belagavi news :
ಕರ್ನಾಟಕ ರಾಜಕೀಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗಿದೆ.ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆಯ ಕುರಿತ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹೆಚ್ಚು ಕೇಳಿ ಬರುತ್ತಿದೆ.ದಿಲ್ಲಿ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವ ಸಭೆಗಳ ಹಾಗೂ ರಾಜಕೀಯ ಬೆಳವಣಿಗೆಗಳು ಹಲವು ಅನುಮಾನಗಳಿಗೆ ಕಾರಣವಾಗಿವೆ.
ರಾಜ್ಯದಲ್ಲಿ ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ನಪ್ರಮುಖ ಮುಖವಾಗಿ ಗುರುತಿಸಿಕೊಂಡಿದ್ದಾರೆ.ಆದರೆ ಇತ್ತೀಚಿನ ಬೆಳವಣಿಗೆಗಳು ಅವರ ಮುಂದಿನ ರಾಜಕೀಯ ನಡೆ ಕುರಿತ ಕುತೂಹಲ ಹೆಚ್ಚಿಸಿವೆ.ದಿಲ್ಲಿ ನಾಯಕರು ನಾಯಕತ್ವ ಬದಲಾವಣೆಗೆ ಮೂರ್ತ ಪಿಕ್ಸ್ ಮಾಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಇದಕ್ಕೆ ಮೂಲ ಕಾರಣವಾಗಿ 2023ರಲ್ಲಿ ನಡೆತೆನ್ನಲಾದ 'ರಹಸ್ಯ ಒಪ್ಪಂದ' ದ ವಿಚಾರ ಮತ್ತೆ ಚರ್ಚೆಗೆ ಬಂದಿವೆ.ವಿಧಾನಸಭೆ ಚುನಾವಣೆಯ ನಂತರ ಅಧಿಕಾರ ಹಂಚಿಕೆ ಕುರಿತು ಹಲವು ಅಂತರಂಗ ಒಪ್ಪಂದಗಳು ನಡೆದಿದ್ದವು ಎಂಬ ಆರೋಪಗಳು ಆ ಸಮಯದಲ್ಲೇ ಕೇಳಿ ಬಂದಿದ್ದವು.ಇದೀಗ ಆ ಒಪ್ಪಂದದ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಸಾಧ್ಯತೆ ಇದೆ ಎಂಬ ವಿಶೇಷತೆಗಳು ರಾಜಕೀಯ ವಲಯದಲ್ಲಿ ಕೇಳುತ್ತಿವೆ.
ಆದರೆ ಈ ಕುರಿತಾಗಿ ಕಾಂಗ್ರೆಸ್ ಹೈಕಮಾಂಡ್ ಅಥವಾ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.ಹೀಗಾಗಿ ರಾಜೀನಾಮೆ ಚರ್ಚೆ ಇನ್ನೂ ಮಟ್ಟದಲ್ಲೇ ಉಳಿದಿದೆ.ಆದರೂ ದೆಹಲಿಯಲ್ಲಿ ನಡೆಯುತ್ತಿರುವ ಚರ್ಚೆಗಳು ಮತ್ತು ರಾಜ್ಯ ನಾಯಕರ ಹೇಳಿಕೆಗಳು ರಾಜಕೀಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.
ಮುಂದಿನ ಕೆಲ ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರ ರಾಜ್ಯ ರಾಜಕೀಯದ ದಿಕ್ಕೆ ಬದಲಾಯಿಸಬಹುದೆಂಬ ಮಾತುಗಳು ಕೇಳಿ ಬರುತ್ತಿವೆ.ಸಿದ್ದರಾಮಯ್ಯ ತಮ್ಮ ಹುದ್ದೆಯಲ್ಲಿ ಮುಂದುವರೆಯಲಿದೆಯಾ ಅಥವಾ ನಾಯಕತ್ವ ಬದಲಾವಣೆಗೆ ದಾರಿ ಮಾಡಿಕೊಡಲಿದೆ ಎಂಬುದರ ಬಗ್ಗೆ ರಾಜ್ಯದ ಜನತೆಗೆ ಕಾದು ನೋಡುತ್ತಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಮತ್ತೆ ಬಾರಿ ಸಂಚಲನ ಮೂಡಿಸುವ ಬೆಳವಣಿಗೆಗಳು ನಡೆಯುತ್ತಿವೆ.ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ.ದೆಹಲಿಯಲ್ಲಿ ಮಂಗಳವಾರ ನಡೆದ ಹೈ ವೋಲ್ಟೇಜ್ ಸಭೆಯಲ್ಲಿ ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಈ ಕುರಿತು ಸ್ಪಷ್ಟ ಸಂದೇಶ ನೀಡಿದ್ದಾರೆ ಎನ್ನಲಾಗುತ್ತಿದೆ.
ಆದರೆ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿರುವುದಕ್ಕೆ ನಿಕ್ಕರ ಕಾರಣವೇನು ಎಂಬುದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ.ಇದೇ ವೇಳೆ,2023ರಲ್ಲಿ ಸರ್ಕಾರ ರಚನೆಯ ವೇಳೆ ನಡೆದಿದ್ದನ್ನಲಾದ 'ರಹಸ್ಯ ಒಪ್ಪಂದ' ಇದೀಗ ಮತ್ತೆ ರಾಜಕೀಯ ಚರ್ಚೆಯ ಕೇಂದ್ರ ಬಿಂದುವಾಗಿದೆ.
೨೦೨23ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 136 ಶಾಸಕರ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು.ಸರ್ಕಾರ ರಚನೆಯ ಸಂದರ್ಭದಲ್ಲಿ ಸಿಎಂ ಪಟ್ಟಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಿರ್ಮಾಣವಾಗಿತ್ತು.ಇಬ್ಬರು ನಾಯಕರು ತಮ್ಮದೇ ಬಲ ಪ್ರದರ್ಶಿಸುತ್ತಿದ್ದರಿಂದ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳುವ ದು ಸವಾಲಾಗಿತ್ತು.
ಕೊನೆಗೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಸಿಎಂ ಹುದ್ದೆ ನೀಡುವ ನಿರ್ಧಾರ ಕೈಗೊಂಡಿತು.ಅದರೊಂದಿಗೆ ಪಕ್ಷದ ಸಮತೋಲನ ಕಾಪಾಡುವ ಉದ್ದೇಶದಿಂದ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು.ಇದೇ ಸಮಯದಲ್ಲಿ ಅಧಿಕಾರ ಹಂಚಿಕೆ ಕುರಿತ ಒಳ ಒಪ್ಪಂದ ನಡೆದಿತ್ತು ಎಂಬ ಮಾಹಿತಿಗಳು ಆಗಲೇ ಕೇಳಿ ಬಂದಿದ್ದವು.
ಈಗ ದೆಹಲಿಯಲ್ಲಿ ನಡೆದ ಸಭೆಗಳ ನಂತರ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಮತ್ತೆ ವೇಗ ಪಡೆದಿವೆ.ಕೆಲ ರಾಜಕೀಯ ವಿಶ್ಲೇಷಕರು,"2023ರಲ್ಲಿ ನಡೆದ ಒಪ್ಪಂದದ ಭಾಗವಾಗಿ ಈಗ ನಾಯಕತ್ವ ಬದಲಾವಣೆ ಪ್ರಕ್ರಿಯೆ ಆರಂಭವಾಗಿರಬಹುದು"ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಆದರೆ ಈ ಕುರಿತಾಗಿ ಕಾಂಗ್ರೆಸ್ ನಾಯಕರು ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
ರಾಜ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಯಾರು ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು,ಹೈಕಮಾಂಡ್ ನ ಮುಂದಿನ ನಡೆ ರಾಜ್ಯ ರಾಜಕೀಯದ ದಿಕ್ಕೆ ಬದಲಾಯಿಸುವ ಸಾಧ್ಯತೆ ಇದೆ.
ಇದೀಗ ರಾಜ್ಯ ಸರ್ಕಾರಕ್ಕೆ ಮೂರು ವರ್ಷಗಳು ತುಂಬಿವೆ.ಅದೇ ಸಂದರ್ಭದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮುನ್ನಡೆಗೆ ಬಂದಿತು.ಅನೇಕ ನಾಯಕರು ಈ ಬಗ್ಗೆ ಹೇಳಿಕೆಗಳನ್ನು ನೀಡಿದರು ಹೈಕಮಾಂಡ್ ಮೌನವಾಗಿತ್ತು.ಇದೀಗ ಕೊನೆಗೂ ಬಹುದೊಡ್ಡ ನಿರ್ಧಾರಕ್ಕೆ ಹೈಕಮಾಂಡ್ ನಾಯಕರು ಬಂದಿದ್ದಾರೆ.ಅದರಂತೆ ಸಿದ್ದರಾಮಯ್ಯ ಅವರನ್ನು ರಾಜಿನಾಮೆ ನೀಡುವಂತೆ ಸೂಚಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ವಿಚಾರ ರಾಜ ರಾಜಕೀಯದಲ್ಲಿ ಬಹು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದರು,ರಾಜಕೀಯ ವಲಯದಲ್ಲಿ ಹಲವು ಊಹಾ ಪೋಹ ಹರಿದಾಡುತ್ತಿದ್ದರು,ಕಾಂಗ್ರೆಸ್ ನಾಯಕತ್ವದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಹೊರ ಬಿದ್ದಿಲ್ಲ.
ಮುಖ್ಯವಾಗಿ,ಸಿದ್ದರಾಮಯ್ಯ ಅವರ ವಿರುದ್ಧ ಇದುವರೆಗೆ ಯಾವುದೇ ಗಂಭೀರ ಭ್ರಷ್ಟಾಚಾರದ ಆರೋಪ ಕೇಳಿ ಬಂದಿಲ್ಲ.ಆಡಳಿತಾತ್ಮಕವಾಗಿ ಕೂಡ ಸರ್ಕಾರದ ಕಾರ್ಯವೈಕರಿ ಕುರಿತು ದೊಡ್ಡ ಮಟ್ಟದ ಅಸಮಾಧಾನ ವ್ಯಕ್ತವಾಗಿಲ್ಲ.ಪಕ್ಷದೊಳಗಿನ ಅವರ ಪ್ರಭಾವವು ಇನ್ನೂ ಬಲವಾಗಿಯೇ ಇದೆ.ಇದೇ ಕಾರಣದಿಂದ"ಹೈಕಮಾಂಡ್ ಯಾಕೆ ಇಂತಹ ನಿರ್ಧಾರಕ್ಕೆ ಮುಂದಾಗಿದೆ?"ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನೊಂದೆಡೆ,ಸಿದ್ದರಾಮಯ್ಯ ಹಾಗೂ ದೆಹಲಿ ಹೈಕಮಾಂಡ್ ನಡುವಿನ ಸಂಬಂಧವು ಉತ್ತಮವಾಗಿಯೇ ಇದೆ ಎನ್ನಲಾಗುತ್ತಿದೆ.ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರೀಯ ನಾಯಕತ್ವದೊಂದಿಗೆ ಅವರ ಸಮನ್ವಯದಲ್ಲಿ ಯಾವುದೇ ಬಿರುಕು ಕಾಣಿಸಿಲ್ಲ.ಹೀಗಿರುವಾಗ ನಾಯಕತ್ವ ಬದಲಾವಣೆಯ ಮಾತುಗಳು ರಾಜಕೀಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.
ಕೆಲ ರಾಜಕೀಯ ವಿಶ್ಲೇಷಕರು ಮಾತ್ರೆ 2023ರಲ್ಲಿ ಸರ್ಕಾರ ರಚನೆಯ ವೇಳೆ ನಡೆದಿದ್ದೇನಲ್ಲಾದ ಒಳ ಒಪ್ಪಂದದದ್ದ ಗಮನ ಹರಿಸುತ್ತಿದ್ದಾರೆ.ಅಧಿಕಾರ ಹಂಚಿಕೆ ಹಾಗೂ ಭವಿಷ್ಯದ ನಾಯಕತ್ವ ಬದಲಾವಣೆ ಕುರಿತು ಆಗಲೇ ನಿರ್ಧಾರವಾಗಿರಬಹುದು ಎಂಬ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿವೆ.ಆದರೆ ಈ ಬಗ್ಗೆ ಪಕ್ಷದ ಯಾವುದೇ ನಾಯಕರು ಅಧಿಕೃತವಾಗಿ ಒಪ್ಪಿಕೊಂಡಿಲ್ಲ.
ಒಟ್ಟಿನಲ್ಲಿ,ಸಿದ್ದರಾಮಯ್ಯ ರಾಜೀನಾಮೆ ವಿಚಾರ ಈಗಾಗಲೇ ರಾಜಕೀಯ ಚರ್ಚೆಯ ಕೇಂದ್ರ ಬಿಂದುವಾಗಿದ್ದು,ನಿಜವಾದ ಕಾರಣವೇನು ಎಂಬುವುದು ಇನ್ನೂ ಗಾಢವಾಗಿ ಉಳಿದಿದೆ.ಹೈ ಕುಮಾರ್ ನಮ್ ಮುಂದಿನ ಹೆಜ್ಜೆ ಏನಿರಲಿದೆ ಎಂಬುದರತ್ತ ರಾಜ್ಯದ ರಾಜಕೀಯ ವಲಯದಲ್ಲಿ ಗಮನ ನೆಟ್ಟಿದೆ.
2023 ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಸಂದರ್ಭದಲ್ಲಿ ನಡೆದಿದ್ದೇನಲ್ಲಾದ 'ರಹಸ್ಯ ಒಪ್ಪಂದ' ಇದೀಗ ಮತ್ತೆ ರಾಜ್ಯ ರಾಜಕೀಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.ಸಿಎಂ ಸಿದ್ದರಾಮಯ್ಯ ಕುರಿತ ಊಹಾಪೋಹಗಳುಹೆಚ್ಚಾಗುತ್ತಿದ್ದಂತೆ,"ಆ ಒಪ್ಪಂದದ ಭಾಗವಾಗಿಯೇ ಈಗ ನಾಯಕತ್ವ ಬದಲಾವಣೆ ನಡೆಯುತ್ತಿದೆಯೇ?"ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ತೀವ್ರವಾಗಿ ಕೇಳಿ ಬರುತ್ತಿದೆ.
ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಿರ್ಮಾಣವಾಗಿತ್ತು.ಇಬ್ಬರು ನಾಯಕರು ತಮ್ಮದೇ ಬಲ ಪ್ರದರ್ಶಿಸಿದ್ದರಿಂದ ಕಾಂಗ್ರೆಸ್ ಹೈಕಮಾಂಡ್ಗೆ ಅಂತಿಮ ತೀರ್ಮಾನ ಕೈಗೊಳ್ಳುವದು ಸುಲಭವಾಗಿರಲಿಲ್ಲ.ಈ ಹಿನ್ನೆಲೆ ಬೆಂಗಳೂರಿನಿಂದ ದೆಹಲಿವರೆಗೂ ಹಲವು ಸುತ್ತಿನ ಮಹತ್ವದ ಸಭೆಗಳು ನಡೆದಿದ್ದವು.
ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕಾಗಿ ಬಿಗಿಪಟ್ಟು ಹಿಡಿದಿದ್ದರೆ,ಡಿಕೆ ಶಿವಕುಮಾರ್ ಕೂಡ ತಮ್ಮ ಹಕ್ಕಿನ ವಾದವನ್ನು ಮುಂದಿಟ್ಟಿದ್ದರು."ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನನ್ನ ಪಾತ್ರ ಮಹತ್ವದ್ದಾಗಿದೆ.ಹೀಗಾಗಿ ಸಿಎಂ ಸಿದ್ದರಾಮಯ್ಯ ನನಗೆ ಸಿಗಬೇಕು"ಎಂಬ ವಾದವನ್ನು ಡಿಕೆಶಿ ಮಂಡಿಸಿದರು ಎನ್ನಲಾಗುತ್ತಿದೆ.ಆದರೆ ಈ ಪ್ರಸ್ತಾವಕ್ಕೆ ಸಿದ್ಧರಾಮಯ್ಯ ಒಪ್ಪಿಗೆ ಸೂಚಿಸಿರಲಿಲ್ಲ.
ಐವತ್ತು / ಐವತ್ತು ಒಪ್ಪಂದ:
ಹೈಕಮಾಂಡರ್ ಸಮ್ಮುಖದಲ್ಲಿ ಎರಡುವರೆ ವರ್ಷ ಸಿಎಂ ಸಿದ್ದರಾಮಯ್ಯ ಮತ್ತು ಉಳಿದ ಎರಡುವರೆ ವರ್ಷ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂಬುದು ಒಪ್ಪಂದವಾಗಿದೆ.ಆದರೆ ಇದನ್ನು ಅಧಿಕೃತವಾಗಿ ಸಿದ್ದರಾಮಯ್ಯ ಬನ ಒಪ್ಪುತ್ತಿಲ್ಲ.ಸದಾ ಡಿಕೆ ಶಿವಕುಮಾರ್ ಅವರು ಆಂತರಿಕ ಒಪ್ಪಂದವನ್ನು ಜಾರಿ ಗೆ ತರಬೇಕು ಎಂಬ ಆಗ್ರಹವನ್ನು ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ. ಇದ ಕಾರಣದಿಂದ ಇದೀಗ ಹೈಕಮಾಂಡ್ ನಾನ ನಡೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸರ್ಕಾರ ರಚನೆಯ ಸಮಯದಲ್ಲಿ ನಡೆದ ಸಂದಾನ ಸಭೆಗಳಲ್ಲಿ ಅಧಿಕಾರ ಹಂಚಿಕೆ ಕುರಿತು ಮಾತುಕತೆ ನಡೆದಿತ್ತು ಎಂಬ ವಾದವನ್ನುಡಿಕೆಶಿ ಬನ ನಿರಂತರವಾಗಿ ಮುಂದಿಟ್ಟುಕೊಂಡು ಬಂದಿದೆ."ಹೈಕಮಾಂಡ್ ನೀಡಿದ ಮಾತಿನಂತೆ ನಡೆದುಕೊಳ್ಳಬೇಕು"ಎಂದು ಡಿಕೆ ಶಿವಕುಮಾರ್ ಪದೇ ಪದೇ ದೆಹಲಿಗೆ ತೆರಳಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದರು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ರಾಹುಲ್ ಗಾಂಧಿ ಸೇರಿದಂತೆ ಹಲವು ಹಿರಿಯ ನಾಯಕರೊಂದಿಗೆ ಡಿಕೆ ಶಿವಕುಮಾರ್ ನಡೆದ ಸಭೆಗಳು ಕೂಡ ಈ ಚರ್ಚೆಗೆ ಇನ್ನಷ್ಟು ಬಲ ನೀಡಿವೆ.ಹೀಗಾಗಿ ಈಗ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕುರಿತ ಊಹಾಪೋಹಗಳು ಜೋರಾಗುತ್ತಿದ್ದಂತೆ,"ಹೈಕಮಾಂಡ್ 2023ರ ರಹಸ್ಯ ಒಪ್ಪಂದದಂತೆ ನಡೆದುಕೊಳ್ಳುತ್ತಿದೆಯೇ?"ಎಂಬ ಪ್ರಶ್ನೆ ಉದ್ಭವಿಸಿದೆ.
ಆದರೆ ಈ ಒಪ್ಪಂದದ ಬಗ್ಗೆ ಕಾಂಗ್ರೆಸ್ ನಾಯಕತ್ವ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.ಸಿದ್ದರಾಮಯ್ಯ ಬನವು ಇಂತಹ ಒಪ್ಪಂದ ನಡೆದಿರುವುದನ್ನು ಒಪ್ಪಿಕೊಂಡಿಲ್ಲ.ಆದರೂ ದೆಹಲಿಯ ರಾಜಕೀಯ ಚಟುವಟಿಕೆಗಳು ಮತ್ತು ಡಿಕೆ ಶಿವಕುಮಾರ್ ಅವರ ನಿರಂತರ ಒತ್ತಡದ ಹಿನ್ನೆಲೆ,ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಮತ್ತಷ್ಟು ತೀವ್ರಗೊಂಡಿವೆ.
ಇದೀಗ ರಾಜ ರಾಜಕೀಯದ ಗಮನ ಸಂಪೂರ್ಣವಾಗಿ ದೆಹಲಿ ಹೈಕಮಾಂಡ್ನ ಮುಂದಿನ ನಿರ್ಧಾರದತನೆಟ್ಟಿದ್ದು,ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆಯೇ ಅಥವಾ ಸಿದ್ದರಾಮಯ್ಯ ಅವರೇ ಮುಂದುವರೆಯಲಿ ದೆಯೇಎಂಬ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗುವ ಸಾಧ್ಯತೆ ಇದೆ.
Also Read:
ಹಾವೇರಿಯಲ್ಲಿ ಸೋಯಾಬೀನ್ ಬಿತ್ತನೆ ಬೀಜ ಖಾಲಿ: ವಿತರಣಾ ಕೇಂದ್ರಕ್ಕೆ ರೈತರ ಆಕ್ರೋಶ