BELAGAVI NEWS :
ವಚನ ಸಾಹಿತ್ಯಕ್ಕೆ ಕೃತಕ ಬುದ್ಧಿಮತ್ತೆಯ ಸ್ಪರ್ಶ ನೀಡಿದ ವಿಶಿಷ್ಟ ಸಾಧನೆ ಇದೀಗ ಗಮನ ಸೆಳೆಯುತ್ತಿದೆ.ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಯ 33 ವರ್ಷದ ಫಕೀರ ಗೌಡ ಮಲಗೌಡ ಹಾದಿಮನಿ ಅವರು,ವಿಶ್ವಗುರು ಬಸವಣ್ಣನವರ 432 ವಚನಗಳಿಗೆ AI ತಂತ್ರಜ್ಞಾನದ ಸಹಾಯದಿಂದ ಸಂಗೀತ ಸಂಯೋಜನೆ ಮಾಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತಮ್ಮ ಹೆಸರು ದಾಖಲಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನವೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ಗುರುತಿಸಿಕೊಂಡಿರುವ ಅವರು" ಗ್ರ್ಯಾಂಡ್ ಮಾಸ್ಟರ್" ಪ್ರಮಾಣ ಪತ್ರಕ್ಕೂ ಭಾಜನರಾಗಿದ್ದಾರೆ.
ಎಂ ಕಾಂ ಪದವೀಧರರಾಗಿರುವ ಪಕೀರ್ ಗೌಡ ಅವರು ತಮ್ಮೂರು ಹಿರೇಬಾಗೇವಾಡಿಯಲ್ಲಿ ಸೈಬರ್ ಸೆಂಟರ್ ನಡೆಸುತ್ತಿದ್ದು,ಜೊತೆಯಾಗಿ ಸಾವಯವ ಕೃಷಿ ಮತ್ತು ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಕಾಯಕದ ಜೊತೆಗೆ ವಚನ ಸಾಹಿತ್ಯ ಮತ್ತು ಬಸವಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವವರು,ರಾಜ್ಯದಾದ್ಯಂತ ನಡೆಯುವ ಬಸವಾದಿ ಶರಣರ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತಾರೆ.
ವಚನ ಪರಂಪರೆ,ತಂತ್ರಜ್ಞಾನ ಮತ್ತು ಸೃಜನಶೀಲತೆಯ ಸಂಯೋಜನೆಯ ಈ ಸಾಧನೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಹೊಸ ತಂತ್ರಜ್ಞಾನಗಳನ್ನು ಬಳಸಿ ಈಗಾಗಲೇ ವಚನ ಸಾಹಿತ್ಯವನ್ನು ಜನರಿಗೆ ಮುಟ್ಟಿಸಬೇಕು ಅಂತ ಸದಾ ಯೋಚಿಸುತ್ತಿದ್ದ ಅವರು,ಈಗ ಎಲ್ಲ ಕ್ಷೇತ್ರಗಳಲ್ಲಿ ಸದ್ದು ಮಾಡುತ್ತಿರುವ AI ತಂತ್ರಜ್ಞಾನದ ಮೂಲಕ ಬಸವಣ್ಣನವರ ವಚನಗಳಿಗೆ ಸಂಗೀತ ಸಂಯೋಜಿಸಿ ಯಶಸ್ವಿ ಆಗಿದ್ದಾರೆ.67 ದಿನಗಳಲ್ಲಿ ಬಸವಣ್ಣನವರ 432 ವಚನಗಳಿಗೆ ಸಂಗೀತ ಸಂಯೋಜಿಸಿದ್ದಾರೆ.ಈ ಸಂಬಂಧ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಅರ್ಜಿ ಸಲ್ಲಿಸಿದರು.ಇವರ ಸಾಧನೆ ಇದೇ ವರ್ಷ ಫೆ.೧೦ ರಂದು ಇಂಡಿಯಾ ಆಫ್ ರೆಕಾರ್ಡ್ಸ್ ಗೆ ಪಾತ್ರ ವಾಗಿದ್ದು.ಮಾರ್ಚ್ 25ರಂದು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ಪಕೀರ ಗೌಡರ ಹೆಸರು ದಾಖಲಾಗಿರುವುದು ವಿಶೇಷ
"ಪ್ರಸ್ತುತ ಓದುವ ಮನಸ್ಥಿತಿ ಕಡಿಮೆಯಾಗುತ್ತಿದೆ.ಆದರೆ ವಚನಗಳನ್ನು ಜನರಿಗೆ ತಲುಪಿಸುವ ಅಗತ್ಯ ಮಾತ್ರ ಕಡಿಮೆಯಾಗಿಲ್ಲ"ಎಂಬುದೇ ಪಕೀರ ಗೌಡ ಮಲಗೌಡ ಹಾದಿಮನಿ ಅವರ ದೃಷ್ಟಿಕೋನದ ಕೇಂದ್ರ ಭಾಗ.
ಖಾಸಗಿ ಮಾಧ್ಯಮದೊಂದಿಗೆ ಸಂದರ್ಶನದಲ್ಲಿ ಅವರು ಹೇಳಿರುವಂತೆ.ಸುಮಾರು 26 ಸಾವಿರ ವಚನಗಳು ಲಭ್ಯವಿದ್ದರೂ,ಅವುಗಳನ್ನು ಎಲ್ಲರಿಗೂ ಸುಲಭವಾಗಿ ತಲುಪುವುದು ದೊಡ್ಡ ಸವಾಲಾಗಿದೆ.ಹಿಂದೆ ಮಠ-ಮಾನ್ಯಗಳು ಮತ್ತು ಸಂಘ-ಸಂಸ್ಥೆಗಳು ವಚನ ಸಾಹಿತ್ಯ ಮನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಜನರಿಗೆ ತಲುಪಿಸುವ ಪ್ರಯತ್ನಿಸಿವೆ.ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಓದುವ ಶೈಲಿ ಮತ್ತು ಆಸಕ್ತಿ ಬದಲಾವಣೆ ಇರುವುದನ್ನು ಅವರು ಗಮನಿಸಿದ್ದಾರೆ.
ಇದೇ ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ವಚನಗಳನ್ನು ಹೆಚ್ಚು ಜನರಿಗೆ ತಲುಪಿಸುವ ಕಲ್ಪನೆಯವರಿಗೆ ಬಂದಿತು.ಫ ಗು ಹಳಕಟ್ಟಿ ಅವರಂತಹ ಮಹನೀಯರು ವಚನ ಸಾಹಿತ್ಯದ ಪ್ರಕಟಣೆಗೆ ತಮ್ಮ ಜೀವನವನ್ನೇ ಸಮರ್ಥಿಸಿ,ಮನೆ ಮಾರುವಂತಹ ತ್ಯಾಗವನ್ನು ಮಾಡಿದ್ದಾರೆ ಎಂಬುದನ್ನು ನೆನಪಿಸಿಕೊಂಡ ಪಕೀರ ಗೌಡ, "ಇಂದು ನಾವು AI ಯುಗದಲ್ಲಿ ಇದ್ದೇವೆ.ಹಾಗಿದ್ದರೆ ಕೇವಲ ಒಂದು ರೂಪಾಯಿ ಖರ್ಚಿನಲ್ಲಿ 10,000 ವಚನಗಳನ್ನು ಜನರಿಗೆ ತಲುಪಿಸುವ ಸಾಧ್ಯತೆ ಏಕೆ ಬಳಸಬಾರದು?"ಎಂಬ ಪ್ರಶ್ನೆಗೆ ತಮ್ಮ ಯೋಜನೆಗೆ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ.
ಅವರ ಉದ್ದೇಶ ವಚನ ಸಾಹಿತ್ಯವನ್ನು ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಸಿ,ಯುವ ಪೀಳಿಗೆಗೆ ಹೆಚ್ಚು ಸುಲಭವಾಗಿ,ಆಕರ್ಷಕವಾಗಿ ತಲುಪಿಸುವುದು.ಇದರಿಂದ ವಚನ ಪರಂಪರೆ ಹೊಸ ಮಾಧ್ಯಮಗಳ ಮೂಲಕವೂ ಜೀವಂತವಾಗಿರಲಿ ಎಂಬ ಆಸೆಯೂ ಅವರು ವ್ಯಕ್ತಪಡಿಸಿದ್ದಾರೆ.
AI ತಂತ್ರಜ್ಞಾನವನ್ನು ಬಳಸಿಕೊಂಡು ವಚನಗಳಿಗೆ ರಾಗಬದ್ಧ ಸಂಗೀತ ನೀಡಿದ ಅನುಭವವನ್ನು ಪಕೀರ ಗೌಡ ಮಲಗೌಡ ಹಾದಿಮನಿ ಹಂಚಿಕೊಂಡಿದ್ದು,ಇದು ತಂತ್ರಜ್ಞಾನ ಮತ್ತು ಸಾಹಿತ್ಯದ ಸಂಯೋಜನೆಯ ಹೊಸ ಉದಾರಣೆಯಾಗಿದೆ.
ಸೈಬರ್ ಸೆಂಟರ್ನಲ್ಲಿ ಕೆಲಸ ಮಾಡುವುದರಿಂದ ಹೊಸ ತಂತ್ರಜ್ಞಾನಗಳ ಬಗ್ಗೆ ತಕ್ಷಣ ಅರಿವು ಸಿಗುತ್ತಿತ್ತು ಎಂದು ಅವರು ಹೇಳುತ್ತಾರೆ.ಎಐ ಆರಂಭಿಕ ಹಂತದಲ್ಲಿ ವಚನಗಳಿಗೆ ಸಂಗೀತ ಸಂಯೋಜಿಸಿದಾಗ ಅದು ಸ್ವಲ್ಪ ಯಾಂತ್ರಿಕವಾಗಿ ಕೇಳಿಸುತ್ತಿತ್ತು.ಕೇಳಲು ಸ್ವಾಭಾವಿಕತೆಯ ಕೊರತೆ ಕಂಡು ಬಂದಿದ್ದರಿಂದ ಅದು ಅವರಿಗೆ ತೃಪ್ತಿ ನೀಡಲಿಲ್ಲ.
ಆದರೆ ಎಐ ಹೊಸ ಆವೃತ್ತಿಗಳು ಬಂದಂತೆ ಗುಣಮಟ್ಟದಲ್ಲಿ ದೊಡ್ಡ ಬದಲಾವಣೆ ಕಂಡು ಬಂತು.ನಂತರದ ಹಂತದಲ್ಲಿ ವಚನಗಳನ್ನು ನೋಡಿದಾಗ,ಅದು ನಿಜವಾದ ಗಾಯಕ ನೊಬ್ಬ ರಾಗಬದ್ಧವಾಗಿ ಹಾಡಿದಂತೆ ಧ್ವನಿಯಾಗಲು ಪ್ರಾರಂಭಿಸಿತು.ಈ ಸುಧಾರಣೆಯ ಅವರ ಯೋಜನೆಗೆ ವೇಗನೀರಿತು ಎಂದು ಅವರು ವಿವರಿಸುತ್ತಾರೆ.
ಇದುವರೆಗೆ ಬಸವಣ್ಣನವರ 432 ವಚನಗಳಿಗೆ ಸಂಗೀತಶ ಯೋಜನೆ, ಪೂರ್ಣಗೊಂಡಿದ್ದು,ಅವುಗಳಲ್ಲಿ 49 ವಚನಗಳನ್ನು ಆಯ್ಕೆ ಮಾಡಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ನೀಡಿವೆ.ಈ ಎಲ್ಲಾ ಪ್ರಕ್ರಿಯೆಗಳನ್ನು ಪರಿಶೀಲಿಸಿ ಪ್ರಮಾಣ ಪತ್ರವು ನೀಡಲಾಗಿದೆ.ಟ್ರೆಂಡಿಗೆ ತಕ್ಕಂತೆ ವಚನ ಕಾಯಕ:'ಬಸವಣ್ಣನವರು,ಅಲ್ಲಮ ಪ್ರಭು,ಅಕ್ಕಮಹಾದೇವಿ,ಚನ್ನಬಸವಣ್ಣ ಸೇರಿ ಕೆಲವೇ ಕೆಲವು ವಚನಕಾರರ ಬಗ್ಗೆ ಬಹಳಷ್ಟು ಜನರಿಗೆ ಪರಿಚಯ ಇದೆ.ಇನ್ನೂ ಅನೇಕರ ಬಗ್ಗೆ ಗೊತ್ತಿಲ್ಲ.ಹೀಗಾಗಿ,ಸುಮಾರು 300 ವಚನಕಾರರ ಬಗ್ಗೆ,ಅವರು ರಚಿಸಿದ ವಚನಗಳನ್ನು ಎಐ ಮೂಲಕ ಸುಲಭವಾಗಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಮುಟ್ಟಿಸಬೇಕಿದೆ.ಅಲ್ಲದೆ ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲೂ ಅದೇ ರೀತಿ ವಚನಗಳಿಗೆ ಸಂಗೀತ ಸಂಯೋಜಿಸಬೇಕು ಎನ್ನುವುದು ನನ್ನ ಗುರಿ.ಆದ್ದರಿಂದ ಈಗಿನ ಟ್ರೆಂಡಿಗೆ ತಕ್ಕಂತೆ ನನ್ನ ವಚನಗಳ ಕಾಯಕ ಮುಂದುವರೆಯುತ್ತದೆ'ಎಂದು ಫಕೀರ ಗೌಡ ಹಾದಿಮನಿ ಅಭಿಪ್ರಾಯಪಟ್ಟರು.
ಪಕೀರ ಗೌಡ ಮಲಗೌಡ ಹಾದಿಮನಿಯವರ ಸಾಧನೆಗೆ ಕುಟುಂಬದವರಿಂದಲೂ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಅವರ ಸಹೋದರ ನಾಗನಗೌಡ ಹಾದಿಮನಿ ಮಾತನಾಡಿ,ಇಡೀ ದೇಶವೇ ಹೆಮ್ಮೆ ಪಡುವಂತದ್ದು ಎಂದು ತಿಳಿಸಿದ್ದಾರೆ.
ಅವರು ಹೇಳುವಂತೆ,ಪಕೀರ ಗೌಡ ಆರಂಭದಿಂದಲೂ ಸಾಧನೆಗೆ ಹಠ ಹಿಡಿದು ಮುಂದುವರೆದ ವ್ಯಕ್ತಿ.ಬಸವಾದಿ ಶರಣರ ಕುರಿತು ಕವನ ರಚನೆ,ವಚನಗಳ ವಿಶ್ಲೇಷಣೆ ಮುಂತಾದ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅವರು ಈಗಾಗಲೇ ಗುರುತಿಸಿಕೊಂಡಿದ್ದರು,ಈಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ವಚನಗಳಿಗೆ ಸಂಗೀತ ಸಂಯೋಜನೆ ಮಾಡುವ ಮೂಲಕ ಅವರು ಹೊಸ ಆದಿ ತೆರೆದಿದ್ದಾರೆ.
ಈ ನವೀನ ಪ್ರಯತ್ನದಿಂದ ಅವರು ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು,ಮುಂದಿನ ಹಂತದಲ್ಲಿ ಗಿನ್ನೆಸ್ ವಿಶ್ವ ದಾಖಲೆಗೂ ತಮ್ಮ ಹೆಸರು ಸೇರಲಿ ಎಂದು ಕುಟುಂಬದ ಆಶಯವಾಗಿದೆ ಎಂದು ನಾಗನಗೌಡ ಹಾರೈಸಿದ್ದಾರೆ.
ವಚನ ಸಾಹಿತ್ಯ,ತಂತ್ರಜ್ಞಾನ ಮತ್ತು ಸೃಜನಶೀಲತೆಯ ಈ ಸಂಗಮವು ಈಗ ಮತ್ತಷ್ಟು ದೊಡ್ಡ ಮಟ್ಟದ ಸಾಧನೆಯತ್ತ ಸಾಗುತ್ತಿದೆ.
Also Read:
ಸಿಂಪಲ್ ಸುನಿ ನಿರ್ದೇಶನದ ಲಂಬೋದರ 2.0 ಗೆ ಬಾಲಿವುಡ್ ಸ್ಟಾರ್ ಎಂಟ್ರಿ