<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ವಿಶ್ವಸಂಸ್ಥೆಯಲ್ಲಿ ಭಾರತದ ಗುಡುಗು: ಪಾಕಿಸ್ತಾನ ಭಯೋತ್ಪಾದನೆಗೆ ಬೆಲೆ ತರಬೇಕಾಗುತ್ತದೆ

ವಿಶ್ವಸಂಸ್ಥೆಯಲ್ಲಿ ಭಾರತದ ಗುಡುಗು: ಪಾಕಿಸ್ತಾನ ಭಯೋತ್ಪಾದನೆಗೆ ಬೆಲೆ ತರಬೇಕಾಗುತ್ತದೆ
Summary: India launched a strong attack on Pakistan at the United Nations forum. It has issued a stern warning that countries that sponsor terrorism will have to face its consequences. Indian representatives made their stand against terrorism clear at the global forum and accused Pakistan of supporting cross-border terrorist activities.

Balagavi News:

ನ್ಯೂಯಾರ್ಕ್: United Nations ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಪಾಕಿಸ್ತಾನ ವಿರುದ್ಧ ವಾಗ್ದಾಳಿ ನಡೆಸಿದೆ. ವಿಶ್ವಸಂಸ್ಥೆಯಲ್ಲಿರುವ ಭಾರತದ ಖಾಯಂ ರಾಯಭಾರಿ Parvathaneni Harish ಮಾತನಾಡಿ, ಪಾಕಿಸ್ತಾನ ತನ್ನ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಮೂಲಭೂತವಾದಕ್ಕೆ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡದರು.

ಭಾರತದ ವಿರುದ್ಧ ಪಾಕಿಸ್ತಾನ ನಿರಂತರವಾಗಿ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದ ಅವರು, ಇಂತಹ ದುಷ್ಕೃ ತ್ಯಗಳಿಂದ ತನ್ನನು ರಕ್ಷಿಸಿಕೊಳ್ಳುವ ಸಂಪೂರ್ಣ ಹಕ್ಕು ಭಾರತಕ್ಕಿದೆ ಎಂದು ಸ್ಪಷ್ಟಪಡಿಸಿದರು.

ಪಾಕಿಸ್ತಾನ ಮಂಗಳವಾರ ಮಾಡಿದ ಆಧಾರರಹಿತ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಭಾರತ ಬುಧವಾರ ತಿರುಗೇಟು ನೀಡಿದೆ. ಈ ವೇಳೆ ಜಮ್ಮು-ಕಾಶ್ಮೀರ ಮತ್ತು ಲಡಾಕ್ ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಭಾಗಗಳಾಗಿವೆ ಎಂದು ಭಾರತ ಪುನರುಚ್ಚರಿಸಿದೆ.

Sponsored

ಚೀನಾ ಮತ್ತು ಪಾಕಿಸ್ತಾನ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಜಮ್ಮು- ಕಾಶ್ಮೀರ್ ಉಲ್ಲೇಖಿಸಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಬೇರೆ ಯಾವುದೇ ರಾಷ್ಟ್ರಕ್ಕೆ ಭಾರತದ ಆತಂಕರಿಕ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸುವ ಹಕ್ಕಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಪಾಕಿಸ್ತಾನವು ಭಯೋತ್ಪಾದನೆ, ಧಾರ್ಮಿಕ ಉಗ್ರವಾದ ಹಾಗೂ ಭಾರತ ವಿರೋಧಿ ಶಕ್ತಿಗಳನ್ನು ಬಳಸಿಕೊಳ್ಳುವುದನ್ನು ಮುಂದುವರೆಸುತ್ತಿದೆ ಎಂದು ರಾಯಭಾರಿ ಪರ್ವತನೇನಿ ಹರೀಶ್ ಆರೋಪಿಸಿದರು. ಈ ಹೇಳಿಕೆ ಬಡಿಕ ಭಾರತ- ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಉದ್ವಿಗ್ನ ತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಪಾಕಿಸ್ತಾನ ಭಯೋತ್ಪಾದನೆ, ಧಾರ್ಮಿಕ ಉಗ್ರವಾದ ಮತ್ತು ಹಿಂಸಾತ್ಮಕ ಮೂಲಭೂತವಾದಕ್ಕೆ ನೀಡುತ್ತಿರುವ ಬೆಂಬಲವನ್ನು ಶಾಶ್ವತವಾಗಿ ಕೊನೆಗೊಳಿಸಬೇಕು ಒಂದು ಭಾರತ ಉತ್ತಾಯಿಸಿದೆ. ವಿವೇಚನಾರಹಿತ ಮತ್ತು ಅಧಿಕಾರ ರಾಜಕಾರಣದಿಂದ ಬಹುಪಕ್ಷಿಯತೆ ಬಲವಾಗುವುದಿಲ್ಲ. ಜಾಗತಿಕ ಒಳಿತಿಗಾಗಿ ರಾಷ್ಟ್ರಗಳು ಸಹಕಾರ ಮತ್ತು ರಾಜಿ ಮನೋಭಾವ ತರಬೇಕು ಎಂದು ಭಾರತ ಅಭಿಪ್ರಾಯ ಪಟ್ಟಿದೆ.

ಈ ನಡುವೆ ಜಮ್ಮು-ಕಾಶ್ಮೀರದ ಉಲ್ಲೇಖಗಳ ಕುರಿತು ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಸಿದ Randhir Jaiswal, ಭಾರತದ ನಿಲುವು ಸ್ಪಷ್ಟ ಮತ್ತು ಸ್ದಿರವಾಗಿದೆ ಎಂದು ಹೇಳಿದ್ದಾರೆ. ಜಮ್ಮು- ಕಾಶ್ಮೀರ್ ಮತ್ತು ಲಡಾಖ್ ಭಾರತದ ಅವಿಭಾಜ್ಯ ಭಾಗಗಳಾಗಿದ್ದು. ಈ ವಿಷಯದಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ಪುನರುಚ್ಚರಿಸಿದರು.

Sponsored

ಭಾರತ- ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಉದ್ವಿಗ್ನತೆ ಮತ್ತಷ್ಟು ಹೆಚ್ಚು ಸಾಧ್ಯತೆ ಇದೆ ಎಂದು ಅಂತರಾಷ್ಟ್ರೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

Also Read:

ಕೇರಳ ಮಾಜಿ CM pinarayi Vijayan ನಿವಾಸದ ಮೇಲೆ ಇ.ಡಿ ದಾಳಿ!

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online