belagavi news :
ಕಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಭಾರಿ ಸಂಚಲನೆ ಮೂಡಿಸುವ ರೀತಿಯಲ್ಲಿ ತೃಣ ಮೂಲ ಕಾಂಗ್ರೆಸ್ (TMC)ಒಳಗೆ ಆಂತರಿಕ ಬಿಕ್ಕಟ್ಟು ತೀವ್ರಗೊಂಡಿದೆ ಎಂಬ ವರದಿಗಳು ಕೇಳಿ ಬರುತ್ತಿವೆ.ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ನಿರೀಕ್ಷಿತ ಫಲಿತಾಂಶ ಸಿಗದ ಹಿನ್ನೆಲೆ ಕಂಡ ನಂತರ,ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರದೊಳಗಿನ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಬಿಜೆಪಿ ನಾಯಕರಾ ಹೇಳಿಕೆಗಳ ಪ್ರಕಾರ,ಟಿಎಂಸಿ ಹಲವಾರು ಶಾಸಕರು ಮತ್ತು ಸಂಸದರು ಪಕ್ಷದ ನಾಯಕತ್ವದ ಮೇಲೆ ಅಸಮಾಧಾನ ಹೊಂದಿದ್ದು,ಪಕ್ಷ ತೊರೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಕೆಲವರು"ಅರ್ಧಕ್ಕಿಂತ ಹೆಚ್ಚು ಜನ ಪ್ರತಿಪಕ್ಷದತ್ತ ಮುಖ ಮಾಡಬಹುದು" ಎಂಬ ರೀತಿಯ ಹೇಳಿಕೆಗಳನ್ನು ನೀಡಿದ್ದು,ಇದು ರಾಜಕೀಯ ಗಾಳಿ ಸುದ್ದಿಗಳಿಗೆ ಮತ್ತಷ್ಟು ಬಲ ನೀಡಿದೆ.
ಇದೆ ವೇಳೆ,ಪಕ್ಷದ ಒಳಗಿನ ಪ್ರಮುಖ ಅಸಮಾಧಾನದ ಕೇಂದ್ರ ಬಿಂದುವಾಗಿ ಮಮತಾ ಅವರ ಅಳಿಯ ಹಾಗೂ ಡೈಮಂಡ್ ಹಾರ್ಬರ್ ಕ್ಷೇತ್ರದ ಸದಸ್ಯ ಅಭಿಷೇಕ್ ಬ್ಯಾನರ್ಜಿ ಹೆಸರು ಮುನ್ನೆಲೆಗೆ ಬಂದಿದೆ.ಅವರ ಪಾತ್ರ ಮತ್ತು ಪಕ್ಷದೊಳಗಿನ ಪ್ರಭಾವದ ಬಗ್ಗೆ ಕೆಲ ನಾಯಕರಲ್ಲಿ ಅಸಮಾಧಾನ ಹೆಚ್ಚುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಪಕ್ಷದ ಒಳಗಿನ ಅಧಿಕಾರ ಸಮೀಕರಣ,ನಿರ್ಣಯ ಪ್ರಕ್ರಿಯೆ ಹಾಗೂ ನಾಯಕತ್ವದ ಪ್ರಭಾವದ ಬಗ್ಗೆ ವಿಜ್ಞಾಭಿಪ್ರಾಯಗಳು ಒಳಗೊಂಡಿರುವುದರಿಂದ ಟಿಎಂಸಿ ಹೊಳ ರಾಜಕೀಯದಲ್ಲಿ ಸ್ಥಿರತೆ ಹೆಚ್ಚಾಗಿವೆ ಎಂದು ವಿಶ್ಲೇಷಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಆದರೆ ಈ ಎಲ್ಲಾ ಚರ್ಚೆಗಳ ಬಗ್ಗೆ ಟಿಎಂಸಿ ಅಥವಾ ಮಮತಾ ಬ್ಯಾನರ್ಜಿ ಪರವಾಗಿ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ.ಹೀಗಾಗಿ ಈ ಆರೋಪಗಳು ಮತ್ತು ಊಹಾಪೋಹ ಗಳು ಎಷ್ಟು ನಿಜ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಾಗಿದೆ.
ಈಗಾಗಲೇ, ಹಲವು ಟಿಎಂಸಿ ನಾಯಕರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.ಇದರ ಮಧ್ಯೆ,ಬಿಜೆಪಿ ಸಂಸದರೊಬ್ಬರು ಹೊಸ ಬಾಂಬ್ ಸಿಡಿಸಿದ್ದು,ತೃಣ ಮೂಲ ಕಾಂಗ್ರೆಸ್ನ ಅರ್ಧಕ್ಕಿಂತ ಹೆಚ್ಚಿನ ಶಾಸಕರು ಮತ್ತು ಸಂಸದರು, ಬಿಜೆಪಿಗೆ ಪಕ್ಷಾಂತರಗೊಳ್ಳಲು ಸಜ್ಜಾಗಿದ್ದಾರೆ ಎಂದು ಹೇಳಿದ್ದಾರೆ.ಈ ಹೇಳಿಕೆ,ಬಂಗಾಳದಲ್ಲಿ ಬಾರಿ ಸಂಚಲನಕ್ಕೆ ಕಾರಣವಾಗಿದೆ.
ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಪಕ್ಷಾಂತರ ಚರ್ಚೆ ಮತ್ತೆ ತೀವ್ರಗೊಂಡಿದೆ.ತೃಣ ಮೂಲ ಕಾಂಗ್ರೆಸ್ ನೊಳಗಿನ ಅಸಮಾಧಾನ ಹೆಚ್ಚುತ್ತಿದೆ ಎಂಬ ಹೇಳಿಕೆಗಳ ನಡುವೆ ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸುತ್ತಿವೆ.
ಬಿಜೆಪಿ ಬಿಷ್ಣುಪುರ್ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಂಗಾಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿರುವ ಸೌಮಿತ್ರ ಖಾನ್ ಅವರು,ಟಿಎಂಸಿ ಒಳಗೆ ದೊಡ್ಡ ಮಟ್ಟದ ಅಸಮಾಧಾನ ಇದೆ ಎಂದು ಹೇಳಿಕೆ ನೀಡಿದ್ದಾರೆ.ಅವರ ಪ್ರಕಾರ,ಟಿಎಂಸಿಎ ಸುಮಾರು 50 ಶಾಸಕರು ಮತ್ತು 20 ಸಂಸದರು ಪಕ್ಷ ತೊರೆದು ಬಿಜೆಪಿಗೆ ಸೇರುವ ಸಿದ್ಧತೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
2019ರಲ್ಲಿ ತೃಣ ಮೂಲ ಕಾಂಗ್ರೆಸ್ಸಿನಿಂದ ಬಿಜೆಪಿ ಸೇರಿದ್ದ ಸುಮಿತ್ರ ಖಾನ್,ಈಗ ಮತ್ತೆ ಬಂಗಾಳ ರಾಜಕೀಯದ ಪಕ್ಷಾಂತರ ಚರ್ಚೆಗೆ ಕಾರಣ ಹೇಳಿದ್ದಾರೆ. ಅವರ ಈ ಹೇಳಿಕೆಗಳು ಟಿಎಂಸಿ ಒಳಗಿನ ಭಿನ್ನಮತದ ಸುದ್ದಿಗಳ ಜೊತೆಗೆ "ಸಿಂಕ್ ಆಗುತ್ತಿದೆ" ಎಂಬ ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಟಿಎಂಸಿ ಒಳಗಿನ ಅಧಿಕಾರ ಹಂಚಿಕೆ,ನಾಯಕತ್ವದ ಪ್ರಭಾವ ಹಾಗೂ ನಿರ್ಧಾರ ಪ್ರಕ್ರಿಯೆಗಳ ಬಗ್ಗೆ ಅಸಮಾಧಾನ ಹೆಚ್ಚುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಇನ್ನಷ್ಟು ಮಹತ್ವ ಪಡೆದಿವೆ.ಆದರೆ ಈ ಕುರಿತು ಟಿಎಂಸಿ ನಾಯಕತ್ವದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.ಹೀಗಾಗಿ ಪಕ್ಷಾಂತರದ ಈ ಮಾತುಗಳು ಎಷ್ಟು ನಿಜ,ಎಷ್ಟು ರಾಜಕೀಯ ಹೇಳಿಕೆ ಎಂಬುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಾಗಿದೆ.
ಅಮಿತ್ ಶಾ ಗ್ರೀನ್ ಸಿಗ್ನಲ್' ಕಾಯುತ್ತಿದ್ದಾರೆ ಎಂದ ಬಿಜೆಪಿ ನಾಯಕ
"ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು,ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಅನುಮತಿಯನ್ನು ನೀಡಿದರೆ,50 ಶಾಸಕರು,20 ಸಂಸದರು,ಬಿಜೆಪಿಗೆ ಸೇರ್ಪಡೆಗೊಳ್ಳಲು ಸಜ್ಜಾಗಿದ್ದಾರೆ.ಬಿಜೆಪಿ ಕೇಂದ್ರ ಘಟಕದಿಂದ ಇವರನ್ನು ಪಾರ್ಟಿಗೆ ಸೇರಿಸಿಕೊಳ್ಳಲು ಒಂದು ಗ್ರೀನ್ ಸಿಗ್ನಲ್ ಸಿಕ್ಕರೆ ಸಾಕು.ಬಿಜೆಪಿಗೆ ಬರಲು ಸಜ್ಜಾಗಿರುವ ಎಲ್ಲ ಜನ ಪ್ರತಿನಿಧಿಗಳು ನನ್ನ ಸಂಪರ್ಕದಲ್ಲಿದ್ದಾರೆ.ತೃಣ ಮೂಲಕ ಕಾಂಗ್ರೆಸ್,ಒಂದು ರಾಜಕೀಯ ಪಕ್ಷವಾಗಿ ಉಳಿದಿಲ್ಲ"ಎಂದು ಸುಮಿತ್ರ ಖಾನ್ ಹೇಳಿದ್ದಾರೆ.
ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಟಿಎಂಸಿ ಹಾಗೂ ಬಿಜೆಪಿ ನಡುವೆ ವಾಗ್ವಾದ ತೀವ್ರಗೊಂಡಿದ್ದು,ಆರೋಪ ಪ್ರತ್ಯಾರೋಪಗಳಿಂದ ರಾಜಕೀಯ ವಾತಾವರಣ ಹಾಳಾಗಿದೆ.ತೃಣ ಮೂಲ ಕಾಂಗ್ರೆಸ್ ಒಳಗಿನ ಭಿನ್ನಮತ ಮತ್ತು ಪಕ್ಷಾಂತರದ ಚರ್ಚೆಗಳ ನಡುವೆ ಇಬ್ಬರು ಪಕ್ಷಗಳ ನಾಯಕರ ಹೇಳಿಕೆಗಳು ಹೊಸ ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿ ಬಿಷ್ಣುಪುರ್ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಂಗಾಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೌಮಿತ್ರ ಖಾನ್, ಟಿಎಂಸಿ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಅವರು,ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕಠಿಣ ಶಬ್ದಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು,"ಅವರು ಪಾಪಿ,ಕರ್ಮದ ಫಲ ಅನುಭವಿಸಲೇಬೇಕು"ಎಂಬ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.ಅವರ ಪ್ರಕಾರ,ಟಿ ಎಂ ಸಿ ಒಳಗೆ ಅಸಮಾಧಾನ ಹೆಚ್ಚಾಗಿದ್ದು,ಹಲವು ನಾಯಕರು ಪಕ್ಷ ತೊಳೆಯಲು ಸಿದ್ದರಾಗಿದ್ದಾರೆ ಎಂಬುದು ಅವರ ವಾದ.
ಇದೇ ವೇಳೆ,ಸುಮಿತ್ರಾ ಖಾನ್ ತಮ್ಮ ಹಳೆ ಘಟನೆಗಳನ್ನು ಉಲ್ಲೇಖಿಸಿ,ತಮ್ಮ ವಿರುದ್ಧ ನಡೆದಿದ್ದ ರಾಜಕೀಯ ದಾಳಿಗಳ ಬಗ್ಗೆ ಆಕಾಶ ವ್ಯಕ್ತಪಡಿಸಿದ್ದಾರೆ."ಪಾಪಿಗಳು ಜೈಲಿಗೆ ಹೋಗಲೇಬೇಕು"ಎಂಬ ರೀತಿಯ ಹೇಳಿಕೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇತ್ತ ಟಿಎಂಸಿ ಪರವಾಗಿ ಹಿರಿಯ ಸಂಸದ ಸೌಗತ್ ರಾಯ್ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.50 ಶಾಸಕರು ಮತ್ತು 20 ಸಂಸದರು ಪಕ್ಷ ತೊರೆಯಲು ಸಜ್ಜಾಗಿದ್ದಾರೆ ಎಂಬ ಸುದ್ದಿ"ಆಧಾರ ರಹಿತ"ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಬಂಗಾಳದಲ್ಲಿ ಬಿಜೆಪಿ ಸುಳ್ಳು ಪ್ರಚಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಆದರೆ,ಟಿಎಂಸಿ ಅವಳಿಗೆ ಕೆಲವು ಮಟ್ಟದ ಅಸಮಾಧಾನ,ಸ್ಥಳೀಯ ನಾಯಕರ ರಾಜೀನಾಮೆಗಳು,ಕೆಲವು ಮುಖಂಡರ ವಿರುದ್ಧದ ಬ್ರಷ್ಟಾಚಾರ ಅಪಗಳು ಹಾಗೂ ಪಕ್ಷದಿಂದ ಉಚ್ಚಾಟನೆಗಳಂತಹ ಬೆಳವಣಿಗೆಗಳು ನಡೆಯುತ್ತಿರುವುದು ಮಾತ್ರ ಸತ್ಯವಾಗಿದ್ದು,ಇದರಿಂದ ಪಕ್ಷದ ಒಳಗಿನ ಸಮೀಕರಣಗಳ ಬಗ್ಗೆ ಚರ್ಚೆ ಮುಂದುವರೆದಿದೆ.
ಒಟ್ಟಿನಲ್ಲಿ,ಆರೋಪ ಪ್ರತ್ಯಾರೋಪಗಳ ನಡುವೆ ಟಿಎಂಸಿ ಆಂತರಿಕ ಸ್ಥಿತಿ ಮತ್ತು ಅದರ ರಾಜಕೀಯ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದು,ಮುಂದಿನ್ ದಿನಗಳಲ್ಲಿ ಬಂಗಾಳ ರಾಜಕೀಯದಲ್ಲಿ ಯಾವ ರೀತಿಯ ಬೆಳವಣಿಗೆಗಳು ನಡೆಯುತ್ತವೆ ಎಂಬುದನ್ನು ಗಮನಿಸಲಾಗುತ್ತಿದೆ.
Also Read:
ವಿಶ್ವಸಂಸ್ಥೆಯಲ್ಲಿ ಭಾರತದ ಗುಡುಗು: ಪಾಕಿಸ್ತಾನ ಭಯೋತ್ಪಾದನೆಗೆ ಬೆಲೆ ತರಬೇಕಾಗುತ್ತದೆ