಾನಕ್ಕೆ ಬಡ್ಡಿ ಬರುತ್ತಿದೆ.

ಶಿರಡಿ ಸಾಯಿಬಾಬಾ ಮೇಲಿನ ಭಕ್ತರ ಅಪಾರ ಭಕ್ತಿ ದೇಣಿಗೆಗಳ ರೂಪದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ನಗದು ಮತ್ತು ಡಿಜಿಟಲ್ ಕೊಡುಗೆಗಳ ಜೊತೆಗೆ ಭಕ್ತರು ಚಿನ್ನ ಹಾಗೂ ಬೆಳ್ಳಿಯನ್ನು ಉದಾರವಾಗಿ ಅರ್ಪಿಸುತ್ತಿದ್ದಾರೆ. ಸಾಯಿ ಸಂಸ್ಥಾನದ ಸಿಇಓ ಗೋರಕ್ಷ ಗಾಡಿಲ್ಕರ್ ಅವರ ಮಾಹಿತಿಯಂತೆ, 2026 ರ ಜೂನ್ 15ರವರೆಗೆ ಸಂಸ್ಥಾನದ ಬಳಿಕ ₹151.87 ಕೋಟಿ ಮೌಲ್ಯದ 549.44 ಕೆಜಿ ಚಿನ್ನ ಮತ್ತು₹25.33 ಕೋಟಿ ಮೌಲ್ಯದ 7,030.47 ಕೆಜಿ ಬೆಳ್ಳಿಯ ದಾಸ್ತಾನು ಇದೆ.

ಪ್ರಸ್ತುತ ಹಣಕಾಸು ವರ್ಷದಲ್ಲಿ ಭಕ್ತರು ದೇವಾಲಯಕ್ಕೆ 16 ಕೆಜಿ ಚಿನ್ನ ಹಾಗೂ 197 ಕೆಜಿ ಬೆಳ್ಳಿಯನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ. ಇದು ಸಾಯಿಬಾಬಾ ಮೇಲಿನ ಭಕ್ತರ ನಂಬಿಕೆ ಮತ್ತು ಭಾವನಾತ್ಮಕ ಬಾಂಧವ್ಯದ ಪ್ರತೀಕವಾಗಿದೆ.

ಇದರ ಜೊತೆಗೆ, ಸಾಯಿ ಸಂಸ್ಥಾನದ ಆದಾಯವು ವರ್ಷದಿಂದ ವರ್ಷಕ್ಕೆ ಏರುಕ್ಕೆ ಆಗುತ್ತಿದ್ದು, 2021-22 ರಲ್ಲಿ ₹436.95 ಕೋಟಿ ಇದ್ದ ಆದಾಯ 2022 23ರಲ್ಲಿ ₹803.93 ಕೋಟಿಗೆ, 2023-24ರಲ್ಲಿ ₹819.57 ಕೋಟಿಗೆ, 2024-25ರಲ್ಲಿ ₹850.97 ಕೋಟಿಗೆ ಹಾಗೂ 2025-26ರಲ್ಲಿ ₹851.97 ಕೋಟಿಗೆ ಏರಿಕೆಯಾಗಿದೆ. ದೇಣಿಗೆ, ಸೇವಾ ಶುಲ್ಕ, ಹೂಡಿಕೆಗಳ ಮೇಲಿನ ಬಡ್ಡಿ ಮತ್ತು ಭಕ್ತರ ಹೆಚ್ಚುತ್ತಿರುವ ಆಗಮನದಿಂದ ಸಂಸ್ಥಾನದ ಆರ್ಥಿಕ ಬಲ ಮತ್ತಷ್ಟು ವೃದ್ಧಿಯಾಗುತ್ತಿದೆ.

Sponsored

ಭಕ್ತರ ದೇಣಿಗೆಗಳು ಕೇವಲ ಧಾರ್ಮಿಕ ಸೇವೆಗೆ ಮಾತ್ರವಲ್ಲ, ಸಮಾಜಮುಖಿ ಕಾರ್ಯಗಳಿಗೂ ಬಳಕೆಯಾಗುತ್ತಿದೆ ಎಂದು ಸಾಯಿ ಸಂಸ್ಥಾನ ತಿಳಿಸಿದೆ. ಸಂಸ್ಥಾನದ ಸಿಇಓ ಗೋರಕ್ಷ ಗಾಡಿಲ್ಕರ್ ಅವರ ಪ್ರಕಾರ, ಭಕ್ತರು ಆಸ್ಪತ್ರೆಗಳಿಗೆ ಸುಮಾರು ₹15 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ದಾನ ಮಾಡಿದ್ದಾರೆ. ಸಂಸ್ಥಾನದ ವಾರ್ಷಿಕ ಆರ್ಥಿಕ ವಹಿವಾಟು ಈಗ ₹850 ಕೋಟೆಯನ್ನು ದಾಟಿದ್ದು, ನಿರಂತರ ಬೆಳವಣಿಗೆಯನ್ನು ದಾಖಲಿಸುತ್ತಿದೆ.

ಸಂಸ್ಥಾನವು ಸಾಯಿಬಾಬಾ ಅವರ ಅನ್ನದಾನ ಸಂದೇಶವನ್ನು ಮುಂದುವರೆಸಿಕೊಂಡು ಸೇವಾ ಮನೋಭಾವ ಮತ್ತು ಮಾನವೀಯತೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಭಕ್ತರಿಂದ ಬರುವ ದೇಣಿಗೆಗಳನ್ನು ರೋಗಿಗಳ ಆರೈಕೆ, ಶಿಕ್ಷಣ, ಯಾತ್ರಿಕರ ವಸತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುತ್ತಿದೆ.

ಇದರ ಫಲವಾಗಿ ಶಿರಡಿಯ ಆಧ್ಯಾತ್ಮಿಕ ಮಹತ್ವದ ಜೊತೆಗೆ ಸಾಮಾಜಿಕ ಕೊಡುಗೆಯು ಹೆಚ್ಚುತ್ತಿದ್ದು, ದೇವಾಲಯವು ಕೇವಲ ಧಾರ್ಮಿಕ ಕೇಂದ್ರವಾಗಿರದೆ ಸೇವಾ ಕೇಂದ್ರವಾಗಿಯೂ ಗುರುತಿಸಿಕೊಳ್ಳುತ್ತಿದೆ.

Also Read:

Sponsored

AI ಮಾರುಕಟ್ಟೆಯಲ್ಲಿ ಟ್ವಿಸ್ಟ್: ಜೆಮಿನಿ-ಕ್ಲೌಡ್ ಜನಪ್ರಿಯತೆ ಹೆಚ್ಚಳ, ಚಾಟ್ ಜಿಪಿಟಿ ನಿಧಾನ?

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online