<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಕೇರಳ ಮಾಜಿ CM pinarayi Vijayan ನಿವಾಸದ ಮೇಲೆ ಇ.ಡಿ ದಾಳಿ!

ಕೇರಳ ಮಾಜಿ CM pinarayi Vijayan ನಿವಾಸದ ಮೇಲೆ ಇ.ಡಿ ದಾಳಿ!
Summary: The news that ED (Enforcement Directorate) officials have raided the residence of former Kerala Chief Minister Pinarayi Vijayan has created a huge stir in the political circles. Documents were checked in vehicles, house and related places. Widespread discussions have started about the background of the case.

Balagavi News:

ತಿರುವನಂತಪುರಂ: ಸಿಎಂಆರ್ ಎಲ್ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ. ಡಿ) ಅಧಿಕಾರಿಗಳು Pinarayi Vijayan ಮತ್ತು ಇತರರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು. ಹಲವು ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಇ.ಡಿ ಅಧಿಕಾರಿಗಳ ಪ್ರಕಾರ, ಕೆರಳ ರಾಜಧಾನಿ ತಿರುವನಂತಪುರಂನಲ್ಲಿ ರುವ ಪಿಣರಾಯಿ ವಿಜಯನ್ ಅವರ ಬಾಡಿಗೆ ಮನೆ ಸೇರಿ ರಾಜ್ಯದ ಒಟ್ಟು 10 ಸ್ಥಗಳಲ್ಲಿ ದಾಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಹಾಗೂ ಆರ್ಥಿಕ ವ್ಯವಹಾರಗಳ ಕುರಿತು ತನಿಖೆ ಮುಂದುವರಿದಿದೆ.

ಈ ದಾಳಿಯಿಂದ ಕೆರಳ ರಾಜಕೀಯದಲ್ಲಿ ಭಾರಿ ಚರ್ಚೆ ಆರಂಭವಾಗಿದ್ದು. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಪ್ರಕರಣದ ಕುರಿತು ಇನ್ನಷ್ಟು ವಿವರಗಳು ಹೊರಬೀಳುವ ನಿರೀಕ್ಷೆಯಿದೆ.

Sponsored

ಪ್ರಕರಣವೇನು? ಕೊಚ್ಚಿನ್ ಮಿನರಲ್ಸ್ ಆ್ಯಂಡ್ ರೂಟೈಲ್ ಲಿಮಿಟೆಡ್ (CMRL) ಕಂಪನಿ 2018-2019ರ ಅವಧಿಯಲ್ಲಿ ವಿಜಯನ್ ಅವರ ಮಗಳು ಟಿ.ವೀಣಾ ಒಡೆತನದ ಎಕ್ಸ್ ಲಾಜಿಕ್ ಸೊಲ್ಯೂಷನ್ಸ್ ಸಂಸ್ಥೆಗೆ ₹1.72 ಕೋಟಿ ಹಣ ಪಾವತಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಆರೋಪದ ಪ್ರಕಾರ, ದೀಪಾವಳಿ ಯಾವುದೇ ಸೇವೆ ನೀಡದೇ ಮಾಸಿಕ ಪಾವತಿ ರೂಪದಲ್ಲಿ ನಡೆದಿದೆ ಎಂದು ಹೇಳಲಾಗಿದೆ.

ಈ ಪ್ರಕರಣದಲ್ಲಿ ತನಿಖಾ ಕ್ರಮಗಳನ್ನು ರದ್ದು ಪಡಿಸುವಂತೆ ಸಿಎಂಆರ್ ಎಲ್ ಕೆರಳ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜ ಮಾಡಿತ್ತು. ಇದರ ಬೆನ್ನಲ್ಲೇ ಇ.ಡಿ ರಾಜ್ಯದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಆರಂಭಿಸಿದೆ.

ಟಿ. ವೀಣಾ ಅವರ ಎಕ್ಸ್ ಲಾಜಿಕ್ ಸಂಬಂಧಿಸಿದ ಆರ್ಥಿಕ ವ್ಯವಹಾರಗಳ ಕುರಿತು ಕೇಂದ್ರ ಸರ್ಕಾರ 2024ರಲ್ಲಿ ವಿಸ್ತೃತ ತನಿಖೆಗೆ ಅದೇಶಿತ್ತು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮೂರು ಸದಸ್ಯರ ಉತ್ತನ ಮಟ್ಟಿದ ತಂಡವನ್ನು ರಚಿಸಿ ತನಿಖೆ ಆರಂಭಿಸಿತ್ತು.

CMRL ಮತ್ತು KSIDC ಸಂಸ್ಥೆಗಳಿಗೆ ತಮ್ಮ ಪಾತ್ರದ ಬಗ್ಗೆ ಸ್ಪಷ್ಟನೆ ಕೇಳಿ ನೋಟಿಸ್ ನೀಡಲಾಗಿತ್ತು. ಆದರೆ ಸಿಎಂಆರ್ಎಲ್ ಅಸ್ಪಷ್ಟ ಉತ್ತರ ನೀಡಿದರೆ, KSIDC ಯಾವುದೇ ಉತ್ತರ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಇದಾದ ಬಳಿಕ ಎಕ್ಸ್ ಲಾಜಿಕ್, CMRL ಮತ್ತು KSIDC ನಡುವಿನ ಹಣಕಾಸು ವ್ಯವಹಾರಗಳ ಬಗ್ಗೆ ವಿವರವಾದ ತನಿಖೆ ಆರಂಭಿಸಲಾಗಿದೆ.

Sponsored

ಈ ಪ್ರಕರಣ ಕೆರಳ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು. ಮುಂದಿನ ಬೆಳವಣಿಗೆಗಳತ್ತ ದೇಶದ ಗಮನ ಸೆಳೆದಿದೆ.

ಸಿಎಂ ಆರ್ ಎಲ್ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಳಿ ಬಂದ ಆರೋಪಗಳನ್ನು Pinarayi Vijayan ತಳ್ಳಿಹಾಕಿದ್ದಾರೆ. ತಮ್ಮ ಮಗಳು ಟಿ.ವೀಣಾ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು. ತಮ್ಮ ವರ್ಚಸ್ಸಿಗೆ ಕಳಂಕ ತರುವ ಹಾಗೂ ಮಾನಹಾನಿ ಮಾಡುವ ಉದ್ದೇಶದಿಂದ ಈ ಆರೋಪಗಳನ್ನು ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೀಗ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೆರಳ ರಾಜಕೀಯದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಇದೇ ವೇಳೆ, ಕಳೆದ ತಿಂಗಳು ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿ ಎಫ್ ಮೈತ್ರ ಕೋಟಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದೆ. ಇದರೊಂದಿಗೆ ಸಿಪಿಐ(ಎಂ) ನಾಯಕ ಪಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ.

2016ರಿಂದ 2026ರವರೆಗೆ ಎರಡು ಬಾರಿ ಕೆರಳ ಮುಖ್ಯಮಂತ್ರಿಯಾಗಿದ್ದ ಪಿಣರಾಯಿ ವಿಜಯನ್ ಇದೀಗ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Sponsored

ಈ ಪ್ರಕರಣ ಮುಂದಿನ ದಿನಗಳಲ್ಲಿ ಕೆರಳ ರಾಜಕೀಯದಲ್ಲಿ ಇನ್ನಷ್ಟು ಸಂಚಲನ ಮೂಡಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

Also Read:

ಸಿದ್ದು ಕುರ್ಚಿ ಬದಲಾವಣೆಗೆ ಕೌನ್ ಡೌನ್? 2023ರ ಒಪ್ಪಂದದ ಅಸಲಿ ಕತೆ ಏನು?

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online