belagavi news :
ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಅವರು'ಗತವೈಭವ' ಚಿತ್ರದ ಬಳಿಕ ಕೈಗೆತ್ತಿಕೊಂಡಿರುವ ಹೊಸ ಯೋಜನೆ 'ಲಂಬೋದರ 2.0' ಈಗ ಸಾಕಷ್ಟು ಗಮನ ಸೆಳೆಯುತ್ತಿದೆ.ವಿಭಿನ್ನ ಕಥಾಂದರದೊಂದಿಗೆ ಸೈನ್ಸ್ ಫಿಕ್ಷನ್ ಮತ್ತು ಸಾಮಾಜಿಕ ತ್ರಿಲ್ಲರ್ ಅಂಶಗಳನ್ನು ಒಳಗೊಂಡಿ ಚಿತ್ರ ಈಗಾಗಲೇ ನಿರೀಕ್ಷೆಯನ್ನು ಹೆಚ್ಚಿಸಿದೆ.
ಈ ಚಿತ್ರ ಕೇರಿಗ ಬಾಲಿವುಡ್ ನ ಖ್ಯಾತ ನಟ ಕುನಾಲ್ ಕಪೂರ್ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.'ರಂಗ ದೇ ಬಸಂತಿ','ಡ್ಯಾನ್ಸ್ 2','ವೀರ','ಡಿಯರ್ ಜಿಂದಗಿ' ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನೆಗೆದ್ದಿರುವ ಕುನಲ್ ಕಪೂರ್,ಈ ಚಿತ್ರದಲ್ಲಿ ಅತ್ಯಂತ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
'ಲಂಬೋದರ 2.0' ಮೂಲಕ ಕುನಲ್ ಕಪೂರ್ ಅವರು ಕನ್ನಡ ಚಿತ್ರರಂಗಕ್ಕೂ ಪಾದರ್ಪಣೆ ಮಾಡುತ್ತಿದ್ದು,ಇವರ ಎಂಟ್ರಿಯಿಂದ ಚಿತ್ರಕ್ಕೆ ಹೊಸ ಮಟ್ಟದ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಸಿಂಪಲ್ ಸುನಿ ಅವರ ವಿಭಿನ್ನ ನಿರೂಪಣಾ ಶೈಲಿ ಹಾಗೂ ಕುನಾಲ್ ಕಪೂರ್ ಅವರ ಪಾತ್ರ ನಿರ್ವಹಣೆ ಸೇರಿ ಚಿತ್ರವನ್ನು ವಿಶೇಷಗೊಳಿಸಲಿದೆ ಎಂಬ ನಿರೀಕ್ಷೆ ಸಿನಿಪ್ರೇಮಿಗಳಲಿದೆ.
ಈ ಚಿತ್ರದ ಮೂಲಕ ಸುನಿಲ್ ಶೆಟ್ಟಿ ನಾಯಕ ನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದು,ಅವರ ಎದುರು ಬಾಲಿವುಡ್ ನಟಿ ಸಾಚಿ ಬಿಂದ್ರಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಸದ್ಯ ಕುನಲ್ ಕಪೂರ್ ಎಂಟ್ರಿ ಚಿತ್ರದ ಮೆರಗೂ ಹೆಚ್ಚಿಸಿದೆ.
ಚಿತ್ರದ ಮೂರ್ತ ಸಮಾರಂಭ ಈ ವರ್ಷದ ಆರಂಭದಲ್ಲಿ ಬೆಂಗಳೂರಿನ ಪ್ರಸಿದ್ಧ ಇಸ್ಕಾನ್ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.ಈ ವೇಳೆ ಚಿತ್ರತಂಡ ದ ಪ್ರಮುಖ ಕಲಾವಿದರು ಹಾಗೂ ತಾಂತ್ರಿಕ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ,ಈ ಚಿತ್ರವು ಯುವಜನರ ಜೀವನದಿಂದ ಪ್ರೇರಿತರವಾದ ಕಥೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.ಬೆಂಗಳೂರಿನ ಯುವಕನೊಬ್ಬನ ಪ್ರಯಾಣವನ್ನು ಕೇಂದ್ರವಾಗಿರಿಸಿಕೊಂಡಈ ಕಥೆ,ನಿಜ ಜಗತ್ತು ಮತ್ತು ಡಿಜಿಟಲ್ ಜಗತ್ತಿನ ನಡುವಿನ ಸಂಘರ್ಷವನ್ನು ಹಂತ ಹಂತವಾಗಿ ಅನಾವರಣಗೊಳಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಸ್ತುತ ಚಿತ್ರದ ಅಂತಿಮ ಹಂತದ ಚಿತ್ರೀಕರಣದ ನಡೆಯುತ್ತಿದ್ದು,ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರವನ್ನು ಭರ್ಜರಿ ಕ್ರಿಯೇಟಿಕಲ್ ಬಿಡುಗಡೆಗೆ ತರಲು ಚಿತ್ರತಂಡ ಗುರಿ ಹೊಂದಿದೆ.ಜಾಗತಿಕವಾಗಿ ಎಲ್ಲರಿಗೂ ಸಂಪರ್ಕಿಸಬಹುದಾದ ಕಥಾವಸ್ತು,ಭವಿಷ್ಯ ಸಮಯ ನಿರೂಪಣೆ ಹಾಗೂ ಜೆನ್ ಝಿ ಪ್ರೇಕ್ಷಕರಿಗೆ ಹೊಂದುವ ವಿಷಯ ವಸ್ತು ಇರುವುದರಿಂದ ಚಿತ್ರವನ್ನು ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಮಾಡಿದ ಯೋಜನೆಯು ರೂಪಿಸಲಾಗಿದೆ.
ಚಿತ್ರಕ್ಕೆ ಸಂತೋಷ್ ರೈ ಪತಾಜೆ ಕ್ಯಾಮೆರಾ ವರ್ಕ್,ವೀರ ಸಮರ್ಥ ಸಂಗೀತ ನಿರ್ದೇಶನ ಇದ್ದು,ನಿದಿಶಾ ಸುವರ್ಣ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಚಿತ್ರತಂಡದ ಭಾಗವಾಗಿದ್ದಾರೆ. ಅನಿಲ್ ಶೆಟ್ಟಿ ಅವರ ಮಾತೃ ಸಂಸ್ಥೆ ಮಾಸ್ ಪ್ರೊಡಕ್ಷನ್ ನಿರ್ಮಾಣದಡಿಯಲ್ಲಿ ಮೂಡಿಬಂದಿರುವ ಲಂಬೋದರ 2.0ತಂತ್ರಜ್ಞಾನ,ತತ್ವಶಾಸ್ತ್ರ,ಥ್ರಿಲ್ ಹಾಗೂ ಭಾವನಾತ್ಮಕ ನಾಟಕವನ್ನು ಒಟ್ಟುಗೂಡಿಸುವ ಹೊಸ ತಲೆಮಾರಿನ ಸಾಮಾಜಿಕ ಥ್ರಿಲ್ಲರಾಗಿ ರೂಪುಗೊಳ್ಳುತ್ತಿದೆ.
ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್ ನ ಖ್ಯಾತ ನಟನೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದು ನಿರ್ಮಾಪಕರು ಈ ಹಿಂದೆ ತಿಳಿಸಿದರು.ಇದೀಗ ಆ ಪಾತ್ರಕ್ಕೆ ಕುನಾಲ್ ಕಪೂರ್ ಅಧಿಕೃತವಾಗಿ ಸೇರ್ಪಡೆಯಾಗಿರುವುದರಿಂದ ಚಿತ್ರತಂಡ ಮೇಲೆ ಹಾಗೂ ಸಿನಿಮಾ ನಿರೀಕ್ಷೆಗಳ ಮೇಲೆ ದೊಡ್ಡ ಮಟ್ಟದ ಕುತೂಹಲ ಮೂಡಿದೆ.
ಈ ಎಂಟ್ರಿಯಿಂದ ಪ್ರೇಕ್ಷಕರ ಉತ್ಸಾಹ ದ್ವಿಗುಣ ಗೊಂಡಿದ್ದು,'ಲಂಬೋದರ 2.0' ಕುರಿತು ಚರ್ಚೆಗಳು ಮತ್ತಷ್ಟು ಗಟ್ಟಿಯಾಗಿವೆ.ಚಿತ್ರವು ಒಂದು ಚಿಂತನೆಗೆ ಒಯ್ಯುವ ಸಿನಿಮ್ಯಾಟಿಕ ಅನುಭವ ನೀಡಲಿದೆ ಎಂದು ಚಿತ್ರದ ಲೇಖಕರಾದ ಅನಿಲ್ ಶೆಟ್ಟಿ ಮತ್ತು ಅಭಿಜಿತ್ ಮಹೇಶ್ ಈ ಹಿಂದೆ ಭರವಸೆ ನೀಡಿದ್ದರು.
ಅವರ ಪ್ರಕಾರ,ಕಥೆ ಮತ್ತು ನಿರೂಪಣೆ ಎರಡು ಪ್ರೇಕ್ಷಕರನ್ನು ಹೊಸ ರೀತಿಯಲ್ಲಿ ಆಕರ್ಷಿಸುವ ರೀತಿಯಲ್ಲಿ ರೂಪಿಸಲಾಗಿದೆ.ಹೀಗಾಗಿ ಸದ್ಯ ಎಲ್ಲರ ಗಮನ ಚಿತ್ರದ ಕಥಾಹಂದರ,ಪಾತ್ರ ನಿರ್ವನೆ ಹಾಗೂ ನಿರ್ದೇಶಕ ಸಿಮ್ಪುಲ್ ಸುನಿ ಅವರ ನಿರೂಪಣ ಶೈಲಿಯತ್ತ ನೆಟ್ಟಿದೆ.
Also Read:
ಮಮತಾ ಬ್ಯಾನರ್ಜಿ ಕೋಟೆಗೆ ಬಿಗ್ ಶಾಪ್?:50 ಶಾಸಕರು ಬಿಜೆಪಿ ಸಂಪರ್ಕದಲ್ಲಾ?