<?= $pageTitle ?>
Logo
ಮುಖಪುಟ ಓದುವುದು ಕೇಳು
Travel

ಅಬ್ಬಿ ಫಾಲ್ಸ್ ನಲ್ಲಿ ಎಚ್ಚರಿಕೆ ನಿರ್ಲಕ್ಷ್ಯ ! ಜೀವದ ಜೊತೆ ಆಟವಾಡುತ್ತಿರುವ ಪ್ರವಾಸಿಗರು

ಅಬ್ಬಿ ಫಾಲ್ಸ್ ನಲ್ಲಿ ಎಚ್ಚರಿಕೆ ನಿರ್ಲಕ್ಷ್ಯ ! ಜೀವದ ಜೊತೆ ಆಟವಾಡುತ್ತಿರುವ ಪ್ರವಾಸಿಗರು
Summary: Despite warnings not to enter the water at Abbey Falls, tourists violate rules and take dangerous adventures •

Belagavi News :

ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಅಬ್ಬಿ ಜಲಪಾತದಲ್ಲಿ ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸಿ ಕೆಲವರು ಅಪಾಯಕಾರಿ ರೀತಿಯಲ್ಲಿ ವರ್ತಿಸಿರುವ ಘಟನೆ ಗಮನ ಸೆಳೆದಿದೆ. ಜಲಪಾತದ ನೀರಿನಲ್ಲಿ ಇಳಿಯದಂತೆ ಸ್ಪಷ್ಟವಾಗಿ ಸುಚನಾ ಫಲಕ ಅಳವಡಿಸಿದ್ದರೂ, ಕೆಲವು ಪ್ರವಾಸಿಗರು ಅದನ್ನು ಲೆಕ್ಕಿಸದೆ ನೀರಿಗಿಳಿದಿದ್ದಾರೆ.

ಮಳೆಗಾಲದಲ್ಲಿ ಜಲಪಾತಗಳಲ್ಲಿ ನೀರಿನ ಹರಿವು ಹೆಚ್ಚಾಗುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಪ್ರವಾಸಿಗರ ಸುರಕ್ಷತೆಗಾಗಿ ಅಧಿಕಾರಿಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೂ ಕೆಲವರು ನಿಯಮಗಳನ್ನು ಪಾಲಿಸದೆ ಜೀವದ ಅಪಾಯವನ್ನು ಎದುರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಅಬ್ಬಿ ಫಾಲ್ಸ್ ನಲ್ಲಿ ಪ್ರವಾಸಿಗರ ಇಂತಹ ನಿರ್ಲಕ್ಷದ ವರ್ತನೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಸುರಕ್ಷಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಗೊಳಿಸಬೇಕು ಎಂಬ ಒತ್ತಾಯವು ಕೇಳಿ ಬರುತ್ತಿದೆ.

ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುವವರು ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವುದು ಹಾಗೂ ಅಪಾಯಕಾರಿ ಪ್ರದೇಶಗಳಿಂದ ದೂರವಿರುವುದು ಅತ್ಯಗತ್ಯವಾಗಿದೆ. ಸಣ್ಣ ನಿರ್ಲಕ್ಷವು ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಭಾರಿ ಮಳೆಯಿಂದ ತುಂಬಿ ಹರಿಯುತ್ತಿರುವ ಅಬ್ಬಿ ಜಲಪಾತ - ಸೂಚನೆ ಕಡೆಗಳಿಸಿ ನೀರಿಗಿಳಿಯುತ್ತಿರುವ ಪ್ರವಾಸಿಗರು :

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಸಕಲೇಶಪುರ ತಾಲೂಕಿನ ಹಾನ್ ಬಾಳ್ ಸಮೀಪದ ಅಬ್ಬಿ ಜಲಪಾತ ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, ಇದೇ ವೇಳೆ ಸುರಕ್ಷತಾ ನಿಯಮಗಳ ನಿರ್ಲಕ್ಷ ಆತಂಕಕ್ಕೆ ಕಾರಣವಾಗಿದೆ.

ಜಲಪಾತದಲ್ಲಿ ನೀರಿನ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ನೀರಿಗೆ ತಿಳಿಯಬಾರದು ಎಂದು ಎಚ್ಚರಿಕೆ ನೀಡಲು ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆದರೂ ಕೆಲ ಪ್ರವಾಸಿಗರು ಈ ಸೂಚನೆಗಳನ್ನು ಲೆಕ್ಕಿಸದೆ ನೀರಿಗೆ ಇಳಿಯುತ್ತಿರುವುದು ಕಂಡುಬಂದಿದೆ.

ಮಳೆಗಾಲದಲ್ಲಿ ಜಲಪಾತಗಳ ಬಳಿ ನೀರಿನ ವೇಗ ಹೆಚ್ಚಾಗುವುದರಿಂದ ಜಾರಿ ಬೀಳುವ ಹಾಗೂ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಪ್ರವಾಸಿಗರು ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸಿ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಅಬ್ಬಿ ಜಲಪಾತದಲ್ಲಿ ನಿಯಮ ಉಲ್ಲಂಘನೆ ಮುಂದುವರೆದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯವು ವ್ಯಕ್ತವಾಗಿದೆ.

ಜಲಪಾತದಲ್ಲಿ ರೀಲ್ಸ್ ಹುಚ್ಚಾಟಕ್ಕೆ ಜೀವದ ಅಪಾಯ ! ಪ್ರವಾಸಿಗರ ನಿರ್ಲಕ್ಷಕ್ಕೆ ಆತಂಕ :

ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ಅಬ್ಬಿ ಜಲಪಾತದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಸುರಕ್ಷತಾ ನಿಯಮಗಳ ನಿರ್ಲಕ್ಷ್ಯ ಆತಂಕಕ್ಕೆ ಕಾರಣವಾಗಿದೆ. ಜಲಪಾತದ ನೀರಿಗೆ ಇಳಿದು ಆಟವಾಡುವುದು, ಈಜುವುದು ಹಾಗೂ ಅಪಾಯಕಾರಿ ಸ್ಥಳದಲ್ಲಿ ನಿಂತು ಫೋಟೋ ಮತ್ತು ರೀಲ್ಸ್ ಚಿತ್ರೀಕರಣ ಮಾಡುವುದು ಸಾಮಾನ್ಯವಾಗಿದೆ.

ಯುವಕರು ಮಾತ್ರವಲ್ಲದೆ ಕುಟುಂಬ ಸಮೇತ ಆಗಮಿಸಿದ ಪ್ರವಾಸಿಗರು ಜಲಪಾತದ ಮಧ್ಯಭಾಗದಲ್ಲಿ ನಿಂತು ವಿಡಿಯೋ ಹಾಗೂ ಫೋಟೋ ತೆಗೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಆದರೆ, ಮಳೆಗಾಲದಲ್ಲಿ ನೀರಿನ ಹರಿವು ಏಕಾಯಕಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಇಂತಹ ಸಾಹಸಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಪ್ರವಾಸಿ ತಾಣಗಳಲ್ಲಿ ಸೆಲ್ಫಿ ಮತ್ತು ರೀಲ್ಸ್ ಗಾಗಿ ಜೀವವನ್ನು ಅಪಾಯಕ್ಕೆ ತಳ್ಳುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದಕ್ಕೆ ಉದಾಹರಣೆಯಾಗಿ, ಕೇವಲ ಒಂದು ವಾರದ ಹಿಂದೆ ಕೊಡಗು ಜಿಲ್ಲೆಯ ಮಲ್ಲಳ್ಳಿ ಫಾಲ್ಸ್ ನಲ್ಲಿ ನೀರಿನ ರಭಸ ಹೆಚ್ಚಾಗಿ ಇಬ್ಬರು ಯುವಕರು ಸಿಲುಕಿಕೊಂಡ ಘಟನೆ ಆತಂಕ ಮೂಡಿಸಿತ್ತು.

ಜಲಪಾತಗಳ ಬಳಿ ಪ್ರವಾಸಿಗರು ಎಚ್ಚರಿಕೆ ಫಲಕಗಳನ್ನು ಪಾಲಿಸಬೇಕು, ಅಪಾಯಕಾರಿ ಪ್ರದೇಶಗಳಲ್ಲಿ ತೆರಳಬಾರದು ಹಾಗೂ ತಮ್ಮ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮಳೆಗಾಲದಲ್ಲಿ ಅಪಾಯದ ಸೂಚನೆ - ನಿರ್ಬಂಧದ ನಡುವೆಯೂ ಅಬ್ಬಿ ಜಲಪಾತದಲ್ಲಿ ಪ್ರವಾಸಿಗರ ನಿರ್ಲಕ್ಷ್ಯ :

ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಬ್ಬಿ ಜಲಪಾತದಲ್ಲಿ ನೀರಿನ ಹರಿವು ಯಾವುದೇ ಕ್ಷಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರವಾಸಿಗರ ಎಚ್ಚರಿಕೆ ಇಲ್ಲದೆ ವರ್ತನೆ ಅನಾಹುತಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತವಾಗಿದೆ.

ಸುರಕ್ಷತೆಯ ದೃಷ್ಟಿಯಿಂದ ತಾಲೂಕು ಆಡಳಿತವು ಮುಂದಿನ ಆದೇಶದ ವರೆಗೆ ಜಲಪಾತದ ಅಪಾಯಕಾರಿ ಪ್ರದೇಶಗಳಿಗೆ ಪ್ರವೇಶ ಮತ್ತು ನೀರಿಗಿಳಿಯುವುದಕ್ಕೆ ನಿರ್ಬಂಧ ವಿಧಿಸಿದೆ. ಆದರೂ ಕೆಲವು ಪ್ರವಾಸಿಗರು ನಿಯಮಗಳನ್ನು ಉಲ್ಲಂಘಿಸಿ ನೀರಿನಲ್ಲಿ ಇಳುತ್ತಿರುವುದು ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡುತ್ತಿರುವುದು ಕಂಡು ಬರುತ್ತಿದೆ.

ಮಳೆಗಾಲದಲ್ಲಿ ಜಲಪಾತಗಳ ಬಳಿ ನೀರಿನ ವೇಗ ಮತ್ತು ಅರಿವು ಕ್ಷಣಾರ್ಧದಲ್ಲಿ ಬದಲಾಗಬಹುದು. ಹೀಗಾಗಿ ಪ್ರವಾಸಿಗರು ಆಡಳಿತದ ಸೂಚನೆಗಳನ್ನು ಪಾಲಿಸಿ ತಮ್ಮ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಇದೇ ವೇಳೆ, ಅಪಾಯಕಾರಿ ವರ್ತನೆಗಳಿಗೆ ಕಡಿವಾಣ ಹಾಕಲು ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆ , ಕಟುನಿಟಿನ ನಿಗಾವಹಣೆ ಮಹಾಗು ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online